ಫ್ಯಾಕ್ಟ್‌ಚೆಕ್ : ಕಾಂಗ್ರೆಸ್‌ನ ಅಧಿವೇಶನಕ್ಕೆ ಆಗಮಿಸಿದ ನಾಯಕರಿಗೆ ಚಿನ್ನದ ಮಾಲೆಯನ್ನು ಹಾಕಿ ಸ್ವಾಗತಿಸಲಾಗಿತ್ತೆ?
ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಾಯಕತ್ವವನ್ನು ಅನುಮೋದಿಸುವ ಮೂಲಕ ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದಲ್ಲಿ85ನೇ ಕಾಂಗ್ರೆಸ್ ಸರ್ವಸದಸ್ಯರ ಅಧಿವೇಶನ 24 ಫೆಬ್ರವರಿ 2023 ರಂದು ಆರಂಭವಾಗಿದೆ.
https://twitter.com/Ravindr54445810/status/1629614794235068419?ref_src=twsrc%5Etfw%7Ctwcamp%5Etweetembed%7Ctwterm%5E1629614794235068419%7Ctwgr%5Ee568c1bafcd249b9cf7c411b3fd4bb7a23d325db%7Ctwcon%5Es1_&ref_url=https%3A%2F%2Fwww.boomlive.in%2Ffact-check%2Fpolitics%2Fcongress-85th-plenary-session-congress-leaders-pure-gold-chain-welcome-bhupesh-baghel-chhattisgarh-baiga-tribe-jewellery-21170
ಕಾಂಗ್ರೆಸ್‌ನ 85ನೇ ಸರ್ವಸದಸ್ಯರ ಅಧಿವೇಶನಕ್ಕೆ ಆಗಮಿಸಿರುವ ಕಾಂಗ್ರೆಸ್‌ನ ಹಿರಿಯ ನಾಯಕರನ್ನು ಸ್ವಾಗತಿಸಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಛತ್ತೀಸ್‌ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಹಿರಿಯ ಕಾಂಗ್ರೆಸ್ ನಾಯಕರನ್ನು ಶುದ್ಧ ಚಿನ್ನದ ಹಾರ ಹಾಕಿ ಸ್ವಾಗತಿಸಲಾಗಿದೆ ಎಂಬ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಛತ್ತೀಸ್‌ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಕಾಂಗ್ರೆಸ್‌ನ 85ನೇ ಸರ್ವಸದಸ್ಯರ ಅಧಿವೇಶನಕ್ಕೆ ಆಗಮಿಸಿರುವ ಕಾಂಗ್ರೆಸ್‌ನ ಹಿರಿಯ ನಾಯಕರನ್ನು ಚಿನ್ನದ ಮಾಲೆಯನ್ನು ಹಾಕಿ ಸ್ವಾಗತಿಸಿದ್ದಾರೆ ಎಂದು ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಿದಾಗ ಇದು ಸುಳ್ಳು ಎಂದು ತಿಳಿದು ಬಂದಿದೆ.
ಫೆಬ್ರವರಿ 24 ರಂದು ಇಂಡಿಯನ್ ಎಕ್ಸ್‌ಪ್ರೆಸ್‌ನ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ ವೀಡಿಯೊ ಲಭ್ಯವಾಗಿದ್ದು, ವೀಡಿಯೊದ ಶೀರ್ಷಿಕೆ, “ಛತ್ತೀಸ್‌ಗಢ: ಸಿಎಂ ಭೂಪೇಶ್ ಬಘೇಲ್ ಅವರು ಸರ್ವಸದಸ್ಯರ ಸಭೆಗೆ ಮುಂಚಿತವಾಗಿ ರಾಯ್‌ಪುರದಲ್ಲಿ ಕಾಂಗ್ರೆಸ್ ನಾಯಕರನ್ನು ಸ್ವಾಗತಿಸಿದ್ದಾರೆ.” ಈ ವೀಡಿಯೊವನ್ನು ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ ಪೋಸ್ಟ್ ಮಾಡಿದೆ.
ಕಾಂಗ್ರೆಸ್ ನ್ನ ಟ್ವಿಟರ್ ಹ್ಯಾಂಡಲ್‌ನಿಂದ ಕೆಲವು ಫೋಟೊಗಳನ್ನು ಹಂಚಿಕೊಂಡಿದೆ.
भारतीय राष्ट्रीय कांग्रेस के 85वें अधिवेशन में हिस्सा लेने पहुँची कांग्रेस महासचिव श्रीमती प्रियंका गांधी जी का छत्तीसगढ़ की पावन धरा पर हम सब स्वागत करते हैं। @priyankagandhi #INCPlenaryInCG pic.twitter.com/NNyqARLuvB
— Bhupesh Baghel (@bhupeshbaghel) February 25, 2023
ಎಐಸಿಸಿ ಕಾರ್ಯದರ್ಶಿ ಪ್ರಣವ್ ಝಾ ಅವರನ್ನು ಸಂಪರ್ಕಿಸಿರುವ ಬೂಮ್ ತಂಡ ವೈರಲ್ ಪೋಸ್ಟ್ ಕುರಿತು ಮಾಹಿತಿ ಸಂಗ್ರಹಿಸಿದೆ. ಝಾ ಪ್ರಸ್ತುತ ನವ ರಾಯಪುರದಲ್ಲಿ ಅಧಿವೇಶನದಲ್ಲಿ ಭಾಗವಹಿಸುತ್ತಿದ್ದಾರೆ.
ಛತ್ತೀಸ್‌ಗಢದ ರಾಯ್‌ಪುರದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಅಧಿವೇಶನಕ್ಕೆ ಆಗಮಿಸಿರುವ ಹಿರಿಯ ನಾಯಕರಿಗೆ ಮತ್ತು ಪ್ರತಿನಿಧಿಗಳಿಗೆ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಸ್ಥಳೀಯ ಬುಡಕಟ್ಟಿನ ಬೈಗಾ ಸಮುದಾಯದ ಕುಶಲಕರ್ಮಿಗಳು ಹುಲ್ಲಿನಿಂದ ತಯಾರಿಸಿದ್ದ ಮಾಲೆಯನ್ನು ಹಾಕಿ ಸ್ವಾಗತಿಸಿದ್ದರು. ಛತ್ತೀಸ್‌ಗಢದ ಮೂಲನಿವಾಸಿಗಳ ಗೌರವ ಸೂಚಕವಾಗಿ ಹಿರಿಯ ನಾಯಕರಿಗೆ ಹಾರವನ್ನು ಹಾಕಲಾಗಿದೆ ಎಂದು ಝಾ ತಿಳಿಸಿದ್ದಾರೆ.

ಫೆಬ್ರವರಿ 25 ರಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಯನ್ನು ಅದೇ ರೀತಿಯ ಹಾರದೊಂದಿಗೆ ಸ್ವಾಗತಿಸಿರುವುದನ್ನು ಕಾಣಬಹುದು.
ಬೈಗಾ ಸಮುದಾಯವು ಭಾರತದ ಮಧ್ಯಪ್ರದೇಶದಲ್ಲಿ ಛತ್ತೀಸ್‌ಗಢ, ಜಾರ್ಖಂಡ್ ಮತ್ತು ಉತ್ತರ ಪ್ರದೇಶದಲ್ಲಿ ಕಡಿಮೆ ಸಂಖ್ಯೆಯಲ್ಲಿ ಕಂಡುಬರುತ್ತಾರೆ. ಬೈಗಾ ಸಮುದಾಯದ ಗೌರವಾರ್ಥ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧಿವೇಶನಕ್ಕೆ ಬಂದ ಅತಿಥಿ ಗಳಿಗೆ ಹುಲ್ಲಿನಿಂದ ತಯಾರಿಸಿದ್ದ ಮಾಲೆಯನ್ನು ಹಾಕಿ ಸ್ವಾಗತಿಸಲಾಗಿದೆ. ಹಾಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿಪಾದಿಸಿದಂತೆ ಇದು ಚಿನ್ನದಿಂದ ಮಾಡಿದ ಮಾಲೆಯಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ: ಫ್ಯಾಕ್ಟ್‌ಚೆಕ್ : ಮುಸ್ಲಿಂ ಯುವಕರು ದೇವಸ್ಥಾನದ ಪೂಜಾರಿ ಮೇಲೆ ಕ್ರಿಕೆಟ್ ಬ್ಯಾಟ್‌ನಿಂದ ಹಲ್ಲೆ ನಡೆಸಿದರೆ?

