ಫ್ಯಾಕ್ಟ್‌ಚೆಕ್ : ಸಂಸತ್ ಭವನದ ಹೊಸ ಕಟ್ಟಡವನ್ನು ಟಾಟಾ ಸಂಸ್ಥೆ ಕೇವಲ 1 ರೂಗೆ ನಿರ್ಮಿಸಿದೆಯೇ
ಹೊಸ ಸಂಸತ್ ಭವನ ನಿರ್ಮಾಣವಾಗುತ್ತಿರುವ ಸುದ್ದಿ ಈಗಾಗಲೆ ಎಲ್ಲರಿಗೂ ತಿಳಿದಿದೆ, ಆದರೆ ಅದನ್ನು ನಿರ್ಮಿಸುತ್ತಿರುವ ಸಂಸ್ಥೆ ಯಾವುದು? ಕಟ್ಟಡ ನಿರ್ಮಾಣಕ್ಕೆ ಎಷ್ಟು ಹಣ ಖರ್ಚು ಮಾಡಲಾಗುತ್ತಿದೆ ಎಂಬ ವಿಚಾರ ನಿಮಗೆ ತಿಳಿದಿದೆಯೇ? ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಮುಂದುವರೆದು ಟಾಟಾ ಸಮೂಹ ಸಂಸ್ಥೆ ರಾಷ್ಟ್ರಕ್ಕೆ ಉಡುಗೊರೆಯಾಗಿ ಕೇವಲ 1 ರೂಪಾಯಿ ವೆಚ್ಚದಲ್ಲಿ ಸಂಸತ್ತಿನ ಹೊಸ ಕಟ್ಟಡವನ್ನು ನಿರ್ಮಿಸುತ್ತಿದೆ ಎಂದು ಹೇಳುವ ಪೋಸ್ಟ್ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಹಾಗಿದ್ದರೆ ಟಾಟಾ ಸಂಸ್ಥೆಯು ಸಂಸತ್ತಿನ ನೂತನ ಕಟ್ಟಡವನ್ನು ಕೇವಲ 1 ರೂಪಾಯಿ ವೆಚ್ಚದಲ್ಲಿ ನಿರ್ಮಿಸುತ್ತಿದೆ ಎಂದು ಹಂಚಿಕೊಂಡಂತೆ, ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್:
ಸಂಸತ್ತಿನ ಹೊಸ ಕಟ್ಟಡದ ನಿರ್ಮಾಣವು ಕೇಂದ್ರ ಸರ್ಕಾರದ ಪ್ರಮುಖ ಕೇಂದ್ರ ವಿಸ್ಟಾ ಯೋಜನೆಯ ಭಾಗವಾಗಿದೆ. ಕೇಂದ್ರ ಲೋಕೋಪಯೋಗಿ ಇಲಾಖೆ, ಸೆಂಟ್ರಲ್ ವಿಸ್ಟಾ ಮತ್ತು ಹೊಸ ಸಂಸತ್ತಿನ ಕಟ್ಟಡದ ನಿರ್ಮಾಣದ ನೋಡಲ್ ಏಜೆನ್ಸಿ.
ಡಿಸೆಂಬರ್ 2021 ರಿಂದ ಲೋಕಸಭೆಯಲ್ಲಿ ಲಿಖಿತ ಪ್ರತಿಕ್ರಿಯೆಯ ಪ್ರಕಾರ, ಹೊಸ ಸಂಸತ್ತಿನ ಕಟ್ಟಡದ ಅಂದಾಜು ವೆಚ್ಚ ರೂ. 971 ಕೋಟಿಗಳು ಮತ್ತು ಅಕ್ಟೋಬರ್ 2022 ರೊಳಗೆ ಪೂರ್ಣಗೊಳಿಸುವ ಅಂದಾಜ ಮಾಡಲಾಗಿತ್ತು.

ಟಾಟಾ ಪ್ರಾಜೆಕ್ಟ್ಸ್ ಲಿಮಿಟೆಡ್ ಸಂಸತ್ತಿನ ಹೊಸ ಕಟ್ಟಡವನ್ನು ನಿರ್ಮಿಸುವ ಗುತ್ತಿಗೆಯನ್ನು ರೂ. 861.9 ಕೋಟಿಗೆ ಕೈಗೆತ್ತಿಕೊಂತ್ತು. ಆದರೆ, ಜನವರಿ 2022 ರಲ್ಲಿ, CPWD ನಿರ್ಮಾಣದ ವೆಚ್ಚದಲ್ಲಿ 29% ರಷ್ಟು ಹೆಚ್ಚಳವಾಗಿ 1200 ಕೋಟಿ ರೂಪಾಯಿಗಳಿಗೆ ಅಂದಾಜು ಮಾಡಿದೆ. ಆದ್ದರಿಂದ, ನಿರ್ಮಾಣ ವೆಚ್ಚವನ್ನು ಸರ್ಕಾರವು ಭರಿಸುತ್ತಿದೆ, ಅಂದರೆ ತೆರಿಗೆ ಪಾವತಿದಾರರ ಹಣ. ಇದಲ್ಲದೆ, ಡಿಸೆಂಬರ್ 2020 ರಲ್ಲಿ ಶಂಕುಸ್ಥಾಪನೆ ಮಾಡಿದ ಕಟ್ಟಡವು ಇನ್ನೂ ಪೂರ್ಣಗೊಂಡಿಲ್ಲ. ಹಾಗಾಗಿ ಟಾಟಾ ಸಮೂಹ ಸಂಸ್ಥೆ ರಾಷ್ಟ್ರಕ್ಕೆ ಉಡುಗೊರೆಯಾಗಿ ಕೇವಲ 1 ರೂಪಾಯಿ ವೆಚ್ಚದಲ್ಲಿ ಸಂಸತ್ತಿನ ಹೊಸ ಕಟ್ಟಡವನ್ನು ನಿರ್ಮಿಸುತ್ತಿದೆ ಎಂಬುದು ಸುಳ್ಳು.
ನೂತನ ಸಂಸತ್ ಭವನವು ಶೇ 100ರಷ್ಟು ಕಾಗದ ರಹಿತ ಕಟ್ಟಡವಾಗಿರಲಿದೆ. ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿ ಈ ಕಟ್ಟಡವನ್ನು ನಿರ್ಮಾಣ ಮಾಡಲಾಗುತ್ತಿದೆ. ಸಂಸದರಿಗೆ, ಕಚೇರಿ ಸಿಬ್ಬಂದಿಗೆ ಅತ್ಯಾಧುನಿಕ ಸವಲತ್ತುಗಳನ್ನು ನೀಡಲಾಗುತ್ತದೆ. ದಾಖಲೆ ಪತ್ರಗಳೆಲ್ಲವನ್ನೂ ವಿದ್ಯುನ್ಮಾನ ರೂಪದಲ್ಲಿ ನಿರ್ವಹಣೆ ಮಾಡಲಾಗುತ್ತದೆ. ಪ್ರತಿ ಸಂಸದರ ಖುರ್ಚಿಯಲ್ಲೂ ಸ್ಮಾರ್ಟ್ ಪರದೆಯ ವ್ಯವಸ್ಥೆ ಇರಲಿದೆ. ಕಲಾಪಗಳ ಎಲ್ಲಾ ದಾಖಲೆಗಳನ್ನು ಡಿಜಿಟಲ್ ರೂಪದಲ್ಲೇ ನಿರ್ವಹಣೆ ಮಾಡಲಾಗುತ್ತದೆ. ಸಂಸತ್ ಭವನದಲ್ಲಿ ಪ್ರತಿ ಸಂಸದರಿಗೂ ಪ್ರತ್ಯೇಕ ಕಚೇರಿ ಇರಲಿದೆ. ಪ್ರತಿ ಕಚೇರಿಯಲ್ಲೂ ಡಿಜಿಟಲ್ ಇಂಟರ್‌ಫೇಸ್ ಇರಲಿದೆ ಎನ್ನಲಾಗಿದೆ.

ಹೊಸ ಪಾರ್ಲಿಮೆಂಟ್ ಕಟ್ಟಡವು 13 ಎಕರೆ ಜಾಗದಲ್ಲಿ ತಲೆ ಎತ್ತುತ್ತಿದೆ. ತ್ರಿಕೋಣಾಕಾರದಲ್ಲಿರುವ ಇದು ನಾಲ್ಕು ಮಹಡಿಯನ್ನು ಹೊಂದಿದ್ದು, ಹೊಸ ಲೆಕ್ಕಾಚಾರದ ಪ್ರಕಾರ ಅದಕ್ಕೆ 1275 ಕೋಟಿ ರುಪಾಯಿ ವೆಚ್ಚ ತಗುಲಲಿದೆ. ಹೊಸ ಕಟ್ಟಡ 65,000 ಚದರ ಮೀಟರ್ ವಿಸ್ತಾರದ್ದಾಗಿದ್ದು, ಲೋಕಸಭೆಯಲ್ಲಿ 888 ಆಸನಗಳು, ರಾಜ್ಯಸಭೆಯಲ್ಲಿ 384 ಆಸನಗಳನ್ನು ಹೊಂದಿದೆ.
ಸೆಪ್ಟೆಂಬರ್ 2020 ರಲ್ಲಿ ಟಾಟಾ ಪ್ರಾಜೆಕ್ಟ್ಸ್ ಲಿಮಿಟೆಡ್ ಹೊಸ ಸಂಸತ್ತಿನ ಕಟ್ಟಡವನ್ನು ನಿರ್ಮಿಸುವ ಗುತ್ತಿಗೆಯನ್ನು ರೂ. 861.9 ಕೋಟಿ. L&T ಯ 865 ಕೋಟಿ ರೂಪಾಯಿಗಳ ಬಿಡ್‌ಗಿಂತ ಕಡಿಮೆ ಬೆಲೆಯನ್ನು ಉಲ್ಲೇಖಿಸಿ ಟಾಟಾ ಸಂಸ್ಥೆ ಯೋಜನೆಯನ್ನು ಪಡೆದುಕೊಂಡಿದೆ. ಅದರಂತೆ 10 ಡಿಸೆಂಬರ್ 2020 ರಂದು, ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನ ಹೊಸ ಕಟ್ಟಡ ನಿರ್ಮಾಣಕ್ಕೆ ಅಡಿಪಾಯ ಹಾಕಿದ್ದು 2022 ರ ವೇಳೆಗೆ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಅಂದಾಜಿಸಲಾಗಿತ್ತು.

ವೆಚ್ಚ ಮತ್ತು ಸಮಯ ಎರಡೂ ಹೆಚ್ಚಾಯಿತು
ಜನವರಿ 2022 ರ ಸುದ್ದಿ ವರದಿಗಳ ಪ್ರಕಾರ, CPWD ನಿರ್ಮಾಣದ ವೆಚ್ಚವನ್ನು ಸುಮಾರು 29% ರಷ್ಟು ಹೆಚ್ಚಿಸಿ 1250 ಕೋಟಿ ರೂಪಾಯಿಗಳಿಗೆ ಹೆಚ್ಚಿಸಿದೆ. ವರದಿಯ ಪ್ರಕಾರ, CPWD ಈ ನಿಟ್ಟಿನಲ್ಲಿ (ಇಲ್ಲಿ ಮತ್ತು ಇಲ್ಲಿ) ಲೋಕಸಭೆಯ ಸೆಕ್ರೆಟರಿಯೇಟ್‌ನ ಪ್ರಾಥಮಿಕ ಅನುಮೋದನೆಯನ್ನು ಕೋರಿದೆ.ಇತ್ತೀಚೆಗಷ್ಟೇ ಪ್ರಧಾನಿ ಮೋದಿಯವರು ನೂತನ ಸಂಸತ್ ಭವನಕ್ಕೆ ಭೇಟಿ ನೀಡಿದ್ದರು ಮತ್ತು ವರದಿಗಳ ಪ್ರಕಾರ, ನಿರ್ಮಾಣವು ಮುಕ್ತಾಯದ ಹಂತದಲ್ಲಿದೆ ಮತ್ತು ಶೀಘ್ರದಲ್ಲೇ ಉದ್ಘಾಟನೆಗೊಳ್ಳುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಟಾಟಾ ಸಮೂಹವು ಹೊಸ ಸಂಸತ್ತಿನ ಕಟ್ಟಡವನ್ನು ಉಚಿತವಾಗಿ ನಿರ್ಮಿಸಿ ಹದಿನೇಳು ತಿಂಗಳ ಕಡಿಮೆ ಸಮಯದಲ್ಲಿ ಪೂರ್ಣಗೊಳಿಸಿ ದಾಖಲೆ ನಿರ್ಮಿಸಿದೆ ಎಂಬುದೆಲ್ಲಾ ಸುಳ್ಳು. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ.
ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ನಿತಿನ್ ಗಡ್ಕರಿಯ ಕ್ಷಮೆ ಕೇಳಿದ ಕೇಜ್ರಿವಾಲ್ ಎಂದು ಸಂಬಂಧವಿಲ್ಲದ ಫೋಟೊ ಹಂಚಿಕೆ

