ಫ್ಯಾಕ್ಟ್‌ಚೆಕ್ : ಪ್ರಧಾನಿ ಮೋದಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿಧರರೇ?
ಪ್ರಧಾನಿ ನರೇಂದ್ರ ಮೋದಿಯವರ ಪದವಿ ಪ್ರಮಾಣ ಪತ್ರದ ವಿಚಾರವಾಗಿ ಹಲವು ವರ್ಷಗಳಿಂದ ಚರ್ಚೆ ನಡೆಯುತ್ತಿದೆ. ಇತ್ತೀಚೆಗೆ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ನರೇಂದ್ರ ಮೋದಿ ಅವರ ಪದವಿ ಪ್ರಮಾಣಪತ್ರಗಳನ್ನು ಬಹಿರಂಗ ಪಡಿಸುವಂತೆ ಒತ್ತಾಯಿಸಿದ್ದರು.
ಮೋದಿಯವರ ಶೈಕ್ಷಣಿಕ ವಿವರಗಳ ಕುರಿತು ಮಾಹಿತಿ ಹಕ್ಕು ಕಾನೂನಿನಡಿಯಲ್ಲಿ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸಲ್ಲಿಸಿದ ಅರ್ಜಿಯಿಂದ ಕೆರಳಿದ ಗುಜರಾತ್ ವಿವಿ ಅವರ ವಿರುದ್ಧ ಮೊಕದ್ದಮೆ ಹೂಡಿತ್ತು. ಇತ್ತೀಚಿಗೆ ಗುಜರಾತ್ ನ್ಯಾಯಾಲಯ ಮೋದಿಯವರ ಕುರಿತು ಹೀಗೆಲ್ಲ ಮಾಹಿತಿ ಕೇಳಿದ್ದಕ್ಕಾಗಿ ಕೇಜ್ರಿವಾಲ್ ಅವರಿಗೆ ರೂ.25,000 ದಂಡ ವಿಧಿಸಿತು. ಸದ್ಯ ನರೇಂದ್ರ ಮೋದಿಯವರ ಪದವಿ ಪ್ರಮಾಣ ಪತ್ರ ನೀಡುವ ಅಗತ್ಯವಿಲ್ಲ ಎಂದು ಕೋರ್ಟ್ ಹೇಳಿದೆ.
ಪ್ರಧಾನಿ ನರೇಂದ್ರ ಮೋದಿ ಅವರ BA ಮತ್ತು MA ಪದವಿ ಪ್ರಮಾಣ ಪತ್ರಗಳನ್ನು 2016 ರಲ್ಲಿ ಬಿಜೆಪಿ ಬಿಡುಗಡೆ ಮಾಡಿತ್ತು. ಈ ದಾಖಲೆಗಳನ್ನು ನಕಲಿ ಎಂದು AAP ಆರೋಪಿಸಿತ್ತು.
PM Modi's educational degrees made public by Shri @AmitShah : BA from Delhi University & MA from Gujarat university. pic.twitter.com/6A4pzGXLRl
— BJP (@BJP4India) May 9, 2016
ಕಲಾ ವಿಭಾಗದಲ್ಲಿ ಗುಜರಾತ್‌ನ ವಿಶ್ವವಿದ್ಯಾಲಯದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಪಡೆದಿದ್ದಾರೆ ಎನ್ನಲಾದ ಸ್ನಾತಕೋತ್ತರ ಪದವಿ ಪ್ರಮಾಣ ಪತ್ರವನ್ನು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಇತ್ತೀಚೆಗೆ ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದಾರೆ.
Why so much fuss on Modi’s education qualification ? Six years ago Amit Shah and Jaitely did a joint media conference-which I think ANI put it out— Modi’s MA certificate. See below. Did I get it right? pic.twitter.com/E1s6WiJ0Q6
— Subramanian Swamy (@Swamy39) April 1, 2023
ಮೋದಿಯವರ ವಿದ್ಯಾರ್ಹತೆಯ ಬಗ್ಗೆ ಯಾಕೆ ಇಷ್ಟೊಂದು ಗಲಾಟೆ? ಆರು ವರ್ಷಗಳ ಹಿಂದೆ ಅಮಿತ್ ಶಾ ಮತ್ತು ಅರುಣ್ ಜೇಟ್ಲಿ ಜಂಟಿ ಮಾಧ್ಯಮಗೋಷ್ಠಿಯನ್ನು ನಡೆಸಿ, ನರೇಂದ್ರ ಮೋದಿ ಅವರ ಪದವಿ ಪ್ರಮಾಣ ಪತ್ರಗಳನ್ನು ಪ್ರದರ್ಶಿಸಿದ್ದರು. ಅದನ್ನು ಸುದ್ದಿ ಸಂಸ್ಥೆ ANI ಪ್ರಕಟಿಸಿತ್ತು ಎಂದು ಭಾವಿಸುತ್ತೇನೆ’ ಎಂಬ ಒಕ್ಕಣೆಯನ್ನೂ ತಮ್ಮ ಟ್ವೀಟ್‌ನಲ್ಲಿ ಸುಬ್ರಮಣಿಯನ್ ಸ್ವಾಮಿ ಬರೆದಿದ್ದಾರೆ.
ಇದಲ್ಲದೆ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ರಾಜೀವ್ ಶುಕ್ಲಾ ಅವರಿಗೆ ನೀಡಿದ ಹಿಂದಿನ ಸಂದರ್ಶನದಲ್ಲಿ ತಾವು ಹೈಸ್ಕೂಲ್ ವರೆಗೆ ಮಾತ್ರ ಶಿಕ್ಷಣ ಪಡೆದದ್ದಾಗಿ ಹೇಳಿಕೊಂಡಿದ್ದರು. ಇವೆಲ್ಲ ಬೆಳವಣಿಗೆಗಳು ಅವರ ಶಿಕ್ಷಣದ ಕುರಿತು ಅನೇಕ ಶಂಕೆಗಳನ್ನು ಹುಟ್ಟುಹಾಕಿವೆ.
The font which was formed in 1992 has appeared on Modi Ji’s mark sheet in 1978.
Modi ji is Rajnikant of Indian Politics. 🤣🤣 pic.twitter.com/jUdUrnReWh
— Mahua Moitra Fans (@MahuaMoitraFans) April 1, 2023
ಪದವಿ ಪ್ರಮಾಣಪತ್ರಗಳನ್ನು ಬಿಡುಗಡೆ ಮಾಡಿದ ನಂತರ, ಆ ಪ್ರಮಾಣಪತ್ರಗಳಲ್ಲಿ ಕಂಡುಬಂದ ವ್ಯತ್ಯಾಸಗಳಿಂದಾಗಿ ಪ್ರಮಾಣಪತ್ರದ ಸತ್ಯಾಸತ್ಯತೆಯ ಬಗ್ಗೆ ಅನೇಕ ಪ್ರಶ್ನೆಗಳು ಎದ್ದಿವೆ. 1976 ರಲ್ಲಿ, ಪ್ರಮಾಣಪತ್ರಗಳಲ್ಲಿ ಬಳಸಲಾದ ಫಾಂಟ್ ಅಮಿತ್ ಶಾ ಬಿಡುಗಡೆ ಮಾಡಿದ ಪ್ರಮಾಣಪತ್ರಕ್ಕಿಂತ ಭಿನ್ನವಾಗಿವೆ ಎಂದು TMC ಸಂಸದೆ ಮಹುವ ಮೋಹಿತ್ರ ಪ್ರತಿಕ್ರಿಯಿಸಿದ್ದಾರೆ.
ಅಂಕಗಳನ್ನು ಸಹ 1976 ರಲ್ಲಿ ಕೈಯಿಂದ ಬರೆಯಲಾಗಿತ್ತು ಆದರೆ ಬಿಡುಗಡೆ ಮಾಡಿದ ಪ್ರಮಾಣಪತ್ರಗಳಲ್ಲಿ ಅಂಕಗಳನ್ನು ಟೈಪ್ ಮಾಡಲಾಗಿತ್ತು. ಇಂತಹ ಹಲವು ಅಪಸ್ವರಗಳು ಮೋದಿಯವರ ಪದವಿ ಪ್ರಮಾಣ ಪತ್ರದ ಕುರಿತ ಚರ್ಚೆಯನ್ನು ಇಂದಿನವರೆಗೂ ಉಳಿಸಿಕೊಂಡಿವೆ. ನ್ಯಾಯಾಲಯದಿಂದ ದಂಡ ವಿಧಿಸಿದ ನಂತರವೂ, ಅರವಿಂದ್ ಕೇಜ್ರಿವಾಲ್ ನರೇಂದ್ರ ಮೋದಿಯವರ ಮೂಲ ಪದವಿ ಪ್ರಮಾಣಪತ್ರಗಳನ್ನು ಸಾರ್ವಜನಿಕವಾಗಿ ತೋರಿಸಲು ಒತ್ತಾಯಿಸುತ್ತಿದ್ದಾರೆ.
ನಟ ಪ್ರಕಾಶ್ ರಾಜ್ ಟ್ವೀಟ್
ನಟ ಪ್ರಕಾಶ್ ರಾಜ್, ಆಮ್ ಆದ್ಮಿ ಪಕ್ಷದ ಸೋಷಿಯಲ್ ಮೀಡಿಯಾ ತಂಡದ ಕಪಿಲ್ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಅನೇಕರು ಈಗ ನರೇಂದ್ರ ಮೋದಿ ಅವರು 1992 ರಲ್ಲಿ ಸಂದರ್ಶನವೊಂದರಲ್ಲಿ ತಾವು ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದಾರೆ. “ತರಂಗ” ನಿಯತಕಾಲಿಕೆಯಲ್ಲಿ ಪ್ರಕಟವಾಗಿತ್ತು ಎನ್ನಲಾದ ಪತ್ರಿಕೆಯ ತುಣುಕೊಂದನ್ನು ಹಂಚಿಕೊಂಡಿದ್ದಾರೆ ಚಿತ್ರವನ್ನು ಟ್ವಿಟರ್ ಪೋಸ್ಟ್‌ಗಳೊಂದಿಗೆ ಹಂಚಿಕೊಂಡಿದ್ದಾರೆ.
Wowww 👏👏👏Congratulations for the Mechanical Engineer degree too.. #justasking pic.twitter.com/OzHgAVzT1K
— Prakash Raj (@prakashraaj) April 3, 2023
ಲೇಖನದಲ್ಲಿ ಬರೆದಿರುವಂತೆ “ಯುವಕ ಗುಜರಾತ್ ಬಿಜೆಪಿಯ ನರೇಂದ್ರ ಮೋದಿ. ಅವರು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ, ಅವರು ತಮ್ಮ ಪಕ್ಷದ ಬೃಹತ್ ಯಶಸ್ಸಿನ ಹಿಂದಿನ ಶಕ್ತಿಯಾಗಿದ್ದರು. ವಿದ್ಯಾರ್ಥಿ ದಿನಗಳಿಂದಲೂ ಪ್ರಬಲ ಸಂಘಟಕರಾಗಿ ಗುರುತಿಸಿಕೊಂಡಿದ್ದರು. 1974ರಲ್ಲಿ ಲೋಕನಾಯಕ ಜಯಪ್ರಕಾಶ್ ಕರೆ ನೀಡಿದ ಗುಜರಾತ್ ನವನಿರ್ಮಾಣ ಆಂದೋಲನದ ನಾಯಕ ಎಂದು ಸಾರ್ವಜನಿಕರಿಗೆ ಪರಿಚಿತರಾದರೂ, ಅವರ ಕೆಲಸ ಹೆಚ್ಚಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಸಲ್ಲಿಕೆಯಾಗುತ್ತಿತ್ತು. ನರೇಂದ್ರ ಮೋದಿ ಅವರು ಇಂಜಿನಿಯರಿಂಗ್ ಪದವೀಧರರಾಗಿದ್ದು, ಪ್ರಬಲ ಸಂಘಟಕರಾಗಿ ಪಕ್ಷದಲ್ಲಿ ಹೆಸರುವಾಸಿಯಾಗಿದ್ದಾರೆ. ಅವರು ಪಕ್ಷದ ರಾಷ್ಟ್ರೀಯ ಸಮಿತಿಯ ಸದಸ್ಯರಾಗಿದ್ದಾರೆ ಮತ್ತು ಸಮಾಜಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದಾರೆ. ಎಂದು ಉಲ್ಲೇಖಿಸಲಾಗಿದೆ.
ಆದರೆ ಪಠ್ಯದಲ್ಲಿ ಎಲ್ಲಿಯೂ, ನರೇಂದ್ರ ಮೋದಿ ಅವರು ತಾವು (ಮೆಕ್ಯಾನಿಕಲ್) ಇಂಜಿನಿಯರಿಂಗ್ ಪದವೀಧರ ಎಂದು ಹೇಳಿಕೊಂಡಿರುವುದನ್ನು ಉಲ್ಲೇಖಿಸಿಲ್ಲ. ಈ ಲೇಖನವು ನರೇಂದ್ರ ಮೋದಿಯವರ ಬಗ್ಗೆ ಬರೆಯಲಾಗಿದೆ ಮತ್ತು ಇದನ್ನು ತರಂಗದಲ್ಲಿ ಪ್ರಕಟಿಸಲಾಗಿದೆ ಎಂದು ಹೇಳಲಾಗಿದೆ.
ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಯೂಟರ್ನ್ ಫ್ಯಾಕ್ಟ್‌ಚೆಕ್ ತಂಡವು ತರಂಗ ಮ್ಯಾಗಜಿನ್‌ನ ಸಂಪಾದಕರಾದ ಡಾ.ಯು.ಬಿ.ರಾಜಲಕ್ಷ್ಮಿ ಅವರನ್ನು ಸಂಪರ್ಕಿಸಿ ಉಲ್ಲೇಖಿತ ಲೇಖನದ ಬಗ್ಗೆ ವಿಚಾರಿಸಿದಾಗ, ಪ್ರತಿಕ್ರಿಯಿಸಿರುವ ಡಾ.ಯು.ಬಿ.ರಾಜಲಕ್ಷ್ಮಿ , 1992ರಲ್ಲಿ ಸಂತೋಷ್ ಕುಮಾರ್ ಗುಲ್ವಾಡಿ ಅವರು ಪತ್ರಿಕೆಯ ಸಂಪಾದಕರಾಗಿದ್ದರು ಅವರು ತೀರಿಕೊಂಡಿದ್ದಾರೆ. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡ ಪತ್ರಿಕಾ ತುಣುಕು ತರಂಗ ಮ್ಯಾಗಜಿನ್‌ನಲ್ಲಿ ಪ್ರಕಟವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿರುವಂತೆ ಪ್ರಧಾನಿ ನರೇಂದ್ರ ಮೋದಿ ಶೈಕ್ಷಣಿಕ ಹಿನ್ನಲೆಯನ್ನು ಪರಿಶೀಲಿಸಿದಾಗ, ಮೋದಿಯವರ ಶೈಕ್ಷಣಿಕ ಅರ್ಹತೆಯ ಕುರಿತು ಅನೇಕ ವಿವಾದಗಳಿವೆ. ಅದಕ್ಕೆ ಕಾರಣ ಅವರೊಂದಿಗೆ ಕೂಡಿ ಓದಿದ್ದೇವೆ ಎಂದು ಇಲ್ಲಿಯವರೆಗೆ ಯಾವೊಬ್ಬ ಸಹಪಾಠಿಯೂ ಬಹಿರಂಗವಾಗಿ ಹೇಳಿಕೊಂಡ ಉದಾಹರಣೆ ಇಲ್ಲ. ಅವರಿಗೆ ಭೋದಿಸಿದ ಅಧ್ಯಾಪಕರೂ ಕೂಡ ಇದುವರೆಗೆ ಪತ್ತೆಯಾಗಿಲ್ಲ. ಮೋದಿಯವರು ತಾವೇ ಹೇಳಿಕೊಂಡಂತೆ 1983 ರಲ್ಲಿ ಗುಜರಾತ ವಿವಿ ಯಿಂದ ಸಮಗ್ರ ರಾಜಕೀಯಶಾಸ್ತ್ರ (Entire Political Science) ಎಂಬ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರೆನ್ನುತ್ತವೆ ದಾಖಲೆಗಳು.
ಒಟ್ಟಾರೆಯಾಗಿ ಹೇಳುವುದಾದರೆ, ಕನ್ನಡದಲ್ಲಿ ಜನಪ್ರೀಯವಾಗಿದ್ದ ತರಂಗ ವಾರಪತ್ರಿಕೆಯಲ್ಲಿ ಮೋದಿ ಒಬ್ಬ ಮೆಕ್ಯಾನಿಕಲ್ ಇಂಜಿನೀಯರ್ ಪದವಿಧರ ಎಂದು ಬರೆಯಲಾಗಿತ್ತು. ಆದರೆ ತರಂಗದ ಲೇಖನ ಎಂದು ಹೇಳಲಾದ ಪೇಪರ್ ಕಟಿಂಗ್ ನಕಲಿಯಾಗಿದೆ ಎಂದು ಅದರ ಸಂಪಾದಕರಾದ ಡಾ.ಯು.ಬಿ.ರಾಜಲಕ್ಷ್ಮಿ ತಿಳಿಸಿದ್ದಾರೆ. ತಾನು (ಮೆಕ್ಯಾನಿಕಲ್) ಇಂಜಿನಿಯರಿಂಗ್ ಓದಿದ್ದೇನೆ ಎಂದು ನರೇಂದ್ರ ಮೋದಿ ಹೇಳಿರುವ ಹೇಳಿಕೆಗಳು ಎಲ್ಲೂ ದಾಖಲಾಗಿಲ್ಲ, ಹಾಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಂತೆ ನರೇಂದ್ರ ಮೋದಿ ಒಬ್ಬ ಮೆಕ್ಯಾನಿಕಲ್ ಇಂಜಿನೀಯರ್ ಪದವಿಧರ ಎಂಬುದು ಸುಳ್ಳು. ಆದರೆ ಪ್ರಸ್ತುತ ಪಡಿಸಿರುವ ಅಧಿಕೃತ ದಾಖಲೆಗಳ ಪ್ರಕಾರ ಪ್ರಧಾನಿ ನರೇಂದ್ರ ಮೋದಿ Entire Political Scienceನ ಸ್ನಾತಕೋತ್ತರ ಪದವಿಧರ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ: ಫ್ಯಾಕ್ಟ್‌ಚೆಕ್ : ಬುರ್ಖಾ ಧರಿಸಿದ್ದ ಮುಸ್ಲಿಂ ಹುಡುಗಿಯರು ಜೈ ಶ್ರೀರಾಮ್ ಹಾಡಿಗೆ ಹೆಜ್ಜೆ ಹಾಕಿದರೆ?