ಫ್ಯಾಕ್ಟ್‌ಚೆಕ್ : ತಿಮಿಂಗಿಲ ದಾಳಿಯಿಂದ ನುಚ್ಚು ನೂರಾದ ಹಡಗು! ವೈರಲ್ ದೃಶ್ಯದ ವಾಸ್ತವವೇನು?

ಕೆನಡಾದಲ್ಲಿ ಹಡಗಿನ ಮೇಲೆ ದೈತ್ಯ ತಿಮಿಂಗಿಲವೊಂದು ದಾಳಿ ಮಾಡಿ ಹಡುಗನ್ನು ಪುಡಿ ಪುಡಿ ಮಾಡುವ ದೃಶ್ಯಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ. “ಇದು ಯಾವುದೇ ಡಿಜಿಟಲ್ ವರ್ಕ್ ಅಲ್ಲ ತಿಮಿಂಗಿಲ ತಾಕತ್ತು ಊಹಿಸಲೂ ಅಸಾಧ್ಯ.. ಇದು ಕೆನಡಾದಲ್ಲಿ ತಿಮಿಂಗಿಲ ಕೊಟ್ಟ ಹೊಡೆತ” ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋದ ಕೆಲವು ಕೀಫ್ರೇಮ್‌ಗಳನ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ ‘ದಿ ಸನ್’  ಮಾಡಿದ ವರದಿ ಲಭ್ಯವಾಗಿದೆ. ವರದಿಯ ಪ್ರಕಾರ, ಈ ಅನಿಮೇಟೆಡ್ CGI ವೀಡಿಯೋ ಕ್ಲಿಪ್ ಅನ್ನು ‘ಅಲೆಕ್ಸಿ’ ಎಂಬ ಡಿಜಿಟಲ್ ವಿಡಿಯೊ ಕ್ರಿಯೇಟರ್‌ನಿಂದ ರಚಿಸಲಾಗಿದೆ. ‘ಅನಿಮೇಟೆಡ್ CGI ವೀಡಿಯೊ ಟಿಕ್‌ಟಾಕ್‌ನಲ್ಲಿ ಒಂಬತ್ತು ಮಿಲಿಯನ್ ಲೈಕ್‌ಗಳನ್ನು ಹೊಂದಿದೆ ಮತ್ತು ದೈತ್ಯ ಮೆಗಾಲೊಡಾನ್ ತರಹದ ಶಾರ್ಕ್ ಹಡಗನ್ನು ಹೇಗೆ ನಾಶಪಡಿಸುತ್ತದೆ ಎಂಬುದನ್ನು ಕಲಾತ್ಮಕವಾಗಿ ರಚಿಸಲಾಗಿದೆ. ಎಂದು ದಿ ಸನ್ ವರದಿ ಮಾಡಿದೆ.

ವೈರಲ್ ಪೋಸ್ಟ್‌ನಲ್ಲಿರುವ ವೀಡಿಯೊವು ‘ಅಲೆಕ್ಸಿ’ ಎಂಬ ಕಲಾವಿದರಿಂದ ರಚಿಸಲಾದ ಡಿಜಿಟಲ್ ರೆಂಡರ್ಡ್ ಅನಿಮೇಷನ್ ಕ್ಲಿಪ್ ಎಂಬುದು ಸ್ಪಷ್ಟವಾಗಿದೆ. ಇದನ್ನು Instagram (@aleksey__n) ನಲ್ಲಿ ಹಂಚಿಕೊಂಡಿದ್ದು, ಅಲೆಕ್ಸಿ ಎಂಬ ಇನ್‌ಸ್ಟಾಗ್ರಾಮ್  434K ಫಾಲೋಯರ್ಸ್‌ಅನ್ನು ಹೊಂದಿದೆ. 9 ಮಾರ್ಚ್ 2023 ರಂದು ಆ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ‘Meg🦈’ ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ದೈತ್ಯ ಶಾರ್ಕ್‌ವೊಂದು ಬೃಹತ್ ಹಡಗಿನ ಮೇಲೆ ದಾಳಿ ಮಾಡಿ ಉರುಳಿಸಿದೆ ಎಂದು ಡಿಜಿಟಲ್ ಅನಿಮೇಟೆಡ್ ಮೂಲಕ ದೃಶ್ಯಗಳನ್ನು ರಚಿಸಿ ಅಲೆಕ್ಸ್ ಎಂಬ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದೆ. ಆದರೆ ಈ ದೃಶ್ಯಗಳನ್ನು ಕೆನಡಾದಲ್ಲಿ ಮೆಗಾಲೊಡಾನ್ ಹಡಗಿನ ಮೇಲೆ ತಿಮಿಂಗಲ ದಾಳಿ ಮಾಡಿದ ನೈಜ ಘಟನೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ. ಆದರೆ ಇದು ನೈಜ ಘಟನೆಯಲ್ಲ ಎಂದು ಫ್ಯಾಕ್ಟ್‌ಲಿ ವರದಿ ಮಾಡಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಫ್ಯಾಕ್ಟ್‌ಲಿ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್ : ಪ್ರಧಾನಿ ಮೋದಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿಧರರೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights