ಫ್ಯಾಕ್ಟ್‌ಚೆಕ್ : ಮೋದಿ ಉದ್ಘಾಟಿಸಿದ ಮೊದಲ ದಿನವೇ ಮಳೆಗೆ ಸೋರಿದ ವಂದೇ ಭಾರತ್ ರೈಲು ಎಂದು ಹಳೆಯ ಚಿತ್ರ ಹಂಚಿಕೆ

ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್‌ 26ಕ್ಕೆ ಚಾಲನೆ ನೀಡಿದ ಕೇರಳದ ಚೊಚ್ಚಲ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ಚಾವಣಿಯಿಂದ ಮಳೆ ನೀರು ಸೋರುತ್ತಿರುವ ವಿಡಿಯೊ ವೈರಲ್‌ ಆಗಿದೆ. ವಂದೇ ಭಾರತ್ ರೈಲಿನಲ್ಲಿ ಮಳೆ ನೀರು ಸೋರುತ್ತಿರುವಾಗ ಲೋಕೊ ಪೈಲೆಟ್‌ ಛತ್ರಿ ಹಿಡಿದಿರುವ ಚಿತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ.

https://twitter.com/KrisNair1/status/1651119775425388544

ಮೋದಿಯವರ “ವಂದೇ ಭಾರತ್” ಮೋದಿಯಂತೆಯೇ ದುರಂತಮಯವಾಗಿದೆ. ಉದ್ಘಾಟನೆಯ ಮೊದಲ ದಿನವೇ ಕೇರಳದ ವಂದೇ ಭಾರತ್ ರೈಲು ಛಾವಣಿಯಿಂದ ನೀರು ಸೋರಲಾರಂಭಿಸಿದೆ ಎಂದು ಪ್ರತಿಪಾದಿಸಿ ಟ್ವೀಟ್ ಮಾಡಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ? ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಚಿತ್ರವನ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಕೇರಳದಲ್ಲಿ ಉದ್ಘಾಟನೆಗೊಂಡ ಮೊದಲೆ ದಿನವೇ ರೈಲಿನಲ್ಲಿ ನೀರು ಸೋರಿಕೆಯಾಗಿದೆ ಎಂಬ ಹಲವು ಸುದ್ದಿ ಮಾಧ್ಯಮಗಳ ವರದಿಗಳು ಲಭ್ಯವಾಗಿದೆ.

ತಿರುವನಂತಪುರಂ-ಕಾಸರಗೋಡು ಮಾರ್ಗದ ರೈಲನ್ನು ಪ್ರಾಥಮಿಕ ಸವೀರ್‍ಸಿಂಗ್‌ ಬಳಿಕ ಕಣ್ಣೂರು ನಿಲ್ದಾಣದಲ್ಲಿ ನಿಲ್ಲಿಸಲಾಗಿತ್ತು. ಈ ಸಂದರ್ಭದಲ್ಲಿ ಭಾರಿ ಮಳೆ ಸುರಿದಿದೆ. ಈ ವೇಳೆ ಬೆನ್ನಲ್ಲೇ ರೈಲಿನ ಎ.ಸಿ. ವೆಂಟ್‌ ಮೂಲಕ ಮಳೆಯ ನೀರು ಒಳಗೆ ಬರುತ್ತಿರುವುದು ಕಂಡು ಬಂದಿದೆ. ಮಂಗಳವಾರ ರೈಲಿಗೆ ಹಸಿರು ನಿಶಾನೆ ತೋರಲಾಗಿದ್ದು, ಅಂದು ರಾತ್ರಿಯೇ ನೀರು ಜಿನುಗಿದೆ.

ವಂದೇ ಭಾರತ್‌ ರೈಲು

ಬುಧವಾರ ಬೆಳಗ್ಗೆ ರೈಲ್ವೆ ತಾಂತ್ರಿಕ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ, ಸೋರಿಕೆಯನ್ನು ದುರಸ್ತಿ ಮಾಡಲಾಗಿದೆ. ದುರಸ್ತಿ ಬಳಿಕ ಬುಧವಾರ ಮಧ್ಯಾಹ್ನ 2.30ಕ್ಕೆ ರೈಲು ಕಾರ್ಯಾಚರಣೆಗೊಂಡಿದೆ. ನೀರು ಸೋರಿಕೆಗೆ ಕಾರಣವಾದ ಅಂಶಗಳ ಬಗ್ಗೆ ತನಿಖೆ ನಡೆಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ ಸಾಮಾಜಿಕ ಮಧ್ಯಮಗಳಲ್ಲಿ ಹಂಚಿಕೊಳ್ಳಲಾಗಿರುವ ಚಿತ್ರ ವಂದೇ ಭಾರತ್ ರೈಲಿಗೆ ಸಂಬಂಧಿಸಿದ್ದಲ್ಲ ಎಂದು ನ್ಯೂಸ್‌ ಚೆಕ್ಕರ್ ವರದಿ ಮಾಡಿದೆ. ರೈಲಿನಲ್ಲಿ ಲೊಕೊಮೊಟಿವ್ ಆಪರೇಟರ್ ಮಳೆ ನೀರಿನಿಂದ ರಕ್ಷಣೆ ಪಡೆಯಲು ಛತ್ರಿ ಹಿಡಿದಿರುವ ಚಿತ್ರ 2017ರದ್ದು ಎಂದು ವರದಿ ಮಾಡಿದೆ.

ರೈಲು ಛಾವಣಿಯಿಂದ ತೊಟ್ಟಿಕ್ಕುವ ನೀರಿನಿಂದ ರಕ್ಷಿಸಿಕೊಳ್ಳಲು ರೈಲು ಚಾಲಕನು ಛತ್ರಿಯನ್ನು ಬಳಸುತ್ತಿರುವ ಚಿತ್ರ 5ವರ್ಷ  ವರ್ಷಗಳಷ್ಟು ಹಳೆಯದು. ವಿವಿಧ ಮೂಲಗಳ ಪ್ರಕಾರ, ಛಾಯಾಚಿತ್ರದಲ್ಲಿ ಸೆರೆಹಿಡಿಯಲಾದ ಘಟನೆಯು ಧನ್ಬಾದ್ ರೈಲು ವಿಭಾಗದ ಪ್ಯಾಸೆಂಜರ್ ರೈಲಿನದ್ದು ಎಂದು ಸ್ಪಷ್ಟವಾಗಿದೆ.

ರೈಲಿನಲ್ಲಿ ಛತ್ರಿ ಹಿಡಿರುವ ಚಿತ್ರವನ್ನು ಹಂಚಿಕೊಂಡಿರುವ ಟ್ವೀಟ್‌ಗೆ ಪ್ರತಿಕ್ರಿಸಿರುವ ಮತ್ತೊಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು ಪ್ಯಾಸೆಂಜರ್ ರೈಲಿಗೂ, ವಂದೇ ಭಾರತ್ ರೈಲಿಗೂ ಇರುವ ವ್ಯತ್ಯಾಸವನ್ನು ಮೊದಲು ತಿಳಿಯಿರಿ ಎಂದು ಮರು ಟ್ವೀಟ್ ಮಾಡಿದ್ದಾರೆ. ಹಾಗಾಗಿ ತಿರುವನಂತಪುರಂ-ಕಾಸರಗೋಡು ಮಾರ್ಗದ ರೈಲನ್ನು ಪ್ರಾಥಮಿಕ ಸವೀರ್‍ಸಿಂಗ್‌ ಬಳಿಕ ಕಣ್ಣೂರು ನಿಲ್ದಾಣದಲ್ಲಿ ನಿಲ್ಲಿಸಲಾಗಿತ್ತು. ಈ ಸಂದರ್ಭದಲ್ಲಿ ಭಾರಿ ಮಳೆ ಸುರಿದಿದೆ. ಈ ವೇಳೆ ಬೆನ್ನಲ್ಲೇ ರೈಲಿನ ಎ.ಸಿ. ವೆಂಟ್‌ ಮೂಲಕ ಮಳೆಯ ನೀರು ಒಳಗೆ ಒಂದಿರುವುದು ನಿಜ. ಆದರೆ ವೈರಲ್ ಚಿತ್ರ ಕೇರಳದ ವಂದೇ ಭಾರತ್ ಘಟನೆಗೆ ಸಂಬಂಧಿಸಿಲ್ಲ.

ಕೃಪೆ: ಫ್ಯಾಕ್ಟ್‌ಚೆಕ್ಕರ್

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನೂ ಓದಿರಿ: ಫ್ಯಾಕ್ಟ್‌ಚೆಕ್ : BJP ಗೆ ಮತ ಹಾಕಬೇಡಿ ಎಂದು NRIಗಳು ಪ್ರಚಾರ ಮಾಡುತ್ತಿರುವ ವಿಡಿಯೋದ ಅಸಲೀಯತ್ತೇನು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights