ಫ್ಯಾಕ್ಟ್‌ಚೆಕ್ : ವಿಶ್ವದ 7 ಅದ್ಭುತಗಳಲ್ಲಿ ಒಂದಾದ ಪಿರಮಿಡ್ ಅಡಿಯಲ್ಲಿ ಹಿಂದೂ ದೇವಾಲಯ ಪತ್ತೆಯಾಗಿದೆಯೇ?
ವಿಶ್ವದ 7 ಅದ್ಭುತಗಳಲ್ಲಿ ಒಂದಾದ ಗಿಝಾ ಪಿರಮಿಡ್, ಈಜಿಪ್ಟ್‌ನಲ್ಲಿ ಇರುವ ಗಿಝಾ ಪಿರಮಿಡ್, ಇಲ್ಲಿನ ಎಲ್ಲಾ ಪಿರಮಿಡ್‌ಗಳ ರಾಜ ಎಂದೇ ಪ್ರಸಿದ್ಧ. 4,500 ವರ್ಷಗಳ ಹಿಂದಿನ ಈ ಗೀಜಾ ಪಿರಮಿಡ್, ಹಲವು ಅಚ್ಚರಿ, ರಹಸ್ಯ ಹಾಗೂ ಕುತೂಹಲಗಳ ತಾಣ. ಈ ಪಿರಮಿಡ್‌ನಲ್ಲಿ ಹುಡುಕಿದಷ್ಟೂ ಹೊಸ ಸಂಗತಿಗಳು ಬಯಲಾಗ್ತಾನೇ ಇವೆ.
An ancient Hindu temple was found under the pyramids of Egypt during excavations. It can be seen that there is a Hindu Sun Temple under the pyramid.And pyramids are built over temples.
Under the pyramid there are many doors of Hindu temples and also there are many shiv lingams. pic.twitter.com/GwetlsGAEH
— Surendra Chaudhary (@surendrapalsin3) April 2, 2023
ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ವೊಂದು ವೈರಲ್ ಆಗುತ್ತಿದ್ದು “ಗಿಝಾದ ಪಿರಮಿಡ್‌ಗಳ ಅಡಿಯಲ್ಲಿ ಪುರಾತನ ಹಿಂದೂ ದೇವಾಲಯವು ಕಂಡುಬಂದಿದೆ, ‘ಈ ದೇವಸ್ಥಾನದಲ್ಲಿ ಶಿವಲಿಂಗಗಳಿವೆ. ಇದು ಸೂರ್ಯ ದೇವಾಲಯ’ ಎಂಬುದಾಗಿ ಹೇಳಲಾಗಿದೆ. ‘ಇಡೀ ಜಗತ್ತೇ ಸನಾತನ ಧರ್ಮವಾಗಿದೆ. ಹಿಂದೂ ಆಗಿದ್ದಕ್ಕೆ ಹೆಮ್ಮೆಪಡು’ ಎಂದು ಹೇಳುವ ಪೋಸ್ಟ್‌ಗಳು ಹರಿದಾಡುತ್ತಿವೆ. ‘ದೇವಸ್ಥಾನಗಳ ಮೇಲೆ ಹಾಗೂ ಸುತ್ತಲೂ ಪಿರಮಿಡ್‌ಗಳನ್ನು ಕಟ್ಟಲಾಗಿದೆ’ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿರುವ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 1996 ರಿಂದ ಈ ಸಮಾಧಿಗಳನ್ನು ಉತ್ಖನನ ಮಾಡುತ್ತಿರುವ ರಷ್ಯನ್ ಅಕಾಡೆಮಿ ಆಫ್ ಸೈನ್ಸಸ್ನ ಓರಿಯಂಟಲ್ ಸ್ಟಡೀಸ್ನ ಇನ್ಸ್ಟಿಟ್ಯೂಟ್ ತಂಡವು 2012 ರಲ್ಲಿ ಈ ವರ್ಣಚಿತ್ರವನ್ನು ಕಂಡುಹಿಡಿದಿದೆ.
ಪ್ರಸಿದ್ಧ ಗಿಝಾ ಪಿರಮಿಡ್‌ಗೆ 300 ಮೀಟರ್ ದೂರದಲ್ಲಿ ಉತ್ಖನನ ವೇಳೆ ಪತ್ತೆಯಾಗಿದ್ದ, ಆಗಿನ ಕಾಲದ ಪುರೋಹಿತನ ಗೋರಿಯಲ್ಲಿ ಚಿತ್ರಗಳು ಕಂಡುಬಂದಿದ್ದು, ಇದನ್ನೇ ದೇವಾಲಯ ಎಂಬುದಾಗಿ ತಪ್ಪಾಗಿ ಅರ್ಥೈಸಲಾಗಿದೆ ಎಂದು ‘ಇಂಡಿಯಾ ಟುಡೇ’ ಫ್ಯಾಕ್ಟ್ ಚೆಕ್ ಪ್ರಕಟಿಸಿದೆ. 2014ರಲ್ಲೇ ಪುರೋಹಿತನ ಗೋರಿ ಪತ್ತೆಯಾಗಿತ್ತು ಎಂದು ಹಲವಾರು ವೆಬ್‌ಸೈಟ್‌ಗಳು ಸುದ್ದಿ ಪ್ರಕಟಿಸಿದ್ದವು.
ಈ ಗೋರಿಯಲ್ಲಿ ಬಿಡಿಸಲಾಗಿರುವ ಚಿತ್ರಗಳಲ್ಲಿ ಅಂದಿನ ಜನಜೀವನ, ಮೀನುಗಾರಿಕೆ, ಸಮುದ್ರಯಾನವನ್ನು ಬಿಂಬಿಸುವ ದೃಶ್ಯಗಳಿವೆ. ಗೋರಿಯಲ್ಲಿ ಮೂರು ಕೋಣೆಗಳಿವೆ. ಆದರೆ ಈ ಚಿತ್ರವನ್ನು ಬಳಸಿಕೊಂಡು ಕೆಲವರು ಪಿರಮಿಡ್ ಅಡಿಯಲ್ಲಿ ಹಿಂದೂ ದೇವಸ್ಥಾನಗಳಿವೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ತಾಜ್ ಮಹಲ್ ಅಡಿಯಲ್ಲಿ ಶಿವ ದೇವಾಲಯ ಇದೆ, ಇನ್ನಾವುದೋ ಮಸೀದಿಯಲ್ಲಿ ಹಿಂದೂ ದೇವಸ್ಥಾವನ ಇದೆ ಎಂದು ಸುಳ್ಳು ಸುದ್ದಿ ಹರಡುವಂತೆ, ಈಗ ಪಿರಮಿಡ್ ಜಾಗದಲ್ಲಿ ಇದ್ದ ಆಗಿನ ಕಾಲದ ಪುರೋಹಿತನ ಗೋರಿಯನ್ನು ಹಿಂದೂ ದೇವಾಲಯ ಪತ್ತೆಯಾಗಿದೆ ಎಂದು ಪ್ರತಿಪಾದಿಸಿ ಸುಳ್ಳು ಪೋಸ್ಟ್ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಈ ಘಟನೆ ನಡೆದಾಗ ಇದದ್ದು ಕಾಂಗ್ರೆಸ್ ಸರ್ಕಾರವಲ್ಲ!


Pyramid talage hindu devastana patte yagide addarinda hindugalu Giza Pyramid annu odeyabeku yendu sangigalu galate madutiddare.