ಫ್ಯಾಕ್ಟ್‌ಚೆಕ್ : ಗುಜರಾತ್‌ನಲ್ಲಿ ಭಯಾನಕ ಚಂಡಮಾರುತದ ದೃಶ್ಯಗಳು ಎಂದು CGI ದೃಶ್ಯಗಳ ಹಂಚಿಕೆ

ಬಿಪರ್‌ಜೋಯ್ ಚಂಡಮಾರುತವು ಗುಜರಾತ್ ಕರಾವಳಿಯ ಜಖೌ ಬಂದರಿಗೆ ಅಪ್ಪಳಿಸಿತು. ಚಂಡಮಾರುತವು ದುರ್ಬಲಗೊಂಡಿದ್ದು, ಕರಾವಳಿ ಜಿಲ್ಲೆಯಲ್ಲಿ ಬಿರುಸಿನ ಗಾಳಿ ಮತ್ತು ನಿರಂತರ ಮಳೆಯಾಗುತ್ತಿದೆ. ಏತನ್ಮಧ್ಯೆ, ಗುಜರಾತ್‌ನ ಕಚ್‌ನ ಬಂದರು ಪ್ರದೇಶದಲ್ಲಿ ಬಿಪರ್‌ಜೋಯ್ ಚಂಡಮಾರುತವು ಸ್ಪ್ಲಾಶ್ ಭೂಕುಸಿತವನ್ನು ಉಂಟು ಮಾಡುವ ದೃಶ್ಯಗಳು ಎಂಬ ಹೇಳಿಕೆಯೊಂದಿಗೆ ಸುಂಟರಗಾಳಿಯನ್ನು ತೋರಿಸುವ ವೀಡಿಯೊ ಕ್ಲಿಪ್ ವೈರಲ್ ಆಗಿದೆ.

“ಗುಜರಾತ್ ನ ಕಚ್ ಬಂದರು ತೀರದಲ್ಲಿ ಬಿಪೊರ್ ಜೋಯ್ ಚಂಡಮಾರುತ ಇಳಿಕೆಯಾದ ಸಂದರ್ಭ” ಎಂಬ ಪ್ರತಿಪಾದನೆಯೊಂದಿಗೆ ಕನ್ನಡ ಪ್ರಭ ಸುದ್ದಿತಾಣದಲ್ಲಿ ವಿಡಿಯೋ ಟ್ವೀಟ್ ಅನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಕ್ನಡ ಪ್ರಭ ವೆಬ್ ತಾಣದಲ್ಲಿ ಹಂಚಿಕೊಳ್ಳಲಾದ ವಿಡಿಯೋ ದೃಶ್ಯಾವಳಿಗಳು ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ವೈರಲ್ ವಿಡಿಯೋದ ಕೀ ಪ್ರೇಮ್‌ಗಳನ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಇದು ಹಳೆಯದಾದ ಮತ್ತು CGI ಬಳಸಿ ರಚಿಸಲಾಗಿದೆ. ಹವಾಮಾನ ತಜ್ಞ ಶಿಯಾ ಗಿಬ್ಸನ್ 27 ಡಿಸೆಂಬರ್ 2020 ರಂದು ತಮ್ಮ ಫೇಸ್‌ಬುಕ್ ನಲ್ಲಿ  ವೈರಲ್ ವೀಡಿಯೊವನ್ನು ಪೋಸ್ಟ್ ಮಾಡಿದ್ದು, “ಇದು ನಕಲಿ ಮೈಕ್ರೋಬರ್ಸ್ಟ್ ಸರ್ಕ್ಯುಲೇಷನ್ ಸಾಮಾಜಿಕ ಮಾಧ್ಯಮ” ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್‌ ಮಾಡಲಾಗಿದೆ. ಈ ಫೇಸ್‌ಬುಕ್ ಪುಟವು ಹವಾಮಾನಕ್ಕೆ ಸಂಬಂಧಿಸಿದ ಸುದ್ದಿ ಮತ್ತು ಅಪ್‌ಡೇಟ್ಸ್‌ಗಳನ್ನು ಹೊಂದಿದೆ.

ಇನ್‌ಸ್ಟಾಗ್ರಾಮ್ ಪುಟ ‘ಆರ್ಫಿಕ್ ಫ್ರೇಮರ್’ ಅದೇ ವೀಡಿಯೊವನ್ನು 7 ಜೂನ್ 2019 ರಂದು cgi, vfx, ವಿಷುಯಲ್ ಎಫೆಕ್ಟ್ಸ್, ಡಿಜಿಟಲ್ ಆರ್ಟ್, ಫೋಟೋಶಾಪ್ ಸೇರಿದಂತೆ ಹ್ಯಾಶ್‌ಟ್ಯಾಗ್‌ಗಳೊಂದಿಗೆ ಪೋಸ್ಟ್ ಮಾಡಿದೆ, Instagram ಪುಟದ ಬಯೋ ‘ವಿಷುಯಲ್ ಎಫೆಕ್ಟ್ಸ್ ಆರ್ಟಿಸ್ಟ್’ ಎಂದು ಉಲ್ಲೇಖಿಸುತ್ತದೆ. ಇದರಲ್ಲಿ ನೇರವಾಗಿ ಯುಟ್ಯೂಬ್ ಚಾನೆಲ್‌ಗೆ ಲಿಂಕ್ ಕೂಡ ಮಾಡಲಾಗಿದೆ.

ವೈರಲ್ ವೀಡಿಯೊವನ್ನು ಆರ್ಫಿಕ್ ಫ್ರೇಮರ್ ವೆಬ್‌ಸೈಟ್‌ನಲ್ಲಿ 22, ಡಿಸೆಂಬರ್ 2018 ರಂದು ಅಪ್‌ಲೋಡ್ ಮಾಡಲಾಗಿದೆ, ಇದನ್ನು “ಟೊರ್ನಾಡೋ ಇನ್ ಜರ್ಸಿ, ಚಾನೆಲ್ ಐಲ್ಯಾಂಡ್ಸ್ ” ಶೀರ್ಷಿಕೆಯಲ್ಲಿ CGI ಸಿಮ್ಯುಲೇಶನ್ ಎಂದು ಉಲ್ಲೇಖಿಸಲಾಗಿದೆ. ಈ ದೃಶ್ಯಗಳನ್ನು ರಚಿಸಲು ನಿಕಾನ್ D7200 50mm 1.8, ಅಡೋಬ್ ಆಫ್ಟರ್ ಎಫೆಕ್ಟ್ಸ್ ಮತ್ತು ಸಿನಿಮಾ 4D (ಟರ್ಬುಲೆನ್ಸ್ ಎಫ್‌ಡಿ ಪ್ಲಗಿನ್‌ನೊಂದಿಗೆ)  ಸಾಫ್ಟ್‌ವೇರ್ ಮತ್ತು ಗೇರ್ ಅನ್ನು ಬಳಸಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಬಿಪರ್‌ಜೋಯ್ ಸೈಕ್ಲೋನ್ ಹೆಸರಿನಲ್ಲಿ ವೈರಲ್ ಆಗಿರುವ ಸುಂಟರಗಾಳಿಯ ವಿಡಿಯೋ ಹಳೆಯದಾಗಿದ್ದು, ವಿಷುಯಲ್ ಎಫೆಕ್ಟ್ಸ್ ಬಳಸಿ ರಚಿಸಲಾಗಿರುವುದು ಸ್ಪಷ್ವಾಗಿದೆ. ಹಾಗಾಗಿ ಫೊಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಯೂಟರ್ನ್

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಕೇದಾರನಾಥ ಹಿಂದೂ ಯಾತ್ರಿಗಳ ಮೇಲೆ ಹಲ್ಲೆ ನಡೆಸಿದ್ದು ಮುಸ್ಲಿಮರಲ್ಲ! ಮತ್ತ್ಯಾರು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights