ಫ್ಯಾಕ್ಟ್‌ಚೆಕ್ :ಪೆಟ್ರೋಲ್ ಬೆಲೆಯಲ್ಲಿ ಕೇಂದ್ರಕ್ಕಿಂಲೂ ರಾಜ್ಯಕ್ಕೆ ದುಪ್ಪಟ್ಟು ತೆರಿಗೆ ಸಂದಾಯವಾಗುತ್ತದೆ ಎಂಬುದು ಸುಳ್ಳು

ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ವೊಂದು ವೈರಲ್ ಆಗುತ್ತಿದ್ದು ಪೆಟ್ರೋಲ್ ಬಂಕ್‌ಗಳಲ್ಲಿ ದರ ನಿಗದಿಗೆ ಸಂಬಂಧಿಸಿದಂತೆ ದರ ಪಟ್ಟಿಯೊಂದಿಗೆ ಪೆಟ್ರೋಲ್ ಗೆ ವಿಧಿಸುವ ಸುಂಕಗಳನ್ನು ಪ್ರದರ್ಶೀಸಬೇಕು ಎಂಬ ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ಪೆಟ್ರೋಲ್ ದರ ಹೆಚ್ಚಾಗುವುದಕ್ಕೆ ಕೇಂದ್ರ ಸರ್ಕಾರಕ್ಕಿಂತ ರಾಜ್ಯ ಸರ್ಕಾರದಿಂದಲೇ ಹೆಚ್ಚಿನ ತೆರಿಗೆ ಹಾಕಲಾಗುತ್ತಿದೆ ಎಂದು ಹಾಗೂ ಯಾವ್ಯಾವುದಕ್ಕೆ ಎಷ್ಟು ಮೊತ್ತ ತಗುಲುತ್ತದೆ ಎಂಬ ಬಗ್ಗೆ ಮಾಹಿತಿ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಅದರ ಪ್ರಕಾರ, ಪೆಟ್ರೋಲ್ ಅಂತಿಮ ದರ ನಿಗದಿ ಆಗುವ ಮುಂಚಿನ ಬ್ರೇಕ್ ಅಪ್ ವಿವರ ಹೀಗಿದೆ: ಮೂಲ ದರ: 35.50 ರೂ., ಕೇಂದ್ರ ಸರ್ಕಾರದ ತೆರಿಗೆ: 19.50, ರಾಜ್ಯ ಸರ್ಕಾರದ ತೆರಿಗೆ: 41.55, ವಿತರಕರ ಕಮಿಷನ್: 6.50, ಒಟ್ಟು ಮೊತ್ತ: 103.05 ಎಂದು ತಿಳಿಸಲಾಗಿದೆ.

“ಪ್ರತಿಯೊಂದು ವಸ್ತುವಿಗೂ ಈ ರೀತಿ ಟ್ಯಾಕ್ಸ್ ಬೆಲೆಯನ್ನು ಬೇರೆ ಬೇರೆಯಾಗಿ ಪಟ್ಟಿ ಮಾಡಬೇಕು, ಅವಾಗ ಜನಕ್ಕೆ ನಾವು ಪ್ರತಿದಿನ, ಪ್ರತಿವಾರ, ಪ್ರತಿ ತಿಂಗಳು ,ಪ್ರತಿ ವರ್ಷಕ್ಕೆ , ಒಟ್ಟು 5 ವರ್ಷಕ್ಕೆ ಎಷ್ಟು ಟ್ಯಾಕ್ಸ್ ಕಟ್ಟುತ್ತೇವೆ ಅರ್ಥ ಆಗುತ್ತೆ ಜೊತೆಗೆ ಎಲೆಕ್ಷನ್ ಅಲ್ಲಿ ಕೊಡೋ ದುಡ್ಡಗಿಂತ ನಾವು ಕಟ್ಟೋ ಟ್ಯಾಕ್ಸ್ ಹಣ 100ಪಟ್ಟು ಜಾಸ್ತಿ ಇರುತ್ತೆ,ಅರ್ಥ ಮಾಡಿ ಕೊಳ್ಳಿ ಸತ್ಪ್ರಜೆಗಳೇ ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು  ಫೇಸ್‌ಬುಕ್ ಮತ್ತು ವಾಟ್ಸಾಪ್‌ಗಳಲ್ಲಿ ಹಂಚಿಕೊಳ್ಳಲಾಗಿದೆ.  ಹಾಗಿದ್ದರೆ ಪೋಸ್ಟ್‌ನಲ್ಲಿ ಪ್ರತಿಪಾದಿಸದಂತೆ ಕೇಂದ್ರ ಸರ್ಕಾರಕ್ಕಿಂತಲೂ ರಾಜ್ಯ ಸರ್ಕಾರಕ್ಕೆ ಕಟ್ಟುವ ತೆರಿಗೆಗಳು ಎರಡು ಪಟ್ಟು ಹೆಚ್ಚು ಎಂಬ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ : 

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೆಟ್ರೋಲ್ ಬೆಲೆಯಲ್ಲಿ ಹಂಚಿಕೊಳ್ಳುವ ಬೋರ್ಡ್‌ನಲ್ಲಿ ಪ್ರಕಟಿಸಿದ ವಿವಿಧ ಅಂಶಗಳನ್ನು ಪರಿಶೀಲಿಸಿದಾಗ, ವಾಸ್ತವ ಬೇರೆಯೇ ಇದೆ ಎಂಬುದು ತಿಳಿದುಬಂದಿದೆ.

 All About Petrol Tax in Karnataka

petrol tax

ಪೆಟ್ರೋಲ್ ಬೆಲೆಯನ್ನು ಒಂದು ಲೀಟರ್ ಗೆ ಇಷ್ಟು ಎಂದು ಲೆಕ್ಕ ಹಾಕುವಾಗ ಅದರಲ್ಲಿ ವಿವಿಧ ಅಂಶಗಳು ಒಳಗೊಳ್ಳುತ್ತವೆ. ಫೆಬ್ರವರಿ 4, 2023ರಂದು ಲೆಕ್ಕ ಹಾಕಲಾದ ಪೆಟ್ರೋಲ್ ದರದಲ್ಲಿ ಏನೇನು ಒಳಗೊಂಡಿದ್ದವು ಎನ್ನುವುದನ್ನು ಲೆಕ್ಕಾಚಾರ ಸಹಿತ ನೀಡಲಾಗಿದೆ.

ಕಚ್ಚಾ ತೈಲ ಬೆಲೆ- ರೂ. 40
ತೈಲ ಮಾರ್ಕೆಟಿಂಗ್ ಕಂಪನಿಗಳ ಪ್ರೊಸೆಸಿಂಗ್ ವೆಚ್ಚ- ರೂ. 7.35
(ಸಾಗಣೆ+ ಸಂಸ್ಕರಣಾ ವೆಚ್ಚ+ ಸಂಸ್ಕರಣಾ ಮಾರ್ಜಿನ್+ ತೈಲ ಮಾರ್ಕೆಟಿಂಗ್ ಕಂಪನಿಗಳ ಮಾರ್ಜಿನ್+ ಲಾಜಿಸ್ಟಿಕ್ಸ್+ ಆಪರೇಷನಲ್ ಕಾಸ್ಟ್)

ಭವಿಷ್ಯದಲ್ಲಿ ಏರಿಕೆ ಆಗಬಹುದಾದ್ದು ಎಂಬ ಎಚ್ಚರಿಕೆಯಿಂದ ವಿಧಿಸುವ ದರ- ರೂ. 10
ಕೇಂದ್ರ ಸರ್ಕಾರದ ತೆರಿಗೆಗಳು- ರೂ. 19.90
ಪೆಟ್ರೋಲ್ ಪಂಪ್ ಡೀಲರ್ ಕಮಿಷನ್- ರೂ. 3.80
ಕರ್ನಾಟಕ ಸರ್ಕಾರದ ವ್ಯಾಟ್ (ಶೇ 25.9)- ರೂ. 20.89
ಬೆಂಗಳೂರಿನಲ್ಲಿ ಪೆಟ್ರೋಲ್ ಮಾರಾಟ ದರ- ರೂ. 101.94

ಒಂದು ವೇಳೆ ಸದ್ಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವಂತೆ ಕರ್ನಾಟಕ ಸರ್ಕಾರವು 41.55 ರೂಪಾಯಿ ವ್ಯಾಟ್ ಹಾಕುತ್ತದೆ ಎಂದಾದಲ್ಲಿ ಪೆಟ್ರೋಲ್ ಮೂಲ ದರದ ಶೇ 117ರಷ್ಟು ತೆರಿಗೆ ವಿಧಿಸಿದಂತಾಗುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ವಿವರಿಸಿದಂತೆ ಕೇಂದ್ರ ಸರ್ಕಾರಕ್ಕಿಂತ ರಾಜ್ಯ ಸರ್ಕಾರಕ್ಕೆ ಎರಡುಪಟ್ಟು ಹೆಚ್ಚು ತೆರಿಗೆ ಪಾವತಿಯಾಗುತ್ತಿದೆ ಎಂದು ತಪ್ಪು ಮಾಹಿತಿಯನ್ನು ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ನ್ಯೂಸ್ ಮೀಟರ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಹಾವಿನ ಮರಿಗಳು ಬಿದ್ದಿದ್ದ ಹಾಲನ್ನು ಸೇವಿಸಿದ ಮಕ್ಕಳು ಸಾವನಪ್ಪಿವೆ ಎಂಬ ಸುದ್ದಿ ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights