ಫ್ಯಾಕ್ಟ್ಚೆಕ್ : ಹುಬ್ಬಳಿಯಲ್ಲಿ ಬುರ್ಖಾ ಧರಿಸಿ ಮಹಿಳೆಯಂತೆ ಉಚಿತ ಪ್ರಯಾಣ ಮಾಡಿದ ವ್ಯಕ್ತಿ ಮುಸ್ಲಿಂ ಅಲ್ಲ
ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆಯಿಂದ ರಾಜ್ಯದ ಮಹಿಳೆಯರಿಗೆ ಹೆಚ್ಚಿನ ಅನುಕೂಲ ಆಗುತ್ತಿದ್ದು, ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹೆಚ್ಚಿನ ಮಹಿಳೆಯರು ಉಚಿತ ಪ್ರಯಾಣದ ಲಾಭವನ್ನು ಪಡೆಯುತ್ತಿದ್ದಾರೆ. ರಾಜ್ಯ ಸರಕಾರ ಶಕ್ತಿ ಯೋಜನೆಯ ಲಾಭ ಪಡೆಯಲು ಇಲ್ಲೊಬ್ಬ ಭಾರೀ ಖತರ್ನಾಕ್ ಐಡಿಯಾ ಮಾಡಿದ್ದಾನೆ.
कर्नाटक बस में मुफ्त सफर का लुफ्त उठाने के लिए मुस्लिम मर्द ने लिया बुर्के का सहारा pic.twitter.com/Ue44u6H96J
— फादर अल्फी (@DPharji) July 7, 2023
ಶಕ್ತಿ ಯೋಜನೆ ಲಾಭ ಪಡೆಯಲು ಪುರುಷನೊಬ್ಬ ಬುರ್ಖಾ ಧರಿಸಿ ಪ್ರಯಾಣ ಮಾಡಿದ್ದಾನೆ. ಬುರ್ಖಾ ಧರಿಸಿದ ವ್ಯಕ್ತಿಯನ್ನು ಮುಸ್ಲಿಂ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ಅನ್ನು ಹಂಚಿಕೊಳ್ಳಲಾಗುತ್ತಿದೆ. ಯಾರಿಗೂ ತಿಳಿಯದಂತೆ ಬುರ್ಖಾ ಧರಿಸಿ ಸಾರಿಗೆ ಸಂಸ್ಥೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಮುಸ್ಲಿಂ ವ್ಯಕ್ತಿ ಇದೀಗ ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದಾನೆ. ಎಂಬ ಹೇಳಿಕೆಯೊಂದಿಗೆ ಪೋಸ್ಟ್ಅನ್ನು ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ಈ ವ್ಯಕ್ತಿ ಮುಸ್ಲಿಂ ಸಮುದಾಯಕ್ಕೆ ಸೇರಿದ್ದಾನೇಯೇ ಎಂದು ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸದಾಗ, ಶಕ್ತಿ ಯೋಜನೆ ಲಾಭ ಪಡೆಯಲು ಪುರುಷನೊಬ್ಬ ಬುರ್ಖಾ ಧರಿಸಿ ಪ್ರಯಾಣ ಮಾಡಿದ್ದಾನೆ. ಬುರ್ಖಾ ಧರಿಸಿದ ವ್ಯಕ್ತಿಯನ್ನು ವೀರಭದ್ರಯ್ಯ ಎಂದು ಗುರುತಿಸಲಾಗಿದೆ. ಕುಂದಗೋಳ ತಾಲೂಕಿನ ಸಂಶಿ ಗ್ರಾಮದ ಬಸ್ ನಿಲ್ದಾಣದಲ್ಲಿ ಬುರ್ಖಾ ಹಾಕಿದ ವ್ಯಕ್ತಿ ಪತ್ತೆಯಾಗಿದ್ದಾನೆ. ಮೂಲತಃ ವಿಜಯಪುರ ಜಿಲ್ಲೆ ನಿವಾಸಿಯಾಗಿರೋ ವೀರಭದ್ರಯ್ಯ, ಕೆಎಸ್ಆರ್ಟಿಸಿ ಬಸ್ನಲ್ಲಿ ಬುರ್ಖಾ ಧರಿಸಿ ಉಚಿತ ಪ್ರಯಾಣ ಮಾಡಿಕೊಂಡು ಬಂದಿದ್ದಾನೆ. ಇನ್ನು ಬುರ್ಖಾ ಧರಿಸಿದ್ದ ವೀರಭದ್ರಯ್ಯನ ಬಳಿ ಮಹಿಳೆಯರ ಆಧಾರ್ ಕಾರ್ಡ್ ಕೂಡ ಪತ್ತೆಯಾಗಿದೆ. ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ.
ಕೆಎಸ್ಆರ್ಟಿಸಿ ಬಸ್ನಲ್ಲಿ ಉಚಿತ ಪ್ರಯಾಣಕ್ಕಾಗಿ ಬುರ್ಖಾ ಧರಿಸಿ ಪ್ರಯಾಣ ಮಾಡಿದ ವಿಜಯಪುರದ ವೀರಭದ್ರಯ್ಯ. ಆದ್ರೆ, ಬುರ್ಖಾ ಧರಿಸಿದ್ದ ಉದ್ದೇಶವೇ ಬೇರೆ ಎಂದ..#Karnataka #ShaktiScheme #Congressguarantee #FreeBusTravel #ManwearingBurqa #Burqa pic.twitter.com/yWy5NvcNEH
— ಸತೀಶ್ ಕಂದಗಲ್ ಪುರ (@sathisho2555) July 6, 2023
ವಿಜಯಪುರ ಮೂಲದ ವೀರಭದ್ರಯ್ಯ ಎಂಬಾತನೇ ಈ ಸಾಹಸ ಮಾಡಿದ ವ್ಯಕ್ತಿ. ಬಸ್ ನಿಲ್ದಾಣದಲ್ಲಿ ಒಬ್ಬಂಟಿಯಾಗಿ ಕುಳಿತಿದ್ದ ಆತನನ್ನು ಸಾರ್ವಜನಿಕರು ಪ್ರಶ್ನೆ ಮಾಡಿದಾಗ ಈ ವಿಚಾರ ಬೆಳಕಿಗೆ ಬಂದಿದೆ. ಮೊದಲು ತಾನು ಭಿಕ್ಷಾಟನೆ ಉದ್ದೇಶದಿಂದ ಬುರ್ಖಾ ಹಾಕಿದ್ದೇನೆ ಎಂದು ವೀರಭದ್ರಯ್ಯ ಹೇಳಿಕೊಂಡಿದ್ದಾನಾದರೂ ಆತನ ಟ್ರಾವೆಲ್ ಹಿಸ್ಟರಿ ವಿಚಾರಿಸಿದಾಗ ಉಚಿತ ಪ್ರಯಾಣಕ್ಕೆಂದೇ ಈ ನಾಟಕವಾಡಿರುವುದು ಖಚಿತವಾಗಿದೆ. ಆತ ಧರಿಸಿದ್ದ ಬುರ್ಕಾವನ್ನು ಸಾರ್ವಜನಿಕರು ಬಸ್ ನಿಲ್ದಾಣದಲ್ಲಿಯೇ ತೆಗೆಸಿದ್ದಾರೆ. ಆದರೆ ಇದೀಗ ಸಾಮಾಜಿಕ ಜಾಲ ತಾಣಗಳಲ್ಲಿ ಬುರ್ಖಾ ಧರಿಸಿದ ವ್ಯಕ್ತಿ ಮುಸ್ಲಿಂ ಎಂಬ ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದಿಂದ ಮಹಿಳೆಯರ ಉಚಿತ ಪ್ರಯಾಣಕ್ಕಾಗಿ ಜಾರಿಗೊಳಿಸಲಾದ ಶಕ್ತಿ ಯೋಜನೆಯ ಲಾಭ ಪಡೆಯುವ ಉದ್ದೇಶದಿಂದ ಹಿಂದೂ ವ್ಯಕ್ತಿಯೊಬ್ಬ ಮುಸ್ಲಿಂ ಮಹಿಳೆಯರ ಬುರ್ಖಾ ಧರಿಸಿ ಕೆಎಸ್ಆರ್ಟಿಸಿ ಬಸ್ನಲ್ಲಿ ಪ್ರಯಾಣ ಮಾಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಯಾಣ ಮಾಡಿದ ವ್ಯಕ್ತಿ ಮುಸ್ಲಿಂ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ: ಫ್ಯಾಕ್ಟ್ಚೆಕ್ : ಮುಸ್ಲಿಮರು ರಸ್ತೆಗಳಲ್ಲಿ ನಮಾಜ್ ಮಾಡುತ್ತಿರುವ ಚಿತ್ರ ಪ್ಯಾರಿಸ್ನದಲ್ಲ

