ಫ್ಯಾಕ್ಟ್‌ಚೆಕ್ : ಮಣಿಪುರದಲ್ಲಿ ನಡೆದ ಮಹಿಳೆಯರ ಮೇಲಿನ ದೌರ್ಜನ್ಯದಲ್ಲಿ ಭಾಗಿಯಾದ ಆರೋಪಿಗಳು ಎಂದು ಸಂಬಂಧವಿಲ್ಲದ ಫೋಟೊ ಹಂಚಿಕೆ
RSS ನ ಸಮವಸ್ತ್ರವಾದ ಬಿಳಿ ಶರ್ಟ್, ಕಪ್ಪು ಟೋಪಿ ಮತ್ತು ಖಾಕಿ ಪ್ಯಾಂಟ್ ಧರಿಸಿರುವ ಇಬ್ಬರು ವ್ಯಕ್ತಿಗಳ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದು ಮಣಿಪುರದಲ್ಲಿ ಮೇ 4ರಂದು ಇಬ್ಬರು ಕುಕಿ ಮಹಿಳೆಯರನ್ನು ವಿವಸ್ತ್ರಗೊಳಿಸಿ ದೌರ್ಜನ್ಯ ಎಸಗಿದ ಆರೋಪಿಗಳ ಪೈಕಿ ಈ ಚಿತ್ರದಲ್ಲಿರುವ ಇಬ್ಬರೂ ಸೇರಿದ್ದಾರೆ ಎಂಬ ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.
ಸಿಪಿಐಎಂ ತೆಲಂಗಾಣದ ಅಧಿಕೃತ ಫೇಸ್‌ಬುಕ್ ಪೇಜ್‌ನಲ್ಲಿ ಇದೇ ಹೇಳಿಕೆಯೊಂದಿಗೆ ಪೋಸ್ಟ್ ಮಾಡಲಾಗಿದೆ. ಅವರು , “ಈ ಇಬ್ಬರು ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆಯಾಗಿ ನಡೆಯುವಂತೆ ಮಾಡಿದ ಸುಸಂಸ್ಕೃತ ಪುರುಷರು. ಇದು ಆರ್‌ಎಸ್‌ಎಸ್ ಕಲಿಸಿದ ಸಂಸ್ಕೃತಿ ಎಂದು ಹಂಚಿಕೊಳ್ಳಲಾಗಿದೆ. ಈ ಚಿತ್ರವು ಮಲಯಾಳಂನ ಸಾಮಾಜಿಕ ಮಾಧ್ಯಮದಲ್ಲಿಯೂ ವೈರಲ್ ಆಗಿದೆ, ಬಳಕೆದಾರರು ಚಿತ್ರದಲ್ಲಿ ಕಾಣುವ ಇಬ್ಬರಲ್ಲಿ ಒಬ್ಬನನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.
ಸಿಪಿಐ(ಎಂ) ನಾಯಕಿ ಸುಭಾಷಿಣಿ ಅಲಿ ಕೂಡ ಇದೇ ಫೋಟೊವನ್ನು ರಿಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ. ನಂತರ ಟ್ವೀಟ್‌ಅನ್ನು ಡಿಲೀಟ್ ಮಾಡಿದ್ದಾರೆ. ಅದನ್ನು ಆರ್ಕೈವ್ ಮಾಡಿದ ಲಿಂಕ್ ಅನ್ನು ಇಲ್ಲಿ ನೋಡಬಹುದಾಗಿದೆ.

ಹಾಗಿದ್ದರೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿಪಾದಿಸಿದಂತೆ ವೈರಲ್ ಚಿತ್ರದಲ್ಲಿರುವ ಇಬ್ಬರಲ್ಲಿ ಒಬ್ಬ ವ್ಯಕ್ತಿ ಮಣಿಪುರದಲ್ಲಿ ನಡೆದ ಪೈಶಾಚಿಕ ಕೃತ್ಯದ ಆರೋಪಿ RSS ಸಮವಸ್ತ್ರದಲ್ಲಿರುವ ವ್ಯಕ್ತಿ ಎಂಬುದು ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಚಿತ್ರದಲ್ಲಿರುವ RSS ಸಮವಸ್ತ್ರ ಧರಿಸಿದ ಇಬ್ಬರಲ್ಲಿ ಒಬ್ಬ ವ್ಯಕ್ತಿಯು ಮಣಿಪುರದಲ್ಲಿ ನಡೆದ ಪೈಶಾಚಿಕ ಕೃತ್ಯದಲ್ಲಿ ಭಾಗಿಯಾಗಿ ಬಂಧಿತನಾಗಿದ್ದಾನೆ ಎಂದು ಹಂಚಿಕೊಳ್ಳಲಾದ ಪೋಸ್ಟ್‌ಅನ್ನು ಪರಿಶೀಲಿಸಿದಾಗ, ವೈರಲ್ ಚಿತ್ರದಲ್ಲಿ ಬಲಭಾಗದಲ್ಲಿರುವ ವ್ಯಕ್ತಿಯು ಮಣಿಪುರದ ಬಿಜೆಪಿಯ ರಾಜ್ಯ ಉಪಾಧ್ಯಕ್ಷ ಚಿದಾನಂದ ಸಿಂಗ್ ಎಂಬ ಮಾಹಿತಿ ಲಭ್ಯವಾಗಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘ, ಇಂಫಾಲ್ ಜಿಲಾ ಆಯೋಜಿಸಿದ್ದ ‘ಪಥ ಸಂಚಲನ್’ ಕಾರ್ಯಕ್ರಮದಲ್ಲಿ ತಮ್ಮ ಮಗ ಮತ್ತು ಸೋದರಸಂಬಂಧಿಯೊಂದಿಗೆ ಭಾಗವಹಿಸಿದ್ದ ಸಿಂಗ್, ಅಕ್ಟೋಬರ್ 2022 ರಲ್ಲಿ ಫೇಸ್‌ಬುಕ್‌ನಲ್ಲಿ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.
ವೈರಲ್ ಚಿತ್ರದೊಂದಿಗೆ ಸಂಬಂಧ ಹೊಂದಿರುವ ಆರೋಪಿಯನ್ನು ತೌಬಲ್ ಜಿಲ್ಲೆಯಲ್ಲಿ ಬಂಧಿಸಲಾಗಿದೆ. ಆತನನ್ನು ಹೆರದಾಸ್ (32) ಎಂದು ಗುರುತಿಸಲಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಹಸಿರು ಟೀ ಶರ್ಟ್ ಧರಿಸಿರುವುದು ಇವರೇ.
View this post on Instagram
ಸಾಮಾಜಿಕ ಮಾಧ್ಯಮಗಳಲ್ಲಿ ಚಿದಾನಂದ್ ಸಿಂಗ್ ಮತ್ತು ಅವರ ಮಗನ ಚಿತ್ರಗಳು ವೈರಲ್ ಆಗುತ್ತಿದಂತೆ ಚಿದಾನಂದ್ ಸಿಂಗ್ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದು. ನಾನು ಮತ್ತು ನನ್ನ ಮಗ 2022ರಲ್ಲಿ RSS ಪಥಸಂಚಲನದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಸೆರೆಹಿಡಿದ ಚಿತ್ರವನ್ನು ಸಾಮಾಜಿಕ ಮಾಧ್ಯಮಗಲಲ್ಲಿ ಹಂಚಿಕೊಂಡು ಸುಳ್ಳು ಆರೋಪ ಮಾಡಿರುವವರಿಗೆ ನಾಚಿಕೆ ಆಗಬೇಕು. ಎಂದು ಟ್ವೀಟ್ ಮಾಡಿದ್ದಾರೆ.
Shame Shame….I am Chidananda Singh here , U can't get ur objectives to malign image of RSS n my family by using photo of myself n my son. I n my family never involved such heinous crime. What a foolish act. https://t.co/B6IjemAfXd
— Chidananda Singh (@ChChidananda) July 23, 2023
ನಾನು ಅವರ ವಿರುದ್ದ ದೂರು ದಾಖಲಿಸುತ್ತೇನೆ. ಎಂದು ಟ್ವೀಟ್ ಮಾಡಿದ್ದಾರೆ. ನನ್ನ ಮತ್ತು RSS ನ ಸಂಬಂಧವನ್ನು ಹಾಳು ಮಾಡಲು ಹೀಗೆ ಮಾಡಿದ್ದಾರೆ. ಆದರೆ ಇಂತಹ ಘೋರ ಕೃತ್ಯವನ್ನು ನಾನು ಎಂದಿಗೂ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
along with a caption that they were directly involved in the crime was uploaded in various social media platform.
2/3
— Manipur Police (@manipur_police) July 23, 2023
ಚಿದಾನಂದ್ ಸಿಂಗ್ ಅವರು ಮಣಿಪುರದ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದು, ಈ ತಪ್ಪು ಮಾಹಿತಿ ಹರಡಿದ ಕೆಲವು ಫೇಸ್‌ಬುಕ್ ಗುಂಪುಗಳು ಮತ್ತು ಟ್ವಿಟರ್ ಖಾತೆಗಳ ನಿರ್ವಾಹಕರು ಮತ್ತು ಸದಸ್ಯರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
“ವೈರಲ್ ವಿಡಿಯೊದಿಂದ ತೆಗೆದ ಫೋಟೋವನ್ನು ನನ್ನ ಫೋಟೋಗಳಿಗೆ ಎಡಿಟ್ ಮಾಡಲಾಗಿದೆ / ಅಂಟಿಸಲಾಗಿದೆ Ch. ಚಿದಾನಂದ ಸಿಂಗ್ ಮತ್ತು ನನ್ನ ಮಗ ಚಿ. ಆರ್‌ಎಸ್‌ಎಸ್ ಗಣವೇಶ್ (ಸಮವಸ್ತ್ರ) ಧರಿಸಿದ್ದ ಸಚಿನಂದ ಸಿಂಗ್, ನಾವು ಘಟನೆಯಲ್ಲಿ ಭಾಗಿಯಾಗಿದ್ದೇವೆ ಎಂದು ಆರೋಪಿಸಿದ್ದರು. ನನ್ನ ಮತ್ತು ನನ್ನ ಮಗನ ಜಂಟಿ ಫೋಟೋವನ್ನು ನನ್ನ ಫೇಸ್‌ಬುಕ್ ಪುಟದಿಂದ ಡೌನ್‌ಲೋಡ್ ಮಾಡಲಾಗಿದೆ ಎಂದು ನಮೂದಿಸಲಾಗಿದೆ”. ಹೀಗಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿದೆ.
ಚಿದಾನಂದ ಸಿಂಗ್ ಮಣಿಪುರ ಪೊಲೀಸರಿಗೆ ಧನ್ಯವಾದವನ್ನು ತಿಳಿಸಿದ್ದು, ಆರೆಸ್ಸೆಸ್ ಮತ್ತು ನನ್ನ ಕುಟುಂಬದ ಮಾನಹಾನಿ ಮಾಡಲು ಸುಳ್ಳು ಪ್ರಚಾರ ಮಾಡುವವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಸತ್ಯಕ್ಕೆ ಜಯ ಸಿಗುತ್ತದೆ. @manipur_police ಗೆ ತುಂಬಾ ಧನ್ಯವಾದಗಳು ಎಂದು ತಿಳಿಸಿದ್ದಾರೆ.

ಈ ಬೆಳವಣಿಗೆಗಳ ನಂತರ ಸುಳ್ಳು ಪೋಸ್ಟ್‌ಅನ್ನು ಹಂಚಿಕೊಂಡಿದ್ದ ಸಿಪಿಎಂ ನಾಯಕಿ ಸುಭಾಷಿಣಿ ಅಲಿ ಅವರು ಚಿದಾನಂದ ಸಿiಂMಗ್ ಅವರಲ್ಲಿ ಕ್ಷಮೆಯಾಚಿಸಿ, “ಮಣಿಪುರದಲ್ಲಿ ಮಹಿಳೆಯರ ವಿರುದ್ಧ ನಡೆದ ಭೀಕರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಗಳೆಂದು ಗುರುತಿಸಲ್ಪಟ್ಟ 2 ವ್ಯಕ್ತಿಗಳ ಬಗ್ಗೆ ನಾನು ಸುಳ್ಳು ಟ್ವೀಟ್ ಅನ್ನು ಮರುಟ್ವೀಟ್ ಮಾಡಿದ್ದೇನೆ ” ನಾನು ತುಂಬಾ ವಿಷಾದಿಸುತ್ತೇನೆ. ತಿಳಿಯದೇ ಆಗಿರುವ ಈ ತಪ್ಪಿನಿಂದ ಅವರಿಗೆ ಮುಜುಗರವಾಗಿದೆ, ಹಾಗಾಗಿ ನಾನು ಬೇಷರತ್ತಾಗಿ ಕ್ಷಮೆಯಾಚಿಸುತ್ತೇನೆ” ಎಂದಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಮಣಿಪುರದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಮತ್ತು ಅವರ ಪುತ್ರ ಆರ್‌ಎಸ್‌ಎಸ್ ಸಮವಸ್ತ್ರದಲ್ಲಿರುವ ಚಿತ್ರವನ್ನು ಮಣಿಪುರ ಹಿಂಸಾಚಾರದ ಸಂದರ್ಭದಲ್ಲಿ ಕುಕಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗಳು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: ಉಡುಪಿ ಶೌಚಾಲಯ ವಿಡಿಯೋದ ಅಸಲಿಯತ್ತೇನು? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

