ಫ್ಯಾಕ್ಟ್‌ಚೆಕ್ : ವಿಧಾನ ಸೌಧದಿಂದ ಪರಪ್ಪನ ಅಗ್ರಹಾರ ಮಾರ್ಗದಲ್ಲಿ 420 ಸಂಖ್ಯೆಯ ಹೊಸ ಬಸ್ ಪ್ರಾರಂಭಿಸಲಾಗಿದೆಯೇ?

ವಿಧಾನಸೌಧದಿಂದ ಪರಪ್ಪನ ಅಗ್ರಹಾರಕ್ಕೆ (ಕೇಂದ್ರ ಕಾರಾಗೃಹ) ಮಾರ್ಗ ಸಂಖ್ಯೆ 420 ರ ಹೊಸ ಬಸ್ ಅನ್ನು ಬೆಂಗಳೂರಿನಲ್ಲಿ ಕಾಂಗ್ರೆಸ್ ಸರ್ಕಾರ ಪ್ರಾರಂಭಿಸಿದೆ ಎಂಬ ಪೋಸ್ಟ್‌ವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ.

ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಮೊದಲ ಬಾರಿಗೆ ಸರಿಯಾದ ಬಸ್ ಮಾರ್ಗದ ಮೂಲಕ ತಮ್ಮ ಮೂಲ ಸ್ಥಾನವನ್ನು ಗುರುತಿಸಿದೆ ಎಂಬ ಪೋಸ್ಟ್‌ಅನ್ನು ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಬೆಂಗಳೂರಿನಲ್ಲಿ ಬಿಎಂಟಿಸಿಯು ವಿಧಾನ ಸೌಧದಿಂದ ಪರಪ್ಪನ ಅಗ್ರಹಾರ ಮಾರ್ಗದಲ್ಲಿ 420 ಸಂಖ್ಯೆಯ ಬಸ್‌ ಅನ್ನು ನಿಯೋಜನೆ ಮಾಡಿದೆಯೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಇಂತಹ ಸಂಖ್ಯೆಯನ್ನು ಹೊಂದಿರುವ ಬಸ್ಸಾಗಲಿ, ಅಥವಾ ಮಾರ್ಗವಾಗಲಿ ಇಲ್ಲ ಎಂದು ತಿಳಿದು ಬಂದಿದೆ.

ಅಲ್ಲದೆ, ವಿಧಾನಸೌಧದಿಂದ ಕೇಂದ್ರ ಕಾರಾಗೃಹಕ್ಕೆ ತೆರಳಲು, ಒಬ್ಬರು ಎರಡು ಮಾರ್ಗಗಳಲ್ಲಿ ಹೋಗಬೇಕು ಮತ್ತು ನೇರ ಬಸ್ ಮಾರ್ಗ ಲಭ್ಯವಿಲ್ಲ. ಇದಲ್ಲದೆ, ಬಸ್‌ನಲ್ಲಿ ಬರೆದಿರುವ ಮಾರ್ಗದ ಹೆಸರನ್ನು ಇಂಗ್ಲಿಷ್‌ಗೆ ಅನುವಾದಿಸಿ ಮತ್ತು ವೆಬ್‌ಸೈಟ್‌ನಲ್ಲಿನ ಬಸ್ ಸಂಖ್ಯೆಯೊಂದಿಗೆ ಪರಿಶೀಲಿಸುವ ಮೂಲಕ, ಬಸ್ ಮಾರ್ಗ ಸಂಖ್ಯೆ 365 ಕೆಂಪೇಗೌಡ ಬಸ್ ನಿಲ್ದಾಣದ ನಡುವೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಮಾರ್ಗದಲ್ಲಿ ಓಡುತ್ತಿದೆ.

ಮೂಲ ಚಿತ್ರವನ್ನು ವೈರಲ್ ಚಿತ್ರದೊಂದಿಗೆ ಹೋಲಿಸಿದಾಗ ವೈರಲ್ ಚಿತ್ರವನ್ನು ಡಿಜಿಟಲ್ ಎಡಿಟ್ ಮಾಡಲಾಗಿದೆ ಎಂಬುದು ಸ್ಪಷ್ಟವಾಗಿದೆ.

2015ರಲ್ಲಿ ಇಂತಹದೇ ಪೋಸ್ಟ್‌ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿತ್ತು.

ಒಟ್ಟಾರೆಯಾಗಿ ಹೇಳುವುದಾದರೆ, ಬೆಂಗಳೂರಿನಲ್ಲಿ ಕರ್ನಾಟಕ ಸರ್ಕಾರವು ಬಿಎಂಟಿಸಿ ಬಸ್ ಸಂಖ್ಯೆ 420 ಎಂಬ ಹೊಸ ಬಸ್ ಅನ್ನು ಪ್ರಾರಂಭಿಸಿದೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಎಡಿಟೆಡ್ ಚಿತ್ರವನ್ನು ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಫ್ಯಾಕ್ಟ್‌ಲಿ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಸಾಧುವೊಬ್ಬರ ಮೇಲೆ ಹಲ್ಲೆ ನಡೆಸಿ ಕೂದಲು ಬೋಳಿಸಿದ ವ್ಯಕ್ತಿ ಮುಸ್ಲಿಂ ಅಲ್ಲ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights