ಫ್ಯಾಕ್ಟ್‌ಚೆಕ್ : ಆಸ್ಟ್ರೇಲಿಯಾ ತಂಡದ ಗೆಲುವನ್ನು ಕ್ರಿಕೆಟ್ ಮಾಫಿಯಾ BCCI ವಿರುದ್ದದ ಗೆಲುವು ಎಂದು ರಿಕಿ ಪಾಂಟಿಂಗ್ ಹೇಳಿದರೆ?

ನವೆಂಬರ್ 19 ರಂದು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ‘ಕ್ರಿಕೆಟ್ ವಿಶ್ವಕಪ್ 2023’ ಫೈನಲ್‌ನಲ್ಲಿ ಭಾರತವನ್ನು ಸೋಲಿಸಿದ ಆಸ್ಟ್ರೇಲಿಯಾ, ಆರನೇ ಬಾರಿ ವಿಶ್ವಕಪ್ ಗೆದ್ದ ದಾಖಲೆ ಬರೆದಿದೆ. ಈ ಗೆಲುವಿನ ನಂತರ ಆಸ್ಟ್ರೇಲಿಯಾದ ಮಾಜಿ ನಾಯಕ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.

ಆಸ್ಟ್ರೇಲಿಯಾ ವಿರುದ್ಧದ ಐಸಿಸಿ ವಿಶ್ವಕಪ್ ಫೈನಲ್‌ನಲ್ಲಿ ಭಾರತ ಸೋತ ನಂತರ, ಆಸೀಸ್ ಮಾಜಿ ನಾಯಕ ರಿಕಿ ಪಾಂಟಿಂಗ್ ಭಾರತ ಕ್ರಿಕೆಟ್ ಮಂಡಳಿಯನ್ನು ಆರೋಪಿಸಿ ಹೇಳಿಕೆಯನ್ನು ನೀಡಿದ್ದಾರೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

https://twitter.com/AabidMagami/status/1726453296733507914

ಫಾಕ್ಸ್ ಸ್ಪೋರ್ಟ್ಸ್ ಚಾನೆಲ್‌ನಲ್ಲಿ ಕಾಣಿಸಿಕೊಂಡಿರುವ ರಿಕಿ ಪಾಂಟಿಂಗ್ ಅವರು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯನ್ನು (BCCI) ‘ಕ್ರಿಕೆಟ್ ಮಾಫಿಯಾ’ ಎಂದು ಕರೆದಿದ್ದಾರೆ. ಭಾರತದ ವಿರುದ್ಧ ಆಸ್ಟ್ರೇಲಿಯಾದ ಗೆಲುವು ಕ್ರಿಕೆಟ್ ಮಾಫಿಯಾ ವಿರುದ್ಧದ ನ್ಯಾಯದ ಜಯವಾಗಿದೆ. ನಿಮ್ಮ ಹಣ ಮತ್ತು ಶಕ್ತಿ ನಿಮಗೆ ವಿಶ್ವಕಪ್ ಗೆಲ್ಲಿಸುವುದಿಲ್ಲ ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಫಾಕ್ಸ್ ಕ್ರಿಕೆಟ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹಾಗಿದ್ದರೆ 6ನೇ ಬಾರಿ ವಿಶ್ವಕಪ್ ಗೆದ್ದ ಆಸ್ಟ್ರೆಲಿಯಾ ತಂಡದ ಗೆಲುವನ್ನು ಫಾಕ್ಸ್‌ಗೆ ನೀಡಿದ ಸಂದರ್ಶನದಲ್ಲಿ ರಿಕಿ ಪಾಂಟಿಂಗ್ ಮೇಲಿನ ಹೇಳಿಕೆಯನ್ನು ಉಲ್ಲೇಖಿಸಿ ಮಾತಾಡಿದ್ದಾರೆಯೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ರಿಕಿ ಪಾಂಟಿಂಗ್ ನೀಡಿರುವ ಹೇಳಿಕೆ ನಿಜವೇ ಎಂದು ಪರಿಶೀಲಿಸಲು  ಸಂಬಂಧಿತ ಕೀವರ್ಡ್ ಮೂಲಕ ಸರ್ಚ್ ಮಾಡಿದಾಗ  ಪಾಂಟಿಂಗ್ ನೀಡಿದ್ದಾರೆ ಎನ್ನಲಾದ ಹೇಳಿಕೆ ಕುರಿತಾದ ಯಾವುದೇ ವರದಿಗಳು ಲಭ್ಯವಾಗಿಲ್ಲ. ಯಾವುದೇ ವಿಶ್ವಾಸಾರ್ಹ ಮಾಧ್ಯಮಳು ಅದರ ಕುರಿತು ಸುದ್ದಿಯನ್ನು ಪ್ರಕಟಿಸಿಲ್ಲ. ಒಂದು ವೇಳೆ ಪಾಂಟಿಂಗ್ ಅಂತಹ ಹೇಳಿಕೆ ನೀಡಿರುತ್ತಿದ್ದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿತ್ತು.

ಕ್ರಿಕೆಟ್ ಸಂಬಂಧಿತ ಸುದ್ದಿಗಳನ್ನು ಪ್ರಕಟಿಸುವ ಫಾಕ್ಸ್ ಕ್ರಿಕೆಟ್ ಮಾಧ್ಯಮದ ವೆಬ್‌ಸೈಟ್‌ನಲ್ಲಿ ರಿಕಿ ಪಾಂಟಿಂಗ್ ಕುರಿತು ಪ್ರಕಟವಾದ ಸುದ್ದಿಗಳನ್ನು ಹುಡುಕುತ್ತಿರುವಾಗ, “ ರಿಕಿ ಪಾಂಟಿಂಗ್, ಮೈಕಲ್ ವಾನ್ ಮತ್ತು ನಾಸರ್ ಹುಸೇನ್ ಭಾರತದ ಸೋಲಿಗೆ ‘ಪಿಚಿಂಗ್’ ಕಾರಣವೆಂದು ಹೇಳಿದ್ದಾರೆ. ” ಎಂದು ನವೆಂಬರ್ 20ರಂದು ಒಂದು ಸುದ್ದಿ ಪ್ರಕಟವಾಗಿರುವುದು ಕಂಡುಬಂದಿತು.

ರಿಕಿ ಪಾಂಟಿಂಗ್ ಅವರ ಇನ್‌ಸ್ಟಾಗ್ರಾಮ್ ಪುಟವನ್ನು ಪರಿಶೀಲಿಸಿದಾಗ ಅಲ್ಲಿಯೂ ವೈರಲ್ ಹೇಳಿಕೆ ಕುರಿತು ಯಾವುದೇ ಸುದ್ದಿಯನ್ನು ಹಂಚಿಕೊಂಡಿಲ್ಲ. ಅಂತೆಯೇ, ಫಾಕ್ಸ್ ಕ್ರಿಕೆಟ್ ಎಕ್ಸ್ ಪೇಜ್‌ನಲ್ಲಿಯೂ ಅಂತಹ ಯಾವುದೇ ಸುದ್ದಿ ಲಭ್ಯವಾಗಿಲ್ಲ. 

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ BCCI ‘ಒಂದು ಕ್ರಿಕೆಟ್ ಮಾಫಿಯಾ’ ಇದಂತೆ ಮಾಫಿಯಾ ವಿರುದ್ದ ಆಸ್ಟ್ರೇಲಿಯಾ ಜಯ ಸಾಧಿಸಿದೆ ಎಂದು  ರಿಕಿ ಪಾಂಟಿಂಗ್ ಹೇಳಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಪ್ರಧಾನಿ ಮೋದಿ ಮತ್ತು ಓವೈಸಿ ಒಟ್ಟಿಗೆ ಕುಳಿತಿರುವ ಫೋಟೊ ವೈರಲ್


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights