ಫ್ಯಾಕ್ಟ್‌ಚೆಕ್ : ಸುರಂಗದಿಂದ ಸುರಕ್ಷಿತವಾಗಿ ಹೊರ ಬಂದ ಕಾರ್ಮಿಕರು ಮತ್ತು ರಕ್ಷಣಾ ತಂಡ ರಾಷ್ಟ್ರ ಧ್ವಜದೊಂದಿಗೆ ಇರುವ ಚಿತ್ರ AI ನಿಂದ ರಚಿತವಾದದ್ದು

ಇಡೀ ದೇಶದ ಗಮನವನ್ನು ತನ್ನ ಕಡೆ ಸೆಳೆದಿದ್ದು, ಉಸಿರಾಟ ಬಿಗಿಹಿಡಿಯುವಂತೆ ಮಾಡಿದ್ದ ಉತ್ತರಕಾಶಿ ಸುರಂಗ ರಕ್ಷಣಾ ಕಾರ್ಯಾಚರಣೆ ಕೊನೆಗೂ ಯಶಸ್ವಿಯಾಗಿದೆ. ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿ ಕುಸಿದ ಸುರಂಗದಲ್ಲಿ ಸಿಲುಕಿದ 41 ಕಾರ್ಮಿಕರನ್ನು ಯಶಸ್ವಿಯಾಗಿ ಹೊರ ತರಲಾಗಿದೆ ಮಂಗಳವಾರ ರಾತ್ರಿ ಎಂಟು ಗಂಟೆಗೆ ಒಬ್ಬೊಬ್ಬರಾಗಿ ಸುರಂಗದೊಳಗಿಂದ ಕಾರ್ಮಿಕರನ್ನು ಹೊರ ಕರೆ ತರಲಾಯಿತು. ಅಂತಿಮ ಹಂತದ ಕಾರ್ಯಾಚರಣೆ ಆರಂಭವಾದ ಅರ್ಧ ಗಂಟೆಯಲ್ಲಿ ಎಲ್ಲ 41 ಕಾರ್ಮಿಕರು ಸುರಂಗದ ಅವಶೇಷಗಳಿಂದ ಹೊರ ಬಂದಿದ್ದಾರೆ.

ಕೇಂದ್ರ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆಗಳ ಸಿಬ್ಬಂದಿ, ಪೊಲೀಸರು, ನುರಿತ ರಕ್ಷಣಾ ಸಿಬ್ಬಂದಿ, ವಿದೇಶಿ ತಂಡಗಳು, ಅತ್ಯಾಧುನಿಕ ಯಂತ್ರಗಳು, ಡ್ರಿಲ್ಲಿಂಗ್‌ ಮಷೀನ್‌ಗಳನ್ನು ಬಳಸಿ ಸತತವಾಗಿ ಕಾರ್ಯಾಚರಣೆ ಕೈಗೊಂಡರೂ ಹಲವು ಅಡೆತಡೆಗಳು ಎದುರಾದವು. ಆದರೆ, ಇದೆಲ್ಲವನ್ನೂ ಮೀರಿ ಕೈಗೊಂಡ ಕಾರ್ಯಾಚರಣೆ ಯಶಸ್ವಿಯಾಗಿದೆ.

1 ವ್ಯಕ್ತಿ ನ ಚಿತ್ರವಾಗಿರಬಹುದು

ಕಾರ್ಮಿಕರನ್ನು ರಕ್ಷಣೆ ಮಾಡಿದ ರಕ್ಷಣಾ ತಂಡವು ಭಾರತದ ರಾಷ್ಟ್ರಧ್ವಜದೊಂದಿಗೆ ಇರುವ  ಚಿತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. “ಉತ್ತರಾಖಂಡ್‌ನ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರನ್ನು ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳು ಯಶಸ್ವಿಯಾಗಿ ರಕ್ಷಿಸಿದ ಹಿನ್ನೆಲೆಯಲ್ಲಿ” ರಕ್ಷಣಾ ತಂಡವು ಸಂಭ್ರಮಾಚರಣೆ ನಡೆಸುತ್ತಿದೆ ಎಂದು ಪ್ರತಿಪಾದಿಸಿ ಪೋಸ್ಟ್‌ ಮಾಡಿದ್ದಾರೆ. ಈ ವೈರಲ್ ಚಿತ್ರದ ಬಗ್ಗೆ ಹಲವರು ಅನುಮಾನ ವ್ಯಕ್ತಪಡಿಸಿದ್ದು ಈ ಚಿತ್ರ ನಿಜವೆ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ಫೋಟೊವನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 28 ನವೆಂಬರ್ 2023 ರಂದು ‘the exclusive minds’ ಎಂಬ Instagram ನಿಂದ ಮಾಡಿದ  ಪೋಸ್ಟ್‌ನಲ್ಲಿ ಅದೇ ಫೋಟೋ ಕಂಡುಬಂದಿದೆ. “ಉತ್ತರಕಾಶಿ ಟನಲ್‌ನಿಂದ ಯಶಸ್ವಿಯಾಗಿ ಹೊರ ಬಂದ ಕಾರ್ಮಿಕರು” ಎಂಬ ಶೀರ್ಷಿಕೆಯೊಂದಿಗೆ ಚಿತ್ರವನ್ನು ಪ್ರಕಟಿಸಿದೆ.

ಈ Instagram ಹ್ಯಾಂಡಲ್ ನಲ್ಲಿ ಪ್ರತಿಪಾದಿಸಿದಂತೆ ಈ ಚಿತ್ರ ” AI ರಚಿತ ಫೋಟೋ” ಎಂದು the exclusive minds’ ಹೇಳಿಕೊಂಡಿದೆ.  ಉತ್ತರಾಖಂಡದ ಸುರಂಗ ರಕ್ಷಣಾ ಕಾರ್ಯಾಚರಣೆಯನ್ನು ಕೊಂಡಾಡುವ ಈ Instagram ಪೋಸ್ಟ್‌ನಲ್ಲಿ AI- ರಚಿತ ಚಿತ್ರಗಳ ಸರಣಿಯನ್ನು ಪ್ರಕಟಿಸಿದೆ. AI- ರಚಿತವಾದ ವಿಷಯ ಪತ್ತೆ ಅಪ್ಲಿಕೇಶನ್ ‘ಹೈವ್’ ಸಹ ಚಿತ್ರವು 100% AI- ರಚಿತವಾಗಿದೆ ಎಂದು ದೃಢಪಡಿಸಿದೆ.

ಸಿಲ್ಕ್ಯಾರಾ ಸುರಂಗದೊಳಗೆ ಸಿಲುಕಿದ್ದ 41 ಕಾರ್ಮಿಕರನ್ನು ರಕ್ಷಿಸಿದ ನಂತರ ಎನ್‌ಡಿಆರ್‌ಎಫ್ ರಕ್ಷಣಾ ತಂಡದ ಸಂಭ್ರಮಾಚರಣೆಯ ಕೆಲವು ದೃಶ್ಯಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಉತ್ತರಾಖಂಡದ ಸುರಂಗದಲ್ಲಿ ಸಿಲುಕಿಕೊಂಡಿದ್ದ ಗಣಿ ಕಾರ್ಮಿಕರನ್ನು ರಕ್ಷಣಾ ತಂಡ ಯಶಸ್ವಿಯಾಗಿ ಹೊರೆ ತೆಗೆದ ರಕ್ಷಣಾ ಕಾರ್ಯಾಚರಣೆಯ ನಂತರ ರಕ್ಷಣಾ ತಂಡ ಸಂಭ್ರಮಿಸುತ್ತಿರುವ ಚಿತ್ರ AI ನಿಂದ ರಚಿತವಾದ ಚಿತ್ರವನ್ನು ಹಂಚಿಕೊಳ್ಳಲಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ರಾಹುಲ್ ಗಾಂಧಿ ಸಾರ್ವಜನಿಕವಾಗಿ ಜನಿವಾರ ಪ್ರದರ್ಶಿಸಿದರೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights