ಫ್ಯಾಕ್ಟ್‌ಚೆಕ್ : ಪಾರ್ಲಿಮೆಂಟ್‌ನಿಂದ ಮಹುವಾ ಅವರನ್ನು ಬಲವಂತವಾಗಿ ಹೊರಹಾಕಿದ್ದು ನಿಜವೇ?

‘ಲೋಕಸಭೆಯಲ್ಲಿ ಪ್ರಶ್ನೆ ಕೇಳಲು ಲಂಚ ಪಡೆದ ಆರೋಪದ ಮೇಲೆ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಲೋಕಸಭೆಯಿಂದ ಉಚ್ಚಾಟನೆ ಮಾಡಲಾಗಿದೆ. ಲೋಕಸಭೆಯಿಂದ ಹೊರಹೋಗಲು ನಿರಾಕರಿಸಿದ ಅವರನ್ನು ಪೊಲೀಸರು ಎಳೆದುಕೊಂಡು ಹೋದರು’ ಎಂಬ ವಿವರ ಇರುವ ವಿಡಿಯೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹಾಗಿದ್ದರೆ  ಉಚ್ಚಾಟಿತ ಟಿಎಂಸಿ ಸಂಸದೆ ಮಹುವಾ ಅವರನ್ನು ಪಾರ್ಲಿಮೆಂಟ್‌ನಿಂದ ಪೊಲೀಸರು ಹೊತ್ತೊಯ್ಯುದಿದ್ದು ನಿಜವೇ ಎಂದು ಪರಿಶೀಲಿಸೊಣ.

https://twitter.com/Vinod_r108/status/1733062532447789374

ಫ್ಯಾಕ್ಟ್‌ಚೆಕ್ :

ಪಾರ್ಲಿಮೆಂಟ್‌ನಿಂದ ಉಚ್ಚಾಟನೆಗೊಂಡ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಸಂಸದ ಸ್ಥಾನದಿಂದ ಉಚ್ಚಾಟಿಸಿದ ನಂತರ ಹೊರಹೋಗಲು ನಿರಾಕರಿದಾಗ ಅವರನ್ನು ಬಲವಂತವಾಗಿ ಪೊಲೀಸರು ಪಾರ್ಲಿಮೆಂಟ್‌ನಿಂದ  ಹೊತ್ತೊಯ್ಯುದಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ಅನ್ನು ಪರಿಶೀಲಿಸಿದಾಗ ವೈರಲ್ ದೃರ್ಶಯಗಳು ಸುಳ್ಳು ಎಂದು ತಿಳಿದುಬಂದಿದೆ.

ಅಕ್ಟೋಬರ್ 4ರಂದು ದೆಹಲಿಯ ಕೃಷಿ ಭವನದ ಎದುರು ಮಹುವಾ ಅವರೂ ಸೇರಿ ಟಿಎಂಸಿಯ ಹಲವು ನಾಯಕರು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಕ್ಕೆ ಸಂಬಂಧಿಸಿದ್ದಾಗಿದೆ. ಆಗ ಪೊಲೀಸರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದವರನ್ನು ಎಳೆದೊಯ್ದಿದ್ದರು. ಈ ಕುರಿತು ಹಲವು  ವರದಿಗಳು ಕೂಡ ಪ್ರಕಟವಾಗಿದೆ.

ಲೋಕಸಭೆಯಿಂದ ಮಹುವಾ ಅವರನ್ನು ಉಚ್ಚಾಟನೆ ಮಾಡಿದ್ದು ಇದೇ ಡಿಸೆಂಬರ್ 8ರಂದು. ಆಗ ಮಹುವಾ ಅವರೇ ಲೋಕಸಭೆಯಿಂದ ಹೊರನಡೆದು ಬಂದಿದ್ದರು. ಅವರನ್ನು ಪೊಲೀಸರು ಎಳೆದೊಯ್ದಿದ್ದರು ಎಂಬುದು ಸುಳ್ಳು. ಈ ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗುತ್ತಿರುವ ವಿಡಿಯೊ ಹಳೆಯದ್ದು.

ಒಟ್ಟಾರೆಯಾಗಿ ಹೇಳುವುದಾದರೆ, ಪಾರ್ಲಿಮೆಂಟ್‌ನಿಂದ ಉಚ್ಚಾಟನೆಗೊಂಡ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಸಂಸದ ಸ್ಥಾನದಿಂದ ಉಚ್ಚಾಟಿಸಿದ ನಂತರ ಹೊರಹೋಗಲು ನಿರಾಕರಿದಾಗ ಅವರನ್ನು ಬಲವಂತವಾಗಿ ಪೊಲೀಸರು ಪಾರ್ಲಿಮೆಂಟ್‌ನಿಂದ  ಹೊತ್ತೊಯ್ಯುದಿದ್ದಾರೆ ಎಂದು ಅಕ್ಟೋಬರ್‌ನಲ್ಲಿ ನಡೆದ ಹಳೆಯ ವಿಡಿಯೋವನ್ನು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : 2001ರಲ್ಲಿ ಅಮೆರಿಕದಲ್ಲಿ ಬಂಧಿಸಲಾಗಿದ್ದ ರಾಹುಲ್ ಗಾಂಧಿಯನ್ನು ಬಿಡಿಸಿದ್ದು ಅಟಲ್ ಬಿಹಾರಿ ವಾಜಪೇಯಿಯಂತೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights