ಫ್ಯಾಕ್ಟ್‌ಚೆಕ್ : ಕೊಹ್ಲಿ ಮತ್ತು ಅನುಷ್ಕಾ ಗೋಮಾಂಸ ಸೇವಿಸಿದ್ದಾರೆ ಎಂದು ಸುಳ್ಳು ಪೋಸ್ಟ್ ಹಂಚಿಕೆ
ವಿರಾಟ್ ಕೊಹ್ಲಿ ಅಮೆರಿಕದ ಫ್ಲೋರಿಡಾದಲ್ಲಿರುವ ಗಾರ್ಡನ್ ರಾಮ್ಸೆ ಎಂಬ ಹೆಸರಾಂತ ರೆಸ್ಟೋರೆಂಟ್‌ನಲ್ಲಿ ಗೋಮಾಂಸ ಸೇವಿಸಿದ್ದಾರೆ ಎಂಬ ಹೇಳಿಕೆಯೊಂದಿಗೆ ರೆಸ್ಟೋರೆಂಟ್‌ವೊಂದರ ಬಿಲ್‌ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ವೈರಲ್ ಫೋಟೊದಲ್ಲಿ ಟೀಂ ಇಂಡಿಯಾದ ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿ ತನ್ನ ಹೆಂಡತಿ ಅನುಷ್ಕಾ ಶರ್ಮ ಮತ್ತು ಮಗುವಿನ ಜೊತೆಯಲ್ಲಿ ಇರುವುದನ್ನು ಕಾಣಬಹುದು.
https://twitter.com/DankShubhum/status/1733102791147536616
ಪಾಕಿಸ್ತಾನಿ ಕ್ರಿಕೆಟಿಗ ಬಾಬರ್ ಆಜಮ್ ಅವರ ಸಲಹೆಯಂತೆ ಕ್ರಿಕೆಟ್‌ನಲ್ಲಿ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ವಿರಾಟ್ ಈ ಆಹಾರದ ಆಯ್ಕೆಯನ್ನು ಅಳವಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ಪೋಸ್ಟ್ಅನ್ನು ಹಂಚಿಕೊಳ್ಳಲಾಗಿದೆ.
https://twitter.com/ImHydro45/status/1733092461243711801
ವಿರಾಟ್ ಕೊಹ್ಲಿ ಹೆಚ್ಚು ಸಿಕ್ಸ್‌ಗಳನ್ನು ಹೊಡೆಯಲು ಸಾಧ್ಯವಾಗದ ಕಾರಣಕ್ಕೆ ಅವರು ಮುಂಬರುವ T20 ಭಾರತ ತಂಡದಿಂದ ಹೊರಗುಳಿದಿದ್ದಾರೆ ಎಂದು ಹೇಳಲಾಗಿದೆ. ಕ್ರಿಕೆಟ್‌ನಲ್ಲಿ ಸಿಕ್ಸ್ ಹೊಡೆಯುವ ಸಾಮರ್ಥ್ಯ ಹೊಂದಬೇಕಾದರೆ ಬೀಫ್ (ಗೋಮಾಂಸ) ತಿನ್ನುವಂತೆ ಪಾಕಿಸ್ತಾನಿ ಸ್ನೇಹಿತ ಬಾಬರ್ ಅಜಮ್ ಅವರಿಂದ ಈ ಸಲಹೆಯನ್ನು ಪಡೆದಿದ್ದಾರೆ. ಹಿಂದುವಾಗಿದ್ದರೂ ಗೋಮಾಂಸ ತಿನ್ನುವುದಕ್ಕೆ , ವಿರಾಟ್ ಕೊಹ್ಲಿಗೆ ನಾಚಿಕೆಯಾಗುವುದಿಲ್ಲವೇ? ಎಂದು ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್ಅನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ವೈರಲ್ ಪೋಸ್ಟ್‌ನಲ್ಲಿ ಸ್ಕ್ರೀನ್‌ಶಾಟ್‌ನಲ್ಲಿ ಉಲ್ಲೇಖಿಸಿರುವ ರೆಸ್ಟೋರೆಂಟ್ ಬಿಲ್‌ಗೂ, ವಿರಾಟ್ ಮತ್ತು ಅನುಷ್ಕಾ ಶರ್ಮಾರವರಿಗೂ ಸಂಬಂಧವಿಲ್ಲ.
— Virat Kohli (@imVkohli) October 20, 2021
ಇದಲ್ಲದೆ, ಈ ರೆಸ್ಟೋರೆಂಟ್‌ನಲ್ಲಿ ವಿರಾಟ್ ಕೊಹ್ಲಿ ಊಟ ಮಾಡಿದ ಬಗ್ಗೆ ಯಾವುದೇ ವರದಿಗಳಿಲ್ಲ. ಇದಲ್ಲದೆ, ವಿರಾಟ್ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಅವರೊಂದಿಗೆ ಕುಳಿತಿರುವ ಫೋಟೋವನ್ನು ದುಬೈನಲ್ಲಿ ತೆಗೆದುಕೊಳ್ಳಲಾಗಿದೆ, ಅಕ್ಟೋಬರ್ 2021 ರಲ್ಲಿ ICC T20 ವಿಶ್ವಕಪ್ ಪಂದ್ಯ ನಡೆದ ಸಮಯದಲ್ಲಿ ವಿರಾಟ್ ಕೊಹ್ಲಿ ತನ್ನ ಕುಟುಂಬದೊಂದಿಗೆ ಉಪಹಾರ ಸೇವಿಸುತ್ತಿರುವುದನ್ನು ಕಾಣಬಹುದು.
ಹಾಗಿದ್ದರೆ ವೈರಲ್ ಫೋಸ್ಟ್‌ನಲ್ಲಿ ಇರುವ ರೆಸ್ಟೋರೆಂಟ್ ಬಿಲ್ ಯಾರಿಗೆ ಸಂಬಂಧಿಸಿದೆ ?
ರೆಸ್ಟೋರೆಂಟ್ ಬಿಲ್‌ನ ವೈರಲ್ ಸ್ಕ್ರೀನ್‌ಶಾಟ್, ಗೋರ್ಡನ್ ರಾಮ್‌ಸೇ ಅವರ ರೆಸ್ಟೋರೆಂಟ್‌ನಲ್ಲಿ ನ್ಯೂಜೆರ್ಸಿಯಲ್ಲಿರುವ ಅಮೇರಿಕನ್ ದಂಪತಿಗಳು ಗೋಮಾಂಸವನ್ನು ಸವಿದ ಬಿಲ್ ಎಂದು ತಿಳಿದುಬಂದಿದೆ. ಕೀವರ್ಡ್‌ಗಳನ್ನು ಬಳಸಿಕೊಂಡು Google ಸರ್ಚ್ ಮಾಡಿದಾಗ, ಒಂದೇ ರೀತಿಯ ಬಿಲ್ ಸ್ಕ್ರೀನ್‌ಶಾಟ್‌ಗಳನ್ನು ಒಳಗೊಂಡ ಹಲವಾರು ಸುದ್ದಿ ವರದಿಗಳಿಗೆ ಲಭ್ಯವಾಗಿದೆ.

ಅಮೆರಿಕದ ನ್ಯೂಜೆರ್ಸಿಯಲ್ಲಿ ಡಿನ್ನರ್ ಗೆ ತೆರಳಿದ್ದ ಜೆಫ್ರಿ ಪೈ ದಂಪತಿಗಳು ಊಟದ ಮೆನು ಕಾರ್ಡ್ ದರವನ್ನು ಸರಿಯಾಗಿ ಓದದೆ ಹೊಸ ರೀತಿಯ ಊಟವನ್ನು ಟ್ರೈ ಮಾಡಲು ಆರ್ಡರ್ ಮಾಡಿದಾರೆ. ಆದರೆ ಕೊನೆಯಲ್ಲಿ ಬಿಲ್ ಬಂದಾಗ, ಜೆಫ್ರಿ ಪೈ ದಂಪತಿಗಳಿಗೆ ಶಾಕ್ ಆಗಿದ್ದಾರೆ.
ಜಪಾನಿನ ಪ್ರಧಾನ ಕೋಬ್ ಗೋಮಾಂಸವನ್ನು ಆರ್ಡರ್ ಮಾಡಿದ್ದ ದಂಪತಿಗಳು. ಕೋಬ್ 4 ಔನ್ಸ್‌ಗಳಿಗೆ $35 (ರೂಗಳಲ್ಲಿ. 2500) ಮಾತ್ರ ನಿರೀಕ್ಷಿಸಿದ್ದರು. 5A ಜಪಾನೀಸ್ ಕೋಬ್ ಅಮೆರಿಕನ್ ವಾಗ್ಯುಗಿಂತ ಅಗ್ಗವಾಗಿದೆ ಎಂದು ಯೋಚಿಸಿ, ಅವರು 12 ಔನ್ಸ್ ಅನ್ನು ಆರ್ಡರ್ ಮಾಡಿದರು. ಆದರೆ, ಅವರು $ 600 ಅಥವಾ (ರೂ 45,000) ಬಿಲ್ ನೀಡಿದಾಗ ಅವರಿಗೆ ತಮ್ಮ ತಪ್ಪಿನ ಅರಿವಾಗಿದೆ. ಅಟ್ಲಾಂಟಿಕ್ ಸಿಟಿ ಹೋಟೆಲ್ ಮತ್ತು ಕ್ಯಾಸಿನೊದಲ್ಲಿರುವ ಗಾರ್ಡನ್ ರಾಮ್ಸೇ ಸ್ಟೀಕ್ ಎಂಬ ರೆಸ್ಟೋರೆಂಟ್‌ನಲ್ಲಿ ಈ ಘಟನೆ ಸಂಭವಿಸಿದೆ” ಎಂದು ವರದಿ ಮಾಡಿದೆ.
ಟಿ20 ವಿಶ್ವಕಪ್ ತಂಡದಿಂದ ವಿರಾಟ್ ಕೊಹ್ಲಿಯನ್ನು ಹೊರಗಿಡುವ ಸಾಧ್ಯತೆಯಿದೆ ಎಂಬ ವರದಿಗಳಿದ್ದರೂ, ವ್ಯಾಪಕವಾಗಿ ಪ್ರಸಾರವಾದ ಪೋಸ್ಟ್‌ನಲ್ಲಿ ಹೇಳಿಕೊಂಡಂತೆ, ಪಾಕಿಸ್ತಾನಿ ಕ್ರಿಕೆಟಿಗ ಬಾಬರ್ ಅಜಮ್ ವಿರಾಟ್ ಕೊಹ್ಲಿಗೆ ಸಿಕ್ಸರ್ ಹೊಡೆಯುವ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಗೋಮಾಂಸ ಸೇವಿಸುವಂತೆ ಸಲಹೆ ನೀಡಿದ್ದಾರೆ ಎಂಬ ಹೇಳಿಕೆಯನ್ನು ಬೆಂಬಲಿಸುವ ಯಾವುದೇ ವಿಶ್ವಾಸಾರ್ಹ ವರದಿಗಳು ಲಭ್ಯವಾಗಿಲ್ಲ. ಗೋಮಾಂಸ ಸೇವಿಸುವುದಕ್ಕೂ ಸಿಕ್ಸರ್ ಹೊಡೆಯುವುದಕ್ಕೂ ಸಂಬಂಧವಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಶಿವರಾಜ್ ಸಿಂಗ್ ಚೌಹಾಣ್ ಮುಖ್ಯಮಂತ್ರಿ ಸ್ಥಾನ ಸಿಗಲಿಲ್ಲವೆಂದು ಬಿಕ್ಕಿ ಬಿಕ್ಕಿ ಅತ್ತರೆ?

