ಫ್ಯಾಕ್ಟ್‌ಚೆಕ್ : ದಾವೂದ್ ಇಬ್ರಾಹಿಂ ಸಾವಿನ ಸುದ್ದಿ ಎಷ್ಟು ನಿಜ? ಎಷ್ಟು ಸುಳ್ಳು?

ಅಂಡರ್ ವರ್ಡ್ ಡಾನ್ ಎಂದೇ ಕುಖ್ಯಾತಿ ಪಡೆದಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಾವಿನ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ತರೇವಾರಿ ಸ್ಟೋರಿಗಳು ಕೇಳಿಬರುತ್ತಿವೆ. ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ವಿಷಪ್ರಾಷನ ಮಾಡಲಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕೆಲವೆಡೆ ವರದಿಯಾದರೆ, ದಾವೂದ್ ಇಬ್ರಾಹಿಂ ಮೃತಪಟ್ಟಿದ್ದಾನೆ ಎಂದು ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗುತ್ತಿದೆ.

https://twitter.com/nanna_kannada/status/1736700522365693973

 

” ಬ್ರೇಕಿಂಗ್: ಈ ಸಾವು ದುಃಖದ ಸಾವಲ್ಲ ಸಂಭ್ರಮದ ಸಾವು ಭಾರತಿಯರಿಗೆ 1993ರ ಮುಂಬೈ ಬಾಂಬ್ ಸ್ಫೋಟದ ಪ್ರಮುಖ ಆರೋಪಿ ದಾವೂದ್ ಇಬ್ರಾಹಿಂ,15 ಡಿಸೆಂಬರ್ 2023 ರ ಸಂಜೆ ಅಪರಿಚಿತ ವ್ಯಕ್ತಿಗಳಿಂದ ವಿಷ ಸೇವಿಸಿದ್ದ. ಅವನನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಪಲಿಸಿಲ್ಲಾ ಇಂದು 20:00 IST ಕ್ಕೆ ನಿಧನವಾದನು. ಭಾರತ್ ಮಾತಾಕಿ ಜೈ” ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

https://twitter.com/mailjayashankar/status/1736623148165120113

1955 ರಲ್ಲಿ ಜನಿಸಿದ ದಾವೂದ್ ಮುಂಬೈನ ಡೋಂಗ್ರಿ ಎಂಬ ಕೊಳೆಗೇರಿ ಪ್ರದೇಶದಲ್ಲಿ ವಾಸಿಸುತ್ತಿದ್ದನು. 1993 ರ ಮುಂಬೈ ಸ್ಫೋಟದ ನಂತರ ಆತ ಭಾರತವನ್ನು ತೊರೆದಿದ್ದನು. 257 ಜನರನ್ನು ಬಲಿ ಪಡೆದ, 700ಕ್ಕೂ ಹೆಚ್ಚು ಜನರನ್ನು ಗಾಯಗೊಳಿಸಿದ ಮುಂಬೈ ಸ್ಫೋಟದ ಮಾಸ್ಟರ್​ಮೈಂಡ್​ ಈತನೇ ಆಗಿದ್ದಾನೆ. ಈತ ಭಾರತಕ್ಕೆ ಬೇಕಾಗಿರುವ ಮೋಸ್ಟ್​ ವಾಂಟೆಡ್​ ಭೂಗತ ಪಾತಕಿ. ಮೂರು ದಶಕದ ಹಿಂದೆ ಭಾರತದಿಂದ ಪರಾರಿಯಾದ ಇಬ್ರಾಹಿಂ ವಿವಿಧ ದೇಶಗಳಲ್ಲಿ ನೆಲೆಸಿ ಈಗ ಪಾಕಿಸ್ತಾನದಲ್ಲಿ ಆಶ್ರಯ ಪಡೆದುಕೊಂಡಿದ್ದ.

ಮುಖ್ಯವಾಹಿನಿ ಮಾಧ್ಯಮಗಳಲ್ಲೂ ದಾವೂದ್ ಇಬ್ರಾಹಿಂ ಸಾವನಪ್ಪಿದ್ದಾನೆ ಎಂಬ ಸುದ್ದಿಗಳು ಪ್ರಸಾರವಾಗಿದ್ದು, ಈ ಸುದ್ದಿ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ದಾವೂದ್ ಇಬ್ರಾಹಿಂ ಸಾವನ್ನಪ್ಪಿದ್ದಾನೆ ಎಂಬುದಕ್ಕೆ ಸಾಕ್ಷಿಯಾಗಿ ಪಾಕಿಸ್ತಾನದ ಹಂಗಾಮಿ ಪ್ರಧಾನಿ ಅನ್ವರ್ ಉಲ್ ಹಕ್ ಕಾಕರ್ ಅವರ ಎಕ್ಸ್​ ಖಾತೆಯಿಂದ ಟ್ವೀಟ್​ ಮಾಡಿದಂತಿರುವ ಸ್ರೀನ್​ಶಾಟ್​ ಎಲ್ಲೆಡೆ ವೈರಲ್​ ಆಗಿತ್ತು. ಈ ಪೋಸ್ಟ್‌ಅನ್ನು ಪರಿಶೀಲಿಸಿದಾಗ ಇದು ನಕಲಿ ಸದ್ದಿ ಎಂದು DFRAC ಫ್ಯಾಕ್ಟ್‌ಚೆಕ್ ವರದಿಯನ್ನು ಪ್ರಕಟಿಸಿದೆ.

ಕಾಕರ್ ಅವರ ಟ್ವಿಟರ್​ ಖಾತೆಯಿಂದ ಅವರೇ ಮೆಸೆಜ್​​​ ಮಾಡಿದ್ದಾಗಿ ಬಿಂಬಿಸಲಾಗಿದ್ದ ಪೋಸ್ಟ್​ನಲ್ಲಿ “ದಾವೂದ್ ಇಬ್ರಾಹಿಂ ಅಪರಿಚಿತರಿಂದ ವಿಷ ಪ್ರಾಷನಕ್ಕೊಳಗಾಗಿ ನಿಧನರಾದರು. ಅವರು ಕರಾಚಿಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅಲ್ಲಾ ಅವರಿಗೆ ಸ್ವರ್ಗದಲ್ಲಿ ಅತ್ಯುನ್ನತ ಸ್ಥಾನವನ್ನು ನೀಡಲಿ” ಎಂದು ಅಲ್ಲಾನೊಂದಿಗೆ ಪ್ರಾರ್ಥನೆ ಮಾಡಿಕೊಂಡಂತೆ ಬರೆಯಲಾಗಿತ್ತು.

ಆದರೆ DFRAC ಎಂಬ ಸ್ವತಂತ್ರ ಸತ್ಯ-ಪರಿಶೀಲನಾ ವೆಬ್‌ಸೈಟ್ ಇದು ಸುಳ್ಳು ಎಂದು ತಿಳಿಸಿದೆ. ಸ್ಕ್ರೀನ್‌ಶಾಟ್‌ನಲ್ಲಿರುವ ಯೂಸರ್ ನೇಮ್​ ಕಾಕರ್ ಅವರ ಅಧಿಕೃತ ಖಾತೆಗೆ ಹೊಂದಿಕೆಯಾಗುವುದಿಲ್ಲ. ಇದರಲ್ಲಿ Kakar ಬದಲು Kakkar ಎಂದಿದೆ. ಒಂದು K ಅಕ್ಷರ ಹೆಚ್ಚುವರಿಯಾಗಿದೆ. ದಾವೂದ್ ಇಬ್ರಾಹಿಂ ನಿಧನದ ಸುದ್ದಿ ಹರಡಲು ಪಾಕ್ ಹಂಗಾಮಿ ಪ್ರಧಾನಿ ಹೆಸರನ್ನು ಬಳಕೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದೆ.

ಕುಖ್ಯಾತ ಭೂಗತ ಪಾತಕಿ ದಾವೂದ್‌ ಇಬ್ರಾಹಿಂನನ್ನು ಪಾಕಿಸ್ತಾನದ ಕರಾಚಿಯಲ್ಲಿ ಗಂಭೀರ ಆರೋಗ್ಯ ಸಮಸ್ಯೆಯ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು indiatoday.in ವರದಿ ಮಾಡಿದೆ. ದಾವೂದ್‌ ಇಬ್ರಾಹಿಂಗೆ ವಿಷಪ್ರಾಷನ ಮಾಡಲಾಗಿದೆ ಎಂದು ವದಂತಿಗಳು ಹರಡಿವೆಯಾದರೂ ಈ ವಿಚಾರ ಇನ್ನೂ ದೃಢಪಟ್ಟಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಎರಡು ದಿನಗಳ ಹಿಂದೆ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗಿದ್ದು ಆತನನ್ನು ಬಿಗಿ ಭದ್ರತೆಯಲ್ಲಿರಿಸಲಾಗಿದೆ. ಆತನನ್ನು ಇರಿಸಲಾಗಿರುವ ಆಸ್ಪತ್ರೆಯ ಅಂತಸ್ತಿನಲ್ಲಿ ಬೇರೆ ಯಾವುದೇ ರೋಗಿಗಳನ್ನು ಇರಿಸಲಾಗಿಲ್ಲ ಎಂದು ಹೇಳಲಾಗಿದ್ದು ಆಸ್ಪತ್ರೆಯ ವೈದ್ಯರು ಮತ್ತು ಕುಟುಂಬ ವರ್ಗದವರಿಗೆ ಮಾತ್ರ ಪ್ರವೇಶ ನೀಡಲಾಗುತ್ತಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವಂತೆ ದಾವೂದ್ ಇಬ್ರಾಹಿಂ ಸಾಪನಪ್ಪಿರುವ ಸುದ್ದಿಯ ಬಗ್ಗೆ ಸಾಮಾಜಿಕ ಮಾಧ್ಯಮಗಳನ್ನು ಹೊರತುಪಡಿಸಿ ಯಾವುದೇ ಅಧಿಕೃತ ಮೂಲಗಳಿಂದ ದೃಢಪಟ್ಟಿಲ್ಲ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಮಹಿಳೆ ಬೆತ್ತಲೆ ಪ್ರಕರಣ ರಾಜ್ಯ ಸರ್ಕಾರದ ವಿರುದ್ದ ಸುಳ್ಳು ಆರೋಪ ಮಾಡಿದ ಪ್ರಹ್ಲಾದ್ ಜೋಶಿ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights