ಫ್ಯಾಕ್ಟ್‌ಚೆಕ್ : ಬ್ರಿಟಿಷ್ ಅಧಿಕಾರಿಯನ್ನು ಹೊಗಳುವ ಉದ್ದೇಶಕ್ಕೆ ‘ಜನ ಗಣ ಮನ’ ಗೀತೆಯನ್ನು ರವೀಂದ್ರನಾಥ ಟ್ಯಾಗೋರ್ ರಚಿಸಿದ್ದರೇ?

ರವೀಂದ್ರನಾಥ ಟ್ಯಾಗೋರ್ ಅವರು 1911 ರಲ್ಲಿ ಬ್ರಿಟಿಷ್ ಕಿಂಗ್ ಜಾರ್ಜ್ V ಅವರನ್ನು ಹೊಗಳುವ ಸಲುವಾಗಿ ‘ಜನ ಗಣ ಮನ’ ಗೀತೆಯನ್ನು ರಚಿಸಿದ್ದರು ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ವೊಂದು ಪ್ರಸಾರವಾಗುತ್ತಿದೆ.

ರವೀಂದ್ರನಾಥ ಟ್ಯಾಗೋರ್ ರವರು ಕಿಂಗ್ ಜಾರ್ಜ್ V ರನ್ನು ಮೆಚ್ಚಿಸಲು ‘ಜನ ಗಣ ಮನ’ ಗೀತೆಯನ್ನು ರಚಿಸಿದ್ದರು. ರವೀಂದ್ರನಾಥ ಟ್ಯಾಗೋರ್ ಅವರಿಗೆ ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿಯನ್ನು 1913 ರಲ್ಲಿ ನೀಡಿದಾಗ ಜಾರ್ಜ್ V ಅವರು ನೊಬೆಲ್ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು ಎಂದು ಸ್ವದೇಶಿ ಬಚವೋ ಆಂದೋಲನದ ರಾಜೀವ್ ದೀಕ್ಷಿತ್  ಮಾತನಾಡುತ್ತಿರುವ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. (ರಾಜೀವ್ ದೀಕ್ಷಿತ್ ಈಗಿಲ್ಲ)

ಹಾಗಿದ್ದರೆ ಬಿಟ್ರೀಷ್ ಅಧಿಕಾರಿಯನ್ನು ಸ್ವಾಗತಿಸುವ ಕಾರಣಕ್ಕಾಗಿ ರವೀಂದ್ರನಾಥ ಟ್ಯಾಗೋರ್ ಜನ ಗಣ ಮನ ಗೀತೆಯನ್ನು ರಚಿಸಿದ್ದರೆ. ಈ ಅದೇ ಗೀತೆಯನ್ನು ರಾಷ್ಟ್ರಗೀತೆಯನ್ನಾಗಿ ಘೋಷಿಸಲಾಗಿದೆಯೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಸ್ವದೇಶಿ ಬಚವೋ ಆಂದೋಲನದ ಸ್ಥಾಪಕ ರಾಜೀವ್ ದೀಕ್ಷಿತ್ ಅವರ ವಿಡಿಯೋದಲ್ಲಿ ಪ್ರಸಾರವಾಗುತ್ತಿರುವಂತೆ ರವೀಂದ್ರನಾಥ ಟ್ಯಾಗೋರ್ ರವರು ಕಿಂಗ್ ಜಾರ್ಜ್ V ರನ್ನು ಮೆಚ್ಚಿಸಲು ‘ಜನ ಗಣ ಮನ’ ಗೀತೆಯನ್ನು ರಚಿಸಿದ್ದು ನಿಜವೇ ಎಂದು ಪರಿಶೀಲಿಸಿದಾಗ, ವಿಡಿಯೋದಲ್ಲಿ ಮಾಡಿರುವ ಪ್ರತಿಪಾದನೆ ಸುಳ್ಳು ಎಂದು ತಿಳಿದುಬಂದಿದೆ.

ಹಲವು ಮಾಧ್ಯಮಗಳ ವರದಿಗಳು ಜನ ಗಣ ಮನ ಗೀತೆಯನ್ನು ಕಿಂಗ್ ಜಾರ್ಜ್ V ಅವರಿಗಾಗಿ ರಚಿಸಲಾಗಿತ್ತು ಎಂಬ ವಾದ ಸುಳ್ಳು ಎಂದು ವರದಿ ಮಾಡಿವೆ.

ರವೀಂದ್ರ ನಾಥ ಟ್ಯಾಗೋರ್ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಕೋಲ್ಕತಾ ಅಧಿವೇಶನದ ಎರಡನೇ ದಿನವಾದ ಡಿಸೆಂಬರ್ 27, 1911 ರಂದು ಜನಗಣಮನ ಹಾಡಿದರು. ಅಲ್ಲಿಯವರೆಗೆ ಪ್ರತಿಭಟನೆಗಳಲ್ಲಿ ವಂದೇ ಮಾತರಂ ಗಟ್ಟಿಯಾಗಿ ಕೇಳಿಬರುತ್ತಿತ್ತು. ಕೋಲ್ಕತಾ ಸಮ್ಮೇಳನದಲ್ಲಿ ಹಾಡಿದ ಜನಗಣನ ರಾಷ್ಟ್ರೀಯತೆಯನ್ನು ಪ್ರತಿಧ್ವನಿಸಿದ್ದಲ್ಲದೆ ಸಭಿಕರಲ್ಲಿ ರೋಮಾಂಚನ, ಭಾವುಕ ಮತ್ತು ಆವೇಶವನ್ನುಂಟು ಮಾಡಿತ್ತು. ‘ಭಾಗ್ಯವಿಧಾತ’ ಎಂದು ಹೆಸರಿಟ್ಟಿದ್ದ ಆ ಹಾಡನ್ನು ಬಂಗಾಳಿಯಲ್ಲಿ ಶಂಕರಾಭರಣದ ರಾಗದಲ್ಲಿ ಹಾಡಲಾಗಿತ್ತು.

 ರಾಮಸಿಂಗ್ ಠಾಕೂರ್ ಸಂಗೀತ ಸಂಯೋಜಿಸಿದ್ದ ಬಂಗಾಳಿ ಹಾಡನ್ನು ನಂತರ ಹಿಂದಿ ಮತ್ತು ಇಂಗ್ಲಿಷ್‌ಗೆ ಅನುವಾದಿಸಲಾಯಿತು. ರಾಷ್ಟ್ರೀಯ ಆಂದೋಲನದ ಚುಕ್ಕಾಣಿ ಹಿಡಿದಿದ್ದ ಇಂಡಿಯನ್ ನ್ಯಾಷನಲ್ ಜನಗಣಮನವನ್ನು ಮೊದಲು ರಾಷ್ಟ್ರಗೀತೆಯನ್ನಾಗಿ ಅಂಗೀಕರಿಸಿತು. ದೇಶವನ್ನು ಸರ್ವೋಚ್ಚ ಗಣರಾಜ್ಯವೆಂದು ಘೋಷಿಸುವ ಎರಡು ದಿನಗಳ ಮೊದಲು ಅಂದರೆ 1950 ರ ಜನವರಿ 24 ರಂದು ಸಂಸತ್ತಿನಲ್ಲಿ ಮೊದಲ ಬಾರಿ ಜನಗಣಮನ ಹಾಡಲಾಯಿತು.

ಟ್ಯಾಗೋರ್ ಅವರ ಮಾತಿನಲ್ಲಿ ಹೇಳುವುದಾದರೆ, ಈ ಹಾಡು “ಭಾರತದ ಭಾಗ್ಯ ವಿಧಾತ (ಅದೃಷ್ಟದ ದೇವರು) ಭಾರತದ ರಥದ ಹಿಡಿತವನ್ನು ದೃಢವಾಗಿ ಹಿಡಿದು ವಿಜಯವನ್ನು ಆಚರಿಸುತ್ತಾರೆ. ಅದಾದ ಕೆಲವೇ ದಿನಗಳಲ್ಲಿ, ಜನವರಿ 1912 ರಲ್ಲಿ ಈ ಹಾಡನ್ನು ತತ್ವಬೋಧಿನಿ ಪತ್ರಿಕೆಯಲ್ಲಿ ಪ್ರಕಟಿಸಲಾಯಿತು. ಅದರಲ್ಲಿ ಟಾಗೋರ್ ಸಂಪಾದಕರಾಗಿದ್ದರು ಮತ್ತು ಬಂಗಾಳದಾದ್ಯಂತ ಅಪಾರ ಜನಪ್ರಿಯತೆಯನ್ನು ಗಳಿಸಿದರು.

1937 ಮತ್ತು 1939 ರಲ್ಲಿ ಬರೆದ ಪತ್ರಗಳಲ್ಲಿ ಟ್ಯಾಗೋರ್ ಅವರ ಹಾಡನ್ನು ಕಿಂಗ್ ಜಾರ್ಜ್ ವಿ ರವೀಂದ್ರನಾಥ ಟ್ಯಾಗೋರ್ ಅವರ ಗೌರವಾರ್ಥವಾಗಿ ಹಾಡಲಾಗಿದೆ ಎಂದು ತಪ್ಪಾಗಿ ಹೇಳಲಾಗಿದೆ, ಅವರು ಕಿಂಗ್ ಜಾರ್ಜ್ V ಅನ್ನು ಪ್ರಶಂಸಿಸಲು ‘ಜನ ಗಣ ಮನ’ ಅನ್ನು ರಚಿಸಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಅಲ್ಲದೆ  1913 ರಲ್ಲಿ ರವೀಂದ್ರನಾಥ ಟ್ಯಾಗೋರ್ ಅವರಿಗೆ ನೊಬೆಲ್ ಪ್ರಶಸ್ತಿಯನ್ನು ನೀಡಿದಾಗ ಸ್ವೀಡಿಷ್ ಅಕಾಡೆಮಿಯ ನೊಬೆಲ್ ಸಮಿತಿಯ ಕಿಂಗ್ ಜಾರ್ಜ್ V ಅಲ್ಲ ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ರವೀಂದ್ರನಾಥ ಟ್ಯಾಗೋರ್ ಅವರು ಕಿಂಗ್ ಜಾರ್ಜ್ V ರನ್ನು ಹೊಗಳಿ ‘ಜನ ಗಣ ಮನ’ ಹಾಡನ್ನು ಬರೆದಿದ್ದರು ಮತ್ತು 1913 ರಲ್ಲಿ ರವೀಂದ್ರನಾಥ ಟ್ಯಾಗೋರ್ ಅವರಿಗೆ ನೊಬೆಲ್ ಪ್ರಶಸ್ತಿಯನ್ನು ನೀಡಿದಾಗ ಕಿಂಗ್ ಜಾರ್ಜ್ V ಸ್ವೀಡಿಷ್ ಅಕಾಡೆಮಿಯ ನೊಬೆಲ್ ಸಮಿತಿಯ ಅಧ್ಯಕ್ಷರಾಗಿದ್ದರು ಎಂಬುದು ಸುಳ್ಳು. ಸಂಘಪರಿವಾರ ಮತ್ತು ಅದರ ಮಿತ್ರ ಸಂಘಟನೆಗಳಿಗೆ ದೇಶದ ಸಂವಿಧಾನ, ರಾಷ್ಟ್ರ ಗೀತೆ ಮತ್ತು ರಾಷ್ಟ್ರ ಧ್ವಜದ ಬಗ್ಗೆ ಯಾವಾಗಲೂ ಗೌರವ ಮತ್ತು ನಂಬಿಕೆಗಳು ಇಲ್ಲ ಎಂದು ಸಾಬೀತುಪಡಿಸಿವೆ. ಹಾಗಾಗಿ ಅವರು ಇಂತಹ ಸುಳ್ಳು ಸುದ್ದಿಗಳನ್ನು ಹರಿಯಬಿಟ್ಟು ಮುಗ್ದ ಜನರನ್ನು ತಪ್ಪುದಾರಿಗೆಳೆಯುತ್ತಿರುತ್ತಾರೆ. ಇಂತಹ ಸುಳ್ಳು ಸುದ್ದಿಗಳ ಬಗ್ಗೆ ಎಚ್ಚರವಿರಲಿ.

ಕೃಪೆ: ಫ್ಯಾಕ್ಟ್‌ಲಿ ಮತ್ತು ಕ್ವಿಂಟ್

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ರಾಮಮಂದಿರ ನಿರ್ಮಾಣವಾದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಕಪಿಲ್ ಸಿಬಲ್ ಹೇಳಿದ್ದರೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights