ಫ್ಯಾಕ್ಟ್ಚೆಕ್ : ಮಾಲ್ಡೀವ್ಸ್ ಬೀಚ್ನಲ್ಲಿ ಯುವತಿ ಶವ ಪತ್ತೆಯಾಗಿದೆ ಎಂದು ಸುಳ್ಳು ಪೋಸ್ಟ್ ಹಂಚಿಕೆ
ಕಳೆದ ವಾರ ಮಾಲ್ಡೀವ್ಸ್ನ ಸಚಿವರು ಮತ್ತು ಇತರ ಕೆಲವು ನಾಯಕರು ಲಕ್ಷದ್ವೀಪ್ನ ಪ್ರಾಚೀನ ಕಡಲತೀರದಲ್ಲಿ ಪ್ರಧಾನಿ ಮೋದಿಯವರ ವೀಡಿಯೊವನ್ನು ಪೋಸ್ಟ್ ಮಾಡಿದ ನಂತರ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದಾಗ ಭಾರೀ ವಿವಾದ ಸೃಷ್ಟಿಯಾಗಿತ್ತು. ಈ ಬೆಳವಣಿಗೆಗಳಿಂದಾಗಿ ಭಾರತ ಮತ್ತು ಮಾಲ್ಡೀವ್ಸ್ನ ಸಂಬಂಧ ಹಾಳಾಗಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ಮಾಲ್ಡೀವ್ಸ್ ಕುರಿತಾಗಿ ಹಲವು ಪೋಸ್ಟ್ಗಳು ಪ್ರಸಾರವಾಗುತ್ತಿವೆ.
A girl who went on a trip to the #Maldives was found dead naked near the seashore. She was gang-raped and tortured before being killed! pic.twitter.com/LMRi9JNebh
— lee (@Leeonie_2) January 10, 2024
‘ಮಾಲ್ಡೀವ್ಸ್ ಪ್ರವಾಸಕ್ಕೆ ತೆರಳಿದ್ದ ಯುವತಿಯ ನಗ್ನ ಮೃತದೇಹ ಸಮುದ್ರ ತೀರದಲ್ಲಿ ಪತ್ತೆಯಾಗಿದೆ. ಆಕೆಯನ್ನು ಹತ್ಯೆ ಮಾಡುವ ಮುನ್ನ ಕಿರುಕುಳ ನೀಡಿ, ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ’ ಎಂಬ ಹೇಳಿಕೆಯೊಂದಿಗೆ ಪೋಸ್ಟ್ಅನ್ನು ಹಂಚಿಕೊಂಡಿದ್ದಾರೆ. ಇದೇ ಫೋಟೊವನ್ನು ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಇದೇ ಪ್ರತಿಪಾದನೆಯೊಂದಿಗೆ ಹಂಚಿಕೊಂಡಿದ್ದಾರೆ. ಹಾಘಿದ್ದರೆ ಈ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, ಅದೇ ಚಿತ್ರವನ್ನು ಒಳಗೊಂಡಿರುವ ನ್ಯೂಯಾರ್ಕ್ ಪೋಸ್ಟ್ ಪ್ರಕಟಿಸಿದ 2022 ರ ವರದಿ ಲಭ್ಯವಾಗಿದೆ.

ಥೈಲ್ಯಾಂಡ್ನ ಚೋನ್ ಬುರಿಯಲ್ಲಿರುವ ಬಾಂಗ್ ಸಯೀನ್ ತೀರದಲ್ಲಿ 2022ರ ಆಗಸ್ಟ್ 18ರಂದು ಈ ಗೊಂಬೆ ಪತ್ತೆಯಾಗಿತ್ತು. ಅದನ್ನು ನೋಡಿದವರು ಶವವೆಂದೇ ಭಾವಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು, ಅದು ಮನುಷ್ಯ ದೇಹವಲ್ಲ. ಗೊಂಬೆ ಎಂದು ಸ್ಪಷ್ಟಪಡಿಸಿದ್ದರು. ಈ ಪ್ರಕರಣ, ‘ನ್ಯೂಯಾರ್ಕ್ ಪೋಸ್ಟ್’ನಂತಹ ಸುದ್ದಿ ಮಾಧ್ಯಮಗಳಲ್ಲಿ ಆಗ ವರದಿಯಾಗಿತ್ತು. ಮಾಲ್ಡೀವ್ಸ್ನಲ್ಲಿ ಈಗ ಈ ಕೃತ್ಯ ನಡೆದಿದೆ ಎಂಬುದನ್ನು ಸಮರ್ಥಿಸುವ ಯಾವುದೇ ವಿಶ್ವಾಸಾರ್ಹ ವರದಿಗಳು ಪ್ರಕಟವಾಗಿಲ್ಲ.
ಭಾರತ–ಮಾಲ್ಡೀವ್ಸ್ ದ್ವಿಪಕ್ಷೀಯ ಸಂಬಂಧ ಹದಗೆಟ್ಟಿರುವ ಹೊತ್ತಿನಲ್ಲಿ ಇಂತಹ ಹಲವು ಸುಳ್ಳು ಸುದ್ದಿಗಳನ್ನು ಹರಡಲಾಗುತ್ತಿದೆ. ಇಂಡೊನೇಷ್ಯಾದ ಬಾಲಿಯಲ್ಲಿ ಟ್ಯಾಕ್ಸಿ ಚಾಲಕನೊಬ್ಬ ಮಹಿಳಾ ಪ್ರವಾಸಿಗೆ ಕಿರುಕುಳ ನೀಡಿದ್ದ ವಿಡಿಯೊವನ್ನು ಮಾಲ್ಡೀವ್ಸ್ನದ್ದು ಎಂದು ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.
#Maldives is too unsafe for women for obvious reasons. Many girls have reported rape, molestation, extortion etc in #Maldives. Girls should avoid going there. #BoycottMaldives#Boycott_Maldivespic.twitter.com/r2kJsLqgME
— Amogh Balak (Dhimmi) (@AmoghBalak) January 8, 2024
ಇಂಡೋನೇಷ್ಯಾದ ಬಾಲಿಯಲ್ಲಿ ಕ್ಯಾಬ್ ಡ್ರೈವರ್ ಮತ್ತು ಇಬ್ಬರು ಮಹಿಳಾ ಪ್ರವಾಸಿಗರ ನಡುವೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದೆ ಹೊರತು ಮಾಲ್ಡೀವ್ಸ್ನದಲ್ಲ. ಈ ತಿಂಗಳ ಆರಂಭದಲ್ಲಿ ಇಂಡೋನೇಷ್ಯಾದ ಬಾಲಿಯಲ್ಲಿ ನಡೆದ ಘಟನೆಯ ವೀಡಿಯೊ ಇದು ಎಂದು BOOM ವರದಿ ಮಾಡಿದ್ದು, ಪೊಲೀಸರು ಟ್ಯಾಕ್ಸಿ ಚಾಲಕನನ್ನು ಸುಲಿಗೆ ಮಾಡಿದ ಆರೋಪದ ಮೇಲೆ ಬಂಧಿಸಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋಗಳನ್ನು ಸುಳ್ಳು. ವಾಸ್ತವವಾಗಿ ಈ ವಿಡಿಯೋಗಳಿಗೂ ಮಾಲ್ಡೀವ್ಸ್ಗೂ ಯಾವುದೇ ಸಂಬಂಧವಿಲ್ಲ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್ಚೆಕ್ : ಬೆಂಗಳೂರಿನಲ್ಲಿ ಮುಸ್ಲಿಮರಿಂದ ಹಿಂದೂ ಹುಡುಗಿಯರ ಅಪಹರಣ ಎಂದು ಸುಳ್ಳು ಪೋಸ್ಟ್ ಹಂಚಿಕೆ

