FACT CHECK | ಈ ಕಂಪನಿಯಲ್ಲಿ ಮುಸ್ಲಿಮರಿಗೆ ಮಾತ್ರ ಉದ್ಯೋಗವಂತೆ, ಹಿಂದೂಗಳಿಗಿಲ್ಲವಂತೆ ಹೌದೆ?

ಪ್ರಖ್ಯಾತ ಯುನಾನಿ ಔಷಧ ಕಂಪನಿ  ಹಮ್ದರ್ದ್ ನಲ್ಲಿ ಒಬ್ಬನೇ ಒಬ್ಬ ಹಿಂದೂ ಯುವಕನಿಗೆ ಕೆಲಸ ಸಿಗುವುದಿಲ್ಲ, ಅದು ಕೂಡ ಅವನು ಹಿಂದೂ ಎಂಬ ಕಾರಣಕ್ಕೆ. ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಮತ್ತು ವಕ್ಫ್ ಮಂಡಳಿಯ ಕೋಟ್ಯಂತರ ರೂಪಾಯಿಗಳ ಸಹಾಯದಿಂದ ನಡೆಯುತ್ತಿರುವ “ಹಮ್ದರ್ದ್” ವಕ್ಫ್ ಪ್ರಯೋಗಾಲಯ.

ಇಲ್ಲಿ ವಿತರಕರಾಗಲು ಅಥವಾ C & F ಆಗಲು ಮೊದಲ ಷರತ್ತು. ಅರ್ಜಿದಾರರು ಮುಸ್ಲಿಂ ಆಗಿರಬೇಕು. ಈ ಕಂಪನಿಯಲ್ಲಿ ಸೇಲ್ಸ್‌ಮ್ಯಾನ್‌ನಿಂದ ಹಿಡಿದು MD ವರೆಗೆ ಪ್ರತಿಯೊಬ್ಬ ಉದ್ಯೋಗಿಯೂ ಮುಸ್ಲಿಂ. ಈ ಕಂಪನಿಯು ಪಾಕಿಸ್ತಾನದಲ್ಲೂ ಶಾಖೆಯನ್ನು ಹೊಂದಿದೆ.

ಇದು ಸರ್ಕಾರದ ಹಣದಲ್ಲಿ ನಡೆಯುವ ಔಷಧ ಕಂಪನಿಯ. ಅಲ್ಲಿ ಹಿಂದೂಗಳಿಗೆ ಸೆಕ್ಯುಲರಿಸಂನ ಶಕ್ತಿ ತುಂಬಿ ನಿದ್ದೆಗೆಡಿಸಲಾಗಿದೆ. ಮಾಧ್ಯಮಗಳು ಇದನ್ನು ನಿಮಗೆ ಎಂದಿಗೂ ಹೇಳುವುದಿಲ್ಲ. ಅಹಮದಾಬಾದ್‌ನ ಕಂಪನಿಯೊಂದು ಮುಸಲ್ಮಾನನಿಗೆ ಉದ್ಯೋಗ ನೀಡಲು ನಿರಾಕರಿಸಿದಾಗ ಇಡೀ ಮಾಧ್ಯಮವೇ ಗಲಾಟೆ ಮಾಡತೊಡಗಿತು. ಆದರೆ ಹಮ್ದರ್ದ್ ಒಂದು ಕಂಪನಿಯಾಗಿದ್ದು, ಅದರ ಉದ್ಯೋಗಿಗಳೆಲ್ಲರೂ ಮುಸ್ಲಿಮರು. ಇಲ್ಲಿ ಹಿಂದೂಗಳಿಗೆ ಅವಕಾಶವಿಲ್ಲ. ಆದರೆ ಇದರ ಗ್ರಾಹಕರು ಮತ್ತು ಖರೀದಿದಾರರು ಮಾತ್ರ ಹಿಂದೂಗಳು.

ಭಾರತದಲ್ಲಿದ್ದರೂ ಯಾವ ಹಿಂದೂವೂ ಅದರಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ! ಅದರ ನೌಕರರೆಲ್ಲರೂ ಮುಸ್ಲಿಮರು! ಶುಕ್ರವಾರ ಈ ಕಂಪನಿಯನ್ನು ಮಸೀದಿಯಾಗಿ ಪರಿವರ್ತಿಸಲಾಗುತ್ತದೆ. ಹಿಂದೂಗಳಿಗೆ ಈ ಕಂಪನಿಗೆ ಕಾಲಿಡಲೂ ಅವಕಾಶವಿಲ್ಲ! ಈ ಕಂಪನಿಯ ಎಲ್ಲಾ ಉತ್ಪನ್ನಗಳನ್ನು ಬಹಿಷ್ಕರಿಸಿ. ಈ ಸತ್ಯವನ್ನು ಸಾಧ್ಯವಾದಷ್ಟು ಜನರಿಗೆ ತಿಳಿಸಿ ಮತ್ತು ಹಂಚಿಕೊಳ್ಳಿ ಎಂಬ ಪ್ರತಿಪಾದನೆಯೊಂದಿಗೆ ಸನಾತನಿ ಹಿಂದೂ ಎಂಬ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ಹಿಂದೂಗಳು ಭೇಟಿ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿರುವ ಹಲವು ಸ್ಥಳಗಳಿವೆ. ಅದರಲ್ಲಿ ಇದೂ ಒಂದೂ. ನೀವು ನಿವಾಗಿಯೂ ಬುದ್ದಿವಂತರಾಗಿದ್ದರೆ ಇದನ್ನು ಅರ್ಥಮಾಡಿಕೊಳ್ಳುತ್ತೀರಿ. ಜಿಹಾದಿಗಳ ಎಲ್ಲ ನೀಲನಕ್ಷೆಗಳು  ಇಂತಹ ಸ್ಥಳಗಳಲ್ಲಿ ಸಿದ್ಧಪಡಿಸಲಾಗುತ್ತದೆ. ನಂತರ ಅದನ್ನು ಜಿಹಾದಿಗಳು ಕಾರ್ಯರೂಪಕ್ಕೆ ತರುತ್ತಾರೆ ಎಂಬ ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೊಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಕೀ ಪ್ರೇಮ್‌ಗಳನ್ನು ಬಳಸಿಕೊಂಡು ಗೂಗಲ್ ಸರ್ಚ್ ಮಾಡಿದಾಗ, ಹಮ್ದರ್ದ್ ವೆಬ್‌ಸೈಟ್ ಲಭ್ಯವಾಗಿದ್ದು ಅದನ್ನು ಪರಿಶೀಲಿಸಿದಾಗ. ಹಮ್ದರ್ದ್ ಸಂಸ್ಥೆಯಲ್ಲಿ ಕ್ರಿಯಾಶೀಲವಾಗಿ ಕೆಲಸ ಮಾಡುತ್ತ ಸೇವೆಸಲ್ಲಿಸುತ್ತಿರುವ ಹಲವು ಹಿಂದೂ ಉದ್ಯೋಗಿಗಳಿರುವುದು ಕಂಡುಬಂದಿದೆ. ಇದಲ್ಲದೆ, ಈ ಮಾಹಿತಿಯನ್ನು ಕಂಪನಿಯ ಲಿಂಕ್ಡ್‌ಇನ್ ಪ್ರೊಫೈಲ್‌ನಲ್ಲಿ ಹಂಚಿಕೊಳ್ಳಲಾಗಿದೆ, ಕಂಪನಿ ಹಿಂದೂಗಳನ್ನು ಉದ್ಯೋಗಿಗಳಾಗಿ ನೇಮಿಸಿಕೊಂಡಿದೆ ಎಂಬುದು ಸ್ಪಷ್ಟವಾಗುತ್ತದೆ.

ವೆಬ್‌ಸೈಟ್‌ನಲ್ಲಿ ಕಂಡುಬಂದಂತೆ ಹಮ್ದರ್ದ್ ಕಂಪನಿಯಲ್ಲಿ ಉದ್ಯೋಗಿಗಳಾಗಿ ಕಾರ್ಯನಿರ್ವಹಿಸುತ್ತಿರುವ  ಹಿಂದೂಗಳ ಪಟ್ಟಿ
ವೆಬ್‌ಸೈಟ್‌ನಲ್ಲಿ ಕಂಡುಬಂದಂತೆ ಹಮ್ದರ್ದ್ ಕಂಪನಿಯಲ್ಲಿ ಉದ್ಯೋಗಿಗಳಾಗಿ ಕಾರ್ಯನಿರ್ವಹಿಸುತ್ತಿರುವ ಹಿಂದೂಗಳ ಪಟ್ಟಿ

ಒಟ್ಟಾರೆಯಾಗಿ ಹೇಳುವುದಾದರೆ, ಸನಾತನಿ ಎಂಬ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡ ಪೋಸ್ಟ್‌ ಕೋಮು ದ್ವೇಷದ ಹಿನ್ನಲೆಯಲ್ಲಿ ಹಂಚಿಕೊಂಡಿದ್ದು,  ಹಮ್ದರ್ದ್ ಯುನಾನಿ ಔಷದಿ ಕಂಪನಿಯಲ್ಲಿ  ಮುಸ್ಲಿಂ ಧರ್ಮದವರಿಗೆ ಮಾತ್ರ ಇಲ್ಲಿ ಕೆಲಸ ಮಾಡಲು ಅವಕಾಶ, ಹಿಂದೂ ಧರ್ಮದವರಿಗೆ ಕೆಲಸ ಮಾಡಲು ಅವಕಾಶವಿಲ್ಲ ಎಂಬ ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ. ಇಲ್ಲಿ  ಹಿಂದೂಗಳು ನೌಕಕರರಾಗಿ ಸೇವೆ ಸಲ್ಲಿಸಲು ಅವಕಾಶವಿದೆ ಮತ್ತು ಈಗಾಗಲೇ ಹಿಂದೂ ಉದ್ಯೋಗಿಗಳು ಇದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಮಲ್ಲಿಕಾರ್ಜುನ ಖರ್ಗೆ ನೀರು ಕುಡಿಯಲು ರಾಹುಲ್ ಮತ್ತು ಸೋನಿಯಾ ಗಾಂಧಿ ಅನುಮತಿ ಪಡೆಯಬೇಕೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

One thought on “FACT CHECK | ಈ ಕಂಪನಿಯಲ್ಲಿ ಮುಸ್ಲಿಮರಿಗೆ ಮಾತ್ರ ಉದ್ಯೋಗವಂತೆ, ಹಿಂದೂಗಳಿಗಿಲ್ಲವಂತೆ ಹೌದೆ?

  • May 10, 2024 at 2:14 pm
    Permalink

    “This blog is a beacon of truth in a sea of misinformation! It meticulously fact-checks the claim regarding employment discrimination based on religion in a particular company, providing clarity and debunking myths. Kudos to the author for their commitment to spreading accurate information and fostering informed discussions!”Click Here

    Reply

Leave a Reply

Your email address will not be published.

Verified by MonsterInsights