FACT CHECK | ರಾಮನವಮಿ ಮೆರವಣಿಗೆ ಮೇಲೆ ಕಲ್ಲು ತೂರಲು ಮುಸ್ಲಿಮರು ಕಲ್ಲು ಸಂಗ್ರಹಿಸಿದ್ದರು ಎಂದು ಕೋಮು ದ್ವೇಷದ ಪೋಸ್ಟ್‌ ಹಂಚಿಕೊಂಡ BJP ಬೆಂಬಲಿಗರು

ರಾಮ ನವಮಿ ಮೆರವಣಿಗೆಯ ಮೇಲೆ ಕ್ಲು ತೂರಲು ಅವರು ಸಜ್ಜಾಗಿದ್ದಾರೆ, ನೀವೇನು ಮಾಡುತ್ತಿದ್ದೀರಿ?  ರಾಂಚಿಯಲ್ಲಿ ಮನೆಗಳ ಛಾವಣಿಗಳ ಮೇಲೆ ಕಲ್ಲುಗಳನ್ನು ಸಂಗ್ರಹಿಸಿಡಲಾಗಿದೆ. ನಾಳೆ ಬಂಗಾಳ, ಬಿಹಾರ, ಗುಜರಾತ್, ರಾಜಸ್ಥಾನ ಮತ್ತು ಉತ್ತರ ಪ್ರದೇಶದಿಂದ ಕಲ್ಲು ತೂರಾಟದ ಸುದ್ದಿ ಬರಲಿದೆ. ಜಾಗರೂಕರಾಗಿರಿ, ಎಚ್ಚರವಾಗಿರಿ, ಭಯಪಡಬೇಡಿ” ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ಪ್ರಸಾರವಾಗುತ್ತಿದೆ.

Ajeet Bharti(@ajeetbharti) ಎಂಬ ಎಕ್ಸ್‌ ಖಾತೆ ಬಳಕೆದಾರರೊಬ್ಬರು ಈ ವಿಡಿಯೋ ಪೋಸ್ಟ್‌ಅನ್ನು ಹಂಚಿಕೊಂಡಿದ್ದು 5 ಲಕ್ಷಕ್ಕೂ ಹೆಚ್ಚಿನ ಜನ ವೀಕ್ಷಣೆ ಪಡೆದಿದೆ.

 

ಹಾಗಿದ್ದರೆ ರಾಮ ನವಮಿಯಂದು ಮೆರವಣಿಗೆ ಮೇಲೆ ಕಲ್ಲುತೂರಾಟ ನಡೆಸುವ ಉದ್ದೇಶದಿಂದ  ಮನೆಗಳ ಛಾವಣಿಯ ಮೇಲೆ ಕಲ್ಲು ಸಂಗ್ರಹಿಸಿ ಇಡಲಾಗಿತ್ತು ಎಂಬ ವಾದ ನಿಜವೇ? ಅಥವಾ ಇದು ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ಹಂಚಿಕೊಳ್ಳಲಾಗಿದೆಯೇ ಎಂದು ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್‌:

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 16, ಏಪ್ರಿಲ್  2024ರಂದು  ರಾಂಚಿ ಪೊಲೀಸರು ನೀಡಿರುವ ಸ್ಪಷ್ಟೀಕರಣ ಲಭ್ಯವಾಗಿದೆ.

“ಮೆರವಣಿಗೆಗಳು ಸಾಗುವ ರಸ್ತೆಯ ಪಕ್ಕದ ಕಟ್ಟಡಗಳನ್ನು ಡ್ರೋನ್ ಬಳಸಿ ತಪಾಸಣೆ ನಡೆಸುವುದು ಸರ್ವೆ ಸಾಮಾನ್ಯ. ಇದು ಪೊಲೀಸರ ಭದ್ರತಾ ಕ್ರಮದ ಒಂದು ಭಾಗ. ಹಲವು ಜಿಲ್ಲೆಗಳಲ್ಲಿ ಇದನ್ನು ಮಾಡಲಾಗುತ್ತಿದ್ದು, ಯಾರದ್ದಾದರೂ ಮೇಲ್ಛಾವಣಿಯ ಮೇಲೆ ಕಲ್ಲು, ಇಟ್ಟಿಗೆ, ಮರಳು ಮುಂತಾದ ಯಾವುದೇ ನಿರ್ಮಾಣ ಸಾಮಗ್ರಿಗಳು ಇದ್ದರೆ, ಅದನ್ನು ತೆರವುಗೊಳಿಸಲು ಸಂಬಂಧಿಸಿದ ಮನೆ ಮಾಲೀಕರನ್ನು ಕೋರಲಾಗ್ತಿದೆ” ಎಂದು ರಾಂಚಿ ಪೊಲೀಸರು ಸ್ಪಷ್ಟೀಕರಣ ನೀಡಿದ್ದಾರೆ.

ಈ ವಿಷಯದ ಕುರಿತು altnews.in ರಾಂಚಿ ಎಸ್‌ಎಸ್‌ಪಿ ಚಂದನ್‌ ಕುಮಾರ್‌ ಸಿನ್ಹಾ ಅವರೊಂದಿಗೆ ಮಾತನಾಡಿದ್ದು, “ಈ ವಿಷಯದಲ್ಲಿ ಯಾವುದೇ ಕೋಮು ಆಯಾಮವಿಲ್ಲ. ನೋಟಿಸ್ ಸ್ವೀಕರಿಸಿದ ಮನೆ ಮಾಲೀಕರು ಯಾವುದೇ ನಿರ್ದಿಷ್ಟ ಸಮುದಾಯಕ್ಕೆ ಸೇರಿದವರಲ್ಲ. ಮೆರವಣಿಗೆ ಹೊರಡುವ ಮಾರ್ಗದ ಮೇಲ್ವಿಚಾರಣೆ ಮಾಡುವುದು ಮತ್ತು ನಡುವೆ ಬರುವ ಕಟ್ಟಡಗಳ ಮೇಲ್ಛಾವಣಿಯ ಮೇಲೆ ಕಲ್ಲು, ಇಟ್ಟಿಗೆ, ಮರಳಿನಂತಹ ನಿರ್ಮಾಣ ಸಾಮಗ್ರಿಗಳನ್ನು ಸಂಗ್ರಹಿಸಿಡದಂತೆ ಎಚ್ಚರಿಕೆ ವಹಿಸುವುದು ಆಡಳಿತದ ವಾಡಿಕೆಯ ಕ್ರಮವಾಗಿದೆ” ಎಂದು ತಿಳಿಸಿದ್ದಾರೆ ಎಂದು ಮೊಹಮದ್‌ ಜುಬೇರ್‌ ಮಾಹಿತಿಯನ್ನು ನೀಡಿದ್ದಾರೆ

ಒಟ್ಟಾರೆಯಾಗಿ ಹೇಳುವುದಾದರೆ, ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ರಾಮನವಮಿ ಮೆರವಣಿಗೆ ಸಂದರ್ಭದಲ್ಲಿ ಕಲ್ಲು ತೂರಾಟ ನಡೆಸಲು ಮುಸ್ಲಿಂ ಸಮುದಾಯದವರು ಕಲ್ಲುಗಳನ್ನು ತಮ್ಮ ಮನೆಯ ಮೇಲ್ಚಾವಣಿಯ ಮೇಲೆ ಸಂಗ್ರಹಿಸಿಟ್ಟುಕೊಂಡಿದ್ದಾರೆ ಎಂಬುದು ಸುಳ್ಳಿನಿಂದ ಕೂಡಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಮೋದಿ ಹೆಲಿಕಾಫ್ಟರ್‌ನಲ್ಲಿ ಇದ್ದ ನಿಗೂಢ ಪೆಟ್ಟಿಗೆ ಯಾವುದು ಗೊತ್ತೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights