FACT CHECK | ಅನಂತ್ ಮತ್ತು ರಾಧಿಕಾ ಮದುವೆಯಲ್ಲಿ ಸಲ್ಮಾನ್ ಖಾನ್ ಐಶ್ವರ್ಯಾ ರೈ ಜೊತೆ ಫೋಟೊ ವೈರಲ್! ಫೋಟೊದ ಅಸಲೀಯತ್ತೇನು ಗೊತ್ತೇ?
ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಹಾಗೂ ರಿಲಯನ್ಸ್ ಫೌಂಡೇಷನ್ ಅಧ್ಯಕ್ಷೆ ನೀತಾ ಅಂಬಾನಿ ದಂಪತಿಯ ಕಿರಿಯ ಮಗ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹವು ಶುಕ್ರವಾರ ಅದ್ಧೂರಿಯಾಗಿ ನಡೆಯಿತು. ದೇಶ, ವಿದೇಶಗಳಿಂದ ಬಂದಿದ್ದ ಸಾವಿರಾರು ಸಂಖ್ಯೆಯ ಅತಿಥಿಗಳು ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದರು. ರಾಜಕೀಯ ಕ್ಷೇತ್ರದ ಹಲವು ಗಣ್ಯರು, ಸಿನಿ ತಾರೆಯರು ನವ ದಂಪತಿಗೆ ಶುಭ ಕೋರಿದ್ದಾರೆ.
ರಾಧಿಕಾ ಮರ್ಚೆಂಟ್ ಮತ್ತು ಅನಂತ್ ಅಂಬಾನಿ ಅವರ ವಿವಾಹ ಸಮಾರಂಭದಲ್ಲಿ ಸೆಲೆಬ್ರಿಟಿಗಳು ಒಟ್ಟಿಗೆ ಪೋಸ್ ನೀಡುತ್ತಿರುವ ಹಲವಾರು ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿವೆ. ಆದರೆ ನೆಟ್ಟಿಗರನ್ನು ಸ್ಕ್ರೋಲಿಂಗ್ ಮಾಡುವುದನ್ನು ನಿಲ್ಲಿಸುವಂತೆ ಮಾಡಿದ ಒಂದು ಚಿತ್ರವೆಂದರೆ ಐಶ್ವರ್ಯಾ ರೈ ಮತ್ತು ಸಲ್ಮಾನ್ ಖಾನ್ ಒಟ್ಟಿಗೆ ಪೋಸ್ ನೀಡಿರುವ ಫೋಟೊ.
ಐಶ್ವರ್ಯಾ ಮತ್ತು ಸಲ್ಮಾನ್ ಒಟ್ಟಿಗೆ ಪೋಸ್ ನೀಡಿರುವ ಫೋಟೋವನ್ನು ಹಂಚಿಕೊಂಡ ವ್ಯಕ್ತಿಯೊಬ್ಬರು ಹೀಗೆ ಬರೆದಿದ್ದಾರೆ, “ಐಶ್ವರ್ಯಾ ಬಚ್ಚನ್ ಕುಟುಂಬದವರೊಂದಿಗೆ ಬಂದಿಲ್ಲ, ಮತ್ತು ಈಗ ಅವರು ಸಲ್ಮಾನ್ ಭಾಯ್ ಅವರೊಂದಿಗೆ ಪೋಸ್ ನೀಡುವ ಮೂಲಕ ಹುಚ್ಚುತನ ಮೆರೆದಿದ್ದಾರೆ. ಎಂಬ ಹೇಳಿಕೆಯನ್ನು ಸೇರಿಸಿದ್ದಾರೆ.
ಆದರೆ ಐಶ್ವರ್ಯಾ ಮತ್ತು ಸಲ್ಮಾನ್ ಒಟ್ಟಿಗೆ ಪೋಸ್ ನೀಡಿರುವ ಬಗ್ಗೆ ಹಲವರು ಅನುಮಾನ ವ್ಯಕ್ತಪಡಿಸಿದ್ದು ಈ ವೈರಲ್ ಚಿತ್ರ ಎಡಿಟೆಡ್ ಎಂದು ಪ್ರತಿಕ್ರಿಯಿಸಿದ್ದಾರೆ. ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆ ಪೋಟೊಗಳಲ್ಲಿ ಹೆಚ್ಚು ವೈರಲ್ ಆಗುತ್ತಿರುವ ಐಶ್ವರ್ಯಾ ಮತ್ತು ಸಲ್ಮಾನ್ ಒಟ್ಟಿಗೆ ಪೋಸ್ ನೀಡಿರುವ ಫೋಟೊದ ನೈಜತೆಯನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ಜೂಮ್ ಟಿವಿ ಹಂಚಿಕೊಂಡಿರುವ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆಯ ಸಂದರ್ಭದಲ್ಲಿ ಸಲ್ಮಾನ್ ಖಾನ್ ಚಿತ್ರಗಳನ್ನು ಹಂಚಿಕೊಂಡಿದ್ದು ನಮಗೆ ಲಭ್ಯವಾಗಿವೆ. ಫೋಟೊದಲ್ಲಿ, ನಟ ಸಲ್ಮಾನ್ ಖಾನ್ ತನ್ನ ಸಹೋದರಿ ಅರ್ಪಿತಾ ಖಾನ್ ಜೊತೆ ಪೋಸ್ ನೀಡಿದ್ದು, ವೈರಲ್ ಫೋಟೋದಲ್ಲಿ ಕಂಡುಬರುವಂತೆ ಅದೇ ಹಿನ್ನೆಲೆಯಲ್ಲಿ ಮತ್ತು ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ.
ಜುಲೈ 12 ರಂದು ಮುಕೇಶ್ ಅಂಬಾನಿ ಮಗ ಅಂನತ್ ಅಂಬಾನಿ ಮದುವೆಗೆ ಬಾಲಿವುಡ್ ನಟರು ಆಗಮಿಸುವ ಮಾಧ್ಯಮದ ತುಣುಕುಗಳು ಲಭ್ಯವಾಗಿದೆ. ವಿವಿಧ ಮಾಧ್ಯಮಗಳು ಹಂಚಿಕೊಂಡ ಹಲವಾರು ವಿಡಿಯೋಗಳಲ್ಲಿ ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಖಾನ್ ಅವರೊಂದಿಗೆ ಸ್ಥಳಕ್ಕೆ ಆಗಮಿಸುತ್ತಿರುವುದನ್ನು ತೋರಿಸಿದೆ. ಮತ್ತೊಂದೆಡೆ ಐಶ್ವರ್ಯಾ ರೈ ಬಚ್ಚನ್ ತಮ್ಮ ಮಗಳು ಆರಾಧ್ಯ ಜೊತೆ ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ. ಈ ಸಮಯದಲ್ಲಿ ಸಲ್ಮಾನ್ ಮತ್ತು ಐಶ್ವರ್ಯಾ ಒಟ್ಟಿಗೆ ಇರುವ ಯಾವ ಚಿತ್ರವನ್ನು ಮಾಧ್ಯಮಗಳು ಹಂಚಿಕೊಂಡಿಲ್ಲ ಎಂಬುದು ಸ್ಪಷ್ಟವಾಗಿದೆ.
ವಾಸ್ತವವಾಗಿ, ನಟ ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈ ಇಬ್ಬರೂ ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದು ನಿಜ, ಆದರೆ ಇಬ್ಬರು ಜೊತೆಯಾಗಿ ನಿಂತು ಫೋಟೊಗೆ ಪೋಸ್ ನೀಡಿದ್ದಾರೆ ಎಂಬುದು ಸುಳ್ಳು, ಎರಡು ಬೇರೆ ಬೇರೆ ಚಿತ್ರವನ್ನು ಎಡಿಟ್ ಮಾಡಿ ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈ ಒಟ್ಟಿಗೆ ಫೋಸ್ ನೀಡಿರುವಂತೆ ರಚಿಸಲಾಗಿದೆ.
AI is really dangerous pic.twitter.com/0QarGrqyJp
— Prayag (@theprayagtiwari) July 13, 2024
ಈಗ ಕೃತಕ ಬುದ್ಧಿಮತ್ತೆಯ(AI) ಜಗತ್ತಿನಲ್ಲಿ ವಾಸಿಸುತ್ತಿದ್ದೇವೆ ಮತ್ತು ಸಲ್ಮಾನ್ ಖಾನ್ ಐಶ್ವರ್ಯಾ ರೈ ಅವರೊಂದಿಗೆ ಪೋಸ್ ನೀಡುತ್ತಿರುವ ಈ ಚಿತ್ರದಂತೆಯೇ ನಾವು ನೋಡುವ ಎಲ್ಲವೂ ನಿಜವಲ್ಲ. ಈ ಚಿತ್ರವು ಕಾಡ್ಗಿಚ್ಚಿನಂತೆ ವೈರಲ್ ಆಗುತ್ತಿದೆ ಮತ್ತು ಇದು ‘ಹಮ್ ದಿಲ್ ದೇ ಚುಕೇ ಸನಮ್ 2’ ಕೇಳುವ ಅನೇಕರನ್ನು ಗೊಂದಲಕ್ಕೀಡು ಮಾಡಿದೆ. ಒಬ್ಬ ಅಭಿಮಾನಿ “ಹಮ್ ದಿಲ್ ದೇ ಚುಕೆ ಸನಮ್ 2 ಗಾಗಿ ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈ ಒಟ್ಟಿಗೆ” ಎಂದು ಬರೆದಿದ್ದಾರೆ. “AI ನಿಜವಾಗಿಯೂ ಅಪಾಯಕಾರಿ” ಎಂದು ಜಾಗೃತ ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ.
ಸಲ್ಮಾನ್ ಖಾನ್ ತಮ್ಮ ಸಹೋದರಿ ಅರ್ಪಿತಾ ಅವರೊಂದಿಗೆ ಕ್ಯಾಮೆರಾಗೆ ಪೋಸ್ ನೀಡಿದರೆ, ಐಶ್ವರ್ಯಾ ರೈ ತಮ್ಮ ಮಗಳು ಆರಾಧ್ಯ ಅವರೊಂದಿಗೆ ಫೋಟೊದಲ್ಲಿ ಇರುವುದನ್ನು ಕಾಣಬಹುದು. ಈ ಎರಡು ಬೇರೆ ಬೇರೆ ಚಿತ್ರವನ್ನು ಜೋಡಿಸಿ ಎಡಿಟ್ ಮಾಡಿ ತಪ್ಪಾಗಿ ಹಂಚಿಕೊಳ್ಳಲಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಮುಸ್ಲಿಮರು ಹಿಂದೂ ದೇವಾಲಯವನ್ನು ಕೆಡವಿದ್ದಾರೆ ಎಂದು ಸುಳ್ಳು ವಿಡಿಯೋ ಹಂಚಿಕೆ