FACT CHECK | ಕೇಜ್ರಿವಾಲ್‌ನನ್ನು ದೆಹಲಿಯಿಂದ ಓಡಿಸಿ ಎಂದು ಆಟೋದ ಮೇಲೆ ಬರೆದಿರುವುದು ನಿಜವೇ?
“ದೆಹಲಿಯ ಜನರು ಕೇಜ್ರಿವಾಲ್ ಅವರನ್ನು ಓಡಿಸಲು ನಿರ್ಧರಿಸಿದ್ದಾರೆ” ಎಂದು ಪ್ರತಿಪಾದಿಸಿ ಆಟೋದ ಹಿಂಬದಿ ಬರಹವೊಂದನ್ನು BJP ಪಕ್ಷವು ತನ್ನ ಅಧಿಕೃತ ಎಕ್ಸ್ ಖಾತೆ ಮೂಲಕ ಹಂಚಿಕೊಳ್ಳಲಾಗಿದೆ. ದೆಹಲಿಯಿಂದ ಕೇಜ್ರಿವಾಲ್‌ರನ್ನು ಓಡಿಸಿ” ಎಂದು ಆಟೋದ ಹಿಂದೆ ಬರೆಯಲಾಗಿದೆ ಎಂದು ಚಿತ್ರವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಈ ಚಿತ್ರವನ್ನು BJP ಬೆಂಬಲಿಗರು ವ್ಯಾಪಕವಾಗಿ ಹಂಚಿಕೊಂಡಿದ್ದಾರೆ ಅವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು. ಹಾಗಿದ್ದರೆ ನಿಜವಾಗಿಯೂ BJP ಹಂಚಿಕೊಳ್ಳುತ್ತಿರುವಂತೆ ಅರವಿಂದ್ ಕೇಜ್ರಿವಾಲ್ ವಿರುದ್ದ ಇಂತಹದೊಂದು ಕ್ಯಾಂಪೇನ್‌ನನ್ನು ಮಾಡಲಾಗಿದೆಯೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
BJP ಮತ್ತದರ ಬೆಂಬಲಿಗರು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಂತೆ ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ದ ದೆಹಲಿ ಜನರು ಆಟೋ ಮೂಲಕ ಕ್ಯಾಂಪೇನ್ ನಡೆಸುfತಿರುವುದು ನಿಜವೇ ಎಂದು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಏಪ್ರಿಲ್ 9, 2013ರಂದು ಇದೇ ಚಿತ್ರ ಅಪ್‌ಲೋಡ್ ಮಾಡಿರುವುದು ಕಂಡುಬಂದಿದೆ.

ಜೊತೆಗೆ ಮೆಟಾ ಡೇಟಾ ಮಾಹಿತಿ ಲಭಿಸಿದೆ. ಈ ಮಾಹಿತಿಯ ಪ್ರಕಾರ, ಈ ಚಿತ್ರ 2013ರ ಏಪ್ರಿಲ್ 10 ರಂದು ಮೊದಲು ಪ್ರಕಟವಾಗಿದೆ ಎಂದು ತಿಳಿದುಬಂದಿದೆ. ಆಟೋ ರೀಕ್ಷಾದ ಮೂಲ ಚಿತ್ರದಲ್ಲಿ “ಆಯುಷ್ ಗುಪ್ತಾ – ಆಕಾಂಶಾ, ನೀವು ಯಾವಾಗ ಮನೆಗೆ ಬರುತ್ತೀರಿ” ಎಂದು ಹಿಂದಿಯಲ್ಲಿ ಬರೆಯಲಾಗಿದೆ.

ಆಟೋದ ಮೇಲೆ ಬರೆಯಲಾದ “ಆಯುಷ್ ಗುಪ್ತಾ – ಆಕಾಂಶಾ, ನೀವು ಯಾವಾಗ ಮನೆಗೆ ಬರುತ್ತೀರಿ” ಎಂಬ ಹೇಳಿಕೆಯನ್ನು ತಿರುಚಿ , “ದೆಹಲಿಯಿಂದ ಕೇಜ್ರಿವಾಲ್‌ರನ್ನು ಓಡಿಸಿ” ಎಂದು ಕಿಡಿಗೇಡಿಗಳು ಎಡಿಟ್ ಮಾಡಿದ್ದಾರೆ. ಆ ಚಿತ್ರವನ್ನು ಪರಿಶೀಲಿಸದೇ ತನ್ನ ರಾಜಕೀಯ ಕೆಸೆರೆರಚಾಟಕ್ಕೆ ಬಿಜೆಪಿ ಬಳಸಿಕೊಂಡಿದೆ. ಆ ಎಡಿಟೆಡ್ ಚಿತ್ರವನ್ನು ತನ್ನ ಅಧಿಕೃತ ಫೇಸ್‌ಬುಕ್‌ನಲ್ಲಿ ಹಂಚಿಕೊಂಡು ಜನರ ದಿಕ್ಕುತಪ್ಪಿಸಿ ಈಗ ಸಿಕ್ಕಿಬಿದ್ದಿದೆ.
ಆಟೋರಿಕ್ಷಾದ ಈ ವೈರಲ್ ಚಿತ್ರವನ್ನು ಫೆವಿಕಾಲ್ ಸಹ 2018 ರಲ್ಲಿ ಜಾಹೀರಾತಿನಲ್ಲಿ ಬಳಸಿರುವುದನ್ನು ಇಲ್ಲಿ ಕಾಣಬಹುದು. ಈ ಮಾಹಿತಿಯ ಆಧಾರದ ಮೇಲೆ, ಬಿಜೆಪಿ ಹಂಚಿಕೊಂಡ ವೈರಲ್ ಚಿತ್ರವು ಕೇಜ್ರಿವಾಲ್ ವಿರೋಧಿ ಘೋಷಣೆಯನ್ನು ಒಳಗೊಂಡಿರುವ ಸಂಪಾದಿತ ಆವೃತ್ತಿಯಾಗಿದೆ ಎಂಬುದು ಸ್ಪಷ್ಟವಾಗಿದೆ. “ದೆಹಲಿಯಿಂದ ಕೇಜ್ರಿವಾಲ್ ಓಡಿಸಿ” ಎಂದು ಆಟೋಗಳ ಮೇಲೆ ಬರೆದಿಲ್ಲ. ಎದುರಾಳಿಯನ್ನು ಹಳಿಯಲು BJP ಆಟೋದ ಎಡಿಟೆಡ್ ಚಿತ್ರವನ್ನು ಹಂಚಿಕೊಂಡಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಕೇಜ್ರಿವಾಲ್ ವಿರೋಧಿ ಸಂದೇಶವನ್ನು ಒಳಗೊಂಡಂತೆ ವೈರಲ್ ಚಿತ್ರವನ್ನು ಡಿಜಿಟಲ್ ಆಗಿ ಮಾರ್ಪಡಿಸಲಾಗಿದೆ. ಈ ಆಟೋರಿಕ್ಷಾ ಫೋಟೋವನ್ನು ಫೆವಿಕಾಲ್ ಪ್ರತ್ಯೇಕ ಜಾಹೀರಾತಿನಲ್ಲಿ ಫೆಬ್ರವರಿ 2018 ರಲ್ಲಿ ಬಳಸಿದೆ. ಮೂಲ ಚಿತ್ರವನ್ನು ಸುಭಾಶಿಶ್ ಪಾಣಿಗ್ರಾಹಿ ಅವರು ಏಪ್ರಿಲ್ 9, 2013 ರಂದು ವಿಕಿಮೀಡಿಯಾಕ್ಕೆ ಅಪ್‌ಲೋಡ್ ಮಾಡಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ರೂ 99 ಬೆಲೆಗೆ ಐಫೋನ್ 13 ಸಿಗುತ್ತದೆ ಎಂಬುದು ನಿಜವೇ?

