FACT CHECK | ಗೃಹ ಸಚಿವ ಅಮಿತ್ ಶಾ ಹೆಸರು ವಾಂಟೆಡ್ ಲಿಸ್ಟ್ನಲ್ಲಿ! ವೈರಲ್ ಪೋಸ್ಟ್ನ ಅಸಲೀಯತ್ತೇನು?
ಕೆನಡಾದ ಉಪ ವಿದೇಶಾಂಗ ವ್ಯವಹಾರಗಳ ಸಚಿವ ಡೇವಿಡ್ ಮಾರಿಸನ್ ಅವರು ಇತ್ತೀಚೆಗೆ ಕೆನಡಾದೊಳಗಿನ ಸಿಖ್ ಪ್ರತ್ಯೇಕತಾವಾದಿಗಳನ್ನು ಗುರಿಯಾಗಿಸಿಕೊಂಡು ಹಿಂಸಾಚಾರ, ಬೆದರಿಕೆ ಮತ್ತು ಗುಪ್ತಚರ-ಸಂಗ್ರಹಣೆಯ ಅಭಿಯಾನಕ್ಕೆ ಅಮಿತ್ ಷಾ ಆದೇಶಿಸಿದರು ಎಂದು ಆರೋಪಿಸಿದ ಬೆನ್ನಲ್ಲೆ ಸಾಮಾಜಿಕ ಮಾಧ್ಯಮ ಬಳಕೆದಾರರು ಅಮಿತ್ ಶಾ ಕುರುತು ಪೋಸ್ಟ್ಅನ್ನು ಹಂಚಿಕೊಂಡಿದ್ದಾರೆ.

ಭಾರತ ಮತ್ತು ಕೆನಡಾ ಮಧ್ಯದ ರಾಜತಾಂತ್ರಿಕ ಬಿಕ್ಕಟ್ಟಿನ ನಡುವೆಯೇ ಪಾಕಿಸ್ತಾನ ಮೂಲದ ಹಲವರು, ‘ಇಂಟರ್ಪೋಲ್ ಇತ್ತೀಚೆಗೆ ಭಾರತದ ಗೃಹ ಸಚಿವ ಅಮಿತ್ ಶಾ ಅವರನ್ನು ವಾಂಟೆಡ್ ಲಿಸ್ಟ್ಗೆ ಸೇರಿಸಿದೆ’ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಗ್ರಾಫಿಕ್ ಕಾರ್ಡ್ ಅನ್ನು ಹಂಚಿಕೊಂಡಿದ್ದಾರೆ. Facebook ಮತ್ತು X ನಂತಹ ಹಲವಾರು ಪ್ಲಾಟ್ಫಾರ್ಮ್ಗಳಲ್ಲಿ ಗ್ರಾಫಿಕ್ ವೈರಲ್ ಆಗುತ್ತಿದೆ. ಅವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಇಂಟರ್ಪೋಲ್ ಇತ್ತೀಚೆಗೆ ಭಾರತದ ಗೃಹ ಸಚಿವ ಅಮಿತ್ ಶಾ ಅವರನ್ನು ವಾಂಟೆಡ್ ಲಿಸ್ಟ್ಗೆ ಸೇರಿಸಿದೆ’ ಎಂಬುದು ನಿಜವೇ ಎಂದು ಪರಿಶೀಲಿಸಲು ಕೀವರ್ಡ್ ಮೂಲಕ ಗೂಗಲ್ ಸರ್ಚ್ ಮಾಡಿದಾಗ, ವೈರಲ್ ಗ್ರಾಫಿಕ್ ಅನ್ನು ಎಡಿಟೆಡ್ ಮೂಲಕ ರಚಿಸಲಾಗಿದ್ದು. ಶಾ ವಿರುದ್ಧ ಇಂಟರ್ಪೋಲ್ ನೋಟಿಸ್ ಜಾರಿ ಮಾಡಿದೆ ಎನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ.
ಇಂಟರ್ಪೋಲ್ನ ಅಧಿಕೃತ ವೆಬ್ಸೈಟ್ನಲ್ಲಿ ಹೋಗಿ ‘ವಾಂಟೆಡ್ ವ್ಯಕ್ತಿಗಳು’ ವಿಭಾಗದ ಮೂಲಕ ಬ್ರೌಸ್ ಮಾಡಿದೆವು. ಇಂಟರ್ಪೋಲ್ ವಾಂಟೆಡ್ ಲಿಸ್ಟ್ನಲ್ಲಿ ಗೃಹ ಸಚಿವರ ಹೆಸರನ್ನು ಸೇರಿಸಿರುವ ಬಗ್ಗೆ ಇತ್ತೀಚಿನ ಯಾವುದೇ ನವೀಕರಣಗಳು ನಮಗೆ ಕಂಡುಬಂದಿಲ್ಲ. ‘ಕೆಂಪು ಸೂಚನೆಗಳು’ ವಿಭಾಗದಲ್ಲಿ ಶಾ ಅವರ ಹೆಸರನ್ನು ಹುಡುಕಿದಾಗ, ಅದು ಯಾವುದೇ ಫಲಿತಾಂಶಗಳನ್ನು ನೀಡಲಿಲ್ಲ.

‘ಹಳದಿ ಸೂಚನೆಗಳು’ ವಿಭಾಗದ ಅಡಿಯಲ್ಲಿ ಮತ್ತೊಂದು ಹುಡುಕಾಟವು ಯಾವುದೇ ಫಲಿತಾಂಶಗಳನ್ನು ನೀಡಲಿಲ್ಲ. ಈ ಎರಡೂ ಸಂಶೋಧನೆಗಳು ಷಾ ವಿರುದ್ಧ ಇಂಟರ್ಪೋಲ್ ಅಂತಹ ಯಾವುದೇ ನವೀಕರಣವನ್ನು ನೀಡಿಲ್ಲ ಎಂದು ಸೂಚಿಸಿವೆ. ಜನರನ್ನು ದಾರಿತಪ್ಪಿಸಲು ವೈರಲ್ ಗ್ರಾಫಿಕ್ ಅನ್ನು ನಿರ್ಮಿಸಲಾಗಿದೆ. ‘ಕೆಂಪು ನೋಟೀಸ್’ ವಿಭಾಗದಲ್ಲಿ ಗೃಹ ಸಚಿವ ಅಮಿತ್ ಶಾ ಅವರ ಹೆಸರು ಕಾಣಿಸಲಿಲ್ಲ. ಸಾರ್ವಜನಿಕ ಡೊಮೇನ್ನಲ್ಲಿ ಯಾವುದೇ ವರದಿಗಳು ಅಥವಾ ಮಾಹಿತಿ ಲಭ್ಯವಿಲ್ಲ. ಅಲ್ಲದೆ Google ನಲ್ಲಿ ಕೀವರ್ಡ್ ಸರ್ಚ್ ನಡೆಸಿದಾಗಲೂ ವೈರಲ್ ಪೋಸ್ಟ್ಅನ್ನು ಬೆಂಬಲಿಸಲು ಯಾವುದೇ ವಿಶ್ವಾಸಾರ್ಹ ವರದಿಗಳು ಲಭ್ಯವಾಗಿಲ್ಲ.

ಕೆನಡಾದಲ್ಲಿ ಇರುವ ಸಿಖ್ ಪ್ರತ್ಯೇಕತಾವಾದಿಗಳನ್ನು ಗುರಿಯಾಗಿಸಿ ಹಿಂಸಾಚಾರ, ಬೆದರಿಕೆ ಮತ್ತು ಗುಪ್ತಚರ ಸಂಗ್ರಹಣಾ ಕಾರ್ಯಕ್ಕೆ ಅಮಿತ್ ಶಾ ಅವರು ಆದೇಶಿಸಿದ್ದಾರೆ ಎಂದು ಕೆನಡಾದ ಸಚಿವ ಡೇವಿಡ್ ಮಾರಿಸನ್ ಅವರು ಇತ್ತೀಚೆಗೆ ಆರೋಪಿಸಿದ್ದರು. ಅದರ ಬೆನ್ನಲ್ಲೇ ಪಾಕ್ನ ಸಾಮಾಜಿಕ ಮಾಧ್ಯಮ ಬಳಕೆದಾರರು ಗ್ರಾಫಿಕ್ ಅನ್ನು ಹಂಚಿಕೊಂಡಿದ್ದಾರೆ.
ಈ ಗ್ರಾಫಿಕ್ ನಕಲಿ ಎಂಬುದನ್ನು ಪಿಟಿಐ ಫ್ಯಾಕ್ಟ್ಚೆಕ್ ಡೆಸ್ಕ್ ಪತ್ತೆಮಾಡಿದೆ. ಇಂಟರ್ಪೋಲ್ ಈ ರೀತಿಯ ಯಾವುದೇ ಸೂಚನೆಯನ್ನು ನೀಡಿಲ್ಲ ಮತ್ತು ಈ ಸಂಬಂಧ ಪಾಕ್ ಮತ್ತು ಕೆನಡಾದ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಮಾಡಿರುವ ಪೋಸ್ಟ್ಗಳಲ್ಲಿ ಸತ್ಯಾಂಶ ಇಲ್ಲ ಎಂದು ಪಿಟಿಐ ತಿಳಿಸಿದೆ.
ಅದಾಗ್ಯೂ ಮಾರಿಸನ್ ಅವರ ಆರೋಪಗಳನ್ನು ಅಸಂಬದ್ಧ ಮತ್ತು ಆಧಾರರಹಿತ ಎಂದು ಭಾರತ ತಿರಸ್ಕರಿಸಿದೆ. ಅಲ್ಲದೆ ಈ ರೀತಿಯ ಆರೋಪಗಳು ದ್ವಿಪಕ್ಷೀಯ ಸಂಬಂಧಗಳ ಮೇಲೆ ಗಂಭೀರ ಪರಿಣಾಮಗಳನ್ನು ಉಂಟು ಮಾಡುತ್ತದೆ ಎಂದು ಎಚ್ಚರಿಸಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ‘ಇಂಟರ್ಪೋಲ್ ಇತ್ತೀಚೆಗೆ ಭಾರತದ ಗೃಹ ಸಚಿವ ಅಮಿತ್ ಶಾ ಅವರನ್ನು ವಾಂಟೆಡ್ ಲಿಸ್ಟ್ಗೆ ಸೇರಿಸಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಮತ್ತು ಆಧಾರರಹಿತ ಪೋಸ್ಟ್ಗಳನ್ನು ಹಂಚಿಕೊಳ್ಳಲಾಗುತ್ತಿದೆ ಎಂದು PTI ವರದಿ ಮಾಡಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಸೌದಿ ಅರೇಬಿಯಾದಲ್ಲಿ ದೀಪಾವಳಿ ಆಚರಣೆ ಮಾಡಲಾಗಿದೆ ಎಂದು ಹಳೆಯ ಸಂಬಂಧವಿಲ್ಲದ ವಿಡಿಯೋ ಹಂಚಿಕೆ

