FACT CHECK | SBI ರಿವಾರ್ಡ್ ಆ್ಯಪ್‌ಗೆ ಸಂಬಂಧಿಸಿದಂತೆ ವಾಟ್ಸಾಪ್‌ನಲ್ಲಿ ನಕಲಿ ಸಂದೇಶ ಹಂಚಿಕೆ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಅನ್ನು ಉಲ್ಲೇಖಿಸಿ ಸಂದೇಶವೊಂದು ಸಾಮಾಜಿಕ ಮಾಧ್ಯಮ ವೇದಿಕೆ ವಾಟ್ಸ್​ಆ್ಯಪ್​ನಲ್ಲಿ ವೈರಲ್ ಆಗುತ್ತಿದೆ. ಎಸ್‌ಬಿಐ ರಿವಾರ್ಡ್ ಪಾಯಿಂಟ್‌ಗಳನ್ನು ರಿಡೀಮ್ ಮಾಡಲು ಎಸ್‌ಬಿಐ ರಿವಾರ್ಡ್ ಆ್ಯಪ್ ಅನ್ನು ಸ್ಥಾಪಿಸಿ ಎಂದು ಗ್ರಾಹಕರಿಗೆ ವಾಟ್ಸ್​ಆ್ಯಪ್​ನಲ್ಲಿ ಸಂದೇಶವನ್ನು ಕಳುಹಿಸಲಾಗುತ್ತಿದೆ.

SBI ಬಹುಮಾನ ವಂಚನೆ

‘‘ಆತ್ಮೀಯ ಮೌಲ್ಯಯುತ ಗ್ರಾಹಕರೇ, ನಿಮ್ಮ ಎಸ್ ಬಿ ಐ ನೆಟ್‌ಬ್ಯಾಂಕಿಂಗ್ ರಿವಾರ್ಡ್ ಪಾಯಿಂಟ್‌ಗಳು (ರೂ. 9980.00) ಇಂದು ಮುಕ್ತಾಯಗೊಳ್ಳುತ್ತವೆ! ಈಗ SBI ರಿವಾರ್ಡ್ಸ್ ಆ್ಯಪ್ ಅನ್ನು ಇನ್‌ಸ್ಟಾಲ್ ಮಾಡಿ ಮತ್ತು ರಿಡೀಮ್ ಮಾಡಿಕೊಳ್ಳಿ. ನಿಮ್ಮ ಖಾತೆಗೆ ಹಣವನ್ನು ಕ್ರೆಡಿಟ್ ಮಾಡುವ ಮೂಲಕ ನೀವು ಬಹುಮಾನಗಳನ್ನು ಪಡೆಯಿರಿ. ಧನ್ಯವಾದಗಳು ತಂಡ SBI’’ ಎಂದು ಬರೆಯಲಾಗಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ವಾಟ್ಸಾಪ್‌ಗಳಲ್ಲಿ ವೈರಲ್ ಆಗುತ್ತಿರುವ ಸಂದೇಶದಲ್ಲಿ ಮಾಡಲಾಗುತ್ತಿರುವ ರಿವಾರ್ಡ್ಸ್‌ ಆಪ್‌ ಬಗ್ಗೆ ಪರಿಶೀಲಿಸಲು, ಎಸ್ ಬಿ ಐಯ ಎಕ್ಸ್ ಹ್ಯಾಂಡಲ್‌ಗೆ ಭೇಟಿ ನೀಡಿದಾಗ, ಎಸ್‌ಬಿಐನ ಎಕ್ಸ್ ಹ್ಯಾಂಡಲ್‌ನಲ್ಲಿ ವೈರಲ್ ಸಂದೇಶಕ್ಕೆ ಸಂಬಂಧಿಸಿದ ಟ್ವೀಟ್ ಲಭ್ಯವಾಗಿದೆ. ಅದರಲ್ಲಿ ಈ ರೀತಿ ಬರೆಯಲಾಗಿದೆ – ‘‘SBI ಗ್ರಾಹಕರ ಗಮನಕ್ಕೆ: ವಂಚಕರ ಬಗ್ಗೆ ಎಚ್ಚರದಿಂದಿರಿ. ಎಸ್‌ಬಿಐ ರಿವಾರ್ಡ್ ಪಾಯಿಂಟ್‌ಗಳನ್ನು ರಿಡೀಮ್ ಮಾಡಲು ವಂಚಕರು ಎಸ್ ಎಮ್ ಎಸ್ ಅಥವಾ ವಾಟ್ಸ್​ಆ್ಯಪ್​ನಲ್ಲಿ ಸಂದೇಶಗಳು ಮತ್ತು APK ಗಳನ್ನು ಕಳುಹಿಸುತ್ತಿದ್ದಾರೆ ಇದರ ಬಗ್ಗೆ ಎಚ್ಚರಿಕೆ ಇರಲಿ ಎಂದು ತಿಳಿಸಿದೆ.

SBI ಎಂದಿಗೂ ಅಂತಹ ಸಂದೇಶಗಳು ಮತ್ತು APK ಗಳನ್ನು ಎಸ್ ಎಮ್ ಎಸ್ ಅಥವಾ ವಾಟ್ಸ್​ಆ್ಯಪ್ ಮೂಲಕ ಹಂಚಿಕೊಳ್ಳುವುದಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ. ಅಂತಹ ಯಾವುದೇ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ ಮತ್ತು ಅಪರಿಚಿತ ಫೈಲ್‌ಗಳನ್ನು ಡೌನ್‌ಲೋಡ್ ಮಾಡಬೇಡಿ. ಸುರಕ್ಷಿತವಾಗಿರಿ’’ ಎಂದು ಹೇಳಿಕೊಂಡಿದೆ.

ಹೀಗಾಗಿ ವಂಚಕರು ಗ್ರಾಹಕರ ಮೊಬೈಲ್ ಫೋನ್‌ಗಳಿಗೆ ನಕಲಿ ಸಂದೇಶಗಳು ಮತ್ತು ಎಪಿಕೆ ಲಿಂಕ್‌ಗಳನ್ನು ಕಳುಹಿಸುತ್ತಿರುವುದು ಸ್ಪಷ್ಟವಾಗಿದೆ. ಆದರೆ ಅಂತಹ ಯಾವುದೇ ಸಂದೇಶವನ್ನು ಕಳುಹಿಸಿರುವುದನ್ನು ಎಸ್‌ಬಿಐ ನಿರಾಕರಿಸಿದೆ. ಆದ್ದರಿಂದ, ನಿಮಗೆ ಆ ರೀತಿಯ ಯಾವುದೇ ಲಿಂಕ್ ಬಂದರೆ ಅನ್ನು ಕ್ಲಿಕ್ ಮಾಡಬೇಡಿ ಮತ್ತು ವಂಚಕರ ಬಗ್ಗೆ ಎಚ್ಚರದಿಂದಿರಿ.

ಇಂತಹ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡುವ ಮೂಲಕ, ನಿಮ್ಮ ಫೋನ್ ಮಾಲ್‌ವೇರ್ ಅಥವಾ ವೈರಸ್‌ಗೆ ಗುರಿಯಾಗಬಹುದು. ಇದರಿಂದಾಗಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಬ್ಯಾಂಕ್ ಖಾತೆ ವಿವರಗಳು, ಪಾಸ್‌ವರ್ಡ್‌ಗಳು ಇತ್ಯಾದಿಗಳನ್ನು ಕದಿಯಬಹುದು. ಹಾಗಾಗಿ ಈ ಕೆಳಗೆ ತಿಳಿಸಿರುವ ಮಾಹಿತಿ ಬಗ್ಗೆ ಗಮನವಿರಲಿ.

ಅಪರಿಚಿತ ಲಿಂಕ್‌ಗಳು ಅಥವಾ ಫೈಲ್‌ಗಳನ್ನು ಡೌನ್‌ಲೋಡ್ ಮಾಡಬೇಡಿ: ನೀವು ಯಾವುದೇ ಅನುಮಾನಾಸ್ಪದ ಸಂದೇಶ ಅಥವಾ ಲಿಂಕ್ ಅನ್ನು ಸ್ವೀಕರಿಸಿದರೆ, ಅದರ ಮೇಲೆ ಕ್ಲಿಕ್ ಮಾಡಬೇಡಿ ಅಥವಾ ಯಾವುದೇ APK ಫೈಲ್ ಅನ್ನು ಡೌನ್‌ಲೋಡ್ ಮಾಡಬೇಡಿ.

ನಕಲಿ ಸಂದೇಶಗಳನ್ನು ವರದಿ ಮಾಡಿ: ಅಂತಹ ಯಾವುದೇ ಸಂದೇಶಗಳು ನಿಮಗೆ ಬಂದರೆ ಅದನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ವರದಿ ಮಾಡಿ ಮತ್ತು ಅದರ ಬಗ್ಗೆ ಜನರಿಗೆ ಅರಿವು ಮೂಡಿಸಿ.

ಸೈಬರ್ ಭದ್ರತೆಗೆ ಗಮನ ಕೊಡಿ: ವಿಶ್ವಾಸಾರ್ಹ ಮೂಲಗಳಿಂದ ಮಾತ್ರ ನಿಮ್ಮ ಫೋನ್ ಮತ್ತು ಇತರ ಸಾಧನಗಳಿಗೆ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿ.

ಒಟ್ಟಾರೆಯಾಗಿ ಹೇಳುವುದಾದರೆ, ಎಸ್‌ಬಿಐ ಎಂದಿಗೂ ಅಂತಹ ಸಂದೇಶಗಳು ಮತ್ತು APK ಗಳನ್ನು ಎಸ್ ಎಮ್ ಎಸ್ ಅಥವಾ ವಾಟ್ಸ್​ಆ್ಯಪ್ ಮೂಲಕ ಹಂಚಿಕೊಳ್ಳುವುದಿಲ್ಲ, ಹಾಗಾಗಿ ಅಂತಹ ಯಾವುದೇ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ ಎಂದು PIB ಫ್ಯಾಕ್ಟ್‌ಚೆಕ್ ವರದಿ ಮಾಡಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಸಿದ್ದಿ ವಿನಾಯಕ ದೇವಸ್ಥಾನದ ಆಸ್ತಿಯು ವಕ್ಫ್‌ ಬೋರ್ಡ್‌ಗೆ ಸೇರಿದೆ ಎಂದು ನಕಲಿ ಪೋಸ್ಟ್‌ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights