FACT CHECK | ತಮಿಳು ಚಿತ್ರ ನಟಿ ಜ್ಯೋತಿಕಾ ಅವರ ಈ ಅಶ್ಲೀಲ ಚಿತ್ರ ನಕಲಿ
ಬಾಲಿವುಡ್ ನಟ ಅಕ್ಷಯ್ ಕುಮಾರ್ ಹಾಗೂ ದಕ್ಷಿಣ ಭಾರತದ ಖ್ಯಾತ ನಟಿ ಜ್ಯೋತಿಕಾ ಜೊತೆಗಿರುವ ಫೋಟೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ನಟಿ ಜ್ಯೋತಿಕಾ ಅವರ ಚಿತ್ರ ನೋಡಲು ಅಶ್ಲೀಲವಾಗಿ ಕಾಣುತ್ತಿದ್ದು ಚಿತ್ರದ ಬಗ್ಗೆ ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ.
ಬಾಲಿವುಡ್ ಫನ್ನ್ ಎಂಬ ಖಾತೆಯಿಂದ ಈ ಚಿತ್ರವನ್ನು ಹಂಚಿಕೊಳ್ಳಲಾಗಿದೆ. ‘ಅಕ್ಷಯ್ ಕುಮಾರ್ ಈಗ ತಮ್ಮ ಫಾರ್ಮ್‌ಹೌಸ್‌ನಲ್ಲಿ ವಿಶೇಷ ಸೇವೆ ಆರಂಭಿಸಿದ್ದು, ಜನರಿಗೆ ಪ್ರಕೃತಿಗೆ ಹತ್ತಿರವಾಗಲು ಅವಕಾಶ ಸಿಗಲಿದೆ ಎಂಬ ಸುದ್ದಿ ಬಂದಿದೆ. ಇದರಿಂದ ಅಕ್ಷಯ್ ಅವರ ಅಭಿಮಾನಿಗಳು ತುಂಬಾ ಉತ್ಸುಕರಾಗಿದ್ದಾರೆ. ಅವರ ಸರಳತೆ ಮತ್ತು ಸ್ಪೂರ್ತಿದಾಯಕ ಜೀವನಶೈಲಿ ಅವರನ್ನು ಯಾವಾಗಲೂ ಎಲ್ಲರ ನೆಚ್ಚಿನ ನಟನಾಗಿ ಇರಿಸಿದೆ’ ಎಂದು ಇದರಲ್ಲಿ ಬರೆಯಲಾಗಿದೆ.
ಜೊತೆಗೆ ಸೌತ್ ಇಂಡಸ್ಟ್ರಿಯ ಬೆಸ್ಟ್ ನಟಿ ಜ್ಯೋತಿಕಾ ಸಿನಿಮಾವೊಂದರಲ್ಲಿ ಪ್ರಿನ್ಸಿಪಾಲ್ ಪಾತ್ರದಲ್ಲಿ ನಟಿಸುವ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಅವರ ಈ ಪಾತ್ರ ಅವರಿಗೆ ಜನಪ್ರಿಯತೆ ತಂದುಕೊಟ್ಟಿದ್ದಲ್ಲದೆ, ಪ್ರೇಕ್ಷಕರ ಹೃದಯದಲ್ಲಿ ವಿಶೇಷ ಸ್ಥಾನವನ್ನೂ ಕಲ್ಪಿಸಿತ್ತು ಎಂದು ಈ ಫೋಟೋ ಜೊತೆ ಬರೆಯಲಾಗಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ಚಿತ್ರದ ಬಗ್ಗೆ ಹಲವರು ಅನುಮಾನ ವ್ಯಕ್ತಪಡಿಸಿದ್ದು, ಈ ಚಿತ್ರದದ ಅಸಲೀಯತ್ತೇನು ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಈ ಚಿತ್ರ ಅಸಲಿ ಅಲ್ಲ ಎಂದು ತಿಳಿದು ಬಂದಿದೆ. ಈ ಚಿತ್ರವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಇದು ಈಗಿನದ್ದಲ್ಲ ಜುಲೈ 12, 2024ರದ್ದು. ಹಾಗೂ ಮೂಲ ಚಿತ್ರವನ್ನು ಎಡಿಟ್ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
View this post on Instagram
ಇದರ ಮೂಲ ಚಿತ್ರವನ್ನು ಸ್ವತಃ ಜ್ಯೋತಿಕಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. ಅದನ್ನು ತಿರುಚಿ ಈ ರೀತಿ ಹಂಚಿಕೊಳ್ಳಲಾಗುತ್ತಿದೆ ಎಂದು ತಿಳಿದು ಬಂದಿದೆ.
在 Instagram 查看这篇帖子
ಅಕ್ಷಯ್ ಕುಮಾರ್ ಜೊತೆಯಲ್ಲಿ ನಟಿ ಜ್ಯೋತಿಕಾ ಚಿತ್ರವನ್ನು ಎಡಿಟ್ ಮಾಡಿದಂತೆ, ಮತ್ತೊಬ್ಬ ನಟಿಯ ಚಿತ್ರವನ್ನು ಎಡಿಟ್ ಮಾಡಿ ಹಂಚಿಕೊಂಡಿರುವುದಲ್ಲಿ ನೀವು ಇಲ್ಲಿ ನೋಡಬಹುದು.
ಸೂರ್ಯ ನಟನೆಯ ಯಶಸ್ವಿ ಚಿತ್ರ ಸೂರರೈ ಪೊಟ್ರುನ ಹಿಂದಿ ರಿಮೇಕ್ ಸರ್ಫೀರಾದ ಬಿಡುಗಡೆ ಸಂದರ್ಭದಲ್ಲಿ ಜ್ಯೋತಿಕಾ ಈ ಪೋಸ್ಟ್ ಹಾಕಿದ್ದರು. ‘ಅತ್ಯಂತ ಅರ್ಹವಾದ ಯಶಸ್ಸು ಮತ್ತು ಹೃದಯಸ್ಪರ್ಶಿ ಅಭಿನಯಕ್ಕಾಗಿ ಅಕ್ಷಯ್ ಕುಮಾರ್‌ಗೆ ಶುಭಾಶಯಗಳು. ಫ್ಯಾನ್ ಆಗಿ ತನ್ನ ಬೆಡ್‌ರೂಮ್‌ನಲ್ಲಿ ನಿಮ್ಮ ಪೋಸ್ಟರ್‌ನಿಂದ ಈಗ ನಿಮ್ಮ ವಿಶೇಷ 150ನೇ ಚಿತ್ರಕ್ಕೆ ನಿರ್ಮಾಪಕಿಯಾಗಿರುವುದು ನಿಜವಾಗಿಯೂ ನನಗೆ ಸಂತಸದ ಕ್ಷಣ’ ಎಂದು ಬರೆದುಕೊಂಡಿದ್ದರು. ಅದರ ಜೊತೆಗೆ ಅಕ್ಷಯ್ ಕುಮಾರ್ ಜೊತೆಗಿರುವ ಚಿತ್ರವನ್ನೂ ಪೊಸ್ಟ್ ಮಾಡಿದ್ದರು.
ಚಿತ್ರದ ರಿವರ್ಸ್ ಇಮೇಜ್ ಹುಡುಕಾಟದ ವೇಳೆಯೇ ಈ ಪೋಸ್ಟ್ ಸಂದರ್ಭದಲ್ಲಿ ದಿನಮಣಿ, ಪಿಂಕ್‌ವಿಲ್ಲಾದಲ್ಲಿ ಪಬ್ಲಿಷ್ ಆದ ವರದಿಗಳೂ ಸಿಕ್ಕಿದವು. ‘ಜುಲೈ 12ರಂದು ಸಿನಿಮಾ ಬಿಡುಗಡೆ ವೇಳೆ ಜ್ಯೋತಿಕಾ ಅವರು ಸಿನಿಮಾಗೆ ಶುಭಕೋರಿದ್ದಾರೆ’ ಎಂದು ದಿನಮಣಿಯ ವರದಿಯಲ್ಲಿ ಹೇಳಲಾಗಿದೆ. ವರದಿಯಲ್ಲಿ ಇನ್‌ಸ್ಟಾಗ್ರಾಮ್ ಪೋಸ್ಟ್‌ನ್ನೂ ಲಗತ್ತಿಸಲಾಗಿದೆ.
ಜ್ಯೋತಿಕಾ ಅಕ್ಷಯ್ ಕುಮಾರ್‌ಗೆ ಹೃದಯಪೂರ್ವಕ ಟಿಪ್ಪಣಿಯನ್ನು ಬರೆದಿದ್ದಾರೆ. ಈ ಸಂದರ್ಭದಲ್ಲಿ ತನ್ನ ಕೋಣೆಯಲ್ಲಿ ಪೋಸ್ಟರ್ ಇದ್ದಿದ್ದನ್ನೂ ನೆನಪಿಸಿಕೊಂಡಿದ್ದಾರೆ ಎಂದು ಪಿಕ್‌ವಿಲ್ಲಾ ಶೀರ್ಷಿಕೆಯಲ್ಲಿ ಉಲ್ಲೇಖವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಅಕ್ಷಯ್ ಕುಮಾರ್ ಜೊತೆಗಿರುವ ಜ್ಯೋತಿಕಾ ಅವರ ಅಶ್ಲೀಲ ಚಿತ್ರ ಅಸಲಿಯಲ್ಲ ನಕಲಿ ಎಂದು ತಿಳಿದು ಬಂದಿದೆ. ಸ್ವತಃ ಜ್ಯೋತಿಕಾ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದ ಚಿತ್ರವನ್ನು ಎಡಿಟ್ ಮಾಡಿ ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಹಂಚಿಕೊಂಡ ಚಿತ್ರವು ನಕಲಿ ಎಂಬುದು ಸ್ಪಷ್ಟವಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | 7 ಲಕ್ಷ ಅಮೆರಿಕನ್ ಕ್ರಿಶ್ಚಿಯನ್ನರು ಹಿಂದೂ ಧರ್ಮಕ್ಕೆ ಮತಾಂತರಗೊಂಡರೇ?

