FACT CHECK | ಪುಷ್ಪಾ 2 ಚಿತ್ರಕ್ಕೆ ವಿದೇಶದಲ್ಲೂ ಉತ್ತಮ ಸ್ಪಂದನೆ ಎಂದು ಸಂಬಂಧವಿಲ್ಲದ ಫೋಟೊ ಹಂಚಿಕೆ
ಪುಷ್ಪ2 ಚಿತ್ರಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಪುಷ್ಪಾ 2 ಸಿನಿಮಾದ ದೃಶ್ಯವನ್ನು ದೊಡ್ಡ ಪರದೆಯ ಮೇಲೆ ತೋರಿಸಲಾಗಿದೆ. ಇದನ್ನು ನೋಡಿದ ಜನರು ಖುಷಿಯಿಂದ ಕೇಕೆ ಹಾಕುತ್ತಿರುವುದನ್ನು ಕಾಣಬಹುದು. ವಿದೇಶದ ಸಿನಿಮಾ ಮಂದಿರಗಳಿಗೆ ಪುಷ್ಪಾ ಎಂಟ್ರಿ ಕೊಟ್ಟ ಮೇಲೆ ವಿದೇಶಿಗರೂ ಹುಚ್ಚೆದ್ದು ಕುಣಿದಿದ್ದಾರೆ ಎಂದು ಈ ವಿಡಿಯೋವನ್ನು ಹಂಚಿಕೊಳ್ಲಲಾಗಿದೆ.
ಇನ್ಸ್ಟಾಗ್ರಾಮ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡು, ‘‘ಪುಷ್ಪಾ ಸಿನಿಮಾ ಆಗಮನದಿಂದ ವಿದೇಶಿಯರೂ ಹುಚ್ಚರಾದರು. ಫಾರಿನ್ನಲ್ಲಿ ಸಿನಿಮಾ ಹಾಲ್ಗಳು ಹೀಗಿವೆ’’ ಎಂದು ಬರೆದುಕೊಂಡಿದ್ದಾರೆ. ಹಾಗಿದ್ದರೆ ಈ ದೃಶ್ಯಗಳು ಪುಷ್ಪಾ ಚಿತ್ರಕ್ಕೆ ಸಂಬಂಧಿಸಿದೆಯೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಕೀವರ್ಡ್ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, ಜೂನ್ 17, 2016 ರಂದು ಅಪ್ಲೋಡ್ ಮಾಡಿದ ಈ ವಿಡಿಯೋದಲ್ಲಿ, ಯೂರೋ 2016ರ ಫುಟ್ಬಾಲ್ ಪಂದ್ಯವು ನಡೆಯುತ್ತಿದೆ.
2016 ರ ಈ ವಿಡಿಯೋವನ್ನು ಎಡಿಟ್ ಮಾಡಿ ಸಿದ್ಧಪಡಿಸಲಾಗಿದೆ ಎಂಬುದು ತಿಳಿದುಬಂದಿದೆ. ಮೂಲ ವಿಡಿಯೋದಲ್ಲಿ ಜನರು ಸಿನಿಮಾ ನೋಡದೆ ಫುಟ್ಬಾಲ್ ಪಂದ್ಯವನ್ನು ವೀಕ್ಷಿಸುತ್ತಿದ್ದರು. ವೈರಲ್ ಕ್ಲಿಪ್ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲು ನಾವು ಗೂಗಲ್ ಓಪನ್ ಸರ್ಚ್ ಟೂಲ್ ಅನ್ನು ಬಳಸಿದ್ದೇವೆ. ವಿಭಿನ್ನ ಕೀವರ್ಡ್ಗಳೊಂದಿಗೆ ಹುಡುಕಿದ ನಂತರ, ಹಾರ್ಟ್ ನ್ಯೂಸ್ ವೆಸ್ಟ್ ಕಂಟ್ರಿ ಎಂಬ ಯೂಟ್ಯೂಬ್ ಚಾನಲ್ನಲ್ಲಿ ನಾವು ಮೂಲ ವಿಡಿಯೋವನ್ನು ಕಂಡುಕೊಂಡಿದ್ದೇವೆ. ಈ ವಿಡಿಯೋದಲ್ಲಿ ದೊಡ್ಡ ಪರದೆಯ ಮೇಲೆ ಫುಟ್ಬಾಲ್ ಪಂದ್ಯ ನಡೆಯುತ್ತಿರುವುದು ಸ್ಪಷ್ಟವಾಗಿ ಕಾಣಬಹುದಾಗಿದೆ.

ಇನ್ನಷ್ಟು ಸರ್ಚ್ ಮಾಡಿದಾಗ, ಬ್ರಿಸ್ಟಲ್ ಸಿಟಿ ಫುಟ್ಬಾಲ್ ಕ್ಲಬ್ನ ವೆಬ್ಸೈಟ್ನಲ್ಲಿ ಈ ಕುರಿತು ಮಾಡಿದ ವರದಿ ಲಭ್ಯವಾಗಿದೆ. ಈ ವರದಿಯಲ್ಲಿ ವೈರಲ್ ಕ್ಲಿಪ್ನಂತಹ ಚಿತ್ರವೂ ಇದೆ. ಬ್ರಿಸ್ಟಲ್ನ ಆಷ್ಟನ್ ಗೇಟ್ ಸ್ಟೇಡಿಯಂನಲ್ಲಿ ವೇಲ್ಸ್ ಮತ್ತು ಇಂಗ್ಲೆಂಡ್ ನಡುವೆ ಫುಟ್ಬಾಲ್ ಪಂದ್ಯ ನಡೆದಿದೆ ಎಂದು ಹೇಳಲಾಗಿದೆ. ಈ ಪಂದ್ಯದಲ್ಲಿ ಇಂಗ್ಲೆಂಡ್ ಗೆದ್ದಿತ್ತು. ಇಂಗ್ಲೆಂಡ್ ತಂಡ ಗೋಲು ಬಾರಿಸಿದಾಗ ಅಭಿಮಾನಿಗಳು ಖುಷಿಯಿಂದ ಕುಣಿದು ಕುಪ್ಪಳಿಸಿದರು. ಈ ವಿಡಿಯೋ ಆ ಸಮಯದ್ದಾಗಿದೆ. ಈ ವರದಿಯನ್ನು 17 ಜೂನ್ 2016 ರಂದು ಪ್ರಕಟಿಸಲಾಗಿದೆ. ಮೂಲ ವಿಡಿಯೋವನ್ನು ಸಹ ಇಲ್ಲಿ ನೋಡಬಹುದು.
ಒಟ್ಟಾರೆಯಾಗಿ ಹೇಳುವುದಾದರೆ, 2016ರಲ್ಲಿ ಬ್ರಿಸ್ಟಲ್ನ ಆಷ್ಟನ್ ಗೇಟ್ ಸ್ಟೇಡಿಯಂನಲ್ಲಿ ವೇಲ್ಸ್ ಮತ್ತು ಇಂಗ್ಲೆಂಡ್ ನಡುವೆ ನಡೆದ ಫುಟ್ಬಾಲ್ ಪಂದ್ಯದ ದೃಶ್ಯಾವಳಿಗಳನ್ನು ಎಡಿಟ್ ಮಾಡಿ, ಪುಷ್ಪಾ2 ಸಿನಿಮಾ ಆಗಮನದಿಂದ ವಿದೇಶಿಯರೂ ಎಂಜಾಯ್ ಮಾಡುತ್ತಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ವೈರಲ್ ವಿಡಿಯೋ ನಕಲಿ ಎಂದು ಸಾಬೀತಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಸಂಭಾಲ್ ಮಸೀದಿ ಸಮೀಕ್ಷೆ ವೇಳೆ ಹಿಂದೂ ದೇವರ ಪ್ರತಿಮೆಗಳು ಪತ್ತೆಯಾಗಿವೆಯೇ?

