FACT CHECK | ಗುಂಡಿ ಬಿದ್ದ ದೆಹಲಿ ರಸ್ತೆ ಎಂದು BJP ಹಂಚಿಕೊಂಡ ಫೋಟೊದ ಅಸಲೀಯತ್ತೇನು ಗೊತ್ತೇ?

ದೆಹಲಿ ವಿಧಾನಸಭೆ ಚುನಾವಣೆ 2025ರಲ್ಲಿ ನಡೆಯಲಿದೆ. ಸತತ ಎರಡು ಬಾರಿ ಭಾರೀ ಬಹುಮತದೊಂದಿಗೆ ಗೆದ್ದು ಗದ್ದುಗೆ ಹಿಡಿದಿರುವ ಆಮ್‌ ಆದ್ಮಿ ಪಕ್ಷ (ಎಎಪಿ) ಒಂದು ಕಡೆಯಾದರೆ, ಶತಾಯ ಗತಾಯ ರಾಷ್ಟ್ರ ರಾಜಧಾನಿಯ ಚುಕ್ಕಾಣಿ ಹಿಡಯಲೇಬೇಕು ಎಂದು ಹೊರಟಿರುವ ಬಿಜೆಪಿ ಇನ್ನೊಂದು ಕಡೆ ಪೈಪೋಟಿಗೆ ಇಳಿದಿವೆ. ಇದೇ ಹೊತ್ತಲ್ಲಿ ಗುಂಡಿ ಬಿದ್ದಿರುವ ರಸ್ತೆಯ ಚಿತ್ರವೊಂದು ವೈರಲ್‌ ಆಗಿದ್ದು, ದಿಲ್ಲಿಯದ್ದು ಎಂದು ಹೇಳಲಾಗಿದೆ.

ಬಿಜೆಪಿಯ ಸಾಮಾಜಿಕ ಮಾಧ್ಯಮ ವಿಭಾಗದ ಉಸ್ತುವಾರಿ ಅಮಿತ್ ಮಾಳವೀಯಾ ಹಂಚಿಕೊಂಡಿರುವ ಪೋಸ್ಟರ್‌ನಲ್ಲಿ  ರಸ್ತೆಯು  ಗುಂಡಿಗಳಿಂದ ತುಂಬಿರುವುದು ಮತ್ತು ಅವುಗಳನ್ನು ತಪ್ಪಿಸಲು ಹರಸಾಹಸ ನಡೆಸುತ್ತಿರುವ ಬೈಕ್‌ ಸವಾರನಿರುವ ಫೋಟೋವೊಂದಿದೆ.  ಈ ಪೋಸ್ಟರ್‌ನಲ್ಲಿ “ಆಪ್‌ ಸರ್ಕಾರದ ಸುಳ್ಳು – ಲಂಡನ್ ಪ್ಯಾರಿಸ್ ನಂತಹ ರಸ್ತೆಗಳ ನಿರ್ಮಾಣ ದೆಹಲಿಯ ಸತ್ಯ: ರಸ್ತೆಯಿಡೀ ಗುಂಡಿಗಳು. ನಾವಿನ್ನು ಸಹಿಸುವುದಿಲ್ಲ ಬದಲಾಯಿಸಿಯೇ ತೀರುತ್ತೇವೆ” ಎಂಬ ಸಂದೇಶವಿದೆ.  ಈ ಪೋಸ್ಟರ್‌ನ ಮೇಲೆ “ಸ್ವಲ್ಪ ಮಳೆಯ ನಂತರ ದೆಹಲಿಯ ಪರಿಸ್ಥಿತಿ” ಎಂದು ಅಮಿತ್‌ ಮಾಳವೀಯ ಬರೆದುಕೊಂಡಿದ್ದಾರೆ.

Image

ಪೋಸ್ಟ್‌ನಲ್ಲಿ ಇರುವ ಚಿತ್ರದಲ್ಲಿ ಗುಂಡಿ ಬಿದ್ದ ರಸ್ತೆಯ ಮೇಲೆ ಬೈಕ್ ಸವಾರನೊಬ್ಬ ಸಂಚರಿಸುತ್ತಿರುವುದನ್ನು ಕಾಣಬಹುದು. ರಸ್ತೆಯಲ್ಲಿ ಅನೇಕ ಗುಂಡಿಗಳೂ ಇವೆ. ಇದು ಯಾವ ರಸ್ತೆ, ಯಾವ ಮಾರ್ಗದ ರಸ್ತೆಯಲ್ಲಿ ಈ ಗುಂಡಿ ಇದೆ ಎಂಬ ಯಾವೊಂದು ಮಾಹಿತಿಯನ್ನೂ ಅವರು ಹಂಚಿಕೊಂಡಿಲ್ಲ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಬಿಜೆಪಿ ಐಟಿ ಸೆಲ್‌ನ ಮುಖ್ಯಸ್ಥ ಅಮಿತ್ ಮಾಳವೀಯ ಹಂಚಿಕೊಂಡಿರುವ ಚಿತ್ರವನ್ನು ಪರಿಶೀಲಿಸಲು  ‘ಟ್ರೂ ಮೀಡಿಯಾ ಆರ್ಗ್’ನಲ್ಲಿ ಪೋಸ್ಟ್‌ನಲ್ಲಿರುವ ಚಿತ್ರವನ್ನು ಪರಿಶೀಲನೆಗೆ ಒಳಪಡಿಸಿದಾಗ ಇದು ಎಐ ಬಳಸಿ ರಚಿಸಿದ ಚಿತ್ರ ಎಂದು ತಿಳಿಸು ಬಂದಿದೆ. ಈ ಫೋಟೋವನ್ನು ತಿರುಚಲಾಗಿದೆ ಎಂದು ದೃಢಪಡಿಸಿತು.

ದೆಹಲಿಯಲ್ಲಿ ಆಪ್‌ ಸರ್ಕಾರವನ್ನು ಗುರಿಯಾಗಿಸಿ ಹಲವು ಸುಳ್ಳು ಸುದ್ದಿಗಳನ್ನು ಹರಡಿದ ಕುಖ್ಯಾತಿ ಪಡೆದಿರುವ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಮತ್ತೊಮ್ಮ  ಮುಖಭಂಗಕ್ಕೊಳಗಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಮಿತ್ ಮಾಳವೀಯ  ಹಂಚಿಕೊಂಡಿರುವ ರಸ್ತೆಯ ಫೋಟೋವೊಂದು ಫ್ಯಾಕ್ಟ್‌ಚೆಕರ್‌ ಹಾಗೂ ಆಲ್ಟ್‌ ನ್ಯೂಸ್‌ ಸಹ ಸಂಪಾದಕ ಮುಹಮ್ಮದ್‌ ಝುಬೇರ್‌ ಹಂಚಿಕೊಂಡ ಬಳಿಕ  ವೈರಲ್ ಆಗಿದೆ. ಮುಹಮ್ಮದ್‌ ಝುಬೇರ್‌ ಹಂಚಿಕೊಂಡಿರುವ ಅಮಿತ್‌ ಮಾಳವೀಯ ಹಂಚಿಕೊಂಡಿರುವ ದೆಹಲಿ ಬಿಜೆಪಿ ಪೋಸ್ಟರ್‌ನ ಚಿತ್ರದಲ್ಲಿ ರಸ್ತೆಗಳು ಗುಂಡಿಗಳಿಂದ ತುಂಬಿರುವುದನ್ನು ಗಮನಿಸಿ “ಚೆನ್ನಾಗಿ ಎಡಿಟ್‌ ಮಾಡಿದ್ದೀರಿ @amitmalviya”  ಎಂದು ಕಾಲೆಳೆದಿದ್ದರು.

ಇದನ್ನು ಮತ್ತಷ್ಟು ಖಚಿತಪಡಿಸಿಕೊಳ್ಳಲು ಈ ಚಿತ್ರವನ್ನು ಗೂಗಲ್ ರಿವರ್ಸ್ ಇಮೇಜಸ್‌ನ್ಲಿ ಸರ್ಚ್ ಮಾಡಿದಾಗ, ಫೋಟೋ ಏಜೆನ್ಸಿ ಗೆಟ್ಟಿಯ ಚಿತ್ರ ಲಭ್ಯವಾಗಿದೆ. ಇದರಲ್ಲಿರುವ ಬೈಕ್‌ನ ಚಿತ್ರ ಹಾಗೂ ಅಮಿತ್‌ ಮಾಳವೀಯ ಹಂಚಿಕೊಂಡಿರುವ ಚಿತ್ರದಲ್ಲಿರುವ ಬೈಕ್‌ ಸವಾರನ ಚಿತ್ರ ಒಂದೇ ಆಗಿದೆ. ಇದನ್ನು ಇಟ್ಟುಕೊಂಡು ಚಿತ್ರವನ್ನು ಎಡಿಟ್‌ ಮಾಡಲಾಗಿದೆ ಎಂಬುದು ಸ್ಪಷ್ಟವಾಗಿದೆ. ಗೆಟ್ಟಿಯ ಚಿತ್ರವನ್ನು ನೋಡಲು ಇಲ್ಲಿ ಕ್ಲಿಕ್‌ ಮಾಡಿ.

ಒಟ್ಟಾರೆಯಾಗಿ ಹೇಳುವುದಾದರೆ, ದಿಲ್ಲಿಯ ರಸ್ತೆಗಳು ಎಂದು ಅಮಿತ್‌ ಮಾಳವೀಯ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ಚಿತ್ರವನ್ನು ಎಐ ಬಳಸಿ ರಚಿಸಿ ಸುಳ್ಳು ಪ್ರತಿಪಾದನೆಯೊಂದಿಗೆ ದಿಲ್ಲಿಯ ರಸ್ತೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ನಡೆದ ಉತ್ಖನನದಲ್ಲಿ ಮಸೀದಿ ಪತ್ತೆಯಾಗಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights