FACT CHECK | ನಟ ಶಾರುಖ್ ದಂಪತಿ ಮೆಕ್ಕಾದಲ್ಲಿ ಎಂದು AI ನಿಂದ ರಚಿಸಲಾದ ಫೋಟೊ ಹಂಚಿಕೆ

ಬಾಲಿವುಡ್ ನಟ ಶಾರುಖ್ ಖಾನ್ ಮತ್ತು ಪತ್ನಿ ಗೌರಿ ಮೆಕ್ಕಾದಲ್ಲಿರುವ ಫೋಟೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. 33 ವರ್ಷಗಳ ದಾಂಪತ್ಯದ ನಂತರ ಗೌರಿ ಇಸ್ಲಾಂಗೆ ಮತಾಂತರಗೊಂಡಿದ್ದಾರೆ ಎಂಬ ಹೇಳಿಕೆಯೊಂದಿಗೆ ಇದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

Fact Check: ಮೆಕ್ಕಾದಲ್ಲಿ ಶಾರುಖ್ ಖಾನ್ ಮತ್ತು ಗೌರಿ ಖಾನ್, ಎಐ ಫೋಟೋ ವೈರಲ್!

ಇದೆ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಳ್ಳುತ್ತಿದ್ದು, ಪೋಸ್ಟ್ ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಗೌರಿ ಖಾನ್ ನಿಜವಾಗಿಯೂ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆಯೇ ಎಂದು ಪರಿಶೀಲಿಸಲು ಕೀವರ್ಡ್ ಬಳಸಿ ಗೂಗಲ್ ಸರ್ಚ್ ಮಾಡಿದಾಗ,  ಗೌರಿ ಇಸ್ಲಾಂಗೆ ಮತಾಂತರಗೊಂಡಿದ್ದಾರೆ ಎಂದು ಹೇಳುವ ಯಾವುದೇ ಸುದ್ದಿ ವರದಿಗಳು ಲಭ್ಯವಾಗಿಲ್ಲ.

Fact Check: ಮೆಕ್ಕಾದಲ್ಲಿ ಶಾರುಖ್ ಖಾನ್ ಮತ್ತು ಗೌರಿ ಖಾನ್, ಎಐ ಫೋಟೋ ವೈರಲ್!

ಆದರೆ, ಅಕ್ಟೋಬರ್ 8, 2024 ರ ಟೈಮ್ಸ್ ಆಫ್ ಇಂಡಿಯಾ ವರದಿ ಲಭ್ಯವಾಗಿದ್ದು, ಅದರಲ್ಲಿ, “ಗೌರಿ ಕಾಫಿ ವಿತ್ ಕರಣ್‌ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು, ಅವರು ಮದುವೆಯ ನಂತರ ತಮ್ಮ ಧಾರ್ಮಿಕ ಗುರುತನ್ನು ತೆರೆದಿಟ್ಟರು ಮತ್ತು ‘ನಮ್ಮ ನಡುವೆ ಸಾಮರಸ್ಯವಿದೆ. ನಾನು ಶಾರುಖ್ ಅವರ ಧರ್ಮವನ್ನು ಗೌರವಿಸುತ್ತೇನೆ, ಆದರೆ ಅದರರ್ಥ ನಾನು ಮತಾಂತರಗೊಂಡು ಮುಸ್ಲಿಮ್ ಆಗುತ್ತೇನೆ ಎಂದಲ್ಲ. ನಾನು ಅದನ್ನು ನಂಬುವುದಿಲ್ಲ. ಪ್ರತಿಯೊಬ್ಬರೂ ಒಬ್ಬ ವ್ಯಕ್ತಿ ಮತ್ತು ಅವರ ಧರ್ಮವನ್ನು ಅನುಸರಿಸುತ್ತಾರೆ. ಸಹಜವಾಗಿ, ಪರಸ್ಪರ ಗೌರವ ಇರಬೇಕು. ಶಾರುಖ್ ಎಂದಿಗೂ ನನ್ನ ಧರ್ಮಕ್ಕೆ ಅಗೌರವ ತೋರಿಸುವುದಿಲ್ಲ ಮತ್ತು ನಾನು ಅವರಿಗೆ ಅಗೌರವ ತೋರಿಸುವುದಿಲ್ಲ’ ಎಂದು ಹೇಳಿದ್ದಾರೆ. ಇದೇ ರೀತಿಯ ವರದಿಯನ್ನು ಇಲ್ಲಿ ನೋಡಬಹುದು.

ಅಕ್ಟೋಬರ್ 8, 2024 ರ ನ್ಯೂಸ್ 18 ವರದಿಯ ಪ್ರಕಾರ, ಕಾಫಿ ವಿತ್ ಕರಣ್ ನ ಮೊದಲ ಸೀಸನ್ನಲ್ಲಿ ಕರಣ್ ಜೋಹರ್ ಅವರೊಂದಿಗಿನ ಸಂಭಾಷಣೆಯಲ್ಲಿ, ಗೌರಿ ಖಾನ್ ಅವರು ಶಾರುಖ್ ಖಾನ್ ಅವರ ಧರ್ಮದ ಬಗ್ಗೆ ಅಪಾರ ಗೌರವವಿದೆ, ಆದರೆ ಅವರು ಎಂದಿಗೂ ಇಸ್ಲಾಂಗೆ ಮತಾಂತರಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಗೌರಿ ಅವರು ಹಿಂದೂ ಧರ್ಮದವರಾಗಿದ್ದಾರೆ.

Fact Check: ಮೆಕ್ಕಾದಲ್ಲಿ ಶಾರುಖ್ ಖಾನ್ ಮತ್ತು ಗೌರಿ ಖಾನ್, ಎಐ ಫೋಟೋ ವೈರಲ್!

ಅನಂತರ ಪೋಟೊವನ್ನು ಎಐ ಬಳಸಿ ರಚಿಸಲಾಗಿದೆಯೇ ಅಥವಾ ಇದು ನಿಜವಾದದ್ದೇ ಎಂದು ಖಚಿತಪಡಿಸಿಕೊಳ್ಳಲು ಅನೇಕ ಎಐ- ಡಿಟೆಕ್ಟರ್ ಪ್ಲಾಟ್ ಫಾರ್ಮ್ ಗಳ ಮೂಲಕ ಚಿತ್ರವನ್ನು ಪರೀಕ್ಷಿಸಿದ್ದೇವೆ. ಮೆಕ್ಕಾದಲ್ಲಿ ಶಾರುಖ್ ಖಾನ್ ಮತ್ತು ಗೌರಿ ಖಾನ್ ಅವರ ವೈರಲ್ ಚಿತ್ರದಲ್ಲಿ “ತಂತ್ರಜ್ಞಾನ ಕುಶಲತೆಯ ಹೆಚ್ಚಿನ ಸಾಕ್ಷ್ಯಗಳನ್ನು ಟ್ರೂ ಮೀಡಿಯಾ ಕಂಡುಕೊಂಡಿದೆ.

Fact Check: ಮೆಕ್ಕಾದಲ್ಲಿ ಶಾರುಖ್ ಖಾನ್ ಮತ್ತು ಗೌರಿ ಖಾನ್, ಎಐ ಫೋಟೋ ವೈರಲ್!

ಇನ್ನೊಂದು ಎಐ-ಇಮೇಜ್ ಡಿಟೆಕ್ಟರ್ ಹೈವ್ ಮೊಡರೇಶನ್ ,ಮೂಲಕ ಪರಿಶೀಲಿಸಿದಾಗ, ಇದು ಎಐ-ರಚಿಸಿದ ಅಥವಾ ಡೀಪ್ ಫೇಕ್ ವಿಷಯವನ್ನು ಹೊಂದಿರುವ 99.9% ಸಾಧ್ಯತೆಯನ್ನು ತೋರಿಸಿದೆ. ಮತ್ತೊಂದು ಸಾಧನವಾದ ಫೇಕ್ ಇಮೇಜ್ ಡಿಟೆಕ್ಟರ್ ಕೂಡ ಈ ಚಿತ್ರವನ್ನು “ಕಂಪ್ಯೂಟರ್ ಮೂಲಕ ರಚಿಸಲಾಗಿದೆ ಅಥವಾ ಮಾರ್ಪಡಿಸಲಾಗಿದೆ” ಎಂದು ದೃಢಪಡಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಶಾರುಖ್ ಖಾನ್ ಮತ್ತು ಗೌರಿ ಖಾನ್ ಮೆಕ್ಕಾದಲ್ಲಿ ಕಾಣಿಸಿಕೊಂಡಿರುವ ವೈರಲ್ ಫೋಟೋ ಎಂದು ಹೇಳಲಾದ ಫೋಟೋ ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್-ಎಐ) ಮೂಲಕ ರಚಿಸಲಾಗಿದ್ದು, ಇದನ್ನು ನೈಜ ಚಿತ್ರ ಎಂಬಂತೆ ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | 3 ಸಾವಿರ ವರ್ಷಗಳಷ್ಟು ಹಳೆಯದಾದ ಅನಂತ ಪದ್ಮನಾಭಸ್ವಾಮಿಯ ಪ್ರತಿಮೆ ಎಂಬುದು ಸುಳ್ಳು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights