FACT CHECK | WhatsAppಗೆ ಸಂದೇಶಗಳಿಗೆ ಸಂಬಂಧಿಸಿದಂತೆ ಸರ್ಕಾರ ಹೊಸ ನಿಯಮವನ್ನು ಜಾರಿಗೊಳಿಸಿದೆಯೇ?
ಸರ್ಕಾರವು ಹೊಸ ಸಂವಹನ ನಿಯಮಗಳನ್ನು ಜಾರಿಗೆ ತರಲು ಯೋಜಿಸಿದೆ ಎಂದು ಇನ್ಫೋಗ್ರಾಫಿಕ್ ಯನ್ನು ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್ಅನ್ನು ಹಂಚಿಕೊಳ್ಳುತ್ತಿದ್ದಾರೆ. ಅದರ ಅಡಿಯಲ್ಲಿ ಎಲ್ಲಾ ಕರೆಗಳು ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳು ಸರ್ಕಾರದ ಮೇಲ್ವಿಚಾರಣೆಗೆ ಒಳಪಟ್ಟಿರುತ್ತವೆ ಎಂದು ಹೇಳಲಾಗಿದೆ. WhatsApp ಮತ್ತು ಫೋನ್ ಕರೆಗಳಿಗೆ ಹೊಸ ಸಂವಹನ ನಿಯಮಗಳು ನಾಳೆಯಿಂದಲೇ ಜಾರಿಗೆ ಬರಲಿವೆ ಎಂದು ಹೇಳಲಾಗುತ್ತಿದೆ.

ವೈರಲ್ ಪೋಸ್ಟ್ನಲ್ಲಿ ಅನೇಕ ವಿಷಯಗಳನ್ನು ಹೇಳಲಾಗಿದೆ. ಉದಾಹರಣೆಗೆ – ಪ್ರಸ್ತುತ ಯಾವುದೇ ರಾಜಕೀಯ ಅಥವಾ ಧಾರ್ಮಿಕ ವಿಷಯದ ಕುರಿತು ಸಂದೇಶಗಳನ್ನು ಬರೆಯುವುದು ಅಥವಾ ಕಳುಹಿಸುವುದು ಅಪರಾಧ, ಹಾಗೆ ಮಾಡುವುದರಿಂದ ವಾರಂಟ್ ಇಲ್ಲದೆ ಬಂಧನಕ್ಕೆ ಕಾರಣವಾಗಬಹುದು, ಎಲ್ಲಾ ಕರೆಗಳನ್ನು ರೆಕಾರ್ಡ್ ಮಾಡಲಾಗುತ್ತದೆ, ಆದರೆ ಮೇಲ್ವಿಚಾರಣೆಗೆ ಮೂರು ವ್ಯವಸ್ಥೆಗಳಿವೆ. WhatsAppನಲ್ಲಿ ಮೂರು ಟಿಕ್ ಮಾರ್ಕ್ ಇದೆ ಎಂಬ ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವಂತೆ ಯಾವುದೇ ರಾಜಕೀಯ ಅಥವಾ ಧಾರ್ಮಿಕ ವಿಷಯದ ಬಗ್ಗೆ ಮೆಸೇಜ್ಗಳನ್ನು ಬರೆಯುವುದು ಅಥವಾ ಕಳುಹಿಸುವುದು ಅಪರಾಧ ಎಂದು ಸರ್ಕಾರವು ಯಾವುದೇ ನಿಯಮಗಳನ್ನು ತದಿದೆಯೇ ಎಂದು ಪರಿಶೀಲಿಸಿದಾಗ, ದೈನಿಕ್ ಭಾಸ್ಕರ್ ಪ್ರಕಟಿಸಿರುವ ವರದಿಯೊಂದು ಲಭ್ಯವಾಗಿದೆ. “ದೂರಸಂಪರ್ಕ ಮಸೂದೆ” ಅನ್ನು 2023 ರಲ್ಲಿ ಸಂಸತ್ತು ಅಂಗೀಕರಿಸಿದೆ ಎಂದು ಹೇಳಲಾಗಿದೆ.
ಇಂಡಿಯನ್ ಟೆಲಿಗ್ರಾಫ್ ಆಕ್ಟ್, 1885 ಮತ್ತು ಇಂಡಿಯನ್ ವೈರ್ಲೆಸ್ ಟೆಲಿಗ್ರಾಫಿ ಆಕ್ಟ್, 1933 ರ ಬದಲಿಗೆ ಈ ಮಸೂದೆಯನ್ನು ತರಲಾಯಿತು. ದೂರಸಂಪರ್ಕ ಮಸೂದೆ, 2023 ರ ನಿಬಂಧನೆಗಳ ಪ್ರಕಾರ, ರಾಜ್ಯದ ಭದ್ರತೆ, ಇತರ ದೇಶಗಳೊಂದಿಗಿನ ಸೌಹಾರ್ದ ಸಂಬಂಧಗಳು, ಕಾನೂನು ಮತ್ತು ಸುವ್ಯವಸ್ಥೆ ಮತ್ತು ಹಿಂಸಾಚಾರಕ್ಕೆ ಪ್ರಚೋದನೆಯ ಆಧಾರದ ಮೇಲೆ ಮಾತ್ರ ಎರಡು ಅಥವಾ ಹೆಚ್ಚಿನ ವ್ಯಕ್ತಿಗಳ ನಡುವಿನ ಸಂದೇಶಗಳನ್ನು ತಡೆಹಿಡಿಯಬಹುದು, ಮೇಲ್ವಿಚಾರಣೆ ಮಾಡಬಹುದು ಅಥವಾ ನಿರ್ಬಂಧಿಸಬಹುದು ಎಂಬ ಮಾಹಿತಿ ಇದೆ.
ಹಾಗೆಯೆ ಹೊಸ ಮಸೂದೆಯಲ್ಲಿ ಸಿಮ್ ಕಾರ್ಡ್ ವಂಚನೆಗೆ 3 ವರ್ಷ ಜೈಲು ಮತ್ತು 50 ಲಕ್ಷ ರೂ. ದಂಡ ವಿಧಿಸಬಹುದು. ದೂರಸಂಪರ್ಕ ಮಸೂದೆಯನ್ನು ಡಿಸೆಂಬರ್ 20 ರಂದು ಲೋಕಸಭೆ ಮತ್ತು ಡಿಸೆಂಬರ್ 21 ರಂದು ರಾಜ್ಯಸಭೆ ಅನುಮೋದಿಸಿತು. ಹಾಗೆಯೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಡಿಸೆಂಬರ್ 24, 2023 ರಂದು ಅನುಮೋದಿಸಿದರು ಎಂದು ಬರೆಯಲಾಗಿದೆ.
21.06.2024 ರಂದು ಕೇಂದ್ರ ಸರ್ಕಾರವು ದೂರಸಂಪರ್ಕ ಕಾಯ್ದೆಯ ಸೆಕ್ಷನ್ 1, 2, 10 ರಿಂದ 30, 42 ರಿಂದ 44, 46, 47, 50 ರಿಂದ 58, 61 ರವರೆಗೆ ತಿದ್ದುಪಡಿ ಮಾಡಿದೆ ಎಂದು ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (ಪಿಐಬಿ) ಪತ್ರಿಕಾ ಪ್ರಕಟಣೆ ತಿಳಿಸಿದೆ.
62 ಅನ್ನು ಕಾರ್ಯಗತಗೊಳಿಸಲು ಗೆಜೆಟ್ ಅಧಿಸೂಚನೆಯನ್ನು ಹೊರಡಿಸಿದೆ.
ಇದಲ್ಲದೆ, ಈ ವೈರಲ್ ಸಂದೇಶದಲ್ಲಿ ವಾಟ್ಸ್ಆ್ಯಪ್ಗೆ ಸಂಬಂಧಿಸಿದ ಮೂರು ಟಿಕ್ಗಳನ್ನು ಕ್ಲೈಮ್ ಮಾಡಲಾಗಿದೆ. ಮೂರು ನೀಲಿ ಟಿಕ್ ಬಂತು ಎಂದರೆ ಸರ್ಕಾರದ ಸಂದೇಶ ಟಿಪ್ಪಣಿಯಂತೆ. ಎರಡು ನೀಲಿ ಮತ್ತು ಒಂದು ಕೆಂಪು ಟಿಕ್ ಎಂದರೆ ಸರ್ಕಾರವು ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂದು ವೈರಲ್ ಆಗುತ್ತಿರುವುದರಲ್ಲಿದೆ.
ನ ಫೀಚರ್ಸ್ ಇಲ್ಲವೇ ಇಲ್ಲ!
ಟಿಕ್ ಮಾರ್ಕ್ಗಳಿಗೆ ಸಂಬಂಧಿಸಿದ ಮಾಹಿತಿಯನ್ನು ‘WhatsApp’ ವೆಬ್ಸೈಟ್ನಲ್ಲಿ ನೋಡಬಹುದು. FAQ ವಿಭಾಗದಲ್ಲಿ, ಒಂದೇ ಟಿಕ್ ಮಾರ್ಕ್ ಮತ್ತು ಎರಡು ಟಿಕ್ ಮಾರ್ಕ್ಗಳ ಬಗ್ಗೆ ಮಾಹಿತಿ ಇದೆ, ಆದರೆ ಅವರ ಪ್ಲಾಟ್ಫಾರ್ಮ್ನಲ್ಲಿ ಮೂರು ಟಿಕ್ ಮಾರ್ಕ್ಗಳ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಹಾಗಾಗಿ ವಾಟ್ಸಾಪ್ ನಲ್ಲಿ ಅಂತಹ ಯಾವುದೇ ಫೀಚರ್ ಇಲ್ಲ.
ಇನ್ನು ಸಂದೇಶಗಳ ವಿನಿಮಯಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಿಟ್ಟು ಮೂರನೇ ವ್ಯಕ್ತಿ ಇಲ್ಲಿಯ ಸಂದೇಶಗಳನ್ನು ಓದಲು ಸಾಧ್ಯವೇ ಎಂದು ಪರಿಶೀಲಿಸಲು ವೆಬ್ಸೈಟ್ ಸರ್ಚ್ ಮಾಡಿದಾಗ ಅಂತಹ ಸಾಧ್ಯತೆಗಳಿಲ್ಲ ಎಂದು ಉಲ್ಲೇಖಿಸಿದೆ.
ಒಟ್ಟಾರೆಯಾಗ ಹೇಳುವುದಾದರೆ, WhatsApp ನಲ್ಲಿ ಯಾವುದೇ ‘ಮೂರು ಟಿಕ್ ಮಾರ್ಕ್ಸ್’ ವೈಶಿಷ್ಟ್ಯವಿಲ್ಲ. ಅಲ್ಲದೆ, ಸರ್ಕಾರವು ಸಂದೇಶಗಳನ್ನು ಓದಲು ಸಾಧ್ಯವಾಗುವುದಿಲ್ಲ. ಈ ಸಂದೇಶ 2019ರಿಮದಲೂ ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿ ಹರಿದಾಡುತ್ತಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಕರ್ನಾಟಕ ಲಾಕ್ಡೌನ್ ಆಗಲಿದೆ ಎಂಬುದು ಸುಳ್ಳು

