FACT CHECK | ಕಪ್ಪು ಇಂಕ್‌ನಲ್ಲಿ ಬರೆದ ಬ್ಯಾಂಕ್ ಚೆಕ್‌ಗಳನ್ನು ಸ್ವೀಕರಿಸುವುದಿಲ್ಲ ಎಂದು RBI ಹೇಳಿದೆಯೇ?

This story was originally published by Factly
ಭಾರತೀಯ ರಿಸರ್ವ್ ಬ್ಯಾಂಕ್ (RBI) ಚೆಕ್ ಭರ್ತಿ ಮಾಡುವಾಗ ಬಳಸಬೇಕಾದ ಇಂಕ್‌ ಬಣ್ಣದ ಕುರಿತು ಹೊಸ ಆದೇಶ ಹೊರಡಿಸಿದೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ವೊಂದು ವೈರಲ್ ಆಗುತ್ತಿದೆ. (ಅವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು) “ಹೊಸ ಆದೇಶದ ಪ್ರಕಾರ, 2025ರ ಜನವರಿ 01 ರಿಂದ ಕಪ್ಪು ಬಣ್ಣದಲ್ಲಿ ಬರೆದ ಚೆಕ್‌ಗಳನ್ನು ಸ್ವೀಕರಿಸಲಾಗುವುದಿಲ್ಲ. ಚೆಕ್‌ಗಳನ್ನು ಮಾನ್ಯವೆಂದು ಪರಿಗಣಿಸಲು ನೀಲಿ ಅಥವಾ ಹಸಿರು ಬಣ್ಣದಲ್ಲಿ ಕಡ್ಡಾಯವಾಗಿ ಬರೆಯಬೇಕು.

ಕಪ್ಪು ಬಣ್ಣದ ಇಂಕ್‌ನಲ್ಲಿ ಬರೆಯಲಾದ ಚೆಕ್ ಅನ್ನು ತಡೆಗಟ್ಟಲು RBI ಹೊಸ ಆದೇಶ ಹೊರಡಿಸಿದೆ” ಎಂಬ ಹೇಳಿಕೆಯೊಂದಿಗೆ 2025ರ ಜನವರಿ 14 ರಂದು ಟೈಮ್ಸ್ ಆಫ್ ಇಂಡಿಯಾದ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾಗಿದ್ದು, ಇದನ್ನು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ವ್ಯಾಪಕವಾಗಿ ಶೇರ್‌ ಮಾಡುತ್ತಿದ್ದಾರೆ. ಹಾಗಾದರೆ RBI ನಿಜವಾಗಿಯೂ ಈ ಆದೇಶವನ್ನು ಹೊರಡಿಸಿದೆಯಾ? ಎಂದು ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಕೀವರ್ಡ್‌ಗಳನ್ನು ಬಳಸಿ ಸರ್ಚ್ ಮಾಡಿದಾಗ, RBI ಚೆಕ್‌ಗಳನ್ನು ಭರ್ತಿ ಮಾಡಲು ಕಪ್ಪು ಬಣ್ಣದ ಇಂಕ್‌ ಬಳಸುವುದನ್ನು ನಿಷೇಧಿಸಿದೆ ಎಂದು ಸೂಚಿಸುವ ಯಾವುದೇ ವಿಶ್ವಾಸಾರ್ಹ ವರದಿಗಳು ಲಭ್ಯವಾಗಿಲ್ಲ. RBI ನಿಜವಾಗಿಯೂ ಅಂತಹ ಆದೇಶ ಹೊರಡಿಸಿದ್ದರೆ, ಅದು ಮಾಧ್ಯಮಗಳಲ್ಲಿ ಮತ್ತು ಸಾರ್ವಜನಿಕರ ನಡುವೆ ಸದ್ದು ಮಾಡುತ್ತಿತ್ತು.

ಟೈಮ್ಸ್ ಆಫ್ ಇಂಡಿಯಾ ವೆಬ್‌ಸೈಟ್‌ಗೆ ಭೇಟಿ ನೀಡಿದಾಗ ಪೋಸ್ಟ್‌ನಲ್ಲಿ ಉಲ್ಲೇಖಿಸಿರುವಂತೆ 2025ರ ಜನವರಿ 14ರ ಸುದ್ದಿಗಳನ್ನು ಪರಿಶೀಲಿಸಿದಾಗ, ಅಂತಹ ಯಾವುದೇ ವರದಿಗಳು ಲಭ್ಯವಾಗಿಲ್ಲ.ಆರ್‌ಬಿಐ ವೆಬ್‌ಸೈಟ್‌ಗೆ ಭೇಟಿ ನೀಡಿ ಪತ್ರಿಕಾ ಪ್ರಕಟಣೆಗಳು, ಸುತ್ತೋಲೆಗಳನ್ನು ಪರಿಶೀಲಿಸಿದಾಗ, ಅಂತಹ ಯಾವುದೇ ಆದೇಶದ ಕುರಿತು ಯಾವುದೇ ಮಾಹಿತಿ ಲಭ್ಯವಾಗಲಿಲ್ಲ.

RBI ವೆಬ್‌ಸೈಟ್‌ನಲ್ಲಿ ಕೀವರ್ಡ್‌ಗಳನ್ನು ಬಳಸಿ ಸರ್ಚ್ ಮಾಡಿದಾಗ, 2022ರ ಅಕ್ಟೋಬರ್ 31ರಂದುಚೆಕ್ ಟ್ರಂಕೇಶನ್ ಸಿಸ್ಟಮ್ ಕುರಿತು ‘ಪದೇ ಪದೇ ಕೇಳಲಾಗುವ ಪ್ರಶ್ನೆಗಳು’ ಎಂಬ ಶೀರ್ಷಿಕೆಯ ವರದಿ ಲಭ್ಯವಾಗಿದೆ. “ಆರ್‌ಬಿಐ ಚೆಕ್‌ಗಳನ್ನು ಬರೆಯಲು ಬಳಸಬೇಕಾದ ನಿರ್ದಿಷ್ಟ ಬಣ್ಣಗಳ ಕುರಿತು ಆದೇಶ ಹೊರಡಿಸಿಲ್ಲ” ಆದರೆ, ಚೆಕ್ ಅನ್ನು ಬರೆಯಲು ವಿವಿಧ ಬಣ್ಣಗಳನ್ನು ಬಳಸಬಾರದು ಎಂದು ಸೂಚಿಸಿದೆ. ಏಕೆಂದರೆ ಇದು ಚೆಕ್ ಅನ್ನು ಅಮಾನ್ಯಗೊಳಿಸಬಹುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಕಪ್ಪು ಬಣ್ಣದಲ್ಲಿ ಬರೆಯಲಾದ ಚೆಕ್ ಅನ್ನು ತಡೆಗಟ್ಟಲು ಹೊಸ ಆದೇಶವನ್ನು RBI ಹೊರಡಿಸಿದೆ ಎಂಬುದು ಸುಳ್ಳು. ಅಂತಹ ಆದೇಶವನ್ನು RBI ಹೊರಡಿಸಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

(This story was originally published by Factly, and republished by Ensuddi.com as part of the Shakti Collective)

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights