FACT CHECK | ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ರಾ ಜಸ್ಪ್ರಿತ್ ಬುಮ್ರಾ ?
ಇತ್ತೀಚೆಗಷ್ಟೆ ಮುಕ್ತಾಯಗೊಂಡ ಬಾರ್ಡರ್-ಗವಾಸ್ಕರ್ ಟ್ರೋಫಿಯ ಸಿಡ್ನಿ ಟೆಸ್ಟ್ ಪಂದ್ಯದ ವೇಳೆ ಭಾರತದ ಸ್ಟಾರ್ ವೇಗಿ ಜಸ್ಪ್ರಿತ್ ಬುಮ್ರಾ ಬೆನ್ನಿಗೆ ಗಾಯ ಮಾಡಿಕೊಂಡರು. ಅಂದಿನಿಂದ ಅವರು ಟೀಮ್ ಇಂಡಿಯಾದಿಂದ ಹೊರಗುಳಿದಿದ್ದಾರೆ. ಅಲ್ಲದೆ ಮುಂಬರುವ ಬಹುನಿರೀಕ್ಷಿತ ಚಾಂಪಿಯನ್ ಟ್ರೋಫಿಯಿಂದ ಕೂಡ ಔಟ್ ಆಗಿದ್ದಾರೆ. ಏತನ್ಮಧ್ಯೆ, ಅವರ ಆರೋಗ್ಯಕ್ಕೆ ಸಂಬಂಧಿಸಿದ ಎರಡು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಅದರಲ್ಲಿ ಅವರು ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿರುವುದನ್ನು ಕಾಣಬಹುದಾಗಿದೆ.
ಫೇಸ್‌ಬುಕ್ ಬಳಕೆದಾರರೊಬ್ಬರು ಈ ಫೋಟೋವನ್ನು ಹಂಚಿಕೊಂಡು, “ಜಸ್ಪ್ರೀತ್ ಬುಮ್ರಾ ಅವರ ಸ್ಥಿತಿ ಹದಗೆಟ್ಟಿದೆ. ಅವರನ್ನು ನಿಜವಾದ ದೇಶಭಕ್ತರನ್ನಾಗಿ ಮಾಡಿ ಮತ್ತು ಅವರಿಗೆ ಒಂದು ಲೈಕ್ ನೀಡುವ ಮೂಲಕ ಆಶೀರ್ವದಿಸಿ. ಅವರಿಗೆ ಪ್ರೀತಿಯನ್ನು ನೀಡಿ. ಅವರು ನಮ್ಮ ಭಾರತದ ಹೆಮ್ಮೆ” ಎಂಬ ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ಜಸ್ಪ್ರೀತ್ ಬುಮ್ರಾ ಅವರ ಆರೋಗ್ಯ ಪರಿಸ್ಥಿತಿಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಆದರೆ ವೈರಲ್ ಚಿತ್ರವನ್ನು ಕೃತಕ ಬುದ್ದಿಮತ್ತೆ ಸಹಾಯದಿಂದ ರಚಿಸಲಾಗಿದೆ ಎಂಬುದು ಸ್ಪಷ್ವಾಗಿದೆ.
ನಿಜಾಂಶವನ್ನು ತಿಳಿಯಲು ನಾವು ಮೊದಲು ಜಸ್ಪ್ರಿತ್ ಬುಮ್ರಾ ಆಸ್ಪತ್ರೆಗೆ ದಾಖಲಾಗಿದ್ದಾರ ಅಥವಾ ವೈರಲ್ ಫೋಟೋದಲ್ಲಿ ಇರುವಂತೆ ಬೆಡ್ ಮೇಲೆ ಮಲಗಿದ್ದಾರ ಎಂಬ ಕುರಿತು ಗೂಗಲ್ ಸರ್ಚ್ ಮಾಡಿದಾಗ’ ಆದರೆ, ಇದಕ್ಕೆ ಸಂಬಂಧಿಸಿದ ಯಾವುದೇ ವಿಶ್ವಾಸಾರ್ಹ ವರದಿ ನಮಗೆ ಕಂಡುಬಂದಿಲ್ಲ. ಬಳಿಕ ಈ ಫೋಟೋಗಳನ್ನು ಎಚ್ಚರಿಕೆಯಿಂದ ನೋಡಿದ್ದೇವೆ. ಎರಡೂ ಫೋಟೋಗಳಲ್ಲಿ, ಮುಖವು ತುಂಬಾ ಮೃದುವಾಗಿ ಕಾಣುತ್ತದೆ ಮತ್ತು ಬ್ಯಾಕ್ಗ್ರೌಂಡ್ ಮಸುಕಾಗಿದ್ದು, ಕೃತಕವಾಗಿ ಕಾಣುತ್ತದೆ.

ಈ ಫೋಟೋ ನೈಜ್ಯಕ್ಕೆ ಹತ್ತಿರವಾಗಿಲ್ಲ ಎಂಬುದು ಸ್ಪಷ್ಟವಾಯಿತು. ಹೀಗಾಗಿ ನಾವು ಈ ಫೋಟೋಗಳನ್ನು AI ಇಮೇಜ್ ಪತ್ತೆ ಪರಿಕರಗಳೊಂದಿಗೆ ಪರೀಕ್ಷಿಸಿದ್ದೇವೆ. AI ಇಮೇಜ್ ಡಿಟೆಕ್ಷನ್ ಟೂಲ್ ಹೈವ್ ಮಾಡರೇಶನ್ ಅಂದಾಜಿನ ಪ್ರಕಾರ ಈ ಚಿತ್ರಗಳು 97 ರಿಂದ 99 ಪ್ರತಿಶತದಷ್ಟು AI- ರಚಿತವಾಗಿರುವ ಸಾಧ್ಯತೆಯಿದೆ ಎಂದು ಹೇಳಿದೆ. ಮತ್ತೊಂದು AI ಇಮೇಜ್ ಡಿಟೆಕ್ಷನ್ ಟೂಲ್, ಸೈಟ್ ಎಂಜಿನ್‌ನೊಂದಿಗೆ ಪರಿಶೀಲಿಸಿದಾಗ, ಈ ಚಿತ್ರಗಳು 99 ಪ್ರತಿಶತ AI- ರಚಿತವಾಗಿರುವ ಸಾಧ್ಯತೆ ಇದೆ ಎಂದು ತಿಳಿಸಿತು. ಹೀಗಾಗಿ ಇದು ನಿಜವಾದ ಫೋಟೋ ಅಲ್ಲ. ಕೃತಕ ಬುದ್ದಿಮತ್ತೆ ಸಹಾಯದಿಂದ ರಚಿಸಲಾಗಿದೆ ಎಂಬುದು ಖಚಿತವಾಯಿತು.

ಜಸ್ಪ್ರೀತ್ ಬುಮ್ರಾ ಫಿಟ್ನೆಸ್ ಸಮಸ್ಯೆಯ ಕಾರಣ ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿದಿದ್ದಾರೆ. ಬೆನ್ನು ನೋವಿನ ಸಮಸ್ಯೆಯ ಕಾರಣ ಬುಮ್ರಾ ಇಂಗ್ಲೆಂಡ್ ವಿರುದ್ಧದ ಸರಣಿಗೆ ಕೂಡ ಅಲಭ್ಯರಾಗಿದ್ದರು. ಇದಾಗ್ಯೂ ಅವರು ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ ಎನ್ನಲಾಗಿತ್ತು. ಆದರೀಗ ಅವರು ಸಂಪೂರ್ಣ ಫಿಟ್ನೆಸ್ ಸಾಧಿಸಲು ಕನಿಷ್ಠ ಮೂರು ವಾರಗಳನ್ನು ತೆಗೆದುಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಈ ರೀತಿ ಆಸ್ಪತ್ರೆ ಬೆಡ್ ಮೇಲೆ ಮಲಗಿರುವ ಚಿತ್ರ AI ಟೂಲ್‌ಗಳಿಂದ ರಚಿಸಲಾಗಿದೆ ಎಂಬುದು ಸ್ಪಷ್ಟವಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಮಗುವಿನ ಬಟ್ಟೆಯನ್ನು ಬಾಯಿಯಲ್ಲಿಡಿದು ಎಳೆದಾಡಿದ ಹುಲಿರಾಯ, ವೈರಲ್ ವಿಡಿಯೋದ ಅಸಲೀಯತ್ತೇನು ಗೊತ್ತೇ?

