FACT CHECK | ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾದಲ್ಲಿ ಬೆಂಕಿ? ವಿಡಿಯೋದ ಅಸಲೀಯತ್ತೇನು ಗೊತ್ತೇ?

ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾದ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವೀಡಿಯೊದಲ್ಲಿ, ಬುರ್ಜ್ ಖಲೀಫಾದ ಇಡೀ ಕಟ್ಟಡಕ್ಕೆ ಬೆಂಕಿ ಬಿದ್ದಿರುವುದನ್ನು ಕಾಣಬಹುದು ಮತ್ತು ಕಟ್ಟಡದ ಒಂದು ಭಾಗವು ಕೆಳಗೆ ಬಿದ್ದಾಗ, ಕೆಳಗೆ ನಿಂತಿರುವ ಜನರು ಓಡಲು ಪ್ರಾರಂಭಿಸುತ್ತಾರೆ.

ಇನ್‌ಸ್ಟಾಗ್ರಾಮ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡು, “ದುಬೈ ಬುರ್ಜ್ ಖಲೀಫಾದಲ್ಲಿ ಬೆಂಕಿ” ಎಂದು ಬರೆದಿದ್ದಾರೆ.

ಹಾಗೆಯೆ ಫೇಸ್‌ಬುಕ್ ಬಳಕೆದಾರರೊಬ್ಬರು ಕೂಡ ಇದೇ ವೈರಲ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ ಮತ್ತು “ಬುರ್ಜ್ ಖಲೀಫಾದಲ್ಲಿ ಬೆಂಕಿ” ಎಂದು ಬರೆದಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾ ಕಟ್ಟಡ ಬೆಂಕಿಗೆ ಆಹುತಿಯಾಗಿದೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ಅನ್ನು ಪರಿಶೀಲಿಸಲು ಸಂಬಂಧಿತ ಕೀವರ್ಡ್‌ಗಳೊಂದಿಗೆ ಗೂಗಲ್​ನಲ್ಲಿ ಸರ್ಚ್ ಮಾಡಿದಾಗ,ವೈರಲ್ ಪೋಸ್ಟ್‌ಗೆ ಸಂಬಂಧಿಸಿದಂತೆ ಯಾವುದೇ ವರದಿ ಲಭ್ಯವಾಗಿಲ್ಲ.  ವಿಶ್ವ ಪ್ರಸಿದ್ಧ ದುಬೈನ ಬುರ್ಜ್ ಖಲೀಫಾಕ್ಕೆ ಬೆಂಕಿ ತಗುಲಿದೆ ಎಂದರೆ ಅದು ಬ್ರೇಕಿಂಗ್ ನ್ಯೂಸ್ ಆಗಿರುತ್ತಿತ್ತು. ಆದರೆ, ಇದಕ್ಕೆ ಸಂಬಂಧಿಸಿದ ಸುದ್ದಿಗಳು ವರದಿಯಾಗಿಲ್ಲ.

साल 2022 में बुर्ज खलीफा के पास की इमारत में लगी थी आग

ತನಿಖೆಯನ್ನು ಮತ್ತಷ್ಟು ಮುಂದುವರಿಸಿ, ನಾವು ಬುರ್ಜ್ ಖಲೀಫಾದ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಸರ್ಚ್ ಮಾಡಿದಾಗಲೂ ವೈರಲ್ ವಿಡಿಯೋಗೆ ಸಂಬಂಧಿಸಿದ ಯಾವುದೇ ಪೋಸ್ಟ್‌ಗಳು ಲಭ್ಯವಗಿಲ್ಲ.

wasitai.com  की रिपोर्ट देखें

ವಿಡಿಯೋದ ಸ್ಕ್ರೀನ್‌ಶಾಟ್‌ಗಳನ್ನುತೆಗೆದು AI- ಪರಿಕರಗಳನ್ನು ಪತ್ತೆ ಹಚ್ಚುವ ಸಾಫ್ಟ್​ವೇರ್ ಮೂಲಕ ಸರ್ಚ್ ಮಾಡಲು ವಿಡಿಯೋವನ್ನು ಹೈವ್ ಮಾಡರೇಶನ್ ಟೂಲ್‌ಗೆ ಅಪ್‌ಲೋಡ್ ಮಾಡಿದ್ದೇವೆ. ಈ ಉಪಕರಣವು ಇದು AI ರಚಿಸುವ ಸಾಧ್ಯತೆಯು ಶೇಕಡಾ 90 ರಷ್ಟು ಇದೆ ಎಂದು ಸೂಚಿಸಿದೆ. ಹಾಗೆಯೆ ಸೈಟ್ ಎಂಜಿನ್ ಪರಿಕರಗಳನ್ನು ಬಳಸಿಕೊಂಡು ಹುಡುಕಿದ್ದೇವೆ. ಇಲ್ಲಿ ಚಿತ್ರವು 92 ಪ್ರತಿಶತ AI ನಿಂದ ರಚಿಸಲ್ಪಟ್ಟಿದೆ ಎಂದು ಹೇಳಿದೆ. De Copy ಬಳಸಿ ಕೂಡ ಚಿತ್ರವನ್ನು ಹುಡುಕಿದೆವು. ಈ ಉಪಕರಣವು ಶೇ. 98 ರಷ್ಟು ಫೋಟೋಗಳನ್ನು AI ಸಹಾಯದಿಂದ ರಚಿಸಲಾಗಿದೆ ಎಂದು ಹೇಳಿದೆ.

burj khalifa Fire Photo

ಒಟ್ಟಾರೆಯಾಗಿ ಹೆಳುವುದಾದರೆ, ಬುರ್ಜ್ ಖಲೀಫಾದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳುವ ವೈರಲ್ ವಿಡಿಯೋ ನಿಜವಲ್ಲ. ಈ ವಿಡಿಯೋವನ್ನು ಕೃತಕ ಬುದ್ಧಿಮತ್ತೆ (AI) ಪರಿಕರಗಳನ್ನು ಬಳಸಿ ರಚಿಸಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ  ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ದೆಹಲಿಯಲ್ಲಿ BJP ಗೆದ್ದ ನಂತರ ಯಮುನ ಆರತಿ ಆರಂಭಿಸಲಾಗಿದೆ ಎಂಬುದು ಸುಳ್ಳು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights