FACT CHECK | ENG-AFG ICC ಚಾಂಪಿಯನ್ಸ್ ಟ್ರೋಫಿ ಪಂದ್ಯದ ವೇಳೆ ವಿಷಕಾರಿ ಹಾವೊಂದು ಕಾಣಿಸಿಕೊಂಡಿದ್ದು ನಿಜವೇ?
ಅಫ್ಘಾನಿಸ್ತಾನ ತಂಡದ ವಿರುದ್ದ ಸೋತು ICC ಚಾಂಪಿಯನ್ಸ್ ಟೂರ್ನಿಯಿಂದ ಇಂಗ್ಲೆಂಡ್ ನಿರ್ಗಮಿಸಿದ ಬೆನ್ನಲ್ಲೆ ತರೇವಾರಿ ಪೋಸ್ಟ್ಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ. ಈಗಾಗಲೇ ಆತಿಥೇಯ ರಾಷ್ಟ್ರ ಪಾಕಿಸ್ತಾನ ತಂಡ ಲೀಗ್ ಹಂತದಲ್ಲೇ ಹೊರಬಿದ್ದ ಆಘಾತ ಎದುರಿಸಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ಅಫ್ಘಾನಿಸ್ತಾನ ಮತ್ತೊಂದು ಶಾಖ್ ನೀಡಿದೆ. ಆದರೆ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ಪ್ರಸಾರವಾಗುತ್ತಿದೆ.
ಫೆಬ್ರವರಿ 26 ರಂದು ಲಾಹೋರ್ನ ಗಡಾಫಿ ಕ್ರೀಡಾಂಗಣದಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ 8 ರನ್ಗಳಿಂದ ಇಂಗ್ಲೆಂಡ್ ತಂಡವನ್ನು ಅಫ್ಘಾನಿಸ್ತಾನ ಸೋಲಿಸಿತ್ತು. ಈ ಪಂದ್ಯ ನಡೆಯುತ್ತಿರುವಾಗ ಕ್ರೀಡಾಂಗಣದ ಬೌಂಡ್ರಿ ಲೈನ್ನಲ್ಲಿ ಹಾವೊಂದು ಕಾಣಿಸಿಕೊಂಡಿತ್ತು ಎಂದು ಪ್ರತಿಪಾದಿಸಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋವನ್ನು ಹಂಚಿಕೊಳ್ಳುತ್ತಿರುವ ಅನೇಕ ಬಳಕೆದಾರರು, ಪಾಕಿಸ್ತಾನದ ICC ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ವ್ಯವಸ್ಥೆಗಳನ್ನು ಟೀಕಿಸಿ ಹಂಚಿಕೊಳ್ಳುತ್ತಿದ್ದಾರೆ. ಹಾಗಿದ್ದರೆ ಈ ವೈರಲ್ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋವನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, ಆಗಸ್ಟ್ 12, 2023 ರಂದು ಶ್ರೀಲಂಕಾ ಕ್ರಿಕೆಟ್ನ ಅಧಿಕೃತ ಯೂಟ್ಯೂಬ್ ಚಾನೆಲ್ ಹಂಚಿಕೊಂಡ ಯೂಟ್ಯೂಬ್ ವಿಡಿಯೋ ಲಭ್ಯವಾಗಿದೆ.
https://www.youtube.com/watch?v=70abcvrMSDI
ಈ ವಿಸ್ತೃತ ಆವೃತ್ತಿಯಲ್ಲಿ, ಪಂದ್ಯ ಮುಂದುವರೆದಂತೆ ಹಾವು ಕ್ರೀಡಾಂಗಣದ ಬೌಂಡ್ರಿ ಲೈನ್ನಲ್ಲಿ ಸುತ್ತಾಡುತ್ತಿರುವುದನ್ನು ಕಾಣಬಹುದು. ವಿಡಿಯೋ ವಿವರಣೆಯಲ್ಲಿ ಇದು ಲಂಕಾ ಪ್ರೀಮಿಯರ್ ಲೀಗ್ 2023 ಎಂದು ಬರೆದಿದೆ.
ವೈರಲ್ ಕ್ಲಿಪ್ಗಿಂತ ಭಿನ್ನವಾಗಿ, ಯೂಟ್ಯೂಬ್ ವಿಡಿಯೋದ ಕೆಳಭಾಗದಲ್ಲಿರುವ ಸ್ಕೋರ್ಕಾರ್ಡ್ನಲ್ಲಿ ಜಾಫ್ನಾ vs ಕ್ಯಾಂಡಿ, 17.1 ಓವರ್ಗಳಲ್ಲಿ 140-5 ಎಂದು ಬರೆಯಲಾಗಿದೆ. ಅಲ್ಲದೆ, ಈ ಪಂದ್ಯದಲ್ಲಿ ಆಟಗಾರರು ನೀಲಿ ಮತ್ತು ಕೆಂಪು ಟೀ ಶರ್ಟ್ಗಳಲ್ಲಿ ಇರುವುದನ್ನು ಕಾಣಬುದು. ಆದರೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಇಂಗ್ಲೆಂಡ್ ಮತ್ತು ಅಫ್ಘಾನಿಸ್ತಾನ ತಂಡದ ಜೆರ್ಸಿಗಳು ನೀಲಿ ಬಣ್ಣದಲ್ಲಿವೆ. ಇದರರ್ಥ ಈ ಕ್ಲಿಪ್ ಅನ್ನು ಕ್ರೀಡಾಂಗಣದಲ್ಲಿ ಸ್ಕೋರ್ಬೋರ್ಡ್ ಮತ್ತು ಆಟಗಾರರನ್ನು ಎಡಿಟ್ ಮಾಡಿ ರಚಿಸಲಾಗಿದೆ.
ಮತ್ತಷ್ಟು ಮಾಹಿತಿಗಾಗಿ ಸರ್ಚ್ ಮಾಡಿದಾಗ, ಶ್ರೀಲಂಕಾದಲ್ಲಿ ಈ ಘಟನೆ ನಡೆದ ಬಗ್ಗೆ ಹಲವು ವರದಿಗಳು ಲಭ್ಯವಾಗಿವೆ. ವರದಿಗಳ ಪ್ರಕಾರ, ಆಗಸ್ಟ್ 12, 2023 ರಂದು ಲಂಕಾ ಪ್ರೀಮಿಯರ್ ಲೀಗ್ ನಡೆದ ಪಂದ್ಯದ ಸಮಯದಲ್ಲಿ ಕ್ರೀಡಾಂಗಣದ ಬೌಂಡ್ರಿ ಲೈನ್ನಲ್ಲಿ ಹಾವು ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ. ಜಾಫ್ನಾ ಕಿಂಗ್ಸ್ ಮತ್ತು ಬಿ-ಲವ್ ಕ್ಯಾಂಡಿ ನಡುವಿನ ಪಂದ್ಯದ ಸಮಯದಲ್ಲಿ ಹಾವು ಎರಡು ಬಾರಿ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.
ಒಂದು ಹಂತದಲ್ಲಿ, ಕ್ರೀಡಾಂಗಣದಲ್ಲಿಯೇ ಕ್ಯಾಂಡಿ ವೇಗಿ ಇಸುರು ಉದಾನ ಬಳಿ ಹಾವು ತೆವಳುತ್ತಿರುವುದನ್ನು ತೋರಿಸಲಾಗಿದೆ. ಇನ್ನೊಂದು ಬಾರಿ, ವಿದ್ಯುತ್ ತಂತಿಗಳ ಬಳಿ ಬೌಂಡರಿ ಲೈನ್ನಲ್ಲಿ ಹಾವೊಂದು ತೆವಳುತ್ತಿರುವುದು ಕಂಡುಬಂದಿದ್ದು, ಅಲ್ಲಿನ ಕ್ಯಾಮೆರಾಮೆನ್ಗಳು ಚಿತ್ರೀಕರಿಸಿದ್ದಾರೆ. ಈ ಘಟನೆ ಶ್ರೀಲಂಕಾದ ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ, LPL ಪಂದ್ಯದಲ್ಲಿ ಹಾವು ಕಾಣಿಸಿಕೊಂಡಿದ್ದು ಇದೇ ಮೊದಲಲ್ಲ. ಇದಕ್ಕೂ ಮೊದಲು, ಜುಲೈ 31, 2023 ರಂದು, ಮತ್ತೊಂದು LPL ಪಂದ್ಯದ ಸಮಯದಲ್ಲಿ ಕ್ರೀಡಾಂಗಣದಲ್ಲಿ ಹಾವು ಕಾಣಿಸಿಕೊಂಡಿತು, ಇದರಿಂದಾಗಿ ಆಟ ಸ್ಥಗಿತಗೊಂಡಿತು.
ENG vs AFG ಚಾಂಪಿಯನ್ಸ್ ಟ್ರೋಫಿ ಪಂದ್ಯದ ಮುಖ್ಯಾಂಶಗಳ ಪ್ರಕಾರ, ಪಂದ್ಯದ 7 ನೇ ಓವರ್ನಲ್ಲಿ, ಅಫ್ಘಾನ್ ಕ್ರಿಕೆಟಿಗ ರಹಮತ್ ಶಾ ಇಬ್ರಾಹಿಂ ಜದ್ರಾನ್ ಅವರೊಂದಿಗೆ ಬ್ಯಾಟಿಂಗ್ ಮಾಡುತ್ತಿದ್ದರು ಮತ್ತು ಇಂಗ್ಲೆಂಡ್ನ ಮಾರ್ಕ್ ವುಡ್ ಬೌಲಿಂಗ್ ಮಾಡುತ್ತಿದ್ದರು. ವೈರಲ್ ಕ್ಲಿಪ್ನಲ್ಲಿ ಸೂಪರ್ ಇಂಪೋಸ್ ಮಾಡಲಾದ ಸ್ಕೋರ್ಕಾರ್ಡ್ ಅನ್ನು ಆ ಓವರ್ನ ಎರಡನೇ ಬೌಲ್ನಿಂದ ತೆಗೆದುಕೊಳ್ಳಲಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಶ್ರೀಲಂಕಾದಲ್ಲಿ ಆಡಿದ ಹಳೆಯ 2023ರ ಪಂದ್ಯದ ಹಳೆಯ ವಿಡಿಯೋವನ್ನು ಪಾಕಿಸ್ತಾನದಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯದ ವಿಡಿಯೋ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಎಡಿಟ್ ಮಾಡಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ವೈಟ್ ಹೌಸ್ನಲ್ಲಿ ಟ್ರಂಪ್ ಕೆನ್ನೆಗೆ ಹೊಡೆದ್ರಾ ಉಕ್ರೇನ್ನ ಅಧ್ಯಕ್ಷ ?

