FACT CHECK | RSS ಬಾಲ ಶಾಖೆಯ ಮುಖ್ಯ ಶಿಕ್ಷಕನಾಗಿ ಈ ಬಾಲಕನನ್ನು ಆಯ್ಕೆ ಮಾಡಲಾಗಿದೆ ಎಂಬುದು ಸುಳ್ಳು

ಸಮರ ಕಲೆಗಳನ್ನು ಪ್ರದರ್ಶಿಸುವ ಬಾಲಕನ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದರಲ್ಲಿ ” ಈ ಬಾಲಕನನ್ನು ನೋಡಿ. ಈತ ಕೇರಳದ ಕಣ್ಣೂರಿನಲ್ಲಿರುವ RSS ಬಾಲ ಶಾಖೆಯ ಮುಖ್ಯ ಶಿಕ್ಷಕನಾಗಿ ನೇಮಕಗೊಂಡಿದ್ದಾನೆ, ಇದು RSS ಇತಿಹಾಸದಲ್ಲೇ ಮೊದಲು, ಬಾಲಕನನ್ನು ಶಿಕ್ಷಕನಾಗಿಸುವ ಶಕ್ತಿ RSSಗೆ ಇದೆ” ಎಂದು ವಿಡಿಯೋವನ್ನು ಹಂಚಿಕೊಳ್ಉತ್ತಿದ್ದು, ಈ ಬಾಲಕ ಐದು ವರ್ಷ ವಯಸ್ಸಿನವನಾಗಿದ್ದು, ಈತನನ್ನು ಕಾರ್ತಿಕ್ ಎಂದು ಹೇಳಲಾಗುತ್ತಿದೆ.

ವೈರಲ್‌ ವಿಡಿಯೋದಲ್ಲಿ ಕೂಡ ಬಾಲಕ ಸಮರ ಕಲೆಗಳನ್ನು ಪ್ರದರ್ಶಿಸುತ್ತಿರುವುದು ಕಂಡು ಬಂದಿದ್ದು, ಇದೇ ರೀತಿಯಾದ ಕೆಲವು ಕಸರತ್ತುಗಳನ್ನು RSSನಲ್ಲಿ ಮಾಡಿಸುವುದರಿಂದ ಈ ವಿಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್‌ :

ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ವಿಡಿಯೋ ಕುರಿತು ಪರಿಶೀಲಿಸಲು ವಿವಿಧ ಕೀ ಫ್ರೇಮ್‌ಗಳನ್ನು ಬಳಸಿಕೊಂಡು ಗೂಗಲ್‌ ರಿವರ್ಸ್‌ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 13 ಜನವರಿ 2025 ರಂದು Instagram ನಲ್ಲಿ ಪೋಸ್ಟ್ ಮಾಡಲಾದ ವಿಡಿಯೋದ ಮೂಲ ಆವೃತ್ತಿ ಲಭ್ಯವಾಗಿದ್ದು,  ಇದನ್ನು aarav_aj_official ಎಂಬ ಪುಟದಲ್ಲಿ ಪೋಸ್ಟ್ ಮಾಡಲಾಗಿದೆ. ಇದರಲ್ಲಿ ಕಾಣುವ ಹುಡುಗನ ಹೆಸರು ಆರವ್ ಎಜೆ. ಆಗಿದೆ. ವೀಡಿಯೊದ ಶೀರ್ಷಿಕೆಯ ಪ್ರಕಾರ, ಅವನು ಸಿಲಂಬಮ್/ಸಿಲಂಬಟ್ಟಂ ಎಂಬ ಸಾಂಪ್ರದಾಯಿಕ ಭಾರತೀಯ ಸಮರ ಕಲೆಯನ್ನು ಪ್ರದರ್ಶಿಸುತ್ತಿದ್ದಾನೆ ಎಂದು ತಿಳಿದು ಬಂದಿದೆ.

ಇದಲ್ಲದೆ, ಆರವ್ ಅವರ ಕೆಲವು ಪೋಸ್ಟ್‌ಗಳು ‘stickman_silambam_academy’ ಪುಟದೊಂದಿಗೆ ಲಿಂಕ್‌ ಹೊಂದಿರುವುದು ಕಂಡು ಬಂದಿದೆ, ಆ ಖಾತೆಯಲ್ಲಿ ಕೂಡ ಆರವ್‌ ಅವರ ಅನೇಕ ಸಿಲಂಬಮ್ ತರಬೇತಿ ವೀಡಿಯೊಗಳನ್ನು ಕಂಡುಕೊಂಡಿದ್ದೇವೆ. ಹಾಗಾಗಿ ಈ ಬಾಲಕನ ಹೆಸರು ಕಾರ್ತಿಕ್‌ ಅಲ್ಲ ಈತನ ಹೆಸರು ಆರವ್‌ ಎಂಬುದು ಸ್ಪಷ್ಟವಾಗಿ ತಿಳಿದು ಬಂದಿದೆ. ಇನ್ನು ಈ ಬಾಲಕ RSSನ ಬಾಲ ಶಾಖೆಗೆ ಮುಖ್ಯ ಶಿಕ್ಷಕನಾಗಿ ಆಯ್ಕೆಯಾಗಿದ್ದಾನಾ ಎಂದು ಪರಿಶೀಲಿಸಲು ಸರ್ಚ್ ಮಾಡಿದಾಗ ಮಾಹಿತಿ ಲಭ್ಯವಾಗಿದೆ.

ಬಾಲಕ ನಿಜಕ್ಕೂ RSSನ ಬಾಲ ಶಾಖೆಗೆ ಆಯ್ಕೆಯಾಗಿದ್ದಲ್ಲಿ ಅದು ಹಲವು ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದವು, ಆದರೆ ಆ ರೀತಿಯ ಯಾವುದೇ ವರದಿಗಳು ಕಂಡು ಬಾರದ ಕಾರಣ ವೈರಲ್‌ ವಿಡಿಯೋ ಸುಳ್ಳು ಮಾಹಿತಿಯೊಂದಿಗೆ ಜನರ ತಪ್ಪಿಸಲು ಹಂಚಿಕೊಳ್ಳಲಾಗುತ್ತಿದೆ ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ  ಕೇರಳದ ಕಣ್ಣೂರಿನಲ್ಲಿ ನಡೆಯಲಿರುವ RSSನ ಬಾಲ ಶಾಖೆಗೆ ಮುಖ್ಯ ಶಿಕ್ಷಕನಾಗಿ 5 ವರ್ಷದ ಬಾಲಕನನ್ನು ಆಯ್ಕೆ ಮಾಡಲಾಗಿದೆ ಎಂಬುದು ಸುಳ್ಳು, ವೈರಲ್‌ ವಿಡಿಯೋ ತಮಿಳುನಾಡಿನ ಚೆನ್ನೈ ಮೂಲದ ಸಿಲಂಬಾಟಂ ಸಾಹಸ ಕ್ರೀಡೆಯ ತರಬೇತಿ ಪಡೆಯುತ್ತಿರುವ ಆರವ್ ಎಂಬ ಬಾಲಕನಿಗೆ ಸಂಬಂಧಿಸಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಮುಸ್ಲಿಂ ಮಹಿಳೆಗೆ ಕಿರುಕುಳ ನೀಡಿ ಸಾರ್ವಜನಿಕವಾಗಿ ಕೆನ್ನೆಗೆ ಹೊಡೆತ ತಿಂದ ವ್ಯಕ್ತಿ ಯಾರು ಗೊತ್ತೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights