FACT CHECK | ನಟಿ ಕಿಯಾರಾಗೆ ವೇದಿಕೆ ಮೇಲೆಯೇ ಚುಂಬಿಸಿದ್ರಾ ಸಲ್ಮಾನ್ ಖಾನ್?

ಬಾಲಿವುಡ್ ಭಾಯ್‌ಜಾನ್ ಸಲ್ಮಾನ್ ಖಾನ್, ನಟಿ ಕಿಯಾರಾ ಅಡ್ವಾಣಿಯವರ ತುಟಿಗೆ ಮುತ್ತಿಡುತ್ತಿರುವ ವಿಡಿಯೋವೊಂದು ಯೂಟ್ಯೂಬ್‌ನಲ್ಲಿ ವೈರಲ್ ಆಗಿದೆ. ವೈರಲ್ ವಿಡಿಯೋದಲ್ಲಿ ವೇದಿಕೆ ಮೇಲೆಯೇ ನಟ ನಟಿ ಇಬ್ಬರು ಲಿಪ್‌ ಕಿಸ್‌ ಮಾಡುತ್ತಿರುವುದನ್ನು ನೋಡಬಹುದು.

ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಹೊಸ ಸಿನಿಮಾ ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾದ ಮೊದಲ ಹಾಡು ‘ಜೋಹ್ರಾ ಜಬೀನ್’ ಬಿಡುಗಡೆಯಾಗಿದೆ. ಈ ಹಾಡಿನಲ್ಲಿ ಸಲ್ಮಾನ್ ಖಾನ್ ರಶ್ಮಿಕಾ ಮಂದಣ್ಣ ಜೊತೆಯಾಗಿ ನಟಿಸಿದ್ದಾರೆ. ಈದ್ ಹಬ್ಬಕ್ಕೆ ಈ ಸಿನಿಮಾ ಬಿಡುಗಡೆಯಾಗಲಿದೆ. ಈ ಮಧ್ಯೆ, ಸಲ್ಮಾನ್ ಖಾನ್ ಕಿಯಾರಾ ಅಡ್ವಾಣಿಗೆ ಚುಂಬಿಸುತ್ತಿರುವ ವಿಡಿಯೋ ಯೂಟ್ಯೂಬ್‌ನಲ್ಲಿ ವೈರಲ್ ಆಗುತ್ತಿವೆ.

ವಿಡಿಯೋದಲ್ಲಿ ಸಲ್ಮಾನ್ ಖಾನ್, ಕಿಯಾರಾ ಅಡ್ವಾಣಿ ಮತ್ತು ದಕ್ಷಿಣ ಭಾರತದ ಸೂಪರ್‌ಸ್ಟಾರ್ ರಾಮ್ ಚರಣ್ ತೇಜ ಕಾಣಿಸಿಕೊಂಡಿದ್ದಾರೆ. ಮೂವರೂ ಮಾತನಾಡುತ್ತಿರುವಾಗ ಸಲ್ಮಾನ್ ಮತ್ತು ಕಿಯಾರಾ ಒಬ್ಬರಿಗೊಬ್ಬರು ಚುಂಬಿಸುತ್ತಾರೆ. ಈ ವಿಡಿಯೋವನ್ನು ಹಲವು ಯೂಟ್ಯೂಬ್ ಚಾನೆಲ್‌ಗಳಲ್ಲಿ ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮವಾದ ಯೂಟ್ಯೂಬ್‌ ಚಾನೆಲ್‌ನಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಸಲ್ಮಾನ್ ಮತ್ತು ಕಿಯಾರಾ ನಡುವೆ ನಡೆಯುವ ಕ್ರಿಯೆಯು ಸಹಜವಾಗಿ ನಡೆಯುವಂತೆ ಕಾಣುವುದಿಲ್ಲ. ವಿಡಿಯೋದಲ್ಲಿ ಮೂವರು ಕಲಾವಿದರು ಮಾತನಾಡುವಾಗ ಎಲ್ಲವೂ ಸಹಜವಾಗಿ ಕಾಣುತ್ತದೆ. ಆದರೆ, ಸಲ್ಮಾನ್ ಮತ್ತು ಕಿಯಾರಾ ಚುಂಬಿಸಲು ಮುಂದಾದಾಗ ಅವರಿಬ್ಬರ ದೇಹಭಾಷೆ ಬದಲಾಗುತ್ತದೆ. ಇದರಿಂದ ವಿಡಿಯೋವನ್ನು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ ತಿದ್ದಲಾಗಿದೆ ಎಂಬ ಅನುಮಾನ ಮೂಡುತ್ತದೆ.

 

View this post on Instagram

 

A post shared by APONJON (@sahaarup5)

ಯೂಟ್ಯೂಬ್‌ನಲ್ಲಿ ಹಂಚಿಕೊಳ್ಳಲಾದ ಈ ವೀಡಿಯೊ ಬಿಗ್ ಬಾಸ್ ಸೀಸನ್ 18 ರದ್ದಾಗಿದೆ. ಸಲ್ಮಾನ್ ಖಾನ್ ಮತ್ತು ಕಿಯಾರಾ ಅಡ್ವಾಣಿ ಅವರೊಂದಿಗೆ ದಕ್ಷಿಣದ ಸೂಪರ್‌ಸ್ಟಾರ್ ರಾಮ್ ಚರಣ್ ತೇಜ ಕೂಡ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನೆ ಆಧಾರವಾಗಿಟ್ಟುಕೊಂಡು ಗೂಗಲ್‌ನಲ್ಲಿ ಸರ್ಚ್ ಮಾಡಿದಾಗ,ಇನ್‌ಸ್ಟಾಗ್ರಾಂ ಖಾತೆಗಳಲ್ಲಿ ನೈಜ ವಿಡಿಯೋ ಲಭ್ಯವಾಗಿದೆ. ಈ ವಿಡಿಯೋದಲ್ಲಿ ಸಲ್ಮಾನ್ ಖಾನ್, ಕಿಯಾರಾ ಅಡ್ವಾಣಿ ಮತ್ತು ರಾಮ್ ಚರಣ್ ತೇಜ ಮಾತನಾಡುತ್ತಿದ್ದಾರೆ. ಆದರೆ, ಚುಂಬನದ ದೃಶ್ಯವಿಲ್ಲ. ಈ ಮೂಲಕ ವೈರಲ್ ವಿಡಿಯೋವನ್ನು ತಿರುಚಲಾಗಿದೆ ಎಂದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಸಲ್ಮಾನ್ ಖಾನ್ ಕಿಯಾರಾ ಅಡ್ವಾಣಿ ಮತ್ತು ರಾಮ್ ಚರಣ್ ತೇಜ ವೇದಿಕೆಯಲ್ಲಿ ಮಾತನಾಡುತ್ತಿರುವ ಮೂಲ ವಿಡಿಯೋವನ್ನು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ ಸಲ್ಮಾನ್ ಖಾನ್ ಮತ್ತು ಕಿಯಾರಾ ಪರಸ್ಪರ ಚುಂಬಿಸಿದ್ದಾರೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.ಮೂಲ ವಿಡಿಯೋವನ್ನು ಎಐ ತಂತ್ರಜ್ಞಾನ ಬಳಸಿ ಎಡಿಟ್‌ ಮಾಡಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಉತ್ತರ ಪ್ರದೇಶದ ಆಕರ್ಷಕ ವಿಮಾನ ನಿಲ್ದಾಣ ಎಂದು ಟರ್ಕಿಯ ವಿಡಿಯೋ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights