FACT CHECK | ದಲಿತ ಯುವಕ ಕುದುರೆ ಮೇಲೆ ಮೆರವಣಿಗೆ ಬರುತ್ತಿದ್ದ ಕಾರಣಕ್ಕೆ ವರನ ಮೇಲೆ ಮುಸ್ಲಿಮರು ಹಲ್ಲೆ ನಡೆಸಿದ್ದು ನಿಜವೇ?

ಪಶ್ಚಿಮ ಉತ್ತರ ಪ್ರದೇಶದ ಸಹರಾನ್‌ಪುರ ಜಿಲ್ಲೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ನೂರಾರು ಜನರು ಮತ್ತು ಪೊಲೀಸರು ಸಮವಸ್ತ್ರದಲ್ಲಿರುವ ವಿಡಿಯೋವೊಂದು ಹಂಚಿಕೊಳ್ಳುತ್ತ, ಸಹರಾನ್‌ಪುರದಲ್ಲಿ ದಲಿತನೊಬ್ಬನ ಮದುವೆ ಮೆರವಣಿಗೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ವರನು ಕುದುರೆ ಮೇಲೆ ಮೆರವಣಿಗೆ ಬರುತ್ತಿದ್ದ ವೇಳೆ ಮುಸ್ಲಿಮರ ಗುಂಪೊಂದು ಮದುವೆ ಮೆರವಣಿಗೆಯನ್ನು ತಡೆದು ವರನನ್ನು ಕುದುರೆಯಿಂದ ಕೆಳಗೆಳೆದು ಹಲ್ಲೆ ಮಾಡಿದ್ದಾರೆ, ಜೊತೆಗೆ ಮದುವೆ ಮೆರವಣಿಗೆಯಲ್ಲಿ ಸಾಗುತ್ತಿದ್ದ ವರನ ಸಂಬಂಧಿಕರಿಗೂ ಥಳಿಸಲಾಗಿದೆ ಎಂದು ಹೇಳಲಾಗಿದೆ.

ದೀಪಕ್ ಶರ್ಮಾ ಎಂಬ ವ್ಯಕ್ತಿ ವಿಡಿಯೋ ಹಂಚಿಕೊಂಡು, ‘ದಲಿತ ವರನಿಗೆ ಮುಸ್ಲಿಂ ಸಮಾಜದ ಉಡುಗೊರೆ. ದಲಿತರ ಮದುವೆ ಮೆರವಣಿಗೆಗೆ ಗ್ರಾಮಕ್ಕೆ ಪ್ರವೇಶ ನೀಡಲಾಗಿಲ್ಲ’ ಎಂದು ಬರೆದಿದ್ದಾರೆ. ಇದು ನಮ್ಮ ಪವಿತ್ರ ರಂಜಾನ್ ಅನ್ನು ಅಸ್ಪೃಶ್ಯರನ್ನಾಗಿ ಮಾಡುತ್ತದೆ ಎಂದು ಅವರು ಹೇಳಿದರು. ಜೈ ಭೀಮ್. ಜೈ ಮಿಮ್ ಏಕತೆ ಚಿರಾಯುವಾಗಲಿ. ದಲಿತ ಸಹೋದರರೇ. ಹೀಗೆ ಒಗ್ಗಟ್ಟನ್ನು ಪ್ರದರ್ಶಿಸುತ್ತಲೇ ಇರಿ. ಮುಸ್ಲಿಂ ಬಗ್ಗೆ ವಿಷಯವಾಗಿದ್ದರೆ. ಸುಮ್ಮನಿರಿ, ಇಲ್ಲದಿದ್ದರೆ ನಿಮ್ಮ ಏಕತೆ ಮತ್ತು ಸಹೋದರತ್ವ ಹಾಳಾಗುತ್ತದೆ.

ಜಿತೇಂದ್ರ ಪ್ರತಾಪ್ ಸಿಂಗ್ ಎಂಬ ಮತ್ತೊಬ್ಬ ಎಕ್ಸ್‌ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದು, ‘ಸಹರಾನ್‌ಪುರದಲ್ಲಿ ದಲಿತ ಯುವಕನ ಮದುವೆ ಮೆರವಣಿಗೆ ಸಾಗುತ್ತಿತ್ತು. ವರನು ಕುದುರೆ ಮೇಲೆ ಕುಳಿತಿದ್ದ ವರನನ್ನು, ಮುಸ್ಲಿಮರ ಗುಂಪು ತಡೆದು ನಿಲ್ಲಿಸಿ ವರದನನ್ನು ಕುದುರೆಯಿಂದ ಬೀಳಿಸಿ ಮೆರವಣಿಗೆಗೆ ಅಡ್ಡಿಪಡಿಸಿದ್ದಾರೆ. ನಂತರ ಐದು ಪೊಲೀಸ್ ಠಾಣೆಗಳ ಭಾರೀ ಪೊಲೀಸ್ ಬಲದಿಂದ ಆ ದಲಿತ ಯುವಕನ ಮದುವೆ ಮೆರವಣಿಗೆಯನ್ನು ಮುಸ್ಲಿಮರಿಂದ ರಕ್ಷಿಸಲಾಯಿತು. ಯುಪಿಯಲ್ಲಿ ಯೋಗಿರಾಜ್ ಇರುವ ಕಾರಣ, ದಲಿತ ಕಾಯ್ದೆ ಸೇರಿದಂತೆ ಹಲವು ಕಠಿಣ ಸೆಕ್ಷನ್‌ಗಳ ಅಡಿಯಲ್ಲಿ ಎಲ್ಲ ಅಪರಾಧಿಗಳನ್ನು ಬಂಧಿಸಲಾಗಿದೆ ಎಂದು ಪೋಸ್ಟ್‌ ಮಾಡಿದ್ದಾರೆ.

ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯಂತೆ ದಲಿತ ಯುವಕನ ಮದುವೆ ಮೆರವಣಿಗೆ ಮುಸಲ್ಮಾನರು ಹೆಚ್ಚಿರುವ ಪ್ರದೇಶದಲ್ಲಿ ಸಾಗುವುದನ್ನು ಪ್ರಶ್ನಿಸಿ ಮುಸ್ಲಿಮರು ಮದುವೆ ಮೆರವಣಿಹೆ ಮೇಲೆ ದಾಳಿ ನಡೆಸಿರುವುದು ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿರುವಂತೆ ದಲಿತ ಯುವಕ ಕುದುರಾಯ ಮೇಲೆ ಕುಳಿತು ಮೆರವಣಿಗೆ ಬರುತ್ತಿದ್ದಾಗ ಜಾತಿಯ ಕಾರಣಕ್ಕೆ ಯುವಕನ್ನು ಕುದುರೆಯಿಂದ ಬೀಳಿಸಿ ಹಲ್ಲೆ ನಡೆಸಿದ್ದಾರೆಯೇ ಎಂದು ಪರಿಶೀಲಿಸಲು ಸಂಬಂಧಿತ ಕೀವರ್ಡ್‌ಗಳೊಂದಿಗೆ Google ನಲ್ಲಿ ಪರಿಶೀಲಿಸಿದಾಗ,ಅಮರ್ ಉಜಾಲಾ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಸುದ್ದಿಯೊಂದು ಲಭ್ಯವಾಗಿದೆ, ವರದಿಯ ಪ್ರಕಾರ ರಂಜಾನ್ ಮಾಸದ ಪ್ರಯುಕ್ತ ಮುಸ್ಲಿಂ ಸಮುದಾಯದವರು ಉಪವಾಸ ಮುರಿಯುವ ವೇಳೆ ಮದುವೆ ವೆರವಣಿಗೆಯಲ್ಲಿ ಬಳಸಲಾಗಿದ್ದ ಡಿಜೆ ಶಬ್ದದಿಂದ ತೊಂದರೆ ಉಂಟಾದ ಕಾರಣಕ್ಕೆ ಎರಡು ಗುಂಪಿನ ನಡುವೆ ಮಾತಿನ ಚಕಮಕಿ ನಡೆದಿದೆ ಎಂದು ಉಲ್ಲೇಖಿಸಲಾಗಿದೆ.

Muslims stopped a Dalit youth's horse ride, police reached and allowed the procession to be taken out without

ಮಾರ್ಚ್ 6, 2025 ರ ಅಮರ್ ಉಜಾಲಾ ಅವರ ಸುದ್ದಿ ಪ್ರಕಾರ, ‘ಸಹರಾನ್‌ಪುರದ ಚಿಲ್ಕಾನಾ ಪೊಲೀಸ್ ಠಾಣೆ ವ್ಯಾಪ್ತಿಯ ತೋಡರ್‌ಪುರ ಗ್ರಾಮದಲ್ಲಿ ಮದುವೆ ಮೆರವಣಿಗೆಯಲ್ಲಿ ಡಿಜೆ ನುಡಿಸುವ ಬಗ್ಗೆ ವಿವಾದವಿತ್ತು. ಬೆಹತ್‌ನ ಪಠಾಣಪುರದಿಂದ ಮದುವೆ ಮೆರವಣಿಗೆ ಬಂದಿತ್ತು. ಮೆರವಣಿಗೆಯು ಮುಸ್ಲಿಂ ಸಮುದಾಯದ ಪ್ರದೇಶದ ಮೂಲಕ ಸಾಗುತ್ತಿದ್ದಾಗ, ಕೆಲವರು ಉಪವಾಸ ಮುರಿಯುವ ಸಮಯವನ್ನು ಉಲ್ಲೇಖಿಸಿ ಡಿಜೆ ನುಡಿಸುವುದನ್ನು ವಿರೋಧಿಸಿದರು ಮತ್ತು ಮೆರವಣಿಗೆಯನ್ನು ನಿಲ್ಲಿಸಿದರು.

ಮುಸ್ಲಿಂ ಸಮುದಾಯದ ಜನರು ಉಪವಾಸ ಮುರಿಯುವ ಸಮಯ ಬಂದಿದೆ, ಆದ್ದರಿಂದ ಡಿಜೆ ನಿಲ್ಲಿಸಬೇಕು ಎಂದು ಸುದ್ದಿಯಲ್ಲಿ ಹೇಳಲಾಗಿದೆ. ಈ ವೇಳೆ ಮದುವೆಗೆ ಬಂದಿದ್ದವರು ಹಾಗೂ ಮುಸ್ಲಿಂ ಸಮುದಾಯದವರ ನಡುವೆ ವಾಗ್ವಾದ ನಡೆದಿದೆ. ನಂತರ ಹಿಂದೂ ಸಂಘಟನೆಗಳ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿ ಗಲಾಟೆ ಆರಂಭಿಸಿದರು. ವಿಷಯ ವಿಕೋಪಕ್ಕೆ ಹೋಗುವುದನ್ನು ಕಂಡ ಪೊಲೀಸರು ಸ್ಥಳಕ್ಕೆ ಆಗಮಿಸಿ ಎರಡೂ ಕಡೆಯವರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿದರು. ಪರಸ್ಪರ ಒಪ್ಪಿಗೆ ಮೇರೆಗೆ ಡಿಜೆ ಇಲ್ಲದೆಯೇ ಮೆರವಣಿಗೆ ನಡೆಸುವುದಾಗಿ ನಿರ್ಧರಿಸಲಾಯಿತು. ಈ ಸುದ್ದಿಯಲ್ಲಿ ಸಹರಾನ್‌ಪುರ ಪೊಲೀಸರ ಹೇಳಿಕೆಯೂ ಸೇರಿದೆ.

ಈ ವಿಷಯದ ಬಗ್ಗೆ ಸಹರಾನ್‌ಪುರದ ಎಎಸ್‌ಪಿ ವಿವೇಕ್ ತಿವಾರಿ ಮಾತನಾಡಿ, ‘ಮದುವೆ ಮೆರವಣಿಗೆಯನ್ನು ಮುಸ್ಲಿಮರ ಬೀದಿಯಲ್ಲಿ ಸಾಗುವಾಗ ವಿವಾದವಾಗಿತ್ತು, ಆ ವೇಳೆ ಉಪವಾಸ ಮುರಿಯುವ ಸಮಯ ಬಂದಿದ್ದರಿಂದ ಉಭಯ ಗುಂಪುಳು ಪರಸ್ಪರ ಒಪ್ಪಿಗೆ ಮೇರೆಗೆ ಡಿಜೆ ಇಲ್ಲದೆ ಮೆರವಣಿಗೆ ನಡೆಸುವಂತೆ ತಿಳಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನಮ್ಮ ಪೊಲೀಸ್‌ ತಂಡ ಮುತುವರ್ಜಿ ವಹಿಸಿದೆ ಎಂದು ಹೇಳಿದ್ದಾರೆ.

ಉತ್ತರಪ್ರದೇಶದ ಸಹರಾನ್‌ಪುರದಲ್ಲಿ ಮುಸ್ಲಿಮರು ದಲಿತ ವರನನ್ನು ಕುದುರೆ ಮೇಲಿಂದ ಕೆಳಗಿಳಿಸಿ ಹಲ್ಲೆ ನಡೆಸಿದ್ದಾರೆ ಎಂಬುದು ಸುಳ್ಳು. ಮದುವೆ ಮೆರವಣಿಗೆ ವೇಳೆ ಡಿಜೆ ಹಾಕಲಾಗಿತ್ತು, ಮುಸ್ಲಿಮರಿಗೆ ಉಪವಾಸ ಮುರಿಯುವ ಸಮಯವಾದ್ದರಿಂದ ಡಿಜೆಯನ್ನು ನಿಲ್ಲಿಸುವಂತೆ ತಿಳಿಸಲಾಗಿತ್ತು. ಇಷ್ಟರಲ್ಲಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಎರಡು ಗುಂಪುಗಳ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮೆರವಣಿಗೆ ಮುಂದೆ ಸಾಗುವಂತೆ ಮಾಡಿದರು. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಮಲ್ಲಿಕಾರ್ಜುನ ಖರ್ಗೆಯವರ ಇಫ್ತಾರ್ ಕೂಟದ ಹಳೆಯ ಫೋಟೊವನ್ನು ಇತ್ತೀಚಿನದ್ದು ಎಂದು ತಪ್ಪಾಗಿ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights