FACT CHECK | ಪಾಕಿಸ್ತಾನದ ಸೇನಾ ಮುಖ್ಯಸ್ಥರೊಂದಿಗೆ ಪ್ರಧಾನಿ ಮೋದಿ ಫೋಟೊ ವೈರಲ್ ! ವಾಸ್ತವವೇನು?
ಪಾಕಿಸ್ತಾನದ ಸೇನಾ ಮುಖ್ಯಸ್ಥರೊಂದಿಗೆ ಪ್ರಧಾನಿ ಮೋದಿ ಜೊತೆಗಿರುವ ಫೋಟೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಇಬ್ಬರು ನಾಯಕರು ನಕ್ಷೆಯೊಂದನ್ನು ಹಿಡಿದು ಜೊತೆಗಿರುವುದನ್ನು ನೋಡಬಹುದು.
“Indian administered Kashmir”
Asim Munir presents Kashmir map as a gift to Narendra Modi#قوم_کی_شَہ_رَگ_کو_رہاکرو@TeamiPians pic.twitter.com/dajCCWTqSZ— Esharib Graiwall (@EsharibG) February 27, 2025
@EsharibG ಎಂಬ ಎಕ್ಸ್ ಬಳಕೆದಾರರು ಪ್ರಧಾನಿ ಮೋದಿ ಮತ್ತು ಪಾಕಿಸ್ತಾನಿ ಸೇನಾ ಮುಖ್ಯಸ್ಥರ ಫೋಟೋವನ್ನು ಹಂಚಿಕೊಂಡಿದ್ದಾರೆ. ” ಅಸೀಂ ಮುನೀರ್ ಅವರು ನರೇಂದ್ರ ಮೋದಿ ಅವರಿಗೆ ಕಾಶ್ಮೀರದ ನಕ್ಷೆಯನ್ನು ಉಡುಗೊರೆಯಾಗಿ ನೀಡಿದರು” ಎಂದು ಬರೆದಿದ್ದಾರೆ.ಇದೇ ಪ್ರತಿಪಾದನೆಯೊಂದಿಗೆ ಹಲವು ಸಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್ಅನ್ನು ಹಂಚಿಕೊಂಡಿದ್ದು, ಈ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯಂತೆ, ಪ್ರಧಾನಿ ಮೋದಿ ಮತ್ತು ಅಸೀಂ ಮುನೀರ್ ಇಬ್ಬರು ಜೊತೆಯಾಗಿರುವ ಫೋಟೊವನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, 27 ಫೆಬ್ರವರಿ 2025ರಂದು @thebilal_a ಎಂಬ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡ ಫೋಟೋ ಲಭ್ಯವಾಗಿದೆ. ಈ ಖಾತೆಯನ್ನು ಪರಿಶೀಲಿಸಿದಾಗ, Bilal AI ಎಂಬ ಈ ಖಾತೆಯು ಎಐ ರಚಿಸಿದ ವಿಷಯವನ್ನು ಪೋಸ್ಟ್ ಮಾಡುತ್ತದೆ ಎಂದು ತಿಳಿದುಬಂದಿದೆ. ಈ ಖಾತೆಯಲ್ಲಿನ ಎಲ್ಲಾ ಪೋಸ್ಟ್ಗಳು AIಗೆ ಸಂಬಂಧಿತವಾಗಿದ್ದವು.
“Indian administered Kashmir”
Asim Munir presents Kashmir map as a gift to Narendra Modi pic.twitter.com/7HTtbmJvIv— Bilal AI (@thebilal_a) February 27, 2025
ವೈರಲ್ ಚಿತ್ರದ ನೈಜತೆಯನ್ನು ತಿಳಿಯಲು Decopy.ai ಎಂಬ ಎಐ ತಂತ್ರಜ್ಞಾನ ಬಳಸಿಕೊಂಡು ಪ್ರಧಾನಿ ಮೋದಿ ಮತ್ತು ಪಾಕಿಸ್ತಾನಿ ಸೇನಾ ಮುಖ್ಯಸ್ಥ ಜನರಲ್ ಸೈಯದ್ ಅಸೀಂ ಮುನೀರ್ ಅಹ್ಮದ್ ಶಾ ಅವರ ಫೋಟೋವನ್ನು ಪರಿಶೀಲಿಸಲಾಯಿತು. ಅದರಲ್ಲಿ ವೈರಲ್ ಫೋಟೋ ಶೇಕಡಾ 90 ರಷ್ಟು ನಕಲಿ ಎಂದು ಫಲಿತಾಂಶ ಬಂದಿತು. ಬಳಿಕ ಗೂಗಲ್ನಲ್ಲಿ ಪ್ರಧಾನಿ ಮೋದಿ ಮತ್ತು ಸೈಯದ್ ಅಸೀಂ ಮುನೀರ್ ಅಹ್ಮದ್ ಶಾ ಅವರ ಭೇಟಿಯ ಕುರಿತು ಮಾಧ್ಯಮಗಳು ವರದಿ ಮಾಡಿವೆಯೇ ಎಂದು ಸರ್ಚ್ ಮಾಡಿದಾಗ ಅಂತಹ ಯಾವುದೇ ವರದಿಗಳು ಲಭ್ಯವಾಗಿಲ್ಲ.
ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪ್ರಧಾನಿ ಮೋದಿ ಮತ್ತು ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಸೈಯದ್ ಅಸೀಂ ಮುನೀರ್ ಅಹ್ಮದ್ ಶಾ ಅವರ ಭೇಟಿಯ ಫೋಟೋ ಸುಳ್ಳು. ವೈರಲ್ ಫೋಟೋ ಎಐನಿಂದ ರಚಿಸಲ್ಪಟ್ಟಿರುವುದು ಸ್ಪಷ್ಟವಾಗಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ :

