FACT CHECK | ಗೋವಿನ ಮೇಲೆ ಹೆಬ್ಬಾವೊಂದು ದಾಳಿ ನಡೆಸಿದೆ ಎಂದು AI ವಿಡಿಯೋ ಹಂಚಿಕೆ
ಹೆದ್ದಾರಿಯೊಂದರಲ್ಲಿ ದನವನ್ನು ಹೆಬ್ಬಾವೊಂದು ನುಂಗುತ್ತಿರುವ ವಿಡಿಯೋವೊಂದು ಸಾಮಾಜಿಕ ಮಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದು ಪ್ರಕೃತಿಯ ವಿಸ್ಮಯ, ಈ ರೀತಿಯ ಆಹಾರ ಸರಪಳಿಯನ್ನು ನೋಡಲು ಸಿಗುವುದು ಬಲು ವಿರಳ. ಹೆಬ್ಬಾವು ತನ್ನನ್ನು ತಿನ್ನಲು ಯತ್ನಿಸಿದರು ಗೋವು ಯಾವುದೇ ರೀತಿಯಾದ ಪ್ರತಿಕ್ರಿಯೆ ನೀಡಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿ ಹಲವರು ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಜಾನಕಿರಾಮ್ ವಾಸುಪಲ್ಲಿ ಎಂಬ ಯೂಟ್ಯೂಬ್ ಚಾನೆಲ್ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಹೆಬ್ಬಾವು ದನವನ್ನು ನುಂಗಲು ಯತ್ನಿಸುವುದು ಮತ್ತು ಹೆಬ್ಬಾವಿನಿಂದ ದನವನ್ನು ರಕ್ಷಿಸಲು ಹಲವರು ಪ್ರಯತ್ನಿಸುವುದು ಮತ್ತು ಗೋವನ್ನು ರಕ್ಷಿಸುವಲ್ಲಿ ಯಶಸ್ವಿಯಾಗುವುದು ಕಂಡುಬಂದಿದೆ. ಇದೇ ರೀತಿಯ ಶೀರ್ಷಿಕೆಯೊಂದಿಗೆ ಯೂಟ್ಯೂಬ್ನಲ್ಲಿ ಹಂಚಿಕೊಂಡ ವಿಡಿಯೋವನ್ನು ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋವನ್ನು ಪರಿಶೀಲಿಸಲು ಕೀ ವರ್ಡ್ಗಳನ್ನು ಬಳಸಿಕೊಂಡು ವಿಡಿಯೋಗೆ ಸಂಬಂಧಿಸಿದಂತೆ ಯಾವುದಾದರೂ ವರದಿಗಳು ಪ್ರಕಟವಾಗಿವೆ ಎಂದು ಸರ್ಚ್ ಮಾಡಿದಾಗ, ಯಾವುದೇ ಅಧಿಕೃತ ವರದಿಗಳು ಕಂಡುಬಂದಿಲ್ಲ. ಒಂದು ವೇಳೆ ವಿಡಿಯೋ ನಿಜವಾಗಿದ್ದರೆ ಹಲವು ಮಾಧ್ಯಮಗಳು ಖಂಡಿತವಾಗಿ ವರದಿಯನ್ನು ಮಾಡುತ್ತಿದ್ದವು. ಆದರೆ ಈ ವಿಡಿಯೋ ಕುರಿತು ಯಾವುದೇ ವರದಿಗಳು ಪ್ರಕಟಗೊಳ್ಳದಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿತ್ತು.

ಈ ಹಿನ್ನೆಲೆಯಲ್ಲಿ ವೈರಲ್ ವಿಡಿಯೋವಿನ ವಿವಿಧ ಕೀ ಪ್ರೇಮ್ಗಳನ್ನು ಬಳಸಿಕೊಂಡು AI ವಿಡಿಯೋ ಮತ್ತು ಫೋಟೋಗಳನ್ನು ಪತ್ತೆ ಹಚ್ಚುವ ಸಾಧನವಾದ ಹೈವ್ ಮಾಡರೇಷನ್ AI ಡಿಟೆಕ್ಟಿವ್ ಟೂಲ್ ವೆಬ್ಸೈಟ್ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ಶೇ. 99.9ರಷ್ಟು ವೈರಲ್ ವಿಡಿಯೋ AIನಿಂದ ನಿರ್ಮಿಸಲಾಗಿದೆ ಎಂಬ ಪಲಿತಾಂಶವನ್ನು ನೀಡಿದೆ. ಇದರಿಂದ ವೈರಲ್ ವಿಡಿಯೋವನ್ನು ಸಂಪೂರ್ಣವಾಗಿ AIನಿಂದ ನಿರ್ಮಿಸಲಾಗಿದೆ ಎಂಬುದು ಖಚಿತವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ ಹೆಬ್ಬಾವು ದನವನ್ನು ನುಂಗಲು ಯತ್ನಿಸಿದೆ ಎಂಬ ವಿಡಿಯೋ AIನಿಂದ ರಚಿಸಲಾಗಿದೆ. ಇದು ನಿಜವಾದ ವಿಡಿಯೋ ಅಲ್ಲ. ಈ ಘಟನೆ ವಾಸ್ತವವಾಗಿ ನಡೆದಿಲ್ಲ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಜಿಯೋ ಕಂಪನಿಯಿಂದ ಹೋಳಿ ಹಬ್ಬದ ಪ್ರಯುಕ್ತ 700 ರೂ ಕೊಡುಗೆ ! ವಾಸ್ತವವೇನು?

