FACT CHECK | ಸಿಂಹವೊಂದು ತನ್ನ ಸಮಾಧಿಯ ಗುಂಡಿಯನ್ನು ಸ್ವತಃ ತಾನೆ ತೋಡಿಕೊಳ್ಳುತ್ತಿದೆ ಎಂಬ ವಿಡಿಯೋದ ಅಸಲೀಯತ್ತೇನು?
ಸಾಮಾಜಿಕ ಮಾಧ್ಯಮದಲ್ಲಿ ಅಸಂಖ್ಯಾತ ವಿಡಿಯೋಗಳು ನಮ್ಮ ಗಮನವನ್ನು ಸೆಳೆಯುತ್ತವೆ, ಆದರೆ ಕೆಲವು ನಮ್ಮನ್ನು ಆಶ್ಚರ್ಯಚಕಿತಗೊಳಿಸುತ್ತವೆ. ಪ್ರಸ್ತುತ ಅಂತರ್ಜಾಲದಲ್ಲಿ ಸದ್ದು ಮಾಡುತ್ತಿರುವ ಅಂತಹ ಒಂದು ವಿಡಿಯೋದಲ್ಲಿ ಸಿಂಹದ ಅನಿರೀಕ್ಷಿತ ನಡವಳಿಕೆಯನ್ನು ತೋರಿಸಲಾಗಿದೆ.
![]()
ನಾಯಿಗಳು ಸಾಮಾನ್ಯವಾಗಿ ನೆಲವನ್ನ ಅಗೆಯುವುದನ್ನು ನೋಡಿದ್ದೇವೆ. ಆದರೆ ಸಿಂಹ ನೆಲವನ್ನು ಅಗೆಯುತ್ತಿರುವ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಸಿಂಹದ ವರ್ತನೆಯ ಹಿಂದಿನ ಉದ್ದೇಶಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿರುವ ವೀಕ್ಷಕರು ಸಿಂಹ ಬೇಸಿಗೆ ಧಗೆಯನ್ನು ತಾಳಲಾರದೆ ಶಾಖದಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತಿರಬಹುದು ಎಂದು ಕೆಲವರು ಪ್ರತಿಪಾದಿಸಿದರೆ. ಇನ್ನೂ ಕೆಲವರು ಸಿಂಹವು ತನ್ನದೇ ಆದ ಸಮಾಧಿಯನ್ನು ಅಗೆಯುತ್ತಿದೆ ಎಂದು ಹೇಳಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ವಿಡಿಯೋ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು, ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, Nature is Metal ಎಂಬ ಇನ್‌ಸ್ಟಾಗ್ರಾಮ್ ಪೇಜ್ ನಲ್ಲಿ ವಿಡಿಯೋ ಲಭ್ಯವಾಗಿದೆ. ಈ ಪುಟದಲ್ಲಿ ಹಂಚಿಕೊಂಡ ವಿಡಿಯೋದಲ್ಲಿಯೂ ವೈರಲ್ ವಿಡಿಯೋದಲ್ಲಿರುವಂತೆಯೇ ಸಿಂಹವೊಂದು ನೆಲದಲ್ಲಿ ಗುಂಡಿಯನ್ನು ತೋಡುವುದನ್ನು ಕಾಣಬಹುದು.
View this post on Instagram
ಇನ್‌ಸ್ಟಾಗ್ರಾಮ್ ಪೋಸ್ಟ್ ನಲ್ಲಿ ತಿಳಿಸಿರುವಂತೆ, ಸಿಂಹವೊಂದು ತನ್ನ ಹಸಿವನ್ನು ನೀಗಿಸಿಕೊಳ್ಳಲು, ನೆಲದೊಳಗೆ ಅವಿತು ಕುಳಿತಿದ್ದ ಕಾಡುಹಂದಿಯನ್ನು ಹಿಡಿಯುವ ಸಲುವಾಗಿ ಸತತ ಏಳುಗಂಟೆ ನೆಲವನ್ನು ಅಗೆದು ಹಂದಿಯನ್ನು ಹಿಡಿದು ಯಶಸ್ವಿಯಾದ ಸಿಂಹ ಎಂದು ಬರಯಲಾಗಿದೆ.
ಕೀನ್ಯಾದ ಮಾಸಾಯಿ ಮಾರಾ ರಾಷ್ಟ್ರೀಯ ಅಭಯಾರಣ್ಯದಲ್ಲಿ ಕಾಡು ಹಂದಿಗಳನ್ನು ಬೇಟೆಯಾಡುವ ಸಲುವಾಗಿ ಸಿಂಹವು ನೆಲವನ್ನು ಅಗೆಯುತ್ತಿರುವುದನ್ನುWildest Kruger Sightingsಎಂಬ ಯೂಟ್ಯೂಬ್‌ನಲ್ಲಿ ಅಪ್ಲೋಡ್ ಮಾಡಲಾಗಿದೆ. ಈ ವಿಡಿಯೋಗೆ ನೀಡಲಾಗಿರುವ ವಿವರಣೆಯ ಪ್ರಕಾರ, ಈ ವಿಡಿಯೋ ಸುಮಾರು ಒಂದೂವರೆ ನಿಮಿಷ ಇದೆ. ಸಿಂಹವು ಹಂದಿಯನ್ನು ಹಿಡಿದು ಕೊಲ್ಲುತ್ತಿರುವುದನ್ನು ವಿಡಿಯೊದಲ್ಲಿ ವಿವರವಾಗಿ ತೋರಿಸಲಾಗಿದೆ ಎಂದು ತಿಳಿಸಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಕೀನ್ಯಾದ ಮಾಸಾಯಿ ಮಾರಾ ರಾಷ್ಟ್ರೀಯ ಅಭಯಾರಣ್ಯದಲ್ಲಿ ಸಿಂಹವೊಂದು ಆಹಾರಕ್ಕಾಗಿ ಕಾಡು ಹಂದಿಯನ್ನು ಬೇಟೆಯಾಡಲು ಅದು ಅವಿತಿದ್ದ ನೆಲವನ್ನು ಅಗೆಯುವ ದೃಶ್ಯವನ್ನು ಸಾಮಾಜಿಕ ಮಾಧ್ಯಮಗಳ ಬಳಕೆದಾರರು, ಸಿಂಹ ತನ್ನ ಅಂತಿಮ ಯಾತ್ರೆಯ ಸಂದರ್ಭದಲ್ಲಿ ತನ್ನ ಗುಂಡಿಯನ್ನು ತಾನೆ ತೆಗೆದುಕೊಳ್ಳುತ್ತಿದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಅಸ್ಸಾಂನಲ್ಲಿ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿದ ಶಾಸಕ ಓವೈಸಿಯ AIMIM ಪಕ್ಷದವನಲ್ಲ? ಮತ್ತ್ಯಾವ ಪಕ್ಷದ ಶಾಸಕ?

