FACT CHECK | RSS ಅನ್ನು ಬ್ಯಾನ್ ಮಾಡ್ತಾ ಕೆನಡಾ ಸರ್ಕಾರ?
RSS ಸಂಘಟನೆಯನ್ನು ಕೆನಡಾ ಸರ್ಕಾರ ಬ್ಯಾನ್ ಮಾಡಿದೆ. ಮತ್ತು ಸಂಘದ ಕಾರ್ಯಕರ್ತರು ಕೆನಡಾವನ್ನು ತೊರೆಯುವಂತೆ ಆದೇಶಿಸಿದೆ ಎಂಬ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ವೈರಲ್ ಆಗಿರುವ ಪೋಸ್ಟ್ಗಳಲ್ಲಿ ಕೆನಡಾ ಸರ್ಕಾರವು RSS ಅನ್ನು ನಿಷೇಧಿಸಿದೆ. ಅದರ ಕಾರ್ಯಕರ್ತರು ಕೆನಡಾವನ್ನು ಬಿಟ್ಟು ಹೋಗುವಂತೆ ಆದೇಶಿಸಿದೆ. ನಿಧಾನವಾಗಿ ಇಡೀ ಜಗತ್ತಿನಲ್ಲಿ RSS ಅನ್ನು ನಿಷೇಧಿಸಲಾಗುವುದು ಎಂದು ಹಂಚಿಕೊಳ್ಳಲಾಗುತ್ತಿದೆ.
Big breaking news
कनाडा सरकार ने RSS पर बैन लगा दिया हे और इसके वर्करो को कनाडा छोडने का आदेश जारी कर दिया है।
शुरुआत हो चुकी हे धीरे धीरे पुरी दुनिया मे RSS बैन होने वाली है।बज गया डंका…. pic.twitter.com/eg5kTrHZUM
— Chandra Shekhar (@Chandra61358219) April 14, 2025
@Chandra61358219 ಎಂಬ ಎಕ್ಸ್ (ಟ್ವೀಟ್) ಖಾತೆಯ ಬಳಕೆದಾರರು ಒಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ, “ಕೆನಡಾ ಸರ್ಕಾರವು RSS ಅನ್ನು ನಿಷೇಧಿಸಿದೆ. ಅದರ ಕಾರ್ಯಕರ್ತರು ಕೆನಡಾವನ್ನು ತೊರೆಯುವಂತೆ ಆದೇಶಿಸಿದೆ. ಇದು ಆರಂಭವಾಗಿದೆ. ನಿಧಾನವಾಗಿ ಇಡೀ ಜಗತ್ತಿನಲ್ಲಿ RSS ಅನ್ನು ನಿಷೇಧಿಸಲಾಗುವುದು” ಎಂದು ಬರೆಯಲಾಗಿದೆ.
ಇದೇ ರೀತಿಯ ಹೇಳಿಕೆಗಳೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್ಅನ್ನು ಹಂಚಿಕೊಂಡಿದ್ದು ಅವುಗಳನ್ನು ಇಲ್ಲಿ ನೋಡಬಹುದು, ಹಾಗಿದ್ದರೆ ಕೆನಡಾ ಸರ್ಕಾರವು RSS ಅನ್ನು ನಿಷೇಧಿಸಿದೆ ಎಂದು ಹಂಚಿಕೊಳ್ಳಲಾದ ಪೋಸ್ಟ್ಗಳಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ನಲ್ಲಿ ಸರ್ಚ್ ಮಾಡಿದಾಗ, ಒಂದು ವರ್ಷದ ಹಿಂದಿನ ಯೂಟ್ಯೂಬ್ ವಿಡಿಯೋ ಲಭ್ಯವಾಗಿದೆ. 7 ನಿಮಿಷ 30 ಸೆಕೆಂಡುಗಳ ವಿಡಿಯೋದಲ್ಲಿ 5 ನಿಮಿಷಗಳ ಭಾಗವನ್ನು ವೈರಲ್ ಮಾಡಲಾಗಿತ್ತು. ಇದರಿಂದ, ವೈರಲ್ ವಿಡಿಯೋ ಒಂದು ವರ್ಷದ ಹಿಂದಿನದು ಎಂದು ತಿಳಿದುಬಂದಿದೆ.
ವೈರಲ್ ಆದ ವಿಡಿಯೋದಲ್ಲಿ RSS ಅನ್ನು ನಿಷೇಧಿಸುವಂತೆ ಹೇಳುತ್ತಿರುವ ವ್ಯಕ್ತಿ NCCM ನ CEO ಆಗಿದ್ದಾರೆ. ಗೂಗಲ್ನಲ್ಲಿ NCCM ಎಂದು ಸರ್ಚ್ ಮಾಡಿದಾಗ, NCCM ಎಂದರೆ ನ್ಯಾಷನಲ್ ಕೌನ್ಸಿಲ್ ಫಾರ್ ಕೆನಡಿಯನ್ ಮುಸ್ಲಿಮ್ಸ್ (NCCM). ಇದು ಸ್ವತಂತ್ರ, ಲಾಭರಹಿತ ಸಂಸ್ಥೆ ಎಂದು ತಿಳಿದುಬಂದಿದೆ. ಈ ಸಂಸ್ಥೆಯು ಕೆನಡಾ ಸರ್ಕಾರಕ್ಕೆ ಮನವಿ ಮಾಡಿತ್ತು. ಆದರೆ, ಇದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಕೆನಡಾ ಸರ್ಕಾರದ ಆದೇಶ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ, ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಕೆನಡಾ ಸರ್ಕಾರದ ಆದೇಶವಲ್ಲ. ಅದು ಒಂದು ಲಾಭರಹಿತ ಸಂಸ್ಥೆಯ ಮನವಿ ಅಷ್ಟೇ ಎಂದು ಸ್ಪಷ್ಟವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಕೆನಡಾ ಸರ್ಕಾರವು RSS ಅನ್ನು ನಿಷೇಧಿಸಿದೆ ಎಂಬುದು ಸುಳ್ಳು. ನ್ಯಾಷನಲ್ ಕೌನ್ಸಿಲ್ ಫಾರ್ ಕೆನಡಿಯನ್ ಮುಸ್ಲಿಮ್ಸ್ (NCCM) ಎಂಬ NGO RSS ಅನ್ನು ನಿಷೇಧಿಸುವಂತೆ ಕೆನಡಾ ಸರ್ಕಾರಕ್ಕೆ ಮನವಿ ಮಾಡಿತ್ತು. ಆದರೆ ಕೆನಡಾ ಸರ್ಕಾರ RSS ಅನ್ನು ಬ್ಯಾನ್ ಮಾಡಿಲ್ಲ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಮೆಟ್ರೋ ರೈಲಿನಲ್ಲಿ ಯುವಕ-ಯುವತಿಯ ಕಿಸ್ಸಿಂಗ್ ವಿಡಿಯೋ ಇತ್ತೀಚಿನದಲ್ಲ

