FACT CHECK | ಬ್ರಾಹ್ಮಣರ ಹೆಣ್ಣುಮಕ್ಕಳನ್ನು ದಲಿತರಿಗೆ ಮದುವೆ ಮಾಡಿಸಿದ್ರೆ ಜಾತಿ ವ್ಯವಸ್ಥೆ ನಾಶವಾಗುತ್ತೆ ಎಂದು ಹೇಳಿದ್ರಾ RSS ಮುಖ್ಯಸ್ಥ ಮೋಹನ್ ಭಾಗವತ್
RSS ಮುಖಂಡ ಮೋಹನ್ ಭಾಗವತ್ ಹೇಳಿದ್ದಾರೆ ಎನ್ನಲಾದ ಪೋಸ್ಟ್‌ವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಬ್ರಾಹ್ಮಣರ ಹೆಣ್ಣುಮಕ್ಕಳನ್ನು ದಲಿತರ ಮನೆಗೆ ಮದುವೆ ಮಾಡುವುದರಿಂದ ಜಾತಿ ವ್ಯವಸ್ಥೆ ಹೋಗಲಾಡಿಸಬಹುದು ಎಂದು RSS ಪ್ರಮುಖ ಮೋಹನ್ ಭಾಗವತ್ ಹೇಳಿರುವುದಾಗಿ ಹೇಳಿಕೆಯೊಂದು ವೈರಲ್ ಆಗಿದೆ. ಮೋಹನ್ ಭಾಗವತ್ ಅವರ ಫೋಟೋದೊಂದಿಗೆ ಈ ಹೇಳಿಕೆ ಪೋಸ್‌ರ್ ರೂಪದಲ್ಲಿ ಪ್ರಸಾರವಾಗುತ್ತಿದೆ.
ब्राह्मणों की बेटी दलित के घर ब्याहने को कह रहे मोहन भागवत। वहीं संघी राजपूतों को दलितों के खिलाफ हमले के लिए उकसाया जा रहा।
तो गालीबाज, कट्टर हिंदुत्व के सिरमौर ब्राह्मणों आगे बढ़ो। राजपूत भाइयों के लिए कोई निर्देश नहीं है यथास्थिति में रहो। pic.twitter.com/syabpKkjho
— Awesh Tiwari (@awesh29) April 21, 2025
ಆವೇಶಿ ತಿವಾರಿ ಎಂಬ ಎಕ್ಸ್ ಬಳಕೆದಾರರು ಮೋಹನ್ ಭಾಗವತ್ ಅವರ ಹೇಳಿಕೆ ಇರುವ ಫೋಟೋವನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದರ ಜೊತೆಗೆ ಅವರು, “ಬ್ರಾಹ್ಮಣರ ಹೆಣ್ಣುಮಕ್ಕಳನ್ನು ದಲಿತರ ಮನೆಗೆ ಮದುವೆ ಮಾಡುವಂತೆ ಮೋಹನ್ ಭಾಗವತ್ ಕರೆ ನೀಡಿದ್ದಾರೆ. ಆದರೆ, ಸಂಘಿಗಳು ರಜಪೂತರಿಗೆ ದಲಿತರ ವಿರುದ್ಧ ದಾಳಿ ಮಾಡಲು ಪ್ರಚೋದನೆ ನೀಡುತ್ತಿದ್ದಾರೆ. ಕಟ್ಟರ್ ಹಿಂದುತ್ವದ ಬ್ರಾಹ್ಮಣರೇ ಮುಂದೆ ಬನ್ನಿ. ರಜಪೂತ ಸಹೋದರರಿಗೆ ಯಾವುದೇ ಸೂಚನೆ ಇಲ್ಲ. ನೀವು ಹಾಗೇ ಇರಿ,” ಎಂದು ಬರೆದುಕೊಂಡಿದ್ದಾರೆ.
ಇದೇ ರೀತಿಯ ಹೇಳಿಕೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಮೋಹನ್ ಭಾಗವತ್ ಅವರ ಈ ಫೋಟೋವನ್ನು ಹಂಚಿಕೊಂಡು ಬೇರೆ ಬೇರೆ ಪೋಸ್ಟ್‌ಗಳನ್ನು ಹಾಕಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
RSS ಮುಖಂಡ ಮೋಹನ್ ಭಾಗವತ್ ಹೇಳಿದ್ದಾರೆ ಎನ್ನಲಾದ ಹೇಳಿಕೆ ನಿಜವೇ ಎಂದು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಎಬಿಪಿ ನ್ಯೂಸ್‌ನ ಲೋಗೋ ಇರುವ ಒಂದು ಪೋಸ್ಟ್ ಲಭ್ಯವಾಗಿದೆ. ಇದರಲ್ಲಿ ಮೋಹನ್ ಭಾಗವತ್ ಅವರು ಜಾತಿ ವ್ಯವಸ್ಥೆ ಹೋಗಲಾಡಿಸುವ ಬಗ್ಗೆ ಹೇಳಿಕೆ ನೀಡಿರುವುದರ ಉಲ್ಲೇಖ ಇದೆ. “ಒಂದು ದೇವಸ್ಥಾನ, ಒಂದು ಬಾವಿ, ಒಂದು ಸ್ಮಶಾನದಿಂದ ಜಾತಿ ವ್ಯವಸ್ಥೆ ಹೋಗಲಾಡಿಸಬಹುದು” ಎಂದು ಅದರಲ್ಲಿ ಬರೆಯಲಾಗಿದೆ.
ನಂತರ ಎಬಿಪಿ ನ್ಯೂಸ್‌ನ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ವೈರಲ್ ಆಗಿರುವ ಗ್ರಾಫಿಕ್ ಇದೆಯಾ ಎಂದು ಸರ್ಚ್ ಮಾಡಿದಾಗ, ಇನ್‌ಸ್ಟಾಗ್ರಾಮ್ ಪೇಜ್‌ವೊಂದು ಲಭ್ಯವಾಗಿದೆ.
View this post on Instagram
ಎಬಿಪಿ ನ್ಯೂಸ್ ಈ ಗ್ರಾಫಿಕ್ಸ್ ಅನ್ನು ಹಂಚಿಕೊಂಡು, “RSS ಮುಖ್ಯಸ್ಥ ಮೋಹನ್ ಭಾಗವತ್ ಅವರು ಹಿಂದೂ ಸಮಾಜದಲ್ಲಿ ಜಾತಿ ಭೇದಗಳನ್ನು ಕೊನೆಗೊಳಿಸಲು ಮನವಿ ಮಾಡಿದ್ದಾರೆ. ‘ಒಂದು ದೇವಸ್ಥಾನ, ಒಂದು ಬಾವಿ ಮತ್ತು ಒಂದು ಸ್ಮಶಾನ’ ನೀತಿಯನ್ನು ಅಳವಡಿಸಿಕೊಳ್ಳುವ ಮೂಲಕ ಎಲ್ಲಾ ವರ್ಗಗಳಲ್ಲಿ ಸಾಮರಸ್ಯ ಮತ್ತು ಸಮಾನತೆ ತರಲು ಕರೆ ನೀಡಿದ್ದಾರೆ. ನಾವು ಎಲ್ಲಾ ವರ್ಗದವರಿಗೂ ಸಮಾನ ಗೌರವ ನೀಡಬೇಕು. ಅದೇ ನಮ್ಮ ಧರ್ಮ, ಅದೇ ನಮ್ಮ ಸಂಸ್ಕೃತಿ,” ಎಂದು ಬರೆಯಲಾಗಿದೆ.

ನಂತರ ಬ್ರಾಹ್ಮಣ – ದಲಿತರ ಮದುವೆ ಬಗ್ಗೆ ಹೇಳಿಕೆ ನೀಡಿದ್ದಾರೆಯೇ ಎಂದು ತಿಳಿದುಕೊಳ್ಳಲು ಗೂಗಲ್‌ನಲ್ಲಿ ಸರ್ಚ್ ಮಾಡಿದಾಗ, ಎನ್‌ಡಿಟಿವಿಯ ವರದಿ ಲಭ್ಯವಾಗಿದೆ. ಇದರಲ್ಲಿಯೂ ‘ಒಂದು ದೇವಸ್ಥಾನ, ಒಂದು ಬಾವಿ ಮತ್ತು ಒಂದು ಸ್ಮಶಾನ ಭೂಮಿ’ಯ ಬಗ್ಗೆ ಮಾತನಾಡಿರುವುದು ಮಾತ್ರ ಇದೆ. ಮದುವೆ ಬಗ್ಗೆ ಮಾತನಾಡಿರುವ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಒಟ್ಟಾರೆಯಾಗಿ ಹೇಳುವುದಾದರೆ, ಬ್ರಾಹ್ಮಣರ ಹೆಣ್ಣುಮಕ್ಕಳನ್ನು ದಲಿತರ ಮನೆಗೆ ಮದುವೆ ಮಾಡುವುದರಿಂದ ಜಾತಿ ವ್ಯವಸ್ಥೆ ಹೋಗಲಾಡಿಸಬಹುದು ಎಂದು RSS ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ ಎನ್ನಲಾದ ಹೇಳಿಕೆ ಸುಳ್ಳು. ಎಬಿಪಿ ನ್ಯೂಸ್‌ನ ಗ್ರಾಫಿಕ್ಸ್ಅನ್ನು ಎಡಿಟ್ ಮಾಡಿ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಮಹಿಳೆಯೊಬ್ಬರು ಪ್ರಧಾನಿ ಮೋದಿ ಮತ್ತು ಸಿಎಂ ಯೋಗಿ ವಿರುದ್ಧ ಘೋಷಣೆ ಕೂಗುತ್ತಿರುವ ವಿಡಿಯೋದ ಅಸಲೀಯತ್ತೇನು?

