FACT CHECK | ಪಹಲ್ಗಾಮ್ ದಾಳಿಗೆ ಗುಪ್ತಚರ ಇಲಾಖೆಯ ವೈಫಲ್ಯ ಕಾರಣವೆಂದು ಲೆಫ್ಟಿನೆಂಟ್ ಜನರಲ್ ಸುಚೀಂದ್ರ ಕುಮಾರ್ ಅವರನ್ನು ವಜಾಗೊಳಿಸ್ತಾ ಭಾರತ ಸರ್ಕಾರ?

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದರು, ಈ ಘಟನೆ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆ, ಸಾಮಾಜಿಕ ಮಾಧ್ಯಮಗಳಲ್ಲಿ ಹಲವಾರು ದಾರಿತಪ್ಪಿಸುವ ಮಾಹಿತಿಗಳು ಹರಡುತ್ತಿವೆ, ಹಲವಾರು ಪಾಕಿಸ್ತಾನ ಬೆಂಬಲಿತ ಖಾತೆಗಳು ಭಾರತೀಯ ಸೇನೆಯ ಉತ್ತರ ಕಮಾಂಡ್‌ನ ಮುಖ್ಯಸ್ಥರನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂಬ ಹೇಳಿಕೆಗಳೊಂದಿಗೆ ಪೋಸ್ಟ್‌ಅನ್ನ ಹಂಚಿಕೊಳ್ಳಲಾಗುತ್ತಿದೆ. 

ಪಹಲ್ಗಾಮ್‌ನಲ್ಲಿ ನಡೆದ ದಾಳಿಯ ಸಮಯದಲ್ಲಿ ಗುಪ್ತಚರ ವೈಫಲ್ಯದಿಂದಾಗಿ ಭಾರತ ಸೇನೆಯ ಉತ್ತರ ಕಮಾಂಡ್‌ನ ಮುಖ್ಯಸ್ಥರನ್ನು ತೆಗೆದುಹಾಕಿದೆ ಎಂದು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪಾಕಿಸ್ತಾನ ಪರ ಜನರು ಹೇಳಿಕೊಳ್ಳುತ್ತಿದ್ದಾರೆ.

India Tv - Fact Check, Fake news, indian army, Pakistani, Pahalgam Terror Attack, Terrorist Attack,

ತೈಮೂರ್ ಮಲಿಕ್ ಎಂಬ ಎಕ್ಸ್‌ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡು, ಹೀಗೆ ಬರೆದಿದ್ದಾರೆ, “ಪಹಲ್ಗಾಮ್ ಘಟನೆಯ ನಂತರ  ಭಾರತ ಉತ್ತರ ಕಮಾಂಡ್ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಸುಚೀಂದ್ರ ಕುಮಾರ್ ಅವರನ್ನು ವಜಾಗೊಳಿಸಲಾಗಿದೆ. ಆತುರದ ನಡೆಯಲ್ಲಿ, ಪ್ರಸ್ತುತ DCOAS (ತಂತ್ರ) ಆಗಿರುವ ಲೆಫ್ಟಿನೆಂಟ್ ಜನರಲ್ ಪ್ರತೀಕ್ ಶರ್ಮಾ ಅವರನ್ನು ಅಧಿಕಾರ ವಹಿಸಿಕೊಳ್ಳಲು  ಕರೆತರಲಾಗಿದೆ.” ಎಂದು ಬರೆದುಕೊಂಡಿದ್ದಾರೆ. 

ಇದೇ ರೀತಿಯ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದು, ಈ ಪೋಸ್ಟ್‌ಗಳಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಸರ್ಕಾರ ಉತ್ತರ ಕಮಾಂಡರ್ ಸುಚೀಂದ್ರ ಕುಮಾರ್ ಅವರನ್ನು ವಜಾಗೊಳಿಸಲಾಗಿದೆ ಎಂದು ಗೂಗಲ್ ಸರ್ಚ್ ಮಾಡಿದಾಗ, ಹೇಳಿಕೆಯನ್ನು ಬೆಂಬಲಿಸುವ ಯಾವುದೇ ಸುದ್ದಿಲಭ್ಯವಾಗಿಲ್ಲ. ಇದಲ್ಲದೆ, ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸರ್ಚ್ಮಾಡಿದಾಗ PIB ಯಿಂದ ಮಾಡಿದ X ಪೋಸ್ಟ್ ಲಭ್ಯವಾಗಿದೆ.

India Tv - Fact Check, Fake news, indian army, Pakistani, Pahalgam Terror Attack, Terrorist Attack,

PIB ಫ್ಯಾಕ್ಟ್ ಚೆಕ್ ಹಂಚಿಕೊಂಡ X ನ ಪೋಸ್ಟ್‌ನಲ್ಲಿ, ಈ ದಾಖಲೆಗಳನ್ನು “ನಕಲಿ” ಎಂದು ಹೇಳಲಾಗಿದೆ. PIB “ಪಹಲ್ಗಾಮ್ ಘಟನೆಯ ನಂತರ ಉತ್ತರ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಸುಚೀಂದ್ರ ಕುಮಾರ್ ಅವರನ್ನು ತಮ್ಮ ಹುದ್ದೆಯಿಂದ ತೆಗೆದುಹಾಕಲಾಗಿದೆ ಎಂದು ಹಲವಾರು ಪಾಕಿಸ್ತಾನ ಪರ ಸಾಮಾಜಿಕ ಮಾಧ್ಯಮ ಖಾತೆಗಳು ತಪ್ಪಾಗಿ ಹೇಳಿಕೊಂಡಿವೆ” ಎಂದು ಹೇಳಿದೆ.

“ಲೆಫ್ಟಿನೆಂಟ್ ಜನರಲ್ ಎಂವಿ ಸುಚೀಂದ್ರ ಕುಮಾರ್ ಏಪ್ರಿಲ್ 30 ರಂದು ನಿವೃತ್ತರಾಗುತ್ತಿದ್ದಾರೆ. ಲೆಫ್ಟಿನೆಂಟ್ ಜನರಲ್ ಪ್ರತೀಕ್ ಶರ್ಮಾ ಅವರನ್ನು ಹೊಸ ಉತ್ತರ ಸೇನಾ ಕಮಾಂಡರ್ ಆಗಿ ನೇಮಿಸಲಾಗುವುದು.” ಎಂಬ ವರದಿಯನ್ನು ಉಲ್ಲೇಖಿಸಿ PIB ಫ್ಯಾಕ್ಟ್‌ಚೆಕ್ ವರದಿ ಮಾಡಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಪಹಲ್ಗಾಮ್ ದಾಳಿಯ ನಂತರ ಉತ್ತರ ಕಮಾಂಡ್ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಸುಚೀಂದ್ರ ಕುಮಾರ್ ಅವರನ್ನು ವಜಾಗೊಳಿಸಲಾಗಿದೆ ಎಂಬ ವೈರಲ್ ಹೇಳಿಕೆ ಸಂಪೂರ್ಣವಾಗಿ ನಕಲಿ. ಕೆಲವು ಪಾಕಿಸ್ತಾನಿ ಬೆಂಬಲಿತ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಸುಳ್ಳು ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಪಹಲ್ಗಾಮ್ ದಾಳಿಯ ನಂತರ ಪಶ್ಚಿಮ ಬಂಗಾಳದ ವೈದ್ಯರೊಬ್ಬರು ಮುಸ್ಲಿಂ ರೋಗಿಗೆ ಚಿಕಿತ್ಸೆ ನೀಡಲು ನಿರಾಕರಿಸಿದ್ರಾ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights