FACT CHECK | ಡಾ. ಬಿ.ಆರ್. ಅಂಬೇಡ್ಕರ್ ಮತ್ತು RSS ಸಂಸ್ಥಾಪಕ ಹೆಡ್ಗೆವಾರ್ ಬೈಕ್ನಲ್ಲಿ ಸುತ್ತಾಡುತ್ತಿರುವ ಫೋಟೊ ನಕಲಿ
ಅಪರೂಪದ ಮತ್ತು ವಿಶೇಷ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಪ್ರಸಾರವಾಗುತ್ತಿದ್ದು, ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸಂಸ್ಥಾಪಕ ಕೆ.ಬಿ. ಹೆಡ್ಗೆವಾರ್ ಜೊತೆಗೆ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ (ದ್ವಿಚಕ್ರ ವಾಹನ) ಬೈಕ್ನಲ್ಲಿ ಕುಳಿತು ಡಬಲ್ ರೈಡ್ (ಸವಾರಿ ಮಾಡುತ್ತಿರುವ) ಹೋಗುತ್ತಿರುವ ಫೋಟೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು, ಈ ಪೋಸ್ಟ್ನಲ್ಲಿ ಫೋಟೋ ಛಾಯಾಗ್ರಾಹಕ ಕ್ರಿಸ್ಟೋಫರ್ ಜೆಮಿನಿ ಎಂದು ಹಂಚಿಕೊಳ್ಳಲಾಗಿದೆ.

RSS संस्थापक डॉक्टर हेडगेवार और डॉक्टर भीम राव अंबेडकर।
यह वर्षों पुरानी तस्वीर आज क्या संदेश देती है? प्रतिक्रिया जरूर दें…
Photo by: Christopher Gemini#RSS #DrAmbedakar #IndiaPakistan pic.twitter.com/xXhidgvezw— Vijay Yadav (@patrakarvijay) May 1, 2025
ಇದೇ ರೀತಿಯ ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾದ ಪೋಸ್ಟ್ಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ಯಾವುದೇ ವಿಶ್ವಾಸಾರ್ಹ ಸುದ್ದಿ ಆರ್ಕೈವ್ಗಳು, ಇತಿಹಾಸ ಪುಸ್ತಕಗಳು ಅಥವಾ ಡಾ. ಅಂಬೇಡ್ಕರ್ ಅಥವಾ ಹೆಡ್ಗೆವಾರ್ ಅವರಿಗೆ ಸಂಬಂಧಿಸಿದ ಅಧಿಕೃತ ಸಂಗ್ರಹಗಳಲ್ಲಿ ಲಭ್ಯವಾಗಿಲ್ಲ. ಬದಲಾಗಿ, ಇದು ಸಾಮಾಜಿಕ ಮಾಧ್ಯಮ ಪೋಸ್ಟ್ಗಳು ಮತ್ತು ಆನ್ಲೈನ್ ವೇದಿಕೆಗಳಲ್ಲಿ ಮಾತ್ರ ಕಂಡುಬರುತ್ತದೆ, ಯಾವುದೇ ವಿಶ್ವಾಸಾರ್ಹ ಮೂಲವಿಲ್ಲ. ಇದು ನಿಜವಾದ ಐತಿಹಾಸಿಕ ಛಾಯಾಚಿತ್ರವಾಗಿದ್ದರೆ, ಅದು ಬಹುತೇಕ ವಸ್ತುಸಂಗ್ರಹಾಲಯ ಸಂಗ್ರಹ, ಜೀವನಚರಿತ್ರೆ ಅಥವಾ ರಾಷ್ಟ್ರೀಯ ಆರ್ಕೈವ್ಗಳ ಭಾಗವಾಗಿರುತ್ತಿತ್ತು.
ಪೋಸ್ಟ್ನಲ್ಲಿರುವ ಫೋಟೊ ಕೃಪೆಯ “ಕ್ರಿಸ್ಟೋಫರ್ ಜೆಮಿನಿ” ಹೆಸರಿನ ಮೂಲಕ ಸರ್ಚ್ ಮಾಡಿದಾಗ, ಐತಿಹಾಸಿಕ ಆರ್ಕೈವ್ಗಳು ಅಥವಾ ವಿಶ್ವಾಸಾರ್ಹ ಮೂಲಗಳಲ್ಲಿ ಅಂತಹ ಯಾವುದೇ ಛಾಯಾಗ್ರಾಹಕರ ದಾಖಲೆ ಕಂಡುಬಂದಿಲ್ಲ. ಈ ವೈರಲ್ ಚಿತ್ರದಲ್ಲಿ ಮಾತ್ರವೇ ಹೆಸರು ಕಾಣಿಸಿಕೊಳ್ಳುತ್ತದೆ, ಯಾವುದೇ ಹಿನ್ನೆಲೆ, ಪೋರ್ಟ್ಫೋಲಿಯೊ ಅಥವಾ ಭಾರತೀಯ ಇತಿಹಾಸಕ್ಕೆ ಸಂಬಂಧಿಸಿಲ್ಲ.

ವೈರಲ್ ಆಗಿರುವ ಚಿತ್ರದಲ್ಲಿ ‘78787655’ ನೋಂದಣಿ ಸಂಖ್ಯೆಯ ಬೈಕ್ ಇದ್ದು, ಅದು ತಪ್ಪಾಗಿ ಕಾಣುತ್ತದೆ. ವಾಹನ ನೋಂದಣಿ ಸಂಖ್ಯೆಗಳು ಈ ಹಿಂದೆ ಪ್ರಾಂತೀಯ ಕೋಡ್ಗಳನ್ನು ಆಧರಿಸಿದ ಆಲ್ಫಾನ್ಯೂಮರಿಕ್ ಸ್ವರೂಪವನ್ನು ಅನುಸರಿಸುತ್ತಿದ್ದವು, ಉದಾಹರಣೆಗೆ ಬಾಂಬೆಗೆ ‘B XXXX’ ಅಥವಾ ಮೈಸೂರಿಗೆ ‘MYS XXXX’. ಬ್ರಿಟಿಷ್ ಆಳ್ವಿಕೆಯಲ್ಲಿ ‘78787655’ ನಂತಹ ಸರಳ 8-ಅಂಕಿಯ ಸಂಖ್ಯೆಯ ನೋಂದಣಿ ವ್ಯವಸ್ಥೆ ಇರಲಿಲ್ಲ.
ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಫೋಟೊವನ್ನು AI ಮೂಲಕ ಅಥವಾ ಡಿಜಿಟಲ್ ಟ್ಯಾಂಪರಿಂಗ್ನ ವಿಶಿಷ್ಟ ಚಿಹ್ನೆಗಳು ಕಂಡುಬರುತ್ತವೆ – ಮಸುಕಾದ ಅಥವಾ ಅಪೂರ್ಣ ಮುಖಗಳು, ಅಸ್ವಾಭಾವಿಕ ದೇಹದ ಭಂಗಿಗಳು. ಬೈಕ್ನಲ್ಲಿರುವ ಇಬ್ಬರು ವ್ಯಕ್ತಿಗಳು ಅಸಾಧಾರಣವಾಗಿ ಗಟ್ಟಿಯಾಗಿ ಕಾಣುತ್ತಾರೆ, ಹಿನ್ನೆಲೆಗೆ ಹೊಂದಿಕೆಯಾಗದ ಬೆಳಕಿರುವುರಿಂದ, ಫೋಟೋ ಅಧಿಕೃತವಲ್ಲ ಎಂದು ಸೂಚಿಸುತ್ತದೆ.
ಒಟ್ಟಾರೆಯಾಗಿ ಹೇಳುವುದಾದರೆ, RSS ಸಂಸ್ಥಾಪಕ ಕೆ.ಬಿ. ಹೆಡ್ಗೆವಾರ್ ಮತ್ತು ಬಿ.ಆರ್. ಅಂಬೇಡ್ಕರ್ ಬೈಕ್ನಲ್ಲಿ ಸವಾರಿ ಮಾಡಿದ್ದಾರೆ ಎನ್ನಲಾದ ಚಿತ್ರವು ನಕಲಿ ಮತ್ತು ಡಿಜಿಟಲ್ ಮೂಲಕ ರಚಿಸಲಾಗಿದೆ ಎಂಬುದು ಸ್ಪಷ್ಟವಾಗಿದೆ. ಹಾಗಾಘಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಪಿಕಪ್ ವಾಹನದ ಸಹಾಯದಿಂದ ವಿಮಾನ ಲ್ಯಾಂಡ್ ಆಗುವ ವಿಡಿಯೋದ ಅಸಲೀಯತ್ತೇನು ಗೊತ್ತೇ?

