FACT CHECK | ಗಾಯಕ ಸೋನು ನಿಗಮ್ ಬಿಜೆಪಿಯನ್ನು “ಮೂರ್ಖರ ಸೈನ್ಯ” ಎಂದು ಕರೆದ್ರಾ ?

ಕನ್ನಡಿಗರ ಕನ್ನಡಾಭಿಮಾನವನ್ನು ಪಹಲ್ಗಾಮ್‌ ಉಗ್ರರ ದಾಳಿಗೆ ಹೋಲಿಸಿ ಅವಹೇಳನಕಾರಿಯಾಗಿ ಮಾತನಾಡಿದ ಗಾಯಕ ಸೋನು ನಿಗಮ್‌ ವಿರುದ್ಧ ರಾಜ್ಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಈ ನಡುವಲ್ಲೇ  ಗಾಯಕ ಸೋನು ನಿಗಮ್ ಅವರನ್ನು ಉಲ್ಲೇಖಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.

ಚಿರಾಗ್ ಪಟೇಲ್ ಎಂಬ ಎಕ್ಸ್‌ ಬಳಕೆದಾರರು ಗಾಯಕ ಸೋನು ನಿಗಮ್ ಬಿಜೆಪಿಯನ್ನು “ಮೂರ್ಖರ ಸೈನ್ಯ” ಎಂದು ಕರೆದಿದ್ದಾರೆ ಮತ್ತು ಪಹಲ್ಗಾಮ್ ದುರಂತದ ನಂತರ ಅವರು ಪ್ರತೀಕಾರ ತೀರಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ ಎಂದು ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗುತ್ತಿದೆ.

ಇದೇ ರೀತಿಯ ಪೋಸ್ಟ್‌ರ್‌ಗಳನ್ನು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ತಮ್ಮ ಎಕ್ಸ್‌ ಬಳಕೆದಾರರು ಹಂಚಿಕೊಂಡಿದ್ದು ಬಿಜೆಪಿಯನ್ನು “ಮೂರ್ಖರ ಸೈನ್ಯ” ಎಂದು ಸೋನು ನಿಗಮ್ ಹೇಳಿದ್ದಾರೆ ಎಂದು ಪ್ರತಿಪಾದಿಸಿರುವುದನ್ನು ನೀವು ಇಲ್ಲಿ ಮತ್ತು  ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ಗಾಯಕ ಸೋನು ನಿಗಮ್ ಬಿಜೆಪಿಯನ್ನು “ಮೂರ್ಖರ ಸೈನ್ಯ” ಎಂದು ಹೇಳಿರುವ ಯಾವುದೇ ವಿಶ್ವಾಸಾರ್ಹ ವರದಿಗಳು ಲಭ್ಯವಾಗಿಲ್ಲ. ಒಂದು ವೇಳೆ ಈ ರೀತಿ ಪ್ರತಿಕ್ರಿಯೆ ನೀಡಿರುತ್ತಿದ್ದರೆ ದೋಡ್ಡ ಮಟ್ಟದಲ್ಲಿ ವರದಿಯಾಗುತ್ತಿತ್ತು.

ಈ ಬಗ್ಗೆ ಮತ್ತಷ್ಟು ಕೀವರ್ಡ್ ಮೂಲಕ ಸರ್ಚ್ ಮಾಡಿದಾಗ, ಮೇ 4, 2025 ರಂದು ಟೈಮ್ಸ್ ಆಫ್ ಇಂಡಿಯಾ ವರದಿ ಲಭ್ಯವಾಗಿದೆ. ವರದಿಯ ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಸಂಗೀತ ಕಾರ್ಯಕ್ರಮವೊಂದರಲ್ಲಿ ಕನ್ನಡಿಗ ಸಮುದಾಯದ ಬಗ್ಗೆ ನೋವುಂಟುಮಾಡುವ ಮತ್ತು ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ಹಿನ್ನೆಲೆ ಗಾಯಕ ಸೋನು ನಿಗಮ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎಂದು ವರದಿಯಾಗಿದೆ.

ಘಟನೆಯ ವಿವರ :

ಕನ್ನಡ ಹಾಡು ಹೇಳುವಂತೆ ಕೇಳಿದ್ದಕ್ಕೆ ‘ಕನ್ನಡ.. ಕನ್ನಡ ಇದೇ ಕಾರಣದಿಂದ ಪಹಲ್ಗಾಮ್ ದಾಳಿಯಾಗಿದ್ದು’ಎಂದು ಹೇಳಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿರುವ ಬಾಲಿವುಡ್ ಗಾಯಕ ಸೋನು ನಿಗಮ್ ಇದೀಗ ತಮ್ಮನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ಆದರೆ ಸಮರ್ಥನೆಯ ದಾಟಿಯೂ ಅದೇ ಮೊಂಡುತನದಿಂದ ಕೂಡಿದ್ದು, ಕನ್ನಡಿಗರು ಮತ್ತೆ ಕಿಡಿಕಾರಿದ್ದಾರೆ.

 

View this post on Instagram

 

A post shared by Sonu Nigam (@sonunigamofficial)

ಹೌದು. ಕನ್ನಡಿಗರ ಭಾವನೆಗಳಿಗೆ ನೋವುಂಟು ಮಾಡಿದ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಎಫ್‌ಐಆರ್, ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ದಾಖಲಾಗುತ್ತಿದ್ದಂತೆಯೇ ಪ್ರತಿಕ್ರಿಯಿಸಿರುವ ಸೋನು ನಿಗಮ್, ಕನ್ನಡ, ಕನ್ನಡ ಎಂದು ಖುಷಿಯಲ್ಲಿ ಹೇಳುವುದಕ್ಕೂ, ಕೋಪದಿಂದ ಬೆದರಿಕೆಯೊಡ್ಡುವ ರೀತಿ ಹೇಳುವುದಕ್ಕೂ ವ್ಯತ್ಯಾಸ ಇದೆ. ನಾನು ಶೋ ನೀಡುವಾಗ ನಾಲ್ಕೈದು ಗೂಂಡಾಗಳ ರೀತಿಯಲ್ಲಿ ಇದ್ದರು. ಆ ನಾಲ್ಕೈದು ಜನರಿಗೆ ತಿಳುವಳಿಕೆ ಹೇಳುವುದು ಅಗತ್ಯವಿತ್ತು ಎಂದು ಹೇಳಿದ್ದಾರೆ.

ಕಾಶ್ಮೀರದ ಪಹಲ್ಗಾಮ್​ನಲ್ಲಿ ಉಗ್ರರು ಪ್ಯಾಂಟ್​ ತೆಗೆಸಿದರೆ ಹೊರತು, ಯಾವ ಭಾಷೆ ಎಂದು ಯಾರು ಕೂಡ ಕೇಳಲಿಲ್ಲ ಎನ್ನುವ ದಾಟಿಯಲ್ಲಿ ನಾನು ಹೇಳಿದ್ದೇನೆ. ಕನ್ನಡ ಭಾಷೆಯ ಬಗ್ಗೆ ಅಪಾರ ಗೌರವವಿದ್ದು, ನಾನು ಅಪಮಾನ ಮಾಡಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ನಾನು ಯಾವಾಗಲೂ ಕನ್ನಡ ಹಾಡನ್ನು ಹಾಡಲು ಎಲ್ಲ ರೀತಿಯಿಂದಲೂ ಸಿದ್ಧನಾಗಿ ಬಂದಿರುತ್ತೇನೆ. ಇದನ್ನು ಈಗಾಗಲೇ ಅನೇಕ ಬಾರಿ ಹೇಳಿದ್ದೇನೆ. ಆದರೆ, ಈ ರೀತಿ ತೊಂದರೆ ಕೊಡುವವರು ಯಾರೇ ಆದರೂ ಅವರನ್ನು ಅಲ್ಲಿಯೇ ತಡೆಯಬೇಕು ಎಂದಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಗಾಯಕ ಸೋನು ನಿಗಮ್ ಬೆಂಗಳೂರಿನಲ್ಲಿ ನಡೆದುಕೊಂಡ ರೀತಿಯನ್ನು ತಿರುಚಿ ಬಿಜೆಪಿಯನ್ನು “ಮೂರ್ಖರ ಸೈನ್ಯ”  ಎಂದು ಕರೆದಿದ್ದಾರೆ ಎಂದು ಪೋಸ್ಟ್‌ಅನ್ನು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಆದರೆ ಸೋನು ನಿಗಮ್ ಬಿಜೆಪಿ ಕುರಿತು ಯಾವುದೇ ಹೇಳಿಕೆ ನೀಡಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಪಹಲ್ಗಾಮ್ ದಾಳಿಯ ನಂತರ ಸೈನಿಕರಿಗೆ ಕಾಶ್ಮೀರಿ ನಾಗರೀಕರು ಥಳಿಸಿತ್ತಿರುವುದು ನಿಜವೇ? ವೈರಲ್ ವಿಡಿಯೋದ ಅಸಲೀಯತ್ತೇನು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights