FACT CHECK | ಅನುಷ್ಕಾ ಶರ್ಮಾ- ವೈಭವ್ ಸೂರ್ಯವಂಶಿಯನ್ನು ಭೇಟಿ ಮಾಡಿದ್ದಾರೆ ಎಂದು ಎಡಿಟ್‌ ಮಾಡಿದ ಫೋಟೊ ಹಂಚಿಕೆ

ಐಪಿಎಲ್ 2025ರಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಕ್ರಿಕೆಟ್ ಜಗತ್ತಿನ ಎಲ್ಲರನ್ನು ಸೆಳೆದಿದ್ದ 14 ವರ್ಷದ ವೈಭವ್ ಸೂರ್ಯವಂಶಿ, ಆಡಿರುವ ಏಳು ಪಂದ್ಯಗಳಲ್ಲಿ 206.55 ಸ್ಟ್ರೈಕ್ ರೇಟ್‌ನಲ್ಲಿ 252 ರನ್ ಗಳಿಸಿದ್ದಾರೆ. ಐಪಿಎಲ್ 2025ರ ಆವೃತ್ತಿಯಲ್ಲಿ ಅತ್ಯಧಿಕ ಸ್ಟ್ರೈಕ್ ರೇಟ್ ದಾಖಲೆ ಮಾಡಿದರು. ಇತ್ತೀಚೆಗೆ ಬಿಹಾರದ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿಯವರು ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಅವರನ್ನು ಭೇಟಿ ಮಾಡಿ, ಪೋಟೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು.

ಈ ಮಧ್ಯ ಯುವ ಸೂರ್ಯವಂಶಿ IPL ಟೂರ್ನಮೆಂಟ್ ಸಮಯದಲ್ಲಿ ನಟಿ ಅನುಷ್ಕಾ ಶರ್ಮಾ ಅವರನ್ನು ಭೇಟಿಯಾಗುತ್ತಿರುವುದನ್ನು ತೋರಿಸುವ ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದೆ. ವೈಭವ್ ಸೂರ್ಯವಂಶಿ ಮತ್ತು ಅನುಷ್ಕಾ ಶರ್ಮಾ ಎಂಬ ಶೀರ್ಷಿಕೆಯೊಂದಿಗೆ ಭಾರತ ಕ್ರಿಕೆಟ್ ಫೇಸ್‌ಬುಕ್‌ನಲ್ಲಿ ಫೋಟೊವನ್ನು ಹಂಚಿಕೊಂಡಿದ್ದು  ಐಪಿಎಲ್ ಪಂದ್ಯದ  ಸಮಯದಲ್ಲಿ ಇಬ್ಬರೂ ಭೇಟಿಯಾಗುತ್ತಿರುವುದು ಎಂದು ಬರೆದುಕೊಂಡಿದೆ.

ಇದೇ ರೀತಿಯ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಳ್ಳುತ್ತಿದ್ದು, ಇದು ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಮೇ 23, 2024 ರಂದು ಬಾಲಿವುಡ್ ಸುದ್ದಿ ಪೋರ್ಟಲ್ ಕೊಯಿಮೊಯ್ ಪೋಸ್ಟ್ ಮಾಡಿದ ಮೂಲ ಫೋಟೋ ಲಭ್ಯವಾಗಿದೆ. ಇದರಲ್ಲಿ ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ ಅನುಷ್ಕಾ ಶರ್ಮಾ ಅವರೊಂದಿಗೆ ಇದ್ದಾರೆ. ಅದೇ ರೀತಿ, ಮೇ 12, 2025 ರಂದು ಮತ್ತೊಂದು ಸುದ್ದಿ ಪೋರ್ಟಲ್ ಈ ಸ್ಟಾರ್ ಕಪಲ್‌ನ ಫೋಟೋವನ್ನು ಹಂಚಿಕೊಂಡಿದೆ.

ಅಲ್ಲದೆ, ವೈಭವ್ ಸೂರ್ಯವಂಶಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದರು, ಮತ್ತು ಮೇಲಿನ ಚಿತ್ರದಲ್ಲಿ, ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಜೆರ್ಸಿಯನ್ನು ಧರಿಸಿರುವುದನ್ನು ಕಾಣಬಹುದು.

2024ರ IPL  ಆವೃತ್ತಿಯ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಜೊತೆಯಾಗಿರುವ ಫೋಟೊವನ್ನು ಡಿಜಿಟಲ್‌ ಮೂಳಕ ಎಡಿಟ್‌ ಮಾಡಿ ವೈಭವ್ ಸೂರ್ಯವಂಶಿ ಜೊತೆಯಲ್ಲಿ ಅನುಷ್ಕಾ ಶರ್ಮ ಇರುವಂತೆ ರಚಿಸಲಾಗಿದೆ. ಈ ಮೇಲಿನ ಚಿತ್ರದಲ್ಲಿ ಅದನ್ನು ಕಾಣಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾಜೊತೆಯಾಗಿರುವ ಮೂಲ ಫೋಟೊವನ್ನು, ತಿರುಚಿ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಮತ್ತು ಅನುಷ್ಕಾ ಶರ್ಮಾ ಭೇಟಿಯಾಗಿರುವಂತೆ ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಂಆಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಚೀನಾದಲ್ಲಿ ನಡೆದಿರುವ ಹೊಸ ವರ್ಷಾಚರಣೆಯ ಹಳೆಯ ದೃಶ್ಯಗಳನ್ನು RCB ಅಭಿಮಾನಿಗಳ ಸಂಭ್ರಮಾಚರಣೆ ಎಂದು ತಪ್ಪಾಗಿ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights