FACT CHECK | ಹಿಂದೂ ಬಾಲಕಿಗೆ ಚಾಕು ತೋರಿಸಿ ಬೆದರಿಸಿದ ವ್ಯಕ್ತಿ ಮುಸ್ಲಿಂ ಅಲ್ಲ..!!

ಯುವಕನೊಬ್ಬ ಬಾಲಕಿಯನ್ನು ಹಿಡಿದುಕೊಂಡು ಆಕೆಗೆ ಚಾಕು ತೋರಿಸಿ ಬೆದರಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಇದೇ ಸಂದರ್ಭದಲ್ಲಿ ಯುವಕ ಮುಸ್ಲಿಂ ಸಮುದಾಯಕ್ಕೆ ಸೇರಿದ್ದಾನೆ ಎಂದು ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ.

ಫೇಸ್​ಬುಕ್ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡು, ‘‘ಮಹಾರಾಷ್ಟ್ರ ಸತಾರದಲ್ಲಿ ಅಪ್ರಾಪ್ತ ಹಿಂದೂ ಬಾಲಕಿಗೆ ಬಹಳ ದಿನದಿಂದ ಪ್ರೀತಿಸುವಂತೆ ಕಿರುಕುಳ ನೀಡುತ್ತಿದ್ದ ಮುಸ್ಲಿಂ ವ್ಯಕ್ತಿ, ಪ್ರೀತಿಗೆ ಒಪ್ಪದಿದ್ದಾಗ ಬಾಲಕಿ ಕುತ್ತಿಗೆಗೆ ಚಾಕುವಿನಿಂದ ಇರಿಯಲು ಹೋದ. ಆತನನ್ನು ಹಿಂದಿನಿಂದ ಹಿಡಿದುಕೊಂಡು ಸರಿಯಾಗಿ ಬಾರಿಸಿ ಪೊಲೀಸ್​ಗೆ ಒಪ್ಪಿಸಿದ್ದಾರೆ ಹಿಂದೂ ಸಹೋದರರ ಒಗ್ಗಟ್ಟಿಗೆ ಧನ್ಯವಾದಗಳು’’ ಎಂದು ಬರೆದುಕೊಂಡಿದ್ದಾರೆ.

ಒರ್ವ ಯುವಕ ಬಾಲಕಿಯನ್ನು ಹಿಡಿದುಕೊಂಡು ಆಕೆಗೆ ಚಾಕು ತೋರಿಸಿ ಬೆದರಿಸುತ್ತಿದ್ದಾಗ, ಆಗ ಅಲ್ಲಿದ್ದ ಗುಂಪಿನಲ್ಲಿದ್ದ ಯುವಕನೊಬ್ಬ ಹಿಂದಿನಿಂದ ಬಂದು ಆತನನ್ನು ಹಿಡಿಯುತ್ತಾನೆ, ನಂತರ ಚಾಕು ಹಿಡಿದುಕೊಂಡಿದ್ದ ಯುವಕನನ್ನು ಜನಸಮೂಹ ಥಳಿಸುವುದನ್ನು ಕಾಣಬಹುದು.  ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವಿಡಿಯೋದ ಕೀ ಫ್ರೇಮ್‌ಗಳನ್ನು ತೆಗದು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಜುಲೈ 22 ರಂದು ಆಜ್ ತಕ್ ಪ್ರಕಟಿಸಿದ ವರದಿಯೊಂದು ಲಭ್ಯವಾಗಿದೆ. ಈ ಘಟನೆ ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿ ಹೇಳುತ್ತದೆ, ಅಲ್ಲಿ ಒಬ್ಬ ಹುಚ್ಚ ಪ್ರೇಮಿ ಶಾಲೆಯಿಂದ ಮನೆಗೆ ಹಿಂದಿರುಗುತ್ತಿದ್ದ ಹುಡುಗಿಯ ಕುತ್ತಿಗೆಗೆ ಚಾಕು ಇಟ್ಟಿದ್ದಾನೆ. ಈ ಘಟನೆ ಸತಾರಾ ಜಿಲ್ಲೆಯ ಬಸಪ್ಪ ಪೇಟ್ ಪ್ರದೇಶದದ್ದಾಗಿದೆ. ವರದಿಯ ಪ್ರಕಾರ, ಯುವಕನ ಹೆಸರು ಆರ್ಯನ್ ವಾಘ್ಮಲೆ. ಈ ಪ್ರಕರಣದಲ್ಲಿ, ಪೋಕ್ಸೊ ಸೇರಿದಂತೆ ಹಲವು ಇತರ ವಿಭಾಗಗಳ ಅಡಿಯಲ್ಲಿ ಯುವಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

सतारा में सनकी आशिक की हरकत से सनसनी (Photo: ITG)

ಹಾಗೆಯೆ ಜುಲೈ 22 ರಂದು ತರುಣ್ ಭಾರತ್ ವೆಬ್‌ಸೈಟ್‌ನಲ್ಲಿ ಮರಾಠಿ ಭಾಷೆಯಲ್ಲಿ ಪ್ರಕಟವಾದ ಸುದ್ದಿ ನಮಗೆ ಕಂಡುಬಂತು. ಈ ಸುದ್ದಿಯು ವೈರಲ್ ವೀಡಿಯೊದ ದೃಶ್ಯಗಳನ್ನು ಒಳಗೊಂಡಿದೆ. ಈ ಘಟನೆ ಮಹಾರಾಷ್ಟ್ರದ ಸತಾರಾ ಜಿಲ್ಲೆಯದ್ದಾಗಿದ್ದು, ಬಾಲಕಿಯ ಕುತ್ತಿಗೆಗೆ ಚಾಕು ಹಿಡಿದ ಯುವಕನ ಹೆಸರು ಆರ್ಯನ್ ವಾಘ್ಮಲೆ. ಈತ 18 ವರ್ಷ ವಯಸ್ಸಿನವನಾಗಿದ್ದು, ಪ್ರಸ್ತುತ 12 ನೇ ತರಗತಿಯ ವಿದ್ಯಾರ್ಥಿಯಾಗಿದ್ದಾನೆ ಎಂದು ವರದಿ ಹೇಳುತ್ತದೆ.

ABP ನ್ಯೂಸ್ ಮತ್ತು ಹಿಂದೂಸ್ತಾನ್ ಟೈಮ್ಸ್ ಕೂಡ ಆರೋಪಿ ಯುವಕನ ಹೆಸರನ್ನು ಆರ್ಯನ್ ವಾಘ್ಮಲೆ ಎಂದು ಬರೆದಿದೆ. ಈ ಘಟನೆ ಜುಲೈ 21 ರಂದು ಮಹಾರಾಷ್ಟ್ರದ ಸತಾರಾ ನಗರದ ಕರಂಜೆ ಬಸಪ್ಪ ಪೇಟ್ ಪ್ರದೇಶದಲ್ಲಿ ನಡೆದಿದ್ದು, ಆರೋಪಿ ಆರ್ಯನ್ ವಾಘ್ಮಲೆ ಬಲಿಪಶುವಿನ ಅಪ್ರಾಪ್ತ ಬಾಲಕಿಗೆ ಚಾಕು ತೋರಿಸಿ ಬೆದರಿಕೆ ಹಾಕಲು ಪ್ರಾರಂಭಿಸಿದನು. ಈ ಘಟನೆ ಏಕಪಕ್ಷೀಯ ಪ್ರೇಮದಿಂದಾಗಿ ಸಂಭವಿಸಿದೆ. ಈ ಮಧ್ಯೆ, ಉಮೇಶ್ ಅಡಗಲೆ ಎಂಬ ಯುವಕ ಧೈರ್ಯ ತೋರಿಸಿ ಆರ್ಯನ್‌ನನ್ನು ಹಿಂದಿನಿಂದ ಹಿಡಿದನು, ನಂತರ ಗುಂಪು ಆರೋಪಿಯನ್ನು ಥಳಿಸಿತು ಎಂಬ ಮಾಹಿತಿ ಇದರಲ್ಲಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಮಹಾರಾಷ್ಟ್ರದಲ್ಲಿ ಅಪ್ರಾಪ್ತ ಹಿಂದೂ ಬಾಲಕಿ ಕುತ್ತಿಗೆಗೆ ಚಾಕುವಿನಿಂದ ಇರಿಯಲು ಹೋಗಿದ್ದು ಮುಸ್ಲಿಂ ಯುವಕ ಅಲ್ಲ, ಆತನ ಹೆಸರು ಆರ್ಯನ್ ವಾಘ್ಮಲೆ ಎಂದಾಗಿದ್ದು ಆತ ಹಿಂದೂ ಆಗಿದ್ದಾನೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಸೌತ್ ಚೆಕ್ಕರ್

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಚೀನಾದ ತೇಲುವ ಸೋಲಾರ್ ಪ್ಲಾಂಟ್‌ಅನ್ನು ಗುಜರಾತ್‌ನದ್ದು ಎಂದು ತಪ್ಪಾಗಿ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights