FACT CHECK | ಪ್ರಧಾನಿ ಮೋದಿಯಂತ ನಾಯಕ ಬೇಕೆಂದು ನೇಪಾಳದವರು ಬಯಸಿದ್ದಾರೆ ಎಂಬ ವಿಡಿಯೋದ ಅಸಲೀಯತ್ತೇನು?

ನೇಪಾಳದಲ್ಲಿ ನಾಗರಿಕ ದಂಗೆ ಭುಗಿಲೆದ್ದ ಬಳಿಕ ಅಲ್ಲಿನ ಜನ ಬದಲಾವಣೆ ಬಯಸುತ್ತಿದ್ದು, ಅಲ್ಲಿನವರೂ ಪ್ರಧಾನಿ ನರೇಂದ್ರ ಮೋದಿಯನ್ನು ನಾಯಕನ್ನಾಗಿ ಬಯಸುತ್ತಿದ್ದಾರೆ ಎಂದು ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ನೇಪಾಳದವರೂ ಪ್ರಧಾನಿ ಮೋದಿಯವರನ್ನು ನಾಯಕರಾಗಿ ಬಯಸುತ್ತಿದ್ದಾರೆ ಎಂದು ಹಂಚಿಕೊಂಡ ವೀಡಿಯೋ ಸಿಕ್ಕಿಂನದ್ದು!

1.08 ನಿಮಿಷದ ಈ ವಿಡಿಯೋವನ್ನು ಫೇಸ್‌ಬುಕ್ ನಲ್ಲಿ ಹಂಚಿಕೊಳ್ಳಲಾಗಿದ್ದು, ಗುಲಾಮ್ su ಮಕ್ಕಳು ಸ್ವಲ್ಪ ನೋಡ್ರೋ.. ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಇದೇ ರೀತಿಯ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಹಂಚಿಕೊಂಡಿದ್ದು, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು, ವೈರಲ್ ವಿಡಿಯೋದ ಕೀ ಫ್ರೇಮ್‌ಗಳನ್ನು ತೆಗೆದು ಗೂಗಲ್ ಸರ್ಚ್ ಮಾಡಿದಾಗ, Sukhim Yakthung Sapsok Songchumbho ಎಂಬ ಫೇಸ್‌ಬುಕ್ ಪುಟದಲ್ಲಿ ಮೇ 30ರಂದು ಪೋಸ್ಟ್ ಮಾಡಿರುವ ವಿಡಿಯೋ ಕಂಡುಬಂದಿದೆ. ಇದು ವೈರಲ್ ವಿಡಿಯೋಗೆ ಸಾಮ್ಯತೆ ಹೊಂದಿದೆ. ಈ ಪೋಸ್ಟ್ ನಲ್ಲಿ ನೀಡಲಾದ ವಿವರಣೆಯಲ್ಲಿ, “ಸಿಕ್ಕಿಂನ ಲಿಂಬೂ ಬುಡಕಟ್ಟು ಜನಾಂಗದವರಾದ ನಾವು, ಸುಖಿಮ್ ಯಕ್ತುಂಗ್ ಸಪ್ಸೋಕ್ ಸಾಂಗ್ಚುಂಬೋ ಅವರ ಬ್ಯಾನರ್ ಅಡಿಯಲ್ಲಿ, ಸಿಕ್ಕಿಂ ರಾಜ್ಯತ್ವದ 50 ನೇ ವಾರ್ಷಿಕೋತ್ಸವದ ನೆನಪಿಗಾಗಿ ಮೇ 29, 2025 ರಂದು ಸಿಕ್ಕಿಂಗೆ ಭೇಟಿ ನೀಡಲಿರುವ ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಆತ್ಮೀಯವಾಗಿ ಸ್ವಾಗತಿಸಲು ಉತ್ಸುಕರಾಗಿ ಸಿದ್ಧರಾಗಿದ್ದೆವು…” ಎಂದಿದೆ.

 

ಈ ವೀಡಿಯೋದಲ್ಲಿ ಮತ್ತು ವೈರಲ್ ವೀಡಿಯೋದಲ್ಲಿ ಬ್ಯಾನರ್ ಒಂದು ಕಂಡುಬಂದಿದ್ದು, ಇದರಲ್ಲಿ “SIKKIMESE LIMBOO TRIBES WARMLY WELCOME TO HONOURABLE PRIME MINISTER OF INDIA SHRI. NARENDRA MODI JI TO THE STATE OF SIKKIM SUKHIM YAKTHUNG SAPTOK SONGCHUMSHO” ಎಂದು ಬರೆದಿರುವುದನ್ನು ಗಮನಿಸಿದ್ದೇವೆ.

ನೇಪಾಳದವರೂ ಪ್ರಧಾನಿ ಮೋದಿಯವರನ್ನು ನಾಯಕರಾಗಿ ಬಯಸುತ್ತಿದ್ದಾರೆ ಎಂದು ಹಂಚಿಕೊಂಡ ವೀಡಿಯೋ ಸಿಕ್ಕಿಂನದ್ದು!

ಇದರೊಂದಿಗೆ ವೈರಲ್ ವೀಡಿಯೋದಲ್ಲಿ ಮೆರವಣಿಗೆ ಸಾಗುತ್ತಿರುವ ದೃಶ್ಯದಲ್ಲಿ ಹೆವೆಲ್ಸ್, ಗ್ಯಾಂಗ್ಟಕ್, ಎಂದು ಬರೆದಿರುವ ದೃಶ್ಯವನ್ನು ಗಮನಿಸಿದ್ದೇವೆ.

ನೇಪಾಳದವರೂ ಪ್ರಧಾನಿ ಮೋದಿಯವರನ್ನು ನಾಯಕರಾಗಿ ಬಯಸುತ್ತಿದ್ದಾರೆ ಎಂದು ಹಂಚಿಕೊಂಡ ವೀಡಿಯೋ ಸಿಕ್ಕಿಂನದ್ದು!

ಇದು ವೀಡಿಯೋ ನೇಪಾಳದ್ದಲ್ಲ, ಸಿಕ್ಕಿಂನ ಗ್ಯಾಂಗ್ಟಕ ನದ್ದು ಎಂದು ಖಚಿತಪಡಿಸಲು ಕಾರಣವಾಯಿತು. ಇದನ್ನು ದೃಢಪಡಿಸುವಂತೆ  ಗೂಗಲ್ ಜಿಯೋಲೊಕೇಶನ್ ನಲ್ಲೂ ಈ ಸ್ಥಳವನ್ನು ಪತ್ತೆ ಮಾಡಿದ್ದೇವೆ.

ನೇಪಾಳದವರೂ ಪ್ರಧಾನಿ ಮೋದಿಯವರನ್ನು ನಾಯಕರಾಗಿ ಬಯಸುತ್ತಿದ್ದಾರೆ ಎಂದು ಹಂಚಿಕೊಂಡ ವೀಡಿಯೋ ಸಿಕ್ಕಿಂನದ್ದು!

ಒಟ್ಟಾರೆಯಾಗಿ ಹೇಳುವುದಾದರೆ, ನೇಪಾಳದ ಜನರೂ ನರೇಂದ್ರ ಮೋದಿಯವರನ್ನು ನಾಯಕರಾಗಿ ಬಯಸುತ್ತಿದ್ದಾರೆ ಎಂಬ ಹೇಳಿಕೆಯೊಂದಿಗೆ ಹಂಚಿಕೊಂಡ ವೀಡಿಯೋ ಸಿಕ್ಕಿಂನದ್ದಾಗಿದೆ. ಕಳೆದ ಮೇ ತಿಂಗಳಲ್ಲಿ ಮೋದಿಯವರು ಸಿಕ್ಕಿಂಗೆ ಭೇಟಿ ನೀಡಿದ ಸಂದರ್ಭ ಅವರನ್ನು ಸ್ವಾಗತಿಸಿದ ವೀಡಿಯೋ ಇದಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಪಂಜಾಬ್ ಪ್ರವಾಹಕ್ಕೆ ಮುಸ್ಲಿಮರು ದೇಣಿಗೆ ನೀಡುತ್ತಿದ್ದಾರೆಂದು ಬಾಂಗ್ಲಾದೇಶದ ವಿಡಿಯೋ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights