ವಲಸೆ ಕಾರ್ಮಿಕರನ್ನು ಊರುಗಳಿಗೆ ತಲುಪಿಸಲು 500 ಬಸ್‌ಗಳ ವ್ಯವಸ್ಥೆ ಕಲ್ಪಸಿದ ಪ್ರಿಯಾಂಕ ಗಾಂಧಿ

ರಾಜಸ್ಥಾನದಲ್ಲಿ ಸಿಕ್ಕಿಕೊಂಡಿರುವ ವಲಸೆ ಕಾರ್ಮಿಕರನ್ನು ತವರು ರಾಜ್ಯಕ್ಕೆ ಕರೆತರಲು ಕಾಂಗ್ರೆಸ್‌ ಪಕ್ಷದ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಯವರು 500 ಬಸ್‌ ವ್ಯವಸ್ಥೆ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಈ ಮೊದಲು ವಲಸಿಗರಿಗಾಗಿ 1,000 ಬಸ್ಸುಗಳನ್ನು ಓಡಿಸಬೇಕು ಎಂಬ ಪ್ರಿಯಾಂಕಾ ಗಾಂಧಿ ಅವರ ಮನವಿಗೆ ಉತ್ತರ ಪ್ರದೇಶ ಸರ್ಕಾರ ಸಮ್ಮತಿಸಿದೆ. ಯೋಗಿ ಆದಿತ್ಯನಾಥ್ ಸರ್ಕಾರ ಬಸ್‌ಗಳ ವಿವರಗಳು, ಅವುಗಳ ಸಂಖ್ಯೆ ಮತ್ತು ಅವರ ಚಾಲಕರ ಹೆಸರುಗಳನ್ನೊಳಗೊಂಡ ಕಾಂಗ್ರೆಸ್ ಮುಖಂಡರ ಕಚೇರಿಗೆ ಪತ್ರ ಬರೆದಿದೆ.

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಅವರು ಮೇ 16 ರಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ವಿಡಿಯೋ ಸಂದೇಶದಲ್ಲಿ ಮನವಿ ಮಾಡಿದ್ದರು. ಉತ್ತರ ಪ್ರದೇಶದ ಔರಿಯಾ ಬಳಿ ಹೆದ್ದಾರಿಯಲ್ಲಿ ಟ್ರಕ್ ಗಳು ಡಿಕ್ಕಿ ಹೊಡೆದು 24 ವಲಸಿಗ ಕಾರ್ಮಿಕರು ಸಾವನ್ನಪ್ಪಿದರ ನಂತರ ಅವರು ತಮ್ಮ ಮನವಿಯನ್ನು ಟ್ವೀಟ್ ಮಾಡಿದ್ದರು.

“ಗೌರವಾನ್ವಿತ ಮುಖ್ಯಮಂತ್ರಿಗಳೆ, ನಾನು ನಿಮ್ಮಲ್ಲಿ ವಿನಂತಿಸುತ್ತಿದ್ದೇನೆ, ಇದು ರಾಜಕೀಯದ ಸಮಯವಲ್ಲ. ನಮ್ಮ ಬಸ್ಸುಗಳು ಗಡಿಯಲ್ಲಿ ನಿಂತಿವೆ. ಸಾವಿರಾರು ಕಾರ್ಮಿಕರು ಮತ್ತು ವಲಸಿಗರು ಆಹಾರ ಅಥವಾ ನೀರಿಲ್ಲದೆ ತಮ್ಮ ಮನೆಗಳ ಕಡೆಗೆ ನಡೆಯುತ್ತಿದ್ದಾರೆ. ನಾವು ಅವರಿಗೆ ಸಹಾಯ ಮಾಡೋಣ ನಮ್ಮ ಬಸ್ಸುಗಳಿಗೆ ಅನುಮತಿ ನೀಡಿ” ಎಂದು ಅವರು ಹೇಳಿದ್ದರು.

ಮತ್ತೊಂದು ಟ್ವೀಟ್‌ನಲ್ಲಿ, “ನಮ್ಮ ಬಸ್‌ಗಳು ಗಡಿಯಲ್ಲಿ ನಿಂತಿವೆ. ಸಾವಿರಾರು ರಾಷ್ಟ್ರ ನಿರ್ಮಾಣಕಾರ ಕಾರ್ಮಿಕರು ಮತ್ತು ವಲಸಿಗರು ಬಿಸಿಲಿನಲ್ಲಿ ನಡೆಯುತ್ತಿದ್ದಾರೆ. ಯೋಗಿ ಆದಿತ್ಯನಾಥ್ ಜಿ ಅವರಿಗೆ ಅನುಮತಿ ನೀಡಿ. ನಮ್ಮ ಸಹೋದರ ಸಹೋದರಿಯರಿಗೆ ಸಹಾಯ ಮಾಡೋಣ” ಎಂದು ಅವರು ಹೇಳಿದ್ದಾರೆ.

ಅವರು ಉತ್ತರ ಪ್ರದೇಶ ಗಡಿಯಲ್ಲಿ ಬಸ್ಸುಗಳು ಕಾಯುತ್ತಿರುವ ವಿಡಿಯೋವನ್ನೂ ಹಾಕಿದ್ದಾರೆ.

ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ದಿನೇಶ್ ಶರ್ಮಾ ಅವರು ಕಾಂಗ್ರೆಸ್ ಅನ್ನು ಕೆಣಕಿ, ಪ್ರಿಯಾಂಕಾ ಗಾಂಧಿ ಕಾಂಗ್ರೆಸ್ ಆಡಳಿತದಲ್ಲಿರುವ ರಾಜ್ಯಗಳಿಗೆ ಹೆಚ್ಚಿನ ಬಸ್ಸುಗಳನ್ನು ಓಡಿಸುವಂತೆ ಕೇಳಿಕೊಳ್ಳಬೇಕು ಏಕೆಂದರೆ ಆ ರಾಜ್ಯಗಳು ವಲಸಿಗರಿಗೆ ಕಡಿಮೆ ರೈಲುಗಳನ್ನು ಕೇಳಿದೆ ಎಂದು ಹೇಳಿದ್ದರು.

“ವಲಸಿಗರಿಗೆ ಸುರಕ್ಷಿತ ಮತ್ತು ಸುರಕ್ಷಿತ ಪ್ರಯಾಣವನ್ನು ಒದಗಿಸಲು ಯುಪಿ ಸರ್ಕಾರ ಸಮರ್ಥ ಮತ್ತು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ. ವಲಸಿಗರ ಪ್ರಯಾಣಕ್ಕೆ ಅನುಕೂಲವಾಗುವಂತೆ ನಾವು ಪ್ರತಿ ಜಿಲ್ಲೆಗೆ 200 ಬಸ್ಸುಗಳನ್ನು ಒದಗಿಸಿದ್ದೇವೆ. ಯುಪಿಗಾಗಿ ರೈಲ್ವೆ ಸಚಿವಾಲಯವು 400 ರೈಲುಗಳನ್ನು ಮಂಜೂರು ಮಾಡಿದೆ. ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಈ 1000 ಬಸ್‌ಗಳನ್ನು ರಾಜಸ್ಥಾನ, ಚತ್ತೀಸ್ ಗಡ, ಪಂಜಾಬ್, ಜಾರ್ಖಂಡ್‌ ನಿಯೋಜಿಸಬೇಕು ಈ ರಾಜ್ಯಗಳು ಕಡಿಮೆ ರೈಲುಗಳನ್ನು ಕೇಳಿದ್ದವು ”ಎಂದು ಶರ್ಮಾ ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದರು.

ಈಗ ಉತ್ತರ ಪ್ರದೇಶ ಸರ್ಕಾರವು ಅನುಮತಿ ನೀಡಿದ್ದು ಗೊಂದಲ ಸ್ವಲ್ಪ ಮಟ್ಟಿಗೆ ನಿವಾರಣೆಯಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights