ಅಧಿವೇಶನ ಮೊಟಕುಗೊಳಿಸಲು ಬಿಎಸ್‌ವೈ ನಿರ್ಧಾರ: ವಿಪಕ್ಷಗಳ ವಿರೋಧ

ಕೊರೊನಾ ಸೋಂಕಿನ ನೆಪವೊಡ್ಡಿ ಸದನವನ್ನು ಮೂರು ದಿನಗಳಿಗೆ ಮೊಟಕುಗೊಳಿಸುವ ಸರ್ಕಾರದ ನಿರ್ಧಾರಕ್ಕೆ ವಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಮೊದಲು ನಿಗದಿ ಮಾಡಿದ್ದಂತೆಯೇ ಅಧಿವೇಶನ ಸೆ.30ರ ವೆರೆಗೆ ನಡೆಯಬೇಕು ಎಂದು ವಿಪಕ್ಷಗಳು ಆಗ್ರಹಿಸಿವೆ.

ಅಧಿವೇಶನವನ್ನು ಮೊಟಕುಗೊಳಿಸಬಾರದು. ರಾಜ್ಯದಲ್ಲಿ ಸಾಕಷ್ಟು ಜ್ವಲಂತ ಸಮಸ್ಯೆಗಳು ತಲೆದೂರಿದ್ದು, ರಾಜ್ಯದ ಜನರು ಸಮಸ್ಯೆ-ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಅಂತಹ ಸಮಸ್ಯೆಗಳ ಬಗ್ಗೆ ಚರ್ಚೆಗೆ ಅವಕಾಶ ದೊರೆಯಬೇಕು. ಅಧಿವೇಶನ ಮೊಟಕುಗೊಳಿಸುವುದನ್ನು ನಾವು ಒಪ್ಪುದಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಸುಮಾರು 40ಕ್ಕೂ ಹೆಚ್ಚು ವಿದೇಯಕಗಳು ಹಾಗೂ 19 ಸುಗ್ರೀವಾಜ್ಞೆಗಳನ್ನು ತಂದಿದ್ದೀರಿ. ಅವುಗಳ ಬಗ್ಗೆ ಅಧಿವೇಶನದಲ್ಲಿ ಚರ್ಚೆಯಾಗಬೇಕು. ಮೂರೇ ದಿನಗಳಲ್ಲಿ ಚರ್ಚೆ ಸಾಧ್ಯವಿಲ್ಲ. ಮೂರು ದಿನಗಳ ಅಧಿವೇಶನ ನಡೆಸುವುದು ಸಮಂಜಸವಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಕೊರೊನಾದೊಂದಿಗೆ ಬದುಕು ನಡೆಸಬೇಕಾಗಿದೆ. ಸರ್ಕಾರದ ವಿರುದ್ಧ ಸಾಕಷ್ಟು ಆರೋಪಗಳಿವೆ. ಕೋವಿಡ್-19 ವಿಷಯದಲ್ಲಿ ವ್ಯಾಪಕ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿವೆ ಆ ಬಗ್ಗೆ ಚರ್ಚೆಯಾಗಬೇಕು. ಅಧಿವೇಶನವನ್ನು ಯಾವುದೇ ಕಾರಣಕ್ಕೂ ಮೊಟಕುಗೊಳಿಸಬಾರದು. ಸದನ ಸಲಹಾ ಸಮಿತಿಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಕೊರೊನಾ ಇದ್ದರೂ ಜನಜೀವನ ನಡೆಯುತ್ತಿದೆ. ಕೊರೊನಾ ನೆಪವೊಡ್ಡಿ ಅಧಿವೇಶನವನ್ನು ಮೊಟಕುಗೊಳಿಸಬಾರದು. ಅಧಿವೇಶನದಲ್ಲಿ ಸಾಕಷ್ಟು ವಿಚಾರಗಳ ಬಗ್ಗೆ ಚರ್ಚೆಯಾಗಬೇಕಿದ್ದು, ಅಧಿವೇಶನವನ್ನು ಮೊಕಟುಗೊಳಿಸದೇ ಮುಂದುವರಿಸಬೇಕೆಂದು ಮಾಜಿ ಸಿಎಂ ಎಚ್.ಕೆ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.


ಇದನ್ನೂ ಓದಿ: ರಾಜ್ಯ ಅಧಿವೇಶನ: ಚರ್ಚೆಯೇ ಇಲ್ಲದೆ ಅಂಗೀಕರಿಸುತ್ತವಾ 19 ಸುಗ್ರೀವಾಜ್ಞೆಗಳು, 40 ವಿದೇಯಕಗಳು

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights