ಆತಂಕಕಾರಿ ಬೆಳವಣಿಗೆ : ರಾಜ್ಯದಲ್ಲಿ ಒಂದೇ ದಿನಕ್ಕೆ 34 ಹೊಸ ಕೊರೊನಾ ಪ್ರಕರಣ ಪತ್ತೆ!

ರಾಜ್ಯದಲ್ಲಿ ಕೊರೊನಾ ಸೋಂಕಿತರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು ಕಳೆದ 24 ಗಂಟೆಗಳಲ್ಲಿ  34 ಹೊಸ ಪ್ರಕರಣಗಳು ಪತ್ತೆಯಾಗಿವೆ.

ಹೌದು…  ರಾಜ್ಯದಲ್ಲಿ 15 ಮಹಿಳೆಯರು ಸೇರಿದಂತೆ 34ಕ್ಕೂ ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಇದುವರೆಗೂ ಸೋಂಕಿಗೆ 13 ಮಂದಿ ಮೃತಪಟ್ಟಿದ್ದರೆ, ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದ 82 ಮಂದಿ ರೋಗ ಮುಕ್ತರಾಗಿ ಮನೆಗಳಿಗೆ ತೆರಳಿದ್ದಾರೆ. ಆದರೂ ಪ್ರತಿ ನಿತ್ಯ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚುತ್ತಲೇ ಇರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ಬಿಬಿಎಂಪಿ ವ್ಯಾಪ್ತಿಯ 13 ವರ್ಷದ ಬಾಲಕ, 37 ಹಾಗೂ 43 ವರ್ಷದ ಪುರುಷರು ಮತ್ತು 54 ವರ್ಷದ ಮಹಿಳೆ ಹಾಗೂ 65 ವರ್ಷದ ವೃದ್ದೆಯಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಗಡಿನಾಡು ಬೆಳಗಾವಿ ಕೊರೊನಾ ಹಾಟ್‍ಸ್ಪಾಟ್ ಆಗಿ ಪರಿವರ್ತನೆಗೊಂಡಿದ್ದು, ನಿನ್ನೆ ಸಂಜೆ ಇಂದೀಚೆಗೆ ಇಲ್ಲಿಯವರೆಗೂ 17 ಹೊಸ ಕೊರೊನಾ ಕೇಸ್‍ಗಳು ದೃಢಪಟ್ಟಿವೆ.

ಬೆಳಗಾವಿ ಜಿಲ್ಲೆಯ ಹಿರೇಬಾಗೆವಾಡಿಯಲ್ಲಿ 7 ಪ್ರಕರಣಗಳು ದೃಢಪಟ್ಟಿದ್ದರೆ, ಬಾಗೇವಾಡಿ, ಚಿಕ್ಕೋಡಿ, ರಾಯಭಾಗಗಳಲ್ಲಿ 10 ಸೋಂಕು ಪ್ರಕರಣಗಳು ಬೆಳಕಿಗೆ ಬಂದಿವೆ. ವಿಜಯಪುರದಲ್ಲೂ 7 ಪ್ರಕರಣಗಳು ಬೆಳಕಿಗೆ ಬಂದಿದ್ದರೆ, ಮೈಸೂರಿನಲ್ಲಿ ಮೂರು, ಗದಗ, ಕಲ್ಬುರ್ಗಿಯಲ್ಲಿ ತಲಾ ಒಂದೊಂದು ಪ್ರಕರಣಗಳು ಬೆಳಕಿಗೆ ಬರುವುದರ ಜತೆಗೆ ಒಂದೇ ದಿನದಲ್ಲಿ 34 ಹೊಸ ಪ್ರಕರಣಗಳು ಪತ್ತೆಯಾಗಿರುವುದರಿಂದ ಇಡೀ ರಾಜ್ಯ ಕೊರೊನಾ ಹಾಟ್‍ಸ್ಪಾಟ್ ಆಗಿ ಪರಿವರ್ತನೆಯಾಗುತ್ತಿದೆ.

ಬೆಂಗಳೂರಿನಲ್ಲಿ ಒಟ್ಟು ಕೊರೋನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 71. ಈ ಪೈಕಿ 35 ಜನರನ್ನು ಗುಣಮುಖರನ್ನಾಗಿಸಿ ಮನೆಗೆ ಕಳುಹಿಸಲಾಗಿದೆ, ಇಬ್ಬರು ಮೃತಪಟ್ಟಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲಿ ಪ್ರಸ್ತುತ ಆಕ್ಟೀವ್ ಆಗಿರುವ ಪ್ರಕರಣಗಳ ಸಂಖ್ಯೆ 34 ಮಾತ್ರ.

ಆದರೆ, ಮೈಸೂರಿನಲ್ಲಿ 58 ಕೊರೋನಾ ಪಾಸಿಟಿವ್‌ ಪ್ರಕರಣಗಳು ದಾಖಲಾಗಿದ್ದು, 12 ಜನರನ್ನು ಡಿಸ್ಜಾರ್ಜ್‌ ಮಾಡಲಾಗಿದೆ. ಹೀಗಾಗಿ ಆಕ್ಟೀವ್ ಕೊರೋನಾ ಪೀಡಿತರ ಸಂಖ್ಯೆ 46. ಅಸಲಿಗೆ ಇತರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ, ಮೈಸೂರಿನಲ್ಲಿ ಕೊರೋನಾ ಸೋಂಕು ತಡವಾಗಿ ಪತ್ತೆಯಾಗಿತ್ತು. ನಂಜನಗೂಡಿನಲ್ಲಿ ಮೊದಲ ಸೋಂಕು ಪತ್ತೆಯಾಗಿತ್ತು. ಆದರೆ, ಅಲ್ಲಿಂದ ಅತ್ಯಂತ ವೇಗವಾಗಿ ಎಲ್ಲೆಡೆ ಹರಡುತ್ತಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights